Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada Day 1: ಬಿಗ್​ ಬಾಸ್​ ಮನೆಯಲ್ಲಿ ಧನುಶ್ರೀ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿದ ನಿರ್ಮಲಾ

ಧನುಶ್ರೀ ಈ ಸ್ಪರ್ಧೆಯಲ್ಲಿ ಅಷ್ಟಾಗಿ ಆ್ಯಕ್ಟಿವ್​ ಆಗಿ ನಡೆದುಕೊಂಡಿರಲಿಲ್ಲ. ಹೀಗಾಗಿ, ತಂಡ ಸೋಲಲು ಧನುಶ್ರೀಯೇ ಕಾರಣ ಎನ್ನುವ ಮಾತು ಕೇಳಿ ಬಂದಿತ್ತು.

Bigg Boss Kannada Day 1: ಬಿಗ್​ ಬಾಸ್​ ಮನೆಯಲ್ಲಿ ಧನುಶ್ರೀ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿದ ನಿರ್ಮಲಾ
ಧನುಶ್ರೀ-ನಿರ್ಮಲಾ
Follow us
ರಾಜೇಶ್ ದುಗ್ಗುಮನೆ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 02, 2021 | 3:12 PM

ಬಿಗ್​ ಬಾಸ್​ ಮೊದಲನೇ ದಿನವೇ ಸಾಕಷ್ಟು ಹೈಡ್ರಾಮಾಗಳು ನಡೆದಿವೆ. ಶುಭಾ ಪೂಂಜಾ ಕಣ್ಣೀರಿಟ್ಟರು. ಪ್ರಶಾಂತ್​ ಸಂಬರಗಿ, ದಿವ್ಯಾ ಉರುಡುಗರನ್ನು ಎತ್ತಿಕೊಂಡು ಹೋಗಿದ್ದ ವಿಚಾರ ಕೂಡ ಚರ್ಚೆಗೆ ಕಾರಣವಾಗಿತ್ತು. ಈ ಮಧ್ಯೆ, ಧನುಶ್ರೀ ಮಾಡಿದ ತಪ್ಪಿಗೆ ನಿರ್ಮಲಾ ಶಿಕ್ಷೆ ಅನುಭವಿಸಿದ್ದಾರೆ. ಅಷ್ಟಕ್ಕೂ ಬಿಗ್​ ಬಾಸ್​ ಮನೆಯಲ್ಲಿ ಮೊದಲ ದಿನ ಆಗಿದ್ದೇನು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ. ಬಿಗ್​ ಬಾಸ್​ ಮನೆಯಲ್ಲಿ ಮೊದಲ ದಿನ 17 ಸದಸ್ಯರು ಮನೆಯೊಳಗೆ ಕೂತಿದ್ದರು. ಈ ವೇಳೆ ಪ್ರತಿಯೊಬ್ಬರಿಗೂ ಒಂದೊಂದು ಬಾಲ್​ಗಳನ್ನು ನೀಡಲಾಯಿತು. ಹೀಗೆ ನೀಡಿದ ಬಾಲ್​ಗಳಲ್ಲಿ ನೀಲಿ, ಕೆಂಪು ಹಸಿರು ಹಾಗೂ ಹಳದಿ ಬಣ್ಣದ ಚಾವಿ ಇತ್ತು. ಬಣ್ಣದ ಆಧಾರದ ಮೇಳೆ ನಾಲ್ಕು ಸದಸ್ಯರ ಒಂದು ಟೀಂ ಮಾಡಲಾಯಿತು. ಶಮಂತ್​ ಅಲಿಯಾಸ್​ ಬ್ರೋ ಗೌಡ ಲೀಡರ್​ ಆದರು. ಈ ವೇಳೆ ಟಾಸ್ಕ್​ ಒಂದನ್ನು ಬಿಗ್​ ಬಾಸ್​ ನೀಡಿತ್ತು.

