ರಮೇಶ್​ ಜಾರಕಿಹೊಳಿ ಸಿಡಿ ಕೇಸ್: ಕಬ್ಬನ್​ ಪಾರ್ಕ್ ಪೊಲೀಸರಿಗೆ ದಿನೇಶ್​ ಕಲ್ಲಹಳ್ಳಿ ಕೊಟ್ಟ ಹೇಳಿಕೆಯಲ್ಲಿ ಜೊಳ್ಳೇ ಜಾಸ್ತಿ

ರಮೇಶ್​ ಜಾರಕಿಹೊಳಿ ಅವರ ಸೀಡಿ ಕೇಸಿನಲ್ಲಿ ಫಿರ್ಯಾದುದಾರರಾದ ದಿನೇಶ್​ ಕಲ್ಲಹಳ್ಳಿ ಅವರು ನಿನ್ನೆ ಕಬ್ಬನ್​ ಪಾರ್ಕ್ ಪೊಲೀಸರ ಮುಂದೆ ಸಾಮ್ಯತೆ ಇಲ್ಲದ ಹೇಳಿಕೆ ಕೊಟ್ಟದ್ದಾರೆ ಎಂದು ಮೂಲಗಳು ತಿಳಿಸಿವೆ. ಇದರಿಂದ ಕೇಸು ಹೊಸ ತಿರುವು ಪಡೆಯಬಹುದಾಗಿದೆ.

ರಮೇಶ್​ ಜಾರಕಿಹೊಳಿ ಸಿಡಿ ಕೇಸ್: ಕಬ್ಬನ್​ ಪಾರ್ಕ್ ಪೊಲೀಸರಿಗೆ ದಿನೇಶ್​ ಕಲ್ಲಹಳ್ಳಿ ಕೊಟ್ಟ ಹೇಳಿಕೆಯಲ್ಲಿ ಜೊಳ್ಳೇ ಜಾಸ್ತಿ
ದಿನೇಶ್ ಕಲ್ಲಹಳ್ಳಿ
Follow us
ಡಾ. ಭಾಸ್ಕರ ಹೆಗಡೆ
| Updated By: ganapathi bhat

