Bigg Boss Kannada: ಜೈಲುಪಾಲಾದ ಬಿಗ್​ ಬಾಸ್​ ಸ್ಪರ್ಧಿ ಧನುಶ್ರೀ! ಮೊದಲ ವಾರವೇ ಕಳಪೆ ಹಣೆಪಟ್ಟಿ

Bigg Boss Kannada Updates (Day 5) : ಸ್ಪರ್ಧಿಗಳು ಬಿಗ್​ ಬಾಸ್​ ಮನೆಯಲ್ಲಿ ಬರೀ ಮನರಂಜಿಸಿದರೆ ಸಾಲದು, ಟಾಸ್ಕ್​ನಲ್ಲಿ ಉತ್ತಮ ಪ್ರದರ್ಶನ ನೀಡುವುದು ಕೂಡ ಅಷ್ಟೇ ಮುಖ್ಯ. ಈ ವಿಚಾರದಲ್ಲಿ ಧನುಶ್ರೀಗೆ ಹಿನ್ನಡೆ ಆಗಿದೆ.

Bigg Boss Kannada: ಜೈಲುಪಾಲಾದ ಬಿಗ್​ ಬಾಸ್​ ಸ್ಪರ್ಧಿ ಧನುಶ್ರೀ! ಮೊದಲ ವಾರವೇ ಕಳಪೆ ಹಣೆಪಟ್ಟಿ
ಬಿಗ್​ ಬಾಸ್​ ಧನುಶ್ರೀ
Follow us
ರಾಜೇಶ್ ದುಗ್ಗುಮನೆ
|

Updated on: Mar 06, 2021 | 3:22 PM

‘ಬಿಗ್​ ಬಾಸ್​ ಕನ್ನಡ ಸೀಸನ್​ 8’ನಲ್ಲಿ ಮೊದಲ ಸ್ಪರ್ಧಿಯಾಗಿ ದೊಡ್ಮನೆಗೆ ಕಾಲಿಟ್ಟವರು ಧನುಶ್ರೀ. ಆದರೆ ಈ ಟಿಕ್​ಟಾಕ್​ ಸ್ಟಾರ್​ಗೆ ಯಾಕೋ ಈಗ ಟೈಮ್​ ಚೆನ್ನಾಗಿಲ್ಲ. ಮೊದಲ ವಾರ ಅವರ ಪರ್ಫಾರ್ಮೆನ್ಸ್​ ತುಂಬ ಕಳಪೆ ಆಗಿದೆ. ಅಷ್ಟೇ ಅಲ್ಲದೇ, ಅವರಿಗೆ ಜೈಲು ಶಿಕ್ಷೆ ಕೂಡ ನೀಡಲಾಗಿದೆ.

ವೀಕೆಂಡ್​ ಹತ್ತಿರ ಆಗುತ್ತಿದ್ದಂತೆಯೇ ಧನುಶ್ರೀಗೆ ಎಲಿಮಿನೇಷನ್ ​ಭಯ ಕಾಡುತ್ತಿದೆ. ಟಾಸ್ಕ್​ನ ವಿಚಾರದಲ್ಲಿ ಅವರು ಹಿಂದೆ ಬಿದ್ದಿದ್ದಾರೆ. ಟಿಕ್​ಟಾಕ್​ನಲ್ಲಿ ಮಿಂಚುತ್ತಿದ್ದ ಧನುಶ್ರೀ, ಬಿಗ್​ ಬಾಸ್​ ಮನೆಯೊಳಗೆ ಲಾಕ್​ ಆದಾಗಿನಿಂದ ಹಿನ್ನಡೆ ಅನುಭವಿಸುತ್ತಿದ್ದಾರೆ. ಭಾಗವಹಿಸಿದ ಎಲ್ಲ ಟಾಸ್ಕ್​ನಲ್ಲೂ ಅವರ ಪರ್ಫಾರ್ಮೆನ್ಸ್​ ಕಡಿಮೆ ಇದೆ. ‘ಈ ವಾರದ ಟಾಸ್ಕ್​ಗಳಲ್ಲಿ ಕಳಪೆ ಯಾರು?‘ ಎಂಬ ಪ್ರಶ್ನೆಗೆ ಎಲ್ಲ ಸ್ಪರ್ಧಿಗಳು ಧನುಶ್ರೀ ಹೆಸರನ್ನೇ ಸೂಚಿಸಿದ್ದಾರೆ.

