ತಿಂಗಳೊಳಗೆ ಯಡಿಯೂರಪ್ಪ ಮತ್ತು ಈಶ್ವರಪ್ಪ ದಾಖಲೆ ಬಿಡುಗಡೆ ಮಾಡುವೆ: ಶಾಸಕ ಬಿ.ಕೆ. ಸಂಗಮೇಶ್
ಇನ್ನೊಂದು ತಿಂಗಳೊಳಗೆ ಈಶ್ವರಪ್ಪ, ಯಡಿಯೂರಪ್ಪರವರ ದಾಖಲೆ ಬಿಡುಗಡೆ ಮಾಡುತ್ತೀನಿ. ಬ್ಲ್ಯಾಕ್ ಮೇಲೆ ಮಾಡುವ ಜನರೇ ಬೇರೆ, ನಾನೇ ಬೇರೆ. ಈ ಬಿಜೆಪಿ ಸರ್ಕಾರ ಯಕ್ಕುಟ್ಟೋಗತ್ತೆ ನೋಡ್ತಾ ಇರಿ. ಬಿಜೆಪಿ ಶಾಸಕರು ಮಾಡುತ್ತಿರುವ ಕೆಲಸಕ್ಕೆ ನಮಗೂ ಮರ್ಯಾದೆ ಇಲ್ಲದಂತಾಗಿದೆ ಎಂದು ಸಂಗಮೇಶ್ ಹೇಳಿದ್ದಾರೆ.
ಬೆಂಗಳೂರು: ಗಾಣಿಗ ಸಮುದಾಯದ ಜಗದ್ಗುರು ಯೋಗಿ ಕಲ್ಲಿನಾಥ ಸ್ವಾಮೀಜಿಯೊಂದಿಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶಾಸಕ ಬಿ.ಕೆ. ಸಂಗಮೇಶ್ ಅವರು ಒಂದು ತಿಂಗಳೊಳಗೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಸಚಿವ ಕೆ.ಎಸ್.ಈಶ್ವರಪ್ಪನವರ ದಾಖಲೆಯನ್ನು ಬಿಡುಗಡೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ ಮತ್ತು ರಾಘವೇಂದ್ರ ಎಲ್ಲಿದ್ದರು..? ಎಲ್ಲಿಂದ ಎಲ್ಲಿಗೆ ಬಂದರು..? ಎನ್ನುವ ಬಗ್ಗೆ ಸಂಪೂರ್ಣ ದಾಖಲೆ ನನ್ನ ಹತ್ತಿರ ಇದೆ. ಅವರ ಮುಂದೆ ಅದನ್ನು ಹೇಳುವುದಿಲ್ಲ. ಏನು ಮಾಡುತ್ತೀನಿ ನೋಡುತ್ತಾ ಇರಿ ಅಂತಾ ಗರಂ ಆದರು ಸಂಗಮೇಶ್.
ಇನ್ನೊಂದು ತಿಂಗಳೊಳಗೆ ಈಶ್ವರಪ್ಪ, ಯಡಿಯೂರಪ್ಪರವರ ದಾಖಲೆ ಬಿಡುಗಡೆ ಮಾಡುತ್ತೀನಿ. ಬ್ಲ್ಯಾಕ್ ಮೇಲ್ ಮಾಡುವ ಜನರೇ ಬೇರೆ, ನಾನೇ ಬೇರೆ. ಈ ಬಿಜೆಪಿ ಸರ್ಕಾರ ಯಕ್ಕುಟ್ಟೋಗತ್ತೆ ನೋಡ್ತಾ ಇರಿ. ಬಿಜೆಪಿ ಶಾಸಕರು ಮಾಡುತ್ತಿರುವ ಕೆಲಸಕ್ಕೆ ನಮಗೂ ಮರ್ಯಾದೆ ಇಲ್ಲದಂತಾಗಿದೆ. ಜನರ ಸೇವೆ ಮಾಡಿ ಅಂತ ಕಳಸಿದರೆ ಇಲ್ಲಿ ಬಂದು ಮಜಾ ಮಾಡುತ್ತಾರೆ. ಇವರಿಂದಾಗಿ ನಮ್ಮಂತ ಸಮಾಜ ಸೇವಕರೂ ಕೂಡ ತಲೆ ಎತ್ತಿ ತಿರುಗುವುದಕ್ಕೆ ಆಗುತ್ತಿಲ್ಲ ಎಂದು ಸಂಗಮೇಶ್ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರ ಬಂದಾಗಿನಿಂದ ನಮ್ಮ ಜನತೆ ಮೇಲೆ ಬಹಳಷ್ಡು ದ್ವೇಷ ಮಾಡುತ್ತಿದೆ. ಸುಳ್ಳು ಮೊಕ್ಕದ್ದಮೆಗಳನ್ನು ಹೂಡಿಸಿ ನಮ್ಮ ಮೇಲೆ ದೌರ್ಜನ್ಯ ಮಾಡಿದ್ದಾರೆ. ಅಧಿಕಾರದ ವ್ಯಾಮೋಹದಿಂದ ಇಂಥಹ ಕೆಲಸ ಮಾಡಿದ್ದಾರೆ. ಬಿಜೆಪಿಗೆ ಭದ್ರಾವತಿಯಲ್ಲಿ ನೆಲೆಯೇ ಇಲ್ಲ. ಹಾಗಾಗಿ ಅಲ್ಲಿ ಬಿಜೆಪಿ ಬೀಜ ಬಿತ್ತಬೇಕು ಅಂತ ಗಲಾಟೆ ಮಾಡಿಸಿದ್ದಾರೆ. ಆದರೆ ಭದ್ರಾವತಿ ಜನ ಬಿಜೆಪಿಯನ್ನು ಒಪ್ಪುವುದಿಲ್ಲ. ಸೌಹಾರ್ದತೆ ಪ್ರೀತಿಯಿಂದ ಜನರು ಬದುಕುತ್ತಿದ್ದಾರೆ ಎಂದು ಹೇಳಿದರು.
