Tax-free Gold: ಭೂತಾನ್​ಗೆ ಟ್ರಿಪ್ ಹೋಗಿ, ತೀರಾ ಅಗ್ಗದ ಬೆಲೆಗೆ ಚಿನ್ನವನ್ನೂ ತನ್ನಿ; ಇದಪ್ಪಾ ಡಬಲ್ ಧಮಾಕ

Cheaper Gold In Bhutan: ಭಾರತದ ಈಶಾನ್ಯ ಭಾಗದ ಮೇಲ್ಗಡೆ ಇರುವ ನೆರೆಯ ದೇಶ ಭೂತಾನ್​ನಲ್ಲಿ ಚಿನ್ನವನ್ನು ಸುಂಕರಹಿತವಾಗಿ ಮಾರಲಾಗುತ್ತಿದೆ. ಒಬ್ಬ ವ್ಯಕ್ತಿಗೆ ಸೀಮಿತ ಪ್ರಮಾಣದಲ್ಲಿ ಚಿನ್ನ ತರುವ ಅವಕಾಶ ಇದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ...

Tax-free Gold: ಭೂತಾನ್​ಗೆ ಟ್ರಿಪ್ ಹೋಗಿ, ತೀರಾ ಅಗ್ಗದ ಬೆಲೆಗೆ ಚಿನ್ನವನ್ನೂ ತನ್ನಿ; ಇದಪ್ಪಾ ಡಬಲ್ ಧಮಾಕ
ಚಿನ್ನ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 28, 2023 | 11:59 AM

ನಿಮಗೆ ಪ್ರವಾಸ ಎಂದರೆ ಇಷ್ಟವಾ? ಹಾಗೆಯೇ ಚಿನ್ನ (Gold) ಖರೀದಿಸಬೇಕೆಂಬ ಆಸೆಯಾ? ಈ ಎರಡಕ್ಕೂ ಉತ್ತರ ಹೌದಾದರೆ ಕೂಡಲೇ ಭೂತಾನ್​ಗೆ ಹೋಗಲು ಅಣಿಯಾಗಿ. ವಿಶ್ವದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಚಿನ್ನ ಸಿಗುವ ದೇಶಗಳಲ್ಲಿ ಭೂತಾನ್ ಒಂದು. ನೀವು ಇಲ್ಲಿ ಯಾವುದೇ ಸುಂಕ, ತೆರಿಗೆ ಇಲ್ಲದೇ ಚಿನ್ನವನ್ನು ಖರೀದಿಸಬಹುದು. ಭೂತಾನ್​ನ ಕೆಲ ನಿರ್ದಿಷ್ಟ ನಗರಗಳಲ್ಲಿ ಪ್ರವಾಸಿಗರಿಗೆಂದು ಡ್ಯೂಟಿ ಫ್ರೀ ಚಿನ್ನವನ್ನು (Tax Free Gold) ಮಾರಲಾಗುತ್ತದೆ. ಹಲವು ಭಾರತೀಯರು ದುಬೈ ಪ್ರವಾಸಕ್ಕೆ ಹೋಗಿ, ಅಲ್ಲಿಂದ ಬರುವಾಗ ಚಿನ್ನ ತರುವುದು ಇದೆ. ಅದೇ ಅವಕಾಶ ಈ ಭೂತಾನ್ ವಿಚಾರದಲ್ಲೂ ಇದೆ. ಭೂತಾನ್​ನಲ್ಲಿ ನೋಡಬಹುದಾದ ಹಲವು ಆಕರ್ಷಣೀಯ ಪ್ರವಾಸೀ ತಾಣಗಳೂ ಇವೆ.

ಭೂತಾನ್​ನಲ್ಲಿ ಚಿನ್ನ ಎಷ್ಟು ಅಗ್ಗ ಇದೆ?

ಭಾರತದಲ್ಲಿ 24 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಮ್​ಗೆ 60,000 ರೂಗಿಂತ ಹೆಚ್ಚಿದೆ. ಭೂತಾನ್​ನಲ್ಲಿ ಇದರ ಬೆಲೆ 43,000 ಬಿಟಿಎನ್ (ಭೂತಾನ್ ಕರೆನ್ಸಿ) ಆಸುಪಾಸಿನಲ್ಲಿದೆ. ಭೂತಾನ್​ನ ನುಗುಲ್​ಟ್ರುಮ್ ಕರೆನ್ಸಿ ಮತ್ತು ರುಪಾಯಿ ಹೆಚ್ಚೂಕಡಿಮೆ ಸಮಾನ ಬೆಲೆ ಹೊಂದಿವೆ. ಹೀಗಾಗಿ, ಭೂತಾನ್​ನಲ್ಲಿ 24 ಕ್ಯಾರೆಟ್​ನ 10 ಗ್ರಾಮ್ ಚಿನ್ನವನ್ನು 43,000 ರುಪಾಯಿಗೆ ಖರೀದಿಸಬಹುದು.

ಭೂತಾನ್​ನ ಮಹಾರಾಜರ ಜನ್ಮದಿನ ಮತ್ತು ಭೂತಾನೀ ಹೊಸ ವರ್ಷದ ಪ್ರಯುಕ್ತ ಫೆಬ್ರುವರಿ 21ರಂದು ಅಲ್ಲಿನ ಸರ್ಕಾರ ಚಿನ್ನದ ಮೇಲಿದ್ದ ತೆರಿಗೆಯನ್ನು ತೆಗೆದಿದೆ.