ಧನುಶ್ರೀಗೆ ಈ ರೀತಿ ಆಗುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಅವರಿಗೆ ‘ಕಳಪೆ’ ಎಂಬ ಹಣೆಪಟ್ಟಿ ನೀಡಲಾಗಿರುವುದು ಮಾತ್ರವಲ್ಲದೆ, ಬಿಗ್​ ಬಾಸ್​ ಕಠಿಣ ಶಿಕ್ಷೆ ಕೂಡ ನೀಡಿದ್ದಾರೆ. ಅವರನ್ನು ದೊಡ್ಮನೆಯೊಳಗಿನ ಜೈಲಿಗೆ ಕಳಿಸಲಾಗಿದೆ! ಖೈದಿ ರೀತಿ ಕಾಸ್ಟ್ಯೂಮ್​ ಹಾಕಿಸಿ ಬಂಧಿಸಲಾಗಿದೆ. ಇದರಿಂದ ಸಹಜವಾಗಿಯೇ ಅವರಿಗೆ ಬೇಸರ ಆಗಿದೆ. ಅವರ ಫ್ಯಾನ್ಸ್​ಗೂ ನಿರಾಸೆ ಆಗಿದೆ.

ಬಿಗ್​ ಬಾಸ್​ ಮನೆಯಲ್ಲಿ ಜೈಲು ಶಿಕ್ಷೆ ಅನುಭವಿಸುವುದು ಕಷ್ಟ. ಬಂಧಿಯಾದ ಸ್ಪರ್ಧಿ ಬೇರೆ ಯಾರ ಜೊತೆಗೂ ಬೆರೆಯುವಂತಿಲ್ಲ. ಇತರೆ ಸದಸ್ಯರಿಗೆ ಸಿಕ್ಕಂತಹ ಊಟ ಇವರಿಗೆ ಸಿಗುವುದಿಲ್ಲ. ಊಟದ ವಿಚಾರದಲ್ಲಿ ಬಿಗ್​ ಬಾಸ್​ ಮೊದಲೇ ಕಟ್ಟುನಿಟ್ಟು. ಅದರಲ್ಲೂ ಯಾರಾದರೂ ಜೈಲು ಪಾಲಾದರೆ ಅಷ್ಟೇ ಕಥೆ. ಈಗ ಜೈಲು ಶಿಕ್ಷೆ ಅನುಭವಿಸುತ್ತಿರುವ ಧನುಶ್ರೀಗೆ ಪ್ರತಿ ಹೊತ್ತು ಗಂಜಿ ಮಾತ್ರ ಸಿಗಲಿದೆ. ಬೇರೆ ಯಾವುದೇ ಸೌಲಭ್ಯವನ್ನು ಅವರು ಬಳಸುವಂತಿಲ್ಲ. ಮನೆಯ ಇತರೆ ಸದಸ್ಯರ ಅಡುಗೆಗೆ ಬೇಕಾದ ತರಕಾರಿಯನ್ನು ಧನುಶ್ರೀಯೇ ಹೆಚ್ಚಿಕೊಡಬೇಕು.

ಬಿಗ್​ ಬಾಸ್​ ಮುಂದಿನ ಆದೇಶ ನೀಡುವವರೆಗೂ ಧನುಶ್ರೀ ಜೈಲಿನಲ್ಲೇ ಇರಬೇಕಾಗಿದೆ. ಈ ವಾರ ನಾಮಿನೇಟ್​ ಆಗಿರುವವರ ಪಟ್ಟಿಯಲ್ಲಿ ಧನುಶ್ರೀ ಕೂಡ ಇದ್ದಾರೆ. ಹಾಗಾಗಿ ಅವರು ಎಲಿಮಿನೇಟ್​ ಆದರೂ ಅಚ್ಚರಿ ಏನಿಲ್ಲ. ಅವರ ಜೊತೆಗೆ ಶುಭಾ ಪೂಂಜಾ, ವಿಶ್ವನಾಥ್​, ರಘು, ನಿರ್ಮಲಾ ಚೆನ್ನಪ್ಪ ಅವರ ತಲೆ ಮೇಲೆ ಕೂಡ ಎಲಿಮಿನೇಷನ್​ ತೂಗುಗತ್ತಿ ಇದೆ. ಈ ವಾರ ಯಾರು ಬಿಗ್​ ಬಾಸ್ ಮನೆಯಿಂದ ಹೊರಬೀಳುತ್ತಾರೆ ಎಂಬುದು ‘ವಾರದ ಕಥೆ ಕಿಚ್ಚನ ಜೊತೆ’ಯಲ್ಲಿ ಬಹಿರಂಗವಾಗಲಿದೆ.

ಇದನ್ನೂ ಓದಿ: Bigg Boss Kannada Day 3: ಧನುಶ್ರೀ ಮೇಕಪ್​ ತೆಗೆಯೋಕೆ ಒಂದು ವರ್ಷ ಸ್ನಾನ ಮಾಡಬೇಕು ಎಂದ ಪ್ರಶಾಂತ್​ ಸಂಬರಗಿ

Bigg Boss Kannada Day 1: ಬಿಗ್​ ಬಾಸ್​ ಮನೆಯಲ್ಲಿ ಧನುಶ್ರೀ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿದ ನಿರ್ಮಲಾ

ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