Gold: ಚಿನ್ನದ ಬೆಲೆ ಏರಿಕೆಯಲ್ಲೂ ಆಭರಣಗಳ ಮಾರಾಟ ಹೆಚ್ಚಳ; ಇಲ್ಲಿದೆ ಗೋಲ್ಡ್ ಡಿಮ್ಯಾಂಡ್ ಟ್ರೆಂಡ್ಸ್ ಹೊಸ ವರದಿ

Gold Demand Trends Report: ವರ್ಲ್ಡ್ ಗೋಲ್ಡ್ ಕೌನ್ಸಿಲ್ ಏಪ್ರಿಲ್​ನಿಂದ ಜೂನ್​ವರೆಗಿನ ಅವಧಿಯ ಗೋಲ್ಡ್ ಡಿಮ್ಯಾಂಡ್ ಟ್ರೆಂಡ್ಸ್ ವರದಿ ಪ್ರಕಟಿಸಿದ್ದು, ಜಾಗತಿಕವಾಗಿ ಚಿನ್ನಕ್ಕೆ ಬೇಡಿಕೆ ಹೆಚ್ಚಿರುವುದನ್ನು ತೋರಿಸಿದೆ. ಚಿನ್ನ ದುಬಾರಿಯಾದರೂ ಆಭರಣಗಳ ವ್ಯಾಪಾರ ಹೆಚ್ಚುತ್ತಿದೆ ಎಂದು ವರದಿ ಹೇಳಿದೆ.

Gold: ಚಿನ್ನದ ಬೆಲೆ ಏರಿಕೆಯಲ್ಲೂ ಆಭರಣಗಳ ಮಾರಾಟ ಹೆಚ್ಚಳ; ಇಲ್ಲಿದೆ ಗೋಲ್ಡ್ ಡಿಮ್ಯಾಂಡ್ ಟ್ರೆಂಡ್ಸ್ ಹೊಸ ವರದಿ
ಚಿನ್ನ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 01, 2023 | 3:25 PM

ನವದೆಹಲಿ, ಆಗಸ್ಟ್ 1: ಜಾಗತಿಕವಾಗಿ ವಿವಿಧ ಸೆಂಟ್ರಲ್ ಬ್ಯಾಂಕ್​ಗಳಿಂದ ದಾಖಲೆಯ ಪ್ರಮಾಣದಲ್ಲಿ ಚಿನ್ನದ ಖರೀದಿ ಆಗಿರುವುದು, ಆಭರಣಗಳಿಗೆ ಬೇಡಿಕೆ ಹೆಚ್ಚಿರುವುದು, ಹೂಡಿಕೆದಾರರಲ್ಲಿ ಚಿನ್ನಕ್ಕೆ ಬೇಡಿಕೆ ಇರುವುದು ಇವೇ ಕಾರಣಕ್ಕೆ ಚಿನ್ನಕ್ಕಿರುವ ಬೇಡಿಕೆ ಉಳಿದಿದೆ. ವರ್ಲ್ಡ್ ಗೋಲ್ಡ್ ಕೌನ್ಸಿಲ್​ನ (World Gold Council) ಇತ್ತೀಚಿನ ‘ಗೋಲ್ಡ್ ಡಿಮ್ಯಾಂಡ್ ಟ್ರೆಂಡ್ಸ್’ ವರದಿಯು ಈ ಕ್ಯಾಲೆಂಡರ್ ವರ್ಷದ ಎರಡನೇ ಕ್ವಾರ್ಟರ್​ನಲ್ಲಿ (ಏಪ್ರಿಲ್​ನಿಂದ ಜೂನ್​ವರೆಗೆ) ಚಿನ್ನಕ್ಕೆ ಎಷ್ಟು ಬೇಡಿಕೆ ಇದೆ ಎನ್ನುವಂತಹ ಅಂಶಗಳನ್ನು ಬಿಡುಗಡೆ ಮಾಡಿದೆ. ಈ ವರದಿ ಪ್ರಕಾರ ಎರಡನೇ ಕ್ವಾರ್ಟರ್​ನಲ್ಲಿ ಒಟಿಸಿ ಹೊರತಾಗಿಸಿ ಚಿನ್ನಕ್ಕಿರುವ ಬೇಡಿಕೆ 921 ಟನ್ ಎಂದಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಗೋಲ್ಡ್ ಡಿಮ್ಯಾಂಡ್ ಶೇ. 2ರಷ್ಟು ಕಡಿಮೆ ಆಗಿದೆ. ಆದರೂ ಕೂಡ ಒಟಿಸಿಯನ್ನೂ ಸೇರಿಸಿದರೆ ಜಾಗತಿಕವಾಗಿ ಗೋಲ್ಡ್ ಡಿಮ್ಯಾಂಡ್ ಶೇ. 7ರಷ್ಟು ಹೆಚ್ಚಿದೆ.