ಇದನ್ನೂ ಓದಿ: Gold Silver Price on 28 July: ಅಮೆರಿಕ ಎಫೆಕ್ಟ್; ಜಗತ್ತಿನೆಲ್ಲೆಡೆ ಗಗನಕ್ಕೇರುತ್ತಿರುವ ಚಿನ್ನ, ಬೆಳ್ಳಿ ಬೆಲೆ; ಇಲ್ಲಿದೆ ಇವತ್ತಿನ ದರ ಪಟ್ಟಿ

ಭೂತಾನ್​ನಲ್ಲಿ ಚಿನ್ನ ತೆರಿಗೆರಹಿತವಾದರೂ ಕೆಲ ಷರುತ್ತುಗಳಿವೆ

ಭೂತಾನ್​ನಲ್ಲಿ ಪ್ರವಾಸಿಗರಿಗೆ ಎಲ್ಲೆಂದರಲ್ಲಿ ಚಿನ್ನ ಖರೀದಿಸಲು ಆಗುವುದಿಲ್ಲ. ಭೂತಾನ್​ನಲ್ಲಿ ನೀವಿರುವಷ್ಟೂ ಅವಧಿಯಲ್ಲಿ ದಿನಕ್ಕೆ ಎಸ್​ಡಿಎಫ್ ಶುಲ್ಕ ಪಾವತಿಸಬೇಕು. ಎಸ್​ಡಿಎಫ್ ಎಂಬುದು ಸಸ್ಟೈನಬಲ್ ಡೆವಲಪ್ಮೆಂಟ್ ಫೀಸ್ ಅಥವಾ ಸುಸ್ಥಿರ ಅಭಿವೃದ್ಧಿ ಶುಲ್ಕವಾಗಿದೆ. ಭಾರತೀಯರಾದರೆ ಒಬ್ಬ ವ್ಯಕ್ತಿಗೆ ದಿನಕ್ಕೆ 1,200 ರೂನಿಂದ 1,800 ರೂ ಪಾವತಿಸಬೇಕು. ಬೇರೆ ದೇಶಗಳವರಾದರೆ ಒಬ್ಬ ವ್ಯಕ್ತಿ ದಿನಕ್ಕೆ ಪಾವತಿಸಬೇಕಾದ ಎಸ್​ಡಿಎಫ್ 65ರಿಂದ 200 ಡಾಲರ್ ಆಗಿದೆ. ಅಂದರೆ 5,350 ರೂನಿಂದ 16,500 ರೂನವರೆಗೆ ಶುಲ್ಕ ಪಾವತಿಸಬೇಕು.

ಅಷ್ಟೇ ಅಲ್ಲ, ಭೂತಾನ್ ಸರ್ಕಾರ ನಿರ್ದಿಷ್ಟಪಡಿಸಿದ ಟೂರಿಸ್ಟ್ ಹೋಟೆಲ್​ನಲ್ಲಿ ಕನಿಷ್ಠ 1 ರಾತ್ರಿಯಾದರೂ ಉಳಿಯಬೇಕು. ಇನ್ನು, ಚಿನ್ನ ಬೇಕೆನ್ನುವವರು ಭೂತಾನ್​ನ ಥಿಂಫು ಮತ್ತು ಫ್ಯೂಂಟ್​ಶೋಲಿಂಗ್ ಪಟ್ಟಣಗಳಿಗೆ ಹೋಗಬೇಕು. ಅಲ್ಲಿ ಹಣಕಾಸು ಸಚಿವಾಲಯದ ವತಿಯಿಂದ ನಡೆಸಲಾಗುವ ಕೆಲ ಮಳಿಗೆಗಳಲ್ಲಿ ಡ್ಯೂಟಿ ಫ್ರೀ ಚಿನ್ನವನ್ನು ಮಾರಲಾಗುತ್ತದೆ. ಅಲ್ಲಿ ಅಗ್ಗದ ಬೆಲೆಗೆ ಚಿನ್ನ ಖರೀದಿಸಬಹುದು. ಈ ಚಿನ್ನಕ್ಕೆ ಹಣದ ಪಾವತಿಯನ್ನು ರುಪಾಯಿಯಲ್ಲಾಗಲೀ ಅಥವಾ ಭೂತಾನೀ ಕರೆನ್ಸಿಯಲ್ಲಾಗಲೀ ಮಾಡದೇ ಡಾಲರ್​ನಲ್ಲೇ ಆಗಬೇಕು. ಯಾಕೆಂದರೆ, ಇದೇ ಡಾಲರ್ ಬಳಸಿ ಭೂತಾನ್ ಸರ್ಕಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವನ್ನು ಖರೀದಿಸುತ್ತದೆ.

ಇದನ್ನೂ ಓದಿ: TTD Assets, Gold: ತಿರುಪತಿ ತಿಮ್ಮಪ್ಪನ ಬಳಿಯಿದೆ 11 ಟನ್ ಚಿನ್ನ, 17 ಸಾವಿರ ಕೋಟಿ ರೂ ನಗದು

ಭೂತಾನ್​ನಿಂದ ಎಷ್ಟು ಚಿನ್ನ ತರಬಹುದು?

ಭೂತಾನ್​ನಲ್