AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Delhi Chalo: ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ‘ದೆಹಲಿ ಚಲೋ‘ಗೆ ಶತ ದಿನ; ರೈತ ಚಳವಳಿ ನಡೆದು ಬಂದಿದ್ದು ಹೀಗೆ..

Farmers Protest: ಈ ನಡುವೆ 18 ತಿಂಗಳ ಕಾಲ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿ, ಅಷ್ಟರಲ್ಲಿ ರೈತರ ಮನವೊಲಿಸಲು ಸಿದ್ಧ ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಹೊಸ ಪ್ರಸ್ತಾಪವಿಟ್ಟಿದ್ದರು. ಆದರೆ ಈ ಪ್ರಸ್ತಾಪ ತಿರಸ್ಕರಿಸಿದ ರೈತರು, ಕೃಷಿ ಕಾಯ್ದೆಗಳ ಖಾಯಂ ರದ್ಧತಿಗೆ ಪಟ್ಟು ಹಿಡಿದಿದ್ದರು.

Delhi Chalo: ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ‘ದೆಹಲಿ ಚಲೋ‘ಗೆ ಶತ ದಿನ; ರೈತ ಚಳವಳಿ ನಡೆದು ಬಂದಿದ್ದು ಹೀಗೆ..
ಚಳವಳಿ ನಿರತ ವೃದ್ಧ ರೈತ
Follow us
guruganesh bhat
| Updated By: ಸಾಧು ಶ್ರೀನಾಥ್​

Updated on: Mar 06, 2021 | 12:53 PM

ಇಂದಿಗೆ (6  March) ದೆಹಲಿ ಚಲೋ (Delhi Chalo) ಚಳವಳಿಗೆ ಬರೋಬ್ಬರಿ ನೂರು ದಿನಗಳ ಹರೆಯ. ಚಳವಳಿಕಾರರು ಇಂದಿನ ದಿನವನ್ನು ಕರಾಳ ದಿನವನ್ನಾಗಿ ಆಚರಿಸುತ್ತಿದ್ದಾರೆ. 2020ರ ನವೆಂಬರ್ 24ರಂದು ಪಂಜಾಬ್, ಹರಿಯಾಣ ರಾಜ್ಯಗಳ ಗ್ರಾಮಗಳಲ್ಲಿ ಹತ್ತಿದ ಕೃಷಿ ಕಾಯ್ದೆಗಳ (New Farm Laws) ವಿರುದ್ಧದ ಕಿಚ್ಚು, ನವೆಂಬರ್ 26ರಂದು ರಾಷ್ಟ್ರ ರಾಜಧಾನಿ ದೆಹಲಿ ತಲುಪಿ ಮುಂದೆ ದೇಶವ್ಯಾಪ್ತಿ ದಾವಾಗ್ನಿಯಾಗಿ ಬೆಳೆಯಿತು. ರೈತರ ಪಾಲಿಗೆ ದೆಹಲಿಯ ಒಳಾಂಗಣ ತಲುಪುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ನಗರದ ಹೊರವಲಯದ ಬುರಾರಿ ಮೈದಾನದಲ್ಲಿ ವಸತಿಗೆ ಅವಕಾಶ ಮಾಡಿಕೊಡುವುದಾಗಿ ಪೊಲೀಸರು ಹೇಳಿದರೂ ಅದಕ್ಕೊಪ್ಪದ ರೈತರು ದೆಹಲಿ ಪ್ರವೇಶಿಸಲು ಪ್ರಯತ್ನಿಸಿದರು. ಸಿಂಗು, ಟಿಕ್ರಿ, ಘಾಜಿಪುರ ಸೇರದಂತೆ ದೆಹಲಿಯ ಗಡಿಗಳಲ್ಲೇ ರೈತ ಪ್ರತಿಭಟನಾಕಾರರನ್ನು ಪೊಲೀಸರು ತಡೆದ ಕಾರಣ ರೈತರ ಪ್ರತಿಭಟನೆ ಗಡಿಗಳಲ್ಲೇ ಅವಿರತವಾಗಿ ಸಾಗಿತು. ಮುಂದೆ ಕೇಂದ್ರ ಮತ್ತು ರೈತ ಸಂಘಟನೆಗಳ ನಡುವೆ 11 ಸುತ್ತಿನ ಮಾತುಕತೆ ನಡೆದರೂ ಯಾವುದೇ ಒಮ್ಮತ ಮೂಡಲು ಸಾಧ್ಯವಾಗಲಿಲ್ಲ. ಈ ಮುನ್ನವೇ ದೇಶವಿರೋಧಿ ಶಕ್ತಿಗಳು ದೆಹಲಿ ಚಲೋ ಚಳವಳಿಯಲ್ಲಿ ಕೈಜೋಡಿಸಿದ್ದಾರೆ ಎಂಬ ದೂರುಗಳಿತ್ತು. ಆದರೆ, ರೈತ ನಾಯಕರು ಮಾತ್ರ ಯಾವುದೇ ರಾಜಕೀಯ ಪ್ರೇರಣೆಯಿಂದ ದೂರವೇ ಉಳಿದು ಹೋರಾಟ ಮುಂದುವರೆಸಿದ್ದರು.