ಚಿನ್ನದ ವ್ಯಾಪಾರದಲ್ಲಿ ಒಟಿಸಿ ಎಂದರೆ ಏನು?

ಒಟಿಸಿ ಎಂದರೆ ಓವರ್ ದಿ ಕೌಂಟರ್. ಜಾಗತಿಕವಾಗಿ ಎರಡು ರೀತಿಯಲ್ಲಿ ಚಿನ್ನದ ವ್ಯಾಪಾರ ನಡೆಯುತ್ತದೆ. ಒಂದು ಒಟಿಸಿ, ಮತ್ತೊಂದು ಗೋಲ್ಡ್ ಎಕ್ಸ್​ಚೇಂಜ್ ವ್ಯವಹಾರ. ಓವರ್ ದಿ ಕೌಂಟರ್ ಅಥವಾ ಓಟಿಸಿಯಲ್ಲಿ ಚಿನ್ನದ ಸಾಂಪ್ರದಾಯಿಕ ಪದ್ಧತಿಯಲ್ಲಿ ನಡೆಯುತ್ತದೆ. ಅಂದರೆ ಮಾರಾಟಗಾರ ಮತ್ತು ಖರೀದಿದಾರ ಮುಖಾಮುಖಿಯಾಗಿ ನಡೆಸುವ ವ್ಯವಹಾರವಾಗಿರುತ್ತದೆ. ಒಟಿಸಿಯಲ್ಲಿ ನಡೆಯುವ ವ್ಯಾಪಾರ ಹೆಚ್ಚು ರಿಸ್ಕ್​ನಿಂದ ಕೂಡಿರುತ್ತದೆ. ಪಾರದರ್ಶಕತೆಯೂ ಕಡಿಮೆ ಎಂಬ ಭಾವನೆ ಇದೆ.

ಇದನ್ನೂ ಓದಿ: Tax-free Gold: ಭೂತಾನ್​ಗೆ ಟ್ರಿಪ್ ಹೋಗಿ, ತೀರಾ ಅಗ್ಗದ ಬೆಲೆಗೆ ಚಿನ್ನವನ್ನೂ ತನ್ನಿ; ಇದಪ್ಪಾ ಡಬಲ್ ಧಮಾಕ

ಸೆಂಟ್ರಲ್ ಬ್ಯಾಂಕುಗಳಿಂದ ಚಿನ್ನದ ಖರೀದಿಯಲ್ಲಿ ದಾಖಲೆ ಹೆಚ್ಚಳ

ಏಪ್ರಿಲ್​ನಿಂದ ಜೂನ್​ವರೆಗಿ ತ್ರೈಮಾಸಿಕ ಅವಧಿಯಲ್ಲಿ ಸೆಂಟ್ರಲ್ ಬ್ಯಾಂಕುಗಳಿಂದ ಚಿನ್ನದ ಖರೀದಿಯಲ್ಲಿ ತುಸು ಕಡಿಮೆ ಆಗಿದೆಯಾದರೂ ಎಚ್​1 ಅವಧಿಯಲ್ಲಿ (ವರ್ಷದ ಮೊದಲಾರ್ಧ) 387 ಟನ್ ಚಿನ್ನದ ಖರೀದಿ ಆಗಿದೆ. ಇದು ಹೊಸ ದಾಖಲೆ ಎನ್ನಲಾಗಿದೆ.

