ಡ್ರೈವರ್ ಸೀಟ್ಗಷ್ಟೇ ಅಲ್ಲ, ಪಕ್ಕದ ಸೀಟ್ಗೂ ಏರ್ಬ್ಯಾಗ್ ಕಡ್ಡಾಯ; ಏಪ್ರಿಲ್ 1ರಿಂದಲೇ ಹೊಸ ನಿಯಮ ಜಾರಿ, ವಾಹನಗಳ ಬೆಲೆಯೂ ಏರಲಿದೆ
ಅಪಘಾತದದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚಿನ ಸುರಕ್ಷತೆಗಾಗಿ ಹೊಸ ನಿಯಮ ತರಲಾಗಿದ್ದು, ಒಂದು ವಾಹನದ ಎರಡೂ ಸೀಟ್ಗಳಿಗೆ ಏರ್ಬ್ಯಾಗ್ ಅಳವಡಿಸುವುದರಿಂದ ಸಹಜವಾಗಿಯೇ ಅದರ ಬೆಲೆ ಏರಿಕೆಯಾಗಲಿದೆ.
ದೆಹಲಿ: ಇಷ್ಟು ದಿನ ವಾಹನಗಳ ಅದರಲ್ಲೂ ಕಾರುಗಳಲ್ಲಿ ಡ್ರೈವರ್ ಸೀಟ್ಗೆ ಮಾತ್ರ ಏರ್ಬ್ಯಾಗ್ ಕಡ್ಡಾಯವಾಗಿತ್ತು. ಆದರೆ ಈ ನಿಯಮದಲ್ಲಿ ಬದಲಾವಣೆಯೊಂದಾಗಿದ್ದು ಅದರ ಅನ್ವಯ ಇನ್ನುಮುಂದೆ ಮುಂದಿನ ಎರಡೂ ಸೀಟ್ಗಳಿಗೆ ಏರ್ಬ್ಯಾಗ್ ಇರಲೇಬೇಕಾಗಿದೆ. ಈ ಸಂಬಂಧ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಶುಕ್ರವಾರ ಕರಡು ಅಧಿಸೂಚನೆ ಹೊರಡಿಸಿದೆ. ಸುರಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಕಾರು ಮತ್ತಿತರ ವಾಹನಗಳಲ್ಲಿ ಮುಂಭಾಗದಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರಿಗೆ ಏರ್ಬ್ಯಾಗ್ ಕಡ್ಡಾಯವಾಗಲಿದೆ. ಸುಪ್ರೀಂಕೋರ್ಟ್ನ ರಸ್ತೆ ಸುರಕ್ಷತಾ ಸಮಿತಿ ನೀಡಿದ ಸಲಹೆ ಅನ್ವಯ ಇದನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ಸಾರಿಗೆ ಸಚಿವಾಲಯ ತಿಳಿಸಿದೆ.
ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಕಳೆದ ವರ್ಷವಷ್ಟೇ ಚಾಲಕನ ಬದಿಯಲ್ಲಿ ಏರ್ಬ್ಯಾಗ್ ಇರುವುದನ್ನು ಕೇಂದ್ರಸರ್ಕಾರ ಕಡ್ಡಾಯ ಮಾಡಿದೆ. ಈ ನಿಯಮವನ್ನು ವಿಸ್ತರಿಸಿರುವ ಕೇಂದ್ರ ಸಾರಿಗೆ ಸಚಿವಾಲಯ, ಏಪ್ರಿಲ್ 1 ಮತ್ತು ನಂತರದ ದಿನಗಳಲ್ಲಿ ತಯಾರಾಗುವ ಹೊಸ ವಾಹನಗಳಲ್ಲಿ ಡ್ರೈವರ್ ಮತ್ತು ಆತನ ಪಕ್ಕದ ಸೀಟ್ಗೆ ಏರ್ಬ್ಯಾಗ್ ಇರಲೇಬೇಕು. ಆಯಾ ವಾಹನ ತಯಾರಿಕಾ ಸಂಸ್ಥೆಗಳು ಕಡ್ಡಾಯವಾಗಿ ಅದನ್ನು ಅಳವಡಿಸಬೇಕು. ಇನ್ನು ಈಗಾಗಲೇ ಹಲವು ಮಾದರಿಯ ಹಳೇ ವಾಹನಗಳನ್ನು ಹೊಂದಿರುವವರು ಆಗಸ್ಟ್ 31ರೊಳಗೆ ಚಾಲಕನ ಪಕ್ಕದ ಸೀಟ್ಗೂ ಕಡ್ಡಾಯವಾಗಿ ಏರ್ಬ್ಯಾಗ್ ಅಳವಡಿಸಿಕೊಳ್ಳಬೇಕು ಎಂದು ಸಾರಿಗೆ ಇಲಾಖೆ ಕರಡು ಅಧಿಸೂಚನೆಯಲ್ಲಿ ಉಲ್ಲೇಖಿಸಿದೆ.
ಅಪಘಾತದದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚಿನ ಸುರಕ್ಷತೆಗಾಗಿ ಹೊಸ ನಿಯಮ ತರಲಾಗಿದ್ದು, ಒಂದು ವಾಹನದ ಎರಡೂ ಸೀಟ್ಗಳಿಗೆ ಏರ್ಬ್ಯಾಗ್ ಅಳವಡಿಸುವುದರಿಂದ ಸಹಜವಾಗಿಯೇ ಅದರ ಬೆಲೆ 5000-7000ರೂ.ವರೆಗೆ ಹೆಚ್ಚಲಿದೆ. 2021ರ ಏಪ್ರಿಲ್ 1ರಿಂದ ತಯಾರಾಗುವ ಎಲ್ಲ ಹೊಸ ಮಾದರಿಯ ವಾಹನಗಳಲ್ಲಿ ಮುಂದಿನ ಎರಡೂ ಸೀಟ್ಗಳಲ್ಲಿ ಏರ್ಬ್ಯಾಗ್ ಅಳವಡಿಸುವ ನಿರ್ಧಾರದ ಬಗ್ಗೆ ಸರ್ಕಾರ 2020ರ ಡಿಸೆಂಬರ್ 29ರಂದು ಹೇಳಿಕೆ ಬಿಡುಗಡೆ ಮಾಡಿತ್ತು. ಅಲ್ಲದೆ, ಹಳೇ ವಾಹನಗಳಿಗೆ ಮತ್ತೊಂದು ಸೀಟ್ಗೆ ಏರ್ಬ್ಯಾಗ್ ಅಳವಡಿಸಿಕೊಳ್ಳಲು ಜುಲೈ1ರವರೆಗೆ ಸಮಯ ನೀಡುವುದಾಗಿಯೂ ಹೇಳಿತ್ತು. ಅದನ್ನೀಗ ಆಗಸ್ಟ್ 31ಕ್ಕೆ ಏರಿಸಿದೆ. 2019ರ ಜುಲೈನಿಂದಲೂ ಡ್ರೈವರ್ ಸೀಟ್ಗೆ ಏರ್ಬ್ಯಾಗ್ ಕಡ್ಡಾಯವಾಗಿದೆ.
ಇದನ್ನೂ ಓದಿ: Yash: ಸ್ಯಾಂಡಲ್‌ವುಡ್ ಸ್ಟಾರ್ ಆಗಿದ್ದ ರಾಕಿ ಭಾಯ್ ಇದೀಗ ಯೂನಿವರ್ಸಲ್ ಸ್ಟಾರ್! ರೋಬೋ 2.O ಮೀರಿಸಿದ ‘ಕೆಜಿಎಫ್ ಚಾಪ್ಟರ್ 2’
Published On - 1:36 pm, Sat, 6 March 21