ಆದರೆ ಜನವರಿ 26, ಗಣರಾಜ್ಯೋತ್ಸವದಂದು ನಡೆದ ಟ್ರ್ಯಾಕ್ಟರ್ ಮೆರವಣಿಗೆ ರೈತರ ಕುರಿತು ಮೂಡಿದ್ದ ಅನುಕಂಪವನ್ನು ಕುಗ್ಗಿಸುವಲ್ಲಿ ಪ್ರಬಲ ಅಂಶವಾಯಿತು. ರೈತರ ಟ್ರ್ಯಾಕ್ಟರ್ ಮೆರವಣಿಗೆಯ ಪ್ರತಿಭಟನೆ ಪೊಲೀಸರ ಮಾರ್ಗಸೂಚಿಗಳನ್ನು ಮೀರಿ ಸಾಗಿತು. ಐತಿಹಾಸಿಕ ಕೆಂಪುಕೋಟೆಯ ಮೇಲೆ ಅನ್ಯಧ್ವಜ ಹಾರಾಟ, ಪೊಲೀಸರ ಮೇಲೆ ಹಲ್ಲೆಯಂತಹ ಕೃತ್ಯಗಳು ಚಳವಳಿ ಕುರಿತು ನಕಾರಾತ್ಮಕ ಭಾವನೆ ಮೂಡಲು ಕಾರಣವಾದವು. ಆದರೆ, ರೈತ ನಾಯಕರು ಮಾತ್ರ ಈ ದುಷ್ಕೃತ್ಯಗಳ ಹಿಂದೆ ರೈತ ಹೋರಾಟದ ಕೈವಾಡವಿಲ್ಲ, ಅನ್ಯಶಕ್ತಿಗಳ ಪಿತೂರಿ ರೈತ ಹೋರಾಟವನ್ನು ಮಣಿಸಲು ಹೂಡಿದ ತಂತ್ರ ಎಂದು ಸ್ಪಷ್ಟನೆ ನೀಡಿದರು. ಈ ಎಲ್ಲ ಘಟನೆಗಳ ನಡುವೆ ರೈತ ನಾಯಕ ರಾಕೇಶ್ ಟಿಕಾಯತ್ ಹೆಸರು ದೇಶದ ಎಲ್ಲೆಡೆ ಮುನ್ನೆಲೆಗೆ ಬಂತು.

