GST: ಜುಲೈ ತಿಂಗಳಲ್ಲಿ ಜಿಎಸ್​ಟಿ ಶೇ. 11ರಷ್ಟು ಹೆಚ್ಚು ಸಂಗ್ರಹ; ಕರ್ನಾಟಕದಲ್ಲಿ ಎಷ್ಟಿದೆ ಕಲೆಕ್ಷನ್?

|

Updated on: Aug 01, 2023 | 5:12 PM

2023 July, GST Collections: ಭಾರತದಲ್ಲಿ ಐದನೇ ಬಾರಿ ಒಂದು ತಿಂಗಳಲ್ಲಿ ಜಿಎಸ್​ಟಿ ಸಂಗ್ರಹ 1.6 ಲಕ್ಷ ಗಡಿ ದಾಟಿದೆ. ಜುಲೈ ತಿಂಗಳಲ್ಲಿ ಒಟ್ಟು 1.65 ಲಕ್ಷ ಜಿಎಸ್​ಟಿ ತೆರಿಗೆ ಸಿಕ್ಕಿದೆ. ಇದರಲ್ಲಿ ಕೇಂದ್ರಕ್ಕೆ 69,558 ಕೋಟಿ ರೂ ಸಿಕ್ಕರೆ ರಾಜ್ಯಗಳಿಗೆ 70,811 ಕೋಟಿ ರೂ ಹಂಚಿಕೆಯಾಗಿದೆ. ಜಿಎಸ್​ಟಿ ಸಂಗ್ರಹದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿ ಮುಂದುವರಿದಿದೆ.

GST: ಜುಲೈ ತಿಂಗಳಲ್ಲಿ ಜಿಎಸ್​ಟಿ ಶೇ. 11ರಷ್ಟು ಹೆಚ್ಚು ಸಂಗ್ರಹ; ಕರ್ನಾಟಕದಲ್ಲಿ ಎಷ್ಟಿದೆ ಕಲೆಕ್ಷನ್?
ಜಿಎಸ್​ಟಿ
Follow us on

ನವದೆಹಲಿ, ಆಗಸ್ಟ್ 1: ಭಾರತದಲ್ಲಿ ತಿಂಗಳಿಗೆ 1.6 ಲಕ್ಷ ಜಿಎಸ್​ಟಿ ಸಂಗ್ರಹ (GST Collection) ಈಗ ಹೊಸ ಕನಿಷ್ಠ ಮಟ್ಟವಾದಂತಿದೆ. ಜುಲೈ ತಿಂಗಳಲ್ಲಿ ದೇಶದೆಲ್ಲೆಡೆ ಸಂಗ್ರಹವಾದ ಜಿಎಸ್​ಟಿ ಮೊತ್ತ 1,65,105 ಕೋಟಿ ರೂ ಎಂದು ಸರಕಾರ ಬಿಡುಗಡೆ ಮಾಡಿದ ಇತ್ತೀಚಿನ ಅಂಕಿ ಅಂಶದಲ್ಲಿ ಹೇಳಲಾಗಿದೆ. 2022ರ ಜುಲೈ ತಿಂಗಳಿಗೆ ಹೋಲಿಸಿದರೆ ಈ ಜುಲೈನಲ್ಲಿ ಜಿಎಸ್​ಟಿ ಸಂಗ್ರಹ ಶೇ. 11ರಷ್ಟು ಹೆಚ್ಚಾಗಿದೆ. ಜಿಎಸ್​ಟಿ ಜಾರಿಗೆ ಬಂದ ಬಳಿಕ ಐದನೇ ಬಾರಿ ಜಿಎಸ್​ಟಿ ಸಂಗ್ರಹ 1.6 ಲಕ್ಷ ಕೋಟಿ ಮಟ್ಟಕ್ಕಿಂತ ಮೇಲೆ ಹೋಗಿರುವುದು.

2023ರ ಜುಲೈನಲ್ಲಿ ಜಿಎಸ್​ಟಿ ಸಂಗ್ರಹ ವಿವರ

  • ಒಟ್ಟು ಜಿಎಸ್​ಟಿ: 1,65,105 ಕೋಟಿ ರೂ
  • ಸಿಜಿಎಸ್​ಟಿ: 29,773 ಕೋಟಿ ರೂ
  • ಎಸ್​ಜಿಎಸ್​ಟಿ: 37,623 ಕೋಟಿ ರೂ
  • ಐಜಿಎಸ್​ಟಿ: 85,930 ಕೋಟಿ ರೂ

ಇದನ್ನೂ ಓದಿ: ITR: ಆದಾಯ ತೆರಿಗೆ ರಿಟರ್ನ್ ಇನ್ನೂ ಎಷ್ಟು ಮಂದಿ ಫೈಲ್ ಮಾಡಿಲ್ಲ? ತಡವಾಗಿ ಸಲ್ಲಿಸಿದವರು ದಂಡ ಎಷ್ಟು ಕಟ್ಟಬೇಕು?