ಮೂರು ಕಡೆಗಳಲ್ಲಿ ಹಗ್ಗ ಇತ್ತು. ಹಗ್ಗದ ತುದಿ ಸೇರುವ ಜಾಗದಲ್ಲಿ ಒಂದು ಪ್ಲೇಟ್​ ರೀತಿಯ ವಸ್ತು ಇತ್ತು. ಪ್ಲೇಟ್​ ಮೇಲೆ ಸ್ಪಂಜ್​ ಮಾದರಿಯ ಆಯಾತಾಕರದ ವಸ್ತುಗಳನ್ನು ಜೋಡಿಸುತ್ತಾ ಬರಬೇಕು. ಹೀಗೆ ಜೋಡಿಸುವ ಸ್ಪರ್ಧೆಯಲ್ಲಿ, ಶುಭಾ ಪೂಂಜಾ, ನಿರ್ಮಲಾ, ಧನುಶ್ರೀ, ನಿಧಿ ಇದ್ದ ತಂಡ ಸೋತಿತ್ತು.

ಧನುಶ್ರೀ ಈ ಸ್ಪರ್ಧೆಯಲ್ಲಿ ಅಷ್ಟಾಗಿ ಆ್ಯಕ್ಟಿವ್​ ಆಗಿ ನಡೆದುಕೊಂಡಿರಲಿಲ್ಲ. ಹೀಗಾಗಿ, ತಂಡ ಸೋಲಲು ಧನುಶ್ರೀಯೇ ಕಾರಣ ಎನ್ನುವ ಮಾತು ಕೇಳಿ ಬಂದಿತ್ತು. ಬಿಗ್​ ಬಾಸ್​ ಆದೇಶದಂತೆ ಸೋಲಿನ ಹೊಣೆಯನ್ನು ತಂಡದ ಓರ್ವ ಸದಸ್ಯ ಮಾತ್ರ ಹೊತ್ತುಕೊಳ್ಳಬೇಕಿತ್ತು. ಆಗ ನಿರ್ಮಲಾ ಸೋಲಿನ ಹೊಣೆಯನ್ನು ತಾವೇ ಹೊತ್ತಿಕೊಳ್ಳುತ್ತೇವೆ ಎಂದರು. ಈ ಕಾರಣಕ್ಕೆ, ಈ ವಾರದ ಎಲಿಮಿನೇಷನ್​ಗೆ ನಿರ್ಮಲಾ ನೇರವಾಗಿ ನಾಮಿನೇಟ್​ ಆದರು.

ಈ ವಾರ ನಾಮಿನೇಟ್​ ಆದವರ ಪಟ್ಟಿ.. ಈ ವಾರದ ಎಲಿಮಿನೇಷನ್​ಗೆ ಒಟ್ಟು ಐದು ಜನರು ನಾಮಿನೇಷನ್​ ಆಗಿದ್ದಾರೆ. ನಿರ್ಮಲಾ ನೇರವಾಗಿ ನಾಮಿನೇಟ್​ ಆದರೆ, ಧನುಶ್ರೀ, ನಿಧಿ ಸುಬ್ಬಯ್ಯ, ಪ್ರಶಾಂತ್​ ಸಂಬರಗಿ ಹಾಗೂ ಮಂಜು ಪಾವಗಡ ಅವರನ್ನು ಮನೆಯ ಸದಸ್ಯರು ನಾಮಿನೇಟ್​ ಮಾಡಿದ್ದರು. ಶಂಕರ್​ ಅಶ್ವತ್ಥ್​ ಅವರು ಕೂಡ ನಾಮಿನೇಟ್ ಆಗಿದ್ದರು, ಆದರೆ ಮನೆಯ ಲೀಡರ್​ ಬ್ರೋ ಗೌಡ ಅವರಿಗೆ ಇದ್ದ ಅಧಿಕಾರದಿಂದ ಶಂಕರ್​ ಅವರನ್ನು ಉಳಿಸಿದರು.

ಇದನ್ನೂ ಓದಿ: Bigg Boss Kannada Day 1: ಹ್ಯಾಂಡ್ ಶೇಕ್ ಮಾಡಲು ಬಂದ ದಿವ್ಯಾರನ್ನು ಅನಾಮತ್ತು ಎತ್ತಿಕೊಂಡ ಪ್ರಶಾಂತ್ ಸಂಬರಗಿ

ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