ಕೃಷಿಕರ ವಾದವೇನು? ಈವರೆಗೂ 200ಕ್ಕೂ ಹೆಚ್ಚು ರೈತರು ದೆಹಲಿ ಚಲೋ ಹೋರಾಟದಲ್ಲಿ ಅಸುನೀಗಿದ್ದಾರೆ ಎಂದು ರೈತ ಸಂಘಟನೆಗಳು ತಿಳಿಸಿವೆ. ಕೃಷಿ ಕಾಯ್ದೆಗಳ ವಿರುದ್ಧ ಹೊತ್ತಿದ ಚಿಕ್ಕ ಕಿಡಿ ಮುಂದೆ ಮನೆಯನ್ನೇ ದಹಿಸುವಷ್ಟು ರಭಸವಾಗಿ ದೇಶದೆಲ್ಲೆಡೆ ವ್ಯಾಪಿಸಲು ರೈತ ನಾಯಕರ ಸಂಘಟನಾತ್ಮಕತೆ ಕಾರಣವಾಯಿತು. ಅದರಲ್ಲೂ ಭಾರತೀಯ ಕಿಸಾನ್ ಯುನಿಯನ್ ವಕ್ತಾರ ರಾಕೇಶ್ ಟಿಕಾಯತ್ ಭಾವನಾತ್ಮಕವಾಗಿಯೂ ಉತ್ತರ ಪ್ರದೇಶದ ಅಪಾರ ಪ್ರಮಾಣದ ರೈತರನ್ನು ಸೆಳೆದರು. ಸಿಖ್ ಧಾರ್ಮಿಕ ನಾಯಕರು ಜನರನ್ನು ಒಗ್ಗೂಡಿಸಲು ಅವಿರತ ಶ್ರಮಿಸಿದರು. ಕೃಷಿ ಕಾಯ್ದೆಗಳು ಕೃಷಿ ವಲಯವನ್ನು ಕಾರ್ಪೊರೇಟ್ ಶಕ್ತಿಗಳ ಕೈಗೆ ನೀಡುತ್ತವೆ. ಬೆಂಬಲ ಬೆಲೆಯನ್ನು ಕಸಿಯುತ್ತವೆ ಮತ್ತು ಗುತ್ತಿಗೆ ಕೃಷಿ ಜಾರಿಯಾಗಲಿದೆ, ಇದರಿಂದ ರೈತರ ಭೂಮಿ ಕೃಷಿಕರ ಕೈ ತಪ್ಪಲಿದೆ ಎಂಬುದು ದೆಹಲಿ ಚಲೋ ಹೋರಾಟಗಾರರ ಪ್ರಬಲ ವಾದವಾಗಿದೆ.

ವಿಫಲಗೊಂಡ ಸಂಧಾನ ಸಭೆಗಳು ಕೃಷಿ ಕಾಯ್ದೆ ರದ್ದತಿ ಬಿಟ್ಟು ಇನ್ಯಾವುದೇ ಆಯ್ಕೆ ನೀಡಿದರೂ ಕೇಂದ್ರ ಸರ್ಕಾರ ಸಿದ್ಧವಿದೆ. ಆದರೆ, ರೈತರು ಕೃಷಿ ಕಾಯ್ದೆ ರದ್ದುಗೊಳಿಸುವುದನ್ನು ಬಿಟ್ಟು ಬೇರಾವ ಆಯ್ಕೆಯನ್ನು ನೀಡಿಲ್ಲ. ಹೀಗಾಗಿ ಇಂದಿನ ಸಭೆ ವಿಫಲಗೊಂಡಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸಭೆಯ ನಂತರ ಹೇಳಿದ್ದರು

ಸುಪ್ರೀಂ ಕೋರ್ಟ್ ರಚಿಸಿತ್ತು ಸಮಿತಿ ಕೃಷಿ ಕಾಯ್ದೆಗಳಿಗೆ ತಾತ್ಕಾಲಿಕವಾಗಿ ತಡೆ ನೀಡಿರುವ ಸುಪ್ರೀಂ ಕೋರ್ಟ್, ನಾಲ್ವರು ಸದಸ್ಯರ ಸಮಿತಿಯನ್ನು ರಚಿಸಿತ್ತು. ಆದರೆ ಆ ಸದಸ್ಯರ ಕುರಿತು ರೈತ ಸಂಘಟನೆಗಳು ಅಪಸ್ವರ ಎತ್ತಿವೆ. ಸಮಿತಿಯ ನಾಲ್ಕು ಸದಸ್ಯರು ಸಹ ಕೃಷಿ ಕಾಯ್ದೆಗಳ ಪರ ಒಲವುಳ್ಳವರೇ ಎಂಬುದು ಪಂಜಾಬ್ ರೈತರ ವಾದವಾಗಿದೆ. ಹೀಗಾಗಿ, ನ್ಯಾಯಾಂಗದ ಪ್ರವೇಶವಿಲ್ಲದೇ ಸರ್ಕಾರದ ಮೂಲಕವೇ ತಮ್ಮ ಬೇಡಿಕೆ ಈಡೇರಿಸಿಕೊಳ್ಳಬೇಕೆಂಬುದು ರೈತರು ಪಟ್ಟು ಹಿಡಿದಿದ್ದರು.