Updated on: Mar 06, 2021 | 2:03 PM

ರಮೇಶ್ ಜಾರಕಿಹೊಳಿ ಹಗರಣದಲ್ಲಿ, ಆ ಸಿಡಿಯನ್ನು ಪೊಲೀಸ್​ರಿಗೆ ಕೊಟ್ಟು ಓರ್ವ ಮಹಿಳೆಗೆ ಅನ್ಯಾಯವಾಗಿದೆ, ಹಾಗಾಗಿ ಅವಳಿಗೆ ನ್ಯಾಯ ಕೊಡಿಸಿ ಎಂದು ಹೇಳುತ್ತ ರಾಜ್ಯ ರಾಜಕೀಯದಲ್ಲಿ ಚಂಡಮಾರುತ ಹುಟ್ಟು ಹಾಕಿರುವ ಆರ್​ಟಿಐ ಕಾರ್ಯಕರ್ತ ದಿನೇಶ್​ ಕಲ್ಲಹಳ್ಳಿ ಈಗ ಸ್ವಲ್ಪ ವಿಚಲಿತರಾಗಿದ್ದಾರೆ, ಹಾಗಾಗಿ ಗಂಟೆಗೊಂದು ಗಳಿಗೆಗೊಂದು ಹೇಳಿಕೆ ಕೊಡುತ್ತಿದ್ದ ಹಾಗಿದೆ ಎಂದು ಗೃಹ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕೊಟ್ಟ ಫಿರ್ಯಾದಿಗೆ ಸಂಬಂಧಿಸಿದಂತೆ ಕಬ್ಬನ್​ ಪಾರ್ಕ ಪೊಲೀಸ್​ ಸ್ಟೇಶನ್​ಗೆ ಬಂದು ಹೇಳಿಕೆ ನೀಡಬೇಕು ಎಂಬ ನೊಟೀಸ್​ಗೆ ಮೊದಲ ದಿನ ಕವಡೆ ಕಿಮ್ಮತ್ತು ಕೊಡದಿದ್ದ ದಿನೇಶ್​ ಕಲ್ಲಹಳ್ಳಿ ನಿನ್ನೆ ಶುಕ್ರವಾರ ಹಾಜರಾಗಿ ಬರೋಬ್ಬರಿ ನಾಲ್ಕು ತಾಸು ಪೊಲೀಸರ ಪ್ರಶ್ನೆ ಎದುರಿಸಿದ್ದಾರೆ. ಅವರ ಹೇಳಿಕೆ ಏನಿತ್ತು ಎಂಬುದರ ಕುರಿತು ಈಗ ಸ್ವಲ್ಪ ಸ್ವಲ್ಪ ಮಾಹಿತಿ ಹೊರಬರುತ್ತಿದೆ. ಆ ಪ್ರಕಾರ ದಿನೇಶ್ ಉತ್ತರದಲ್ಲಿ ತುಂಬಾ ಮಾಹಿತಿ ಕೊರತೆ ಅಥವಾ ಈ ಕುರಿತಾಗಿ ಸಾಮ್ಯತೆ ಇಲ್ಲದ (inconsistency) ಹೇಳಿಕೆಗಳನ್ನು ಕೊಟ್ಟಿದ್ದಾರೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ದಿನೇಶ್ ಕಲ್ಲಹಳ್ಳಿ ಏನು ಹೇಳಿದರು? ದಿನೇಶ್ ಕಲ್ಲಹಳ್ಳಿ ಮೊದಲು ಪೊಲೀಸರಿಗೆ ಹೇಳಿದ್ದು ರಾಮಕೃಷ್ಣ ಲಾಡ್ಜಿನಲ್ಲಿ ಈ ಸಿಡಿಯನ್ನಯ ತನಗೆ ಕೊಟ್ಟರು ಎಂದು ಹೇಳಿದ್ದರು. ಅದೇ ಜಾಡನ್ನು ಹಿಡಿದು ಹೊರಟ ಪೊಲೀಸರು ಆ ಲಾಡ್ಜಿನಲ್ಲಿ ತಡಕಾಡಿ, ಸಿಸಿಟಿವಿ ನೋಡಿದರು. ಕೊನೆಗೆ ಅವರಿಗೆ ಕಲ್ಲಹಳ್ಳಿ ಹೇಳಿಕೆ ಸುಳ್ಳಿರಬಹುದು ಎಂಬ ಅನುಮಾನ ಬರುತ್ತಿದೆ. ನಿನ್ನೆ ಈ ಕುರಿತು ದಿನೇಶ್​ ಅವರನ್ನು ಪೊಲೀಸರು ಕೇಳಿದಾಗ ಅವರಲ್ಲಿ ಸರಿಯಾದ ಉತ್ತರ ಇರಲಿಲ್ಲ. ಆಥವಾ ಆ ಲಾಡ್ಜಿನಲ್ಲಿ ಯಾವ ದಿನ, ಯಾವ ವೇಳೆಗೆ ಭೇಟಿ ಆದಿರಿ ಎಂಬ ಪ್ರಶ್ನೆಗೆ ಕೂಡ ಸರಿಯಾದ ಉತ್ತರ ಬರಲಿಲ್ಲ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಯಾವಾಗ ಸಿಡಿ ಕೊಟ್ಟಿದ್ದು? ಪೊಲೀಸರ ಈ ಪ್ರಶ್ನೆ ಕೂಡ ಸರಿಯಾದ ಉತ್ತರವನ್ನು ಕಲ್ಲಹಳ್ಳಿ ಅವರಿಂದ ಹೊರ ಬರುವಂತೆ ಮಾಡಲಿಲ್ಲ. ಸಾಂದರ್ಭಿಕ ಸಾಕ್ಷ್ಯಾಧಾರಿತ ಹೇಳಿಕೆ (circumstantial evidence) ಕೊಟ್ಟು ತಮ್ಮ ಹೇಳಿಕೆಯನ್ನು ಪುಷ್ಠಿಕರಿಸುತ್ತಾರೆ ಎಂದು ಪೊಲೀಸರು ನಂಬಿದ್ದರು. ಆದರೆ ದಿನೇಶ್ ಕಲ್ಲಹಳ್ಳಿ ಈ ಕುರಿತು ಮತ್ತೆ ಹಾರಿಕೆ ಉತ್ತರ ಕೊಟ್ಟ ಹಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ಕಲ್ಲಹಳ್ಳಿ ಮೊದಮೊದಲು ಮೂರ್ನಾಲ್ಕು ದಿನಗಳ ಹಿಂದೆ ತನಗೆ ಈ ಸೀಡಿ ಸಿಕ್ಕಿತ್ತು ಎಂದು ಹೇಳುತ್ತಿದ್ದರು. ಈಗ ಇರುವ ಅಂದಾಜಿನ ಪ್ರಕಾರ, ಈ ಸೀಡಿಯನ್ನು ಸುಮಾರು ಒಂದು ತಿಂಗಳ ಹಿಂದೆಯೇ ದಿನೇಶ್​ ಕಲ್ಲಹಳ್ಳಿ ಅವರಿಗೆ ನೀಡಲಾಗಿದೆ. ಹಾಗಾದರೆ, ಈ ಒಂದು ತಿಂಗಳು ಕಲ್ಲಹಳ್ಳಿ ಈ ಸೀಡಿಯನ್ನು ಇಟ್ಟುಕೊಂಡು ಏನು ಮಾಡಿದರು? ಒಂದು ಅಂದಾಜಿನ ಪ್ರಕಾರ, ಕಲ್ಲಹಳ್ಳಿ ತಮ್ಮ ವಕೀಲರ ಜೊತೆ ಪರಾಮರ್ಶೆ ಮಾಡಿ ಆ ನಂತರ ಪೊಲೀಸರಿಗೆ ಕೊಡಲು ನಿರ್ಧರಿಸಿದ್ದಾರೆ. ಪೊಲೀಸರು ಕೇಳುವ ಪ್ರಶ್ನೆಗಳು ಅಥವಾ ಈ ಸೀಡಿ ಕೊಟ್ಟ ನಂತರ ಯಾವ ಬೆಳವಣಿಗೆಗಳು ಆಗಬಹುದು? ಅದಕ್ಕೆ ತಾನು ಹೇಗೆ ತಯಾರಾಗಿರಬೇಕು ಎಂಬುದನ್ನು ಪರಾಮರ್ಶಿಸಿದ ನಂತರ ಪೊಲೀಸರ ಬಳಿ ಬರಲು ನಿರ್ಧರಿಸಿರಬಹುದು ಎಂಬ ನಿರ್ಣಯಕ್ಕೆ ಪೊಲೀಸರು ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಯಾರು ಕೊಟ್ಟರು? ದಿನೇಶ್​ ಕಲ್ಲಹಳ್ಳಿ ಮಾಧ್ಯಮದ ಮುಂದೆ ಹೇಳಿದ್ದು: ಆ ಹೆಣ್ಣುಮಗಳಿಗೆ ಜೀವಕ್ಕೆ ತುಂಬಾ ಭಯ ಇದೆ. ಹಾಗಾಗಿ ಅವಳು ಈಗ ಹೊರಗೆ ಬರಲು ಸಾಧ್ಯವಿಲ್ಲ ಪೊಲೀಸ್​ ಸ್ಟೇಶನ್ನಗೆ ಕೂಡ ಬರಲು ಸಾಧ್ಯವಿಲ್ಲ. ಆದರೆ ಅಸಲಿನಲ್ಲಿ ನಡೆದಿದ್ದೇ ಬೇರೆ ಅಂತ ಕಾಣುತ್ತಿದೆ. ನಿನ್ನೆ ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಕಲ್ಲಹಳ್ಳಿ ಕೊಟ್ಟ ಉತ್ತರಕ್ಕೂ, ಮೊದಲ ದಿನ ಫಿರ್ಯಾದು ಕೊಡಲು ಬಂದಾಗ ಕೊಟ್ಟ ಹೇಳಿಕೆಯಲ್ಲಿ ತುಂಬಾ ವ್ಯತ್ಯಾಸ ಇತ್ತು ಎಂಬುದನ್ನು ಪೊಲೀಸರು ಗಮನಿಸಿದ್ದಾರೆ. ಮೊದ ಮೊದಲು ಕುಟುಂಬದ ಸದಸ್ಯರು ಆ ಸೀಡಿ ಕೊಟ್ಟದ್ದಾರೆ ಎಂದು ಹೇಳತೊಡಗಿದ್ದ ಕಲ್ಲಹಳ್ಳಿ ಕೊನೆಗೆ ಮೂರನೇ ವ್ಯಕ್ತಿಯೊಬ್ಬರು ಅಂದರೆ ತನಗೆ ಬೇಕಾದ ಒಬ್ಬ ಗೆಳೆಯರು ಆ ಸೀಡಿ ಕೊಟ್ಟದ್ದಾರೆ ಎಂದು ಪೊಲೀಸರಿಗೆ ಹೇಳಿದ್ದಾರೆ. ಈ ಹೇಳಿಕೆಯನ್ನು ನೋಡಿದರೆ ಅವರದ್ದು, ಸಾಂದರ್ಭಿಕ ಸಾಕ್ಷ್ಯಾಧಾರಿತ ಹೇಳಿಕೆ ಆಗಿರಲಿಲ್ಲ ಎಂಬುದು ಸದ್ಯಕ್ಕೆ ಗೊತ್ತಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:

‘ಇನ್ನೂ ವಿಡಿಯೋಗಳು ಇವೆ..ಸೂಕ್ತ ಸಂದರ್ಭದಲ್ಲಿ ಬಿಡುಗಡೆ ಮಾಡುತ್ತೇನೆ’

ವಿಚಾರ ಪ್ರಸ್ತಾಪಿಸಿದವರೇ ಅದನ್ನ ಕ್ಲೋಸ್ ಮಾಡಬೇಕು: ಶಾಸಕ ಬಸನಗೌಡ ಯತ್ನಾಳ್

ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಕೊವಿಡ್ ಹಗರಣದ ತನಿಖೆಗೆ SIT ರಚನೆ: ಡಾ ಸಿಎನ್ ಮಂಜುನಾಥ್​ಗೂ ಸಂಕಷ್ಟ?
ಕೊವಿಡ್ ಹಗರಣದ ತನಿಖೆಗೆ SIT ರಚನೆ: ಡಾ ಸಿಎನ್ ಮಂಜುನಾಥ್​ಗೂ ಸಂಕಷ್ಟ?
ಫಲಿತಾಂಶಕ್ಕೆ ಮೊದಲೇ ಗೂಬೆ ಕೂರಿಸುವ ಕೆಲಸ ಶುರುಮಾಡಿದ ಯೋಗೇಶ್ವರ್
ಫಲಿತಾಂಶಕ್ಕೆ ಮೊದಲೇ ಗೂಬೆ ಕೂರಿಸುವ ಕೆಲಸ ಶುರುಮಾಡಿದ ಯೋಗೇಶ್ವರ್