CD ವಿಚಾರ ಪ್ರಸ್ತಾಪಿಸಿದವರೇ ಅದನ್ನ ಕ್ಲೋಸ್ ಮಾಡಬೇಕು: ಶಾಸಕ ಬಸನಗೌಡ ಯತ್ನಾಳ್

ಯಾವುದೇ ವಿಚಾರ ವಿವಾದ ಏನೂ ಕೂಡ ತಣ್ಣಗಾಗಿಲ್ಲ. ನಾನೂ ತಣ್ಣಗಾಗಲ್ಲ, ಬೆಚ್ಚಗೂ ಆಗಲ್ಲ, ಅಂಜುವುದೂ ಇಲ್ಲ ನಾನು ಏನು ಮಾತಾಡಬೇಕೋ ಅದನ್ನೇ ಮಾತಾಡುತ್ತೇನೆ ಎಂದ ಶಾಸಕ ಬಸನಗೌಡ ಯತ್ನಾಳ್.

  • TV9 Web Team
  • Published On - 19:29 PM, 20 Jan 2021
CD ವಿಚಾರ ಪ್ರಸ್ತಾಪಿಸಿದವರೇ ಅದನ್ನ ಕ್ಲೋಸ್ ಮಾಡಬೇಕು: ಶಾಸಕ ಬಸನಗೌಡ ಯತ್ನಾಳ್
ಬಸನಗೌಡ ಪಾಟೀಲ್​ ಯತ್ನಾಳ್​

ಬೆಂಗಳೂರು: ಬಿಜೆಪಿ ಶಾಸಕರ ಪ್ರತ್ಯೇಕ ಸಭೆಯ ಬಗ್ಗೆ ನನಗೆ ಗೊತ್ತಿಲ್ಲ. ಯಾರು ಯಾವ ಸಭೆ ನಡೆಸುತ್ತಾರೆಂದು ನನಗೆ ಗೊತ್ತಿಲ್ಲ ಎಂದು ಶಾಸಕ ಬಸನಗೌಡ ಯತ್ನಾಳ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಯತ್ನಾಳ್ CD ವಿಚಾರ ಪ್ರಸ್ತಾಪಿಸಿದವರೇ ಅದನ್ನ ಕ್ಲೋಸ್ ಮಾಡ್ಬೇಕು ನಾನು ಓಪನ್ ಮಾಡಿಲ್ಲ, ಹೀಗಾಗಿ ಕ್ಲೋಸ್ ಮಾಡಲ್ಲ. ಯಾರನ್ನು ಯಾರು ಸಮಾಧಾನ ಮಾಡ್ತಾರೋ ಗೊತ್ತಿಲ್ಲ. ಎಲ್ಲರನ್ನೂ ಸಮಾಧಾನ ಮಾಡುವ ಶಕ್ತಿ ಒಂದು ಇದೆ. ಆ ಶಕ್ತಿ ಕೆಲಸ ಮಾಡುತ್ತೆ ಎಂದಿದ್ದಾರೆ.

ಯಾವುದೇ ವಿಚಾರ ವಿವಾದ ಏನೂ ಕೂಡ ತಣ್ಣಗಾಗಿಲ್ಲ. ನಾನೂ ತಣ್ಣಗಾಗಲ್ಲ, ಬೆಚ್ಚಗೂ ಆಗಲ್ಲ, ಅಂಜುವುದೂ ಇಲ್ಲ. ನಾನು ಏನು ಮಾತಾಡಬೇಕೋ ಅದನ್ನೇ ಮಾತಾಡುತ್ತೇನೆ. ರೇಣುಕಾಚಾರ್ಯ ಮಾತನಾಡುವ ಬಗ್ಗೆ ನನಗೆ ಗೊತ್ತಿಲ್ಲ. ಅವರು ಯಾರ ಪರ ಮಾತನಾಡುತ್ತಾರೆಂದು ಗೊತ್ತಿಲ್ಲ. ಪಾಪ ಕೇಂದ್ರದವರನ್ನು ಏಕೆ ಹೊಣೆ ಮಾಡಬೇಕು? ಇದರಲ್ಲಿ ಕೇಂದ್ರದವರ ಹಸ್ತಕ್ಷೇಪ ಏನೂ ಇರಲಿಲ್ಲ. ಎಲ್ಲಾ ಸಿಎಂ ಅಧಿಕಾರ, ಅವರೇ ಮಂತ್ರಿ ಮಾಡಿದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆ.

ಹಿರಿಯರು ಸ್ಥಾನ ಬಿಟ್ಟುಕೊಡಬೇಕು

ಹಿರಿಯರು ಸ್ಥಾನ ಬಿಟ್ಟುಕೊಡಬೇಕು. ಪಕ್ಷ ಸಂಘಟನೆಯ ಕಡೆ ಮುಖ ಮಾಡಬೇಕು. ಶಾಸಕ ಶಿವನಗೌಡ ನಾಯಕ್ ಹೇಳಿದ್ದು ಸರಿಯಾಗಿದೆ. ಮಾಧ್ಯಮಗಳು ದಿನ ಬೆಳಗಾದ್ರೆ ರಾಜಾ ಹುಲಿ, ರಾಜಾ ಹುಲಿ ಅಂತಾರೆ ಅವರಿಗೆ ಧಕ್ಕೆಯಾದ್ರೆ ಪಕ್ಷ ನಾಶ ಅಂದ್ರೆ ಏನ್‌ಮಾಡೋದು? ಎಂದು ಯತ್ನಾಳ್ ಪ್ರಶ್ನಿಸಿದ್ದಾರೆ.

ನನ್ನ ಬಳಿ ಯಾವುದೇ CD ಇಲ್ಲ.. ಇದು ಅಪ್ರಸ್ತುತ, ಅಸಹ್ಯ -ಸಿ.ಪಿ.ಯೋಗೇಶ್ವರ್