18 ತಿಂಗಳ ರದ್ಧತಿಗೆ ಸಿದ್ದವಿದ್ದ ಕೇಂದ್ರ ಈ ನಡುವೆ 18 ತಿಂಗಳ ಕಾಲ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿ, ಅಷ್ಟರಲ್ಲಿ ರೈತರ ಮನವೊಲಿಸಲು ಸಿದ್ಧ ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಹೊಸ ಪ್ರಸ್ತಾಪವಿಟ್ಟಿದ್ದರು. ಆದರೆ ಈ ಪ್ರಸ್ತಾಪ ತಿರಸ್ಕರಿಸಿದ ರೈತರು, ಕೃಷಿ ಕಾಯ್ದೆಗಳ ಖಾಯಂ ರದ್ಧತಿಗೆ ಪಟ್ಟು ಹಿಡಿದಿದ್ದರು.

ಜನವರಿ 26ರಂದು.. ಜನವರಿ 26ರಂದು ಸಾವಿರಾರು ರೈತ ಹೋರಾಟಗಾರರು ಪೊಲೀಸರೊಂದಿಗೆ ಜಿದ್ದಾಜಿದ್ದಿ ನಡೆಸಿದ್ದರು. ರಾಷ್ಟ್ರ ರಾಜಧಾನಿಯ ಕೆಂಪುಕೋಟೆಯಲ್ಲಿ ರೈತ ಹೋರಾಟವು ಹಿಂಸಾತ್ಮಕ ರೂಪತಾಳಿತ್ತು. ಟ್ರ್ಯಾಕ್ಟರ್​ನಲ್ಲಿ ಚಳುವಳಿ ಮಾಡುತ್ತಿದ್ದ ರೈತರು ಕೆಂಪುಕೋಟೆ ಆವರಣವನ್ನು ಪ್ರವೇಶಿಸಿದ್ದರು. ಕೆಂಪುಕೋಟೆಯಲ್ಲಿ ಧಾರ್ಮಿಕ ಬಾವುಟವನ್ನೂ ಹಾರಿಸಿದ್ದರು.

ಟೂಲ್​ಕಿಟ್ ಪ್ರಕರಣ; ದಿಶಾ ರವಿ ಮತ್ತು ಸಹಚರರ ಬಂಧನ ಖಲಿಸ್ತಾನಿ ಗುಂಪಿನ ಪೊಯೆಟಿಕ್ ಜಸ್ಟೀಸ್ ಫೌಂಡೇಶನ್ ಎಂದು ಕರೆದುಕೊಳ್ಳುವ ಸಂಸ್ಥೆಯಿಂದ ಗಣರಾಜ್ಯೋತ್ಸವ ದಿನದಂದು ಸಾಮಾಜಿಕ ಜಾಲತಾಣಗಳಲ್ಲಿ ದೇಶದ ವಿರುದ್ಧ ಅಲೆ ರೂಪಿಸಲು ಟೂಲ್​ಕಿಟ್ ರಚಿಸಿದ ಆರೋಪದಡಿ ಬೆಂಗಳೂರು ಮೂಲದ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರನ್ನು ದೆಹಲಿ ಪೊಲೀಸರು ಏಕಾಏಕಿ ಬೆಂಗಳೂರಿನಲ್ಲಿ ಫೆ.13ರಂದು ಬಂಧಿಸಿದ್ದರು.