ಯಡಿಯೂರಪ್ಪ, ರಾಘವೇಂದ್ರ ಹಾಗೂ ಈಶ್ವರಪ್ಪ ಲುಚ್ಚಾ ರಾಜಕಾರಣ ಮಾಡುತ್ತಿದ್ದಾರೆ. ಸ್ಪೀಕರ್ ನನ್ನ ಮನವಿಗೆ ಮನ್ನಣೆ ಕೊಡಲಿಲ್ಲ. ಈ ಸರ್ಕಾರಕ್ಕೆ ಎರಡು ಮೂರು ತಿಂಗಳು ಮಾತ್ರ ಆಯುಷ್ಯ. ನಮ್ಮ ಕಾಂಗ್ರೆಸ್ ಸರ್ಕಾರ ಬಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ. ನಮ್ಮ 35 ಜನರನ್ನು ಅರೆಸ್ಟ್ ಮಾಡಿದ್ದಾರೆ. ಮಂಗಳವಾರದಿಂದ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ. ಮುಂದಿನ ಶನಿವಾರ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಖರ್ಗೆ ಕೂಡ ನಮ್ಮ ಜಿಲ್ಲೆಯ ಎಸ್ಪಿ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತಾರೆ ಎಂದು ತಿಳಿಸಿದ್ದಾರೆ.
ಪ್ರತಿಭಟನೆ ಎಚ್ಚರಿಕೆ ನೀಡಿದ ಕಲ್ಲಿನಾಥ ಮಹಾ ಸ್ವಾಮೀಜಿ ಭದ್ರಾವತಿ ಕ್ಷೇತ್ರದಲ್ಲಿ ಜನರ ಮನಸ್ಸು ಗೆದ್ದು ಇತಿಹಾಸ ಬರೆದವರು ಸಂಗಮೇಶ್. ಭದ್ರಾವತಿ ಕ್ಷೇತ್ರದ ಪ್ರತಿ ಮತದಾರರನ್ನು ಎಲ್ಲ ಸಮುದಾಯಗಳನ್ನು ಸಂಗಮೇಶ್ ಗಣನೆಗೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ. 2023 ಚುನಾವಣೆಗೆ ಬಿಜೆಪಿಗೆ ಭದ್ರಾವತಿಯಲ್ಲಿ ಕ್ಯಾಂಡಿಡೇಟ್ ಇಲ್ಲ. ಅದಕ್ಕಾಗಿ ಗಾಣಿಗ ಸಮುದಾಯದವರನ್ನು ತುಳಿಯುವುದಕ್ಕೆ ಬಿಜೆಪಿ ಇಂಥ ಕೆಲಸ ಮಾಡುತ್ತಿದೆ. ಸಂಗಮೇಶ್ ಪುತ್ರ ಬಂಧನ ಕೇಳಿ ನಮಗೆ ನೋವಾಗಿದೆ. ಸಿಎಂ ಯಡಿಯೂರಪ್ಪ ಗಾಣಿಗ ಸಮುದಾಯದ ಮಠಾಧೀಶರೇ ಅವರ ಮನೆಗೆ ಹೋದರು ಅವರು ಒಳಗಡೆ ಬಿಡಲಿಲ್ಲ. ಸಂಗಮೇಶ್ ನಮ್ಮ ಸಮಾಜದ ಶಾಸಕರು. ಅವರ ಮೇಲೆ ಹಾಕಿರುವ ಕೇಸ್ ವಾಪಸ್ ಪಡೆಯಬೇಕು. ಇಲ್ಲದೆ ಹೋದರೆ ರಾಜ್ಯಾದ್ಯಂತ ಗಾಣಿಗ ಸಮುದಾಯ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಗಾಣಿಗ ಸಮುದಾಯದ ಜಗದ್ಗುರು ಯೋಗಿ ಕಲ್ಲಿನಾಥ ಮಹಾ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಬಿಜೆಪಿ ಮನೆಯೊಂದು ಮೂರು ಬಾಗಿಲು.. ಭಿನ್ನ ಹೇಳಿಕೆಗಳ ಸುಳಿಯಲ್ಲಿ ಸಚಿವರುಗಳು