ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಮುತೂಟ್ ಗ್ರೂಪ್ ಅಧ್ಯಕ್ಷ ಎಂ.ಜಿ. ಜಾರ್ಜ್ ಮುತೂಟ್
ನೆನ್ನೆ ಜಾರ್ಜ್ ಮುತೂಟ್ ಅವರು ತಮ್ಮ ಮನೆಯ ಮೆಟ್ಟಿಲುಗಳ ಮೇಲೆ ಜಾರಿ ಬಿದ್ದ ಬಳಿಕ ಅವರನ್ನು ದೆಹಲಿಯ ಎಸ್ಕೋರ್ಟ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂಜೆ 6.58 ರ ಸುಮಾರಿಗೆ ಅವರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ದೆಹಲಿ: ಮುತೂಟ್ ಗ್ರೂಪ್ ಅಧ್ಯಕ್ಷ ಎಂ.ಜಿ.ಜಾರ್ಜ್ ಮುತೂಟ್ (72 ವರ್ಷ) ಶುಕ್ರವಾರ ಸಂಜೆ ದೆಹಲಿಯ ಎಸ್ಕಾರ್ಟ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ನಿನ್ನೆ ಜಾರ್ಜ್ ಮುತೂಟ್ ಅವರು ತಮ್ಮ ಮನೆಯ ಮೆಟ್ಟಿಲುಗಳ ಮೇಲೆ ಜಾರಿ ಬಿದ್ದ ಬಳಿಕ ಅವರನ್ನು ದೆಹಲಿಯ ಎಸ್ಕಾರ್ಟ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂಜೆ 6.58 ರ ಸುಮಾರಿಗೆ ಅವರು ಆಸ್ಪತ್ರೆಯಲ್ಲಿ ನಿಧನರಾದರು.
ಎಂಜಿ ಜಾರ್ಜ್ ಮುತೂಟ್ ಅವರ ನೇತೃತ್ವದ, ಮುತೂಟ್ ಗ್ರೂಪ್‌ನ ಪ್ರಮುಖ ಕಂಪನಿಯಾದ ಮುತೂಟ್ ಫೈನಾನ್ಸ್ ಲಿಮಿಟೆಡ್, ಎನ್‌ಬಿಎಫ್‌ಸಿಗಳಲ್ಲಿ ಭಾರತದ ಅತಿದೊಡ್ಡ ಚಿನ್ನದ ಮೇಲಿನ ಹೂಡಿಕೆಯ ಹಣಕಾಸು ಕಂಪನಿಯಾಗಿದೆ. ಅವರ ನಾಯಕತ್ವದಲ್ಲಿಯೇ ಮುತೂಟ್ ಗ್ರೂಪ್ 5,500 ಕ್ಕೂ ಹೆಚ್ಚು ಶಾಖೆಗಳು ಮತ್ತು ವಿಶ್ವಾದ್ಯಂತ 20ಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ವ್ಯವಹಾರಗಳನ್ನು ವಿಸ್ತರಿಸಿತು.
ಮಾರ್ಚ್ 2, 1949 ರಂದು ಕೇರಳದಲ್ಲಿ ಜನಿಸಿದರು.. ಜಾರ್ಜ್ ಮುತೂಟ್ ಮಾರ್ಚ್ 2, 1949 ರಂದು ಕೇರಳದಲ್ಲಿ ಜನಿಸಿದರು. ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರರಾಗಿದ್ದರು. ಬಳಿಕ ಹಾರ್ವರ್ಡ್ ಬಿಸಿನೆಸ್ ಸ್ಕೂಲ್ನಲ್ಲಿ ಹಲವಾರು ಕಾರ್ಯನಿರ್ವಾಹಕ ನಿರ್ವಹಣಾ ಕೋರ್ಸ್‌ಗಳ ಅಧ್ಯಯನ ನಡೆಸಿದರು. ನಂತರ ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಕುಟುಂಬ ವ್ಯವಹಾರವಾದ ಮುತೂಟ್ ಗ್ರೂಪ್ಗೆ ಸೇರಿದ ಜಾರ್ಜ್ ಮುತೂಟ್, 1979 ರಲ್ಲಿ ಅದರ ವ್ಯವಸ್ಥಾಪಕ ನಿರ್ದೇಶಕರಾದರು. ಬಳಿಕ 1993 ರಲ್ಲಿ ಅವರನ್ನು ಮುತೂಟ್ ಗ್ರೂಪ್‌ನ ಅಧ್ಯಕ್ಷರನ್ನಾಗಿ ನೇಮಿಸಲಾಯಿತು.
26 ನೇ ಶ್ರೀಮಂತ ಭಾರತೀಯ ವ್ಯಕ್ತಿ.. ಜಾರ್ಜ್ ಮುತೂಟ್ ಅವರನ್ನು 2020 ರಲ್ಲಿ 26 ನೇ ಶ್ರೀಮಂತ ಭಾರತೀಯರೆಂದು ಘೋಷಿಸಲಾಗಿದೆ. ಫೋರ್ಬ್ಸ್ ಏಷ್ಯಾ ನಿಯತಕಾಲಿಕದ ಪ್ರಕಾರ ಅವರು ಭಾರತದ ಮೊದಲ ಮಲಯಾಳಿ ಶ್ರೀಮಂತರಾಗಿದ್ದಾರೆ. ಮುತೂಟ್ ದೆಹಲಿಯಲ್ಲಿ ಬಹಳ ಕಾಲದಿಂದಲೂ ವಾಸಿಸುತ್ತಿದ್ದರು. ಆದಾಗ್ಯೂ, 20 ಕ್ಕೂ ಹೆಚ್ಚು ವ್ಯಾಪಾರ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವ ಅವರ ಮುತೂಟ್ ಗ್ರೂಪ್ ಕೊಚ್ಚಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಸೆಕ್ಯುರಿಟೀಸ್, ರಿಯಲ್ ಎಸ್ಟೇಟ್ನಿಂದ ಹಿಡಿದು, ಮೂಲಸೌಕರ್ಯ, ಆಸ್ಪತ್ರೆಗಳು, ಶಿಕ್ಷಣ ಕ್ಷೇತ್ರದವರೆಗೆ ಈ ಮುತೂಟ್ ಗ್ರೂಪ್ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿದೆ.
ಇದನ್ನೂ ಓದಿ: ಆರ್ಥಿಕ ಅಶಿಸ್ತಿನ ಕಾರಣಕ್ಕೆ ಸಾಮ್ರಾಜ್ಯ ಕುಸಿತ; ಬಿ.ಆರ್. ಶೆಟ್ಟಿ ಕನಸು ನುಚ್ಚುನೂರು