ದಿಶಾ ರವಿಗೆ ಜಾಮೀನು ‘ಭಾರತಕ್ಕೆ ಅಪಖ್ಯಾತಿ ತರಲು, ರೈತರ ಪ್ರತಿಭಟನೆಯ ನೆರಳಿನಲ್ಲಿ ಶಾಂತಿ ಕದಡುವ ಜಾಗತಿಕ ಸಂಚಿನಲ್ಲಿ ಭಾಗಿಯಾಗಿದ್ದಾರೆ’ ಎಂಬ ಆರೋಪದ ಮೇಲೆ ಬಂಧನಕ್ಕೊಳಗಾದ  ದಿಶಾ ರವಿ ಅವರಿಗೆ ದೆಹಲಿಯ ಪಟಿಯಾಲ ನ್ಯಾಯಾಲಯ ಜಾಮೀನು ನೀಡಿತ್ತು.

ಕಿಸಾನ್ ಮಹಾ ಪಂಚಾಯತ್ ಈ ಎಲ್ಲ ಘಟನೆಗಳ ನಂತರ ದೆಹಲಿ ಭಾಗದಲ್ಲೊಂದೇ ಚಳವಳಿ ನಡೆಸಿದರೆ ಸಾಲದು ಎಂದು ನಿರ್ಧರಿಸಿದ ರೈತ ನಾಯಕರು ದೇಶದ ಎಲ್ಲೆಡೆ ರೈತ ಪಂಚಾಯತ್​ಗಳನ್ನು ನಡೆಸಲು ತೀರ್ಮಾನಿಸಿದರು. ಅದರ ಪ್ರಯುಕ್ತ ಹರಿಯಾಣ, ದೆಹಲಿ, ಪಂಜಾಬ್ ಮತ್ತು ದಕ್ಷಿಣ ಕರ್ನಾಟಕದಲ್ಲೂ ಕಿಸಾನ್ ಮಹಾ ಪಂಚಾಯತ್​ಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಇನ್ನಷ್ಟು ಸಂಘಟಿತರಾಗಿ, ಇಡೀ ದೇಶದಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸಲು ದೆಹಲಿ ಚಲೋ ಚಳವಳಿಯ ಪ್ರಮುಖರು ಸಿದ್ಧರಾಗುತ್ತಿದ್ದಾರೆ.

ಇದನ್ನೂ ಓದಿ: ಎಂ.ಎಸ್. ಶ್ರೀರಾಮ್ ಸಂದರ್ಶನ| ಕೃಷಿ ಕಾಯ್ದೆಗಳ ಉಪಯುಕ್ತತೆ ಬಗ್ಗೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಇದೆ

ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ನನ್ನ ಹೆಗಲ ಮೇಲೆ ಕೂರಿಸಿಕೊಂಡು ಬೆಟ್ಟ ಇಳಿದವರು ಸ್ಥಳೀಯ ಕಾಶ್ಮೀರಿ: ಅಭಿಜಯ್
ನನ್ನ ಹೆಗಲ ಮೇಲೆ ಕೂರಿಸಿಕೊಂಡು ಬೆಟ್ಟ ಇಳಿದವರು ಸ್ಥಳೀಯ ಕಾಶ್ಮೀರಿ: ಅಭಿಜಯ್
Dewald Brevis: ಚೊಚ್ಚಲ ಪಂದ್ಯದಲ್ಲೇ ಡೆವಾಲ್ಡ್ ಬ್ರೆವಿಸ್ ಆರ್ಭಟ
Dewald Brevis: ಚೊಚ್ಚಲ ಪಂದ್ಯದಲ್ಲೇ ಡೆವಾಲ್ಡ್ ಬ್ರೆವಿಸ್ ಆರ್ಭಟ
ಸುಳಿವು ನೀಡಿದ ಕಳ್ಳರ ಕಾರು,  ಚೇಸ್ ಮಾಡಿದಾಗ ಪೊಲೀಸರ ಮೇಲೆ ಹಲ್ಲೆ
ಸುಳಿವು ನೀಡಿದ ಕಳ್ಳರ ಕಾರು,  ಚೇಸ್ ಮಾಡಿದಾಗ ಪೊಲೀಸರ ಮೇಲೆ ಹಲ್ಲೆ
VIDEO: ಕಮಿಂದು ಕಮಾಲ್... ವಾಟ್ ಎ ಕ್ಯಾಚ್
VIDEO: ಕಮಿಂದು ಕಮಾಲ್... ವಾಟ್ ಎ ಕ್ಯಾಚ್