ಸಿಜಿಎಸ್​ಟಿ, ಎಸ್​ಜಿಎಸ್​ಟಿ ಮತ್ತು ಐಜಿಎಸ್​ಟಿ ಸೇರಿ ಒಟ್ಟು ಜಿಎಸ್​ಟಿ ಸಂಗ್ರಹ ಆಗುತ್ತದೆ. ಇಲ್ಲಿ ಸಿಜಿಎಸ್​​ಟಿ ಎಂದರೆ ಕೇಂದ್ರಕ್ಕೆ ಸಂದಾಯವಾಗುವ ತೆರಿಗೆಯಾಗಿದೆ. ಎಸ್​ಜಿಎಸ್​ಟಿ ಎಂಬುದು ರಾಜ್ಯಗಳ ಪಾಲಾಗುವ ತೆರಿಗೆ. ಇನ್ನು, ಐಜಿಎಸ್​ಟಿ ಹಣವನ್ನು ಕೇಂದ್ರ ಮತ್ತು ರಾಜ್ಯಗಳ ನಡುವೆ ಹಂಚಿಕೆ ಆಗುತ್ತದೆ.

ಐಜಿಎಸ್​ಟಿ ಎಂದರೆ ಒಂದು ರಾಜ್ಯದಿಂದ ಇನ್ನೊಂದು ರಾಜ್ಯದ ಜನರು ಅಥವಾ ಸಂಸ್ಥೆಗಳ ಮಧ್ಯೆ ನಡೆಯುವ ವ್ಯಾಪಾರಕ್ಕೆ ವಿಧಿಸುವ ತೆರಿಗೆಯಾಗಿದೆ. ಜುಲೈ ತಿಂಗಳಲ್ಲಿ ಸಂಗ್ರಹವಾದ ಒಟ್ಟು ಐಜಿಎಸ್​ಟಿಯಲ್ಲಿ 39,785 ಕೋಟಿ ರೂ ಹಣವು ಕೇಂದ್ರಕ್ಕೆ ಹೋದರೆ, 33,188 ಕೋಟಿ ರೂ ತೆರಿಗೆ ಹಣ ರಾಜ್ಯಗಳಿಗೆ ಹೋಗಿದೆ.

ಒಟ್ಟು ತೆರಿಗೆಯಲ್ಲಿ ಕೇಂದ್ರ ಮತ್ತು ರಾಜ್ಯಗಳಿಗೆ ಸಿಕ್ಕಿದ್ದೆಷ್ಟು?

  • ಜಿಎಸ್​ಟಿಯಲ್ಲಿ ಕೇಂದ್ರಕ್ಕೆ ಸಿಕ್ಕ ಹಣ: 69,558 ಕೋಟಿ ರೂ
  • ರಾಜ್ಯಗಳಿಗೆ ಸಿಕ್ಕ ಹಣ: 70,811 ಕೋಟಿ ರೂ

ಯಾವ್ಯಾವ ತಿಂಗಳು 1.6 ಲಕ್ಷ ಜಿಎಸ್​ಟಿ ಸಂಗ್ರಹವಾಗಿದ್ದು?

  • 2022ರ ಮಾರ್ಚ್
  • 2022ರ ಏಪ್ರಿಲ್
  • 2023ರ ಏಪ್ರಿಲ್
  • 2023ರ ಜೂನ್
  • 2023ರ ಜುಲೈ

ಇದನ್ನೂ ಓದಿ: ಮುಂದಿನ 7 ವರ್ಷದಲ್ಲಿ ಭಾರತದ ತಲಾದಾಯ ಶೇ. 70ರಷ್ಟು ಏರಿಕೆ ಸಾಧ್ಯತೆ; ಕರ್ನಾಟಕದ ಪಾತ್ರ ಎಷ್ಟು?

ಅತ್ಯಧಿಕ ಜಿಎಸ್​ಟಿ ಸಂಗ್ರಹವಾದ ಟಾಪ್ 10 ರಾಜ್ಯಗಳು

  1. ಮಹಾರಾಷ್ಟ್ರ: 26,064 ಕೋಟಿ ರೂ
  2. ಕರ್ನಾಟಕ: 11,505 ಕೋಟಿ ರೂ
  3. ತಮಿಳುನಾಡು: 10,022 ಕೋಟಿ ರೂ
  4. ಗುಜರಾತ್: 9183 ಕೋಟಿ ರೂ
  5. ಉತ್ತರಪ್ರದೇಶ: 8,802 ಕೋಟಿ ರೂ
  6. ಹರ್ಯಾಣ: 7,953 ಕೋಟಿ ರೂ
  7. ದೆಹಲಿ: 5,405 ಕೋಟಿ ರೂ
  8. ಪಶ್ಚಿಮ ಬಂಗಾಳ: 5,128 ಕೋಟಿ ರೂ
  9. ತೆಲಂಗಾಣ: 4,849 ಕೋಟಿ ರೂ
  10. ಒಡಿಶಾ: 4,245 ಕೋಟಿ ರೂ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