ಇನ್ನು, ಚಿನ್ನದ ಮೇಲಿನ ಹೂಡಿಕೆಯಂತೂ ಎರಡನೇ ಕ್ವಾರ್ಟರ್​ನಲ್ಲಿ ಗಮನಾರ್ಹವಾಗಿ ಹೆಚ್ಚಿದೆ. ಚಿನ್ನದ ಕಾಯಿನ್ ಮತ್ತು ಗಟ್ಟಿಗಳು 277 ಟನ್​ಗಳಷ್ಟು ಮಾರಾಟವಾಗಿವೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 6ರಷ್ಟು ಹೆಚ್ಚಾಗಿದೆ. ಇನ್ನು, ವರ್ಷದ ಮೊದಲಾರ್ಧವಾದ ಜನವರಿಯಿಂದ ಜೂನ್​ವರೆಗಿನ ಅವಧಿಯಲ್ಲಿ 582 ಟನ್ ಚಿನ್ನದ ವ್ಯಾಪಾರವಾಗಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್​ನ ಗೋಲ್ಡ್ ಡಿಮ್ಯಾಂಡ್ ಟ್ರೆಂಡ್ಸ್ ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: Cheap Gold: ಯಾವ್ಯಾವ ದೇಶಗಳಲ್ಲಿ ಚಿನ್ನ ಕಡಿಮೆ ಬೆಲೆಗೆ ಸಿಗುತ್ತದೆ? ಭಾರತಕ್ಕಿಂತ ಬಹಳ ಅಗ್ಗ ಇಲ್ಲಿನ ಚಿನ್ನ

ಚಿನ್ನದ ಬೆಲೆ ಹೆಚ್ಚಿದರೂ ಆಭರಣಗಳಿಗೆ ಬೇಡಿಕೆ ಕಡಿಮೆ ಆಗಿಲ್ಲ

ಚಿನ್ನದ ಬೆಲೆಗಳು ಹೆಚ್ಚಾದರೂ ಆಭರಣಗಳಿಗೆ ಬೇಡಿಕೆ ಕಡಿಮೆ ಆಗಿಲ್ಲ. ಮೊದಲಾರ್ಧದ ವರ್ಷದಲ್ಲಿ 951 ಟನ್​ನಷ್ಟು ಚಿನ್ನಾಭರಣಗಳು ಮಾರಾಟವಾಗಿವೆ. ಎರಡನೇ ಕ್ವಾರ್ಟರ್​ನಲ್ಲಿ ಚಿನ್ನಾಭರಣಗಳ ಮಾರಾಟದಲ್ಲಿ ಶೇ. 3ರಷ್ಟು ಹೆಚ್ಚಳವಾಗಿದೆ. ಚೀನಾ ಮತ್ತು ಟರ್ಕಿಯಲ್ಲಿ ಆಭರಣಗಳಿಗೆ ಹೆಚ್ಚು ಬೇಡಿಕೆ ಬಂದಿದೆ.

ವರ್ಲ್ಡ್ ಗೋಲ್ಡ್ ಕೌನ್ಸಿಲ್ ಕಳೆದ 30 ವರ್ಷಗಳಿಂದಲೂ ಗೋಲ್ಡ್ ಡಿಮ್ಯಾಂಡ್ ಟ್ರೆಂಡ್ಸ್ ವರದಿಗಳನ್ನು ಪ್ರಕಟಿಸುತ್ತಾ ಬರುತ್ತಿದೆ. ಜಾಗತಿಕವಾಗಿ ಚಿನ್ನಕ್ಕೆ ಬೇಡಿಕೆ ಎಷ್ಟಿದೆ ಎಂಬುದನ್ನು ಈ ವರದಿಗಳು ಅವಲೋಕಿಸುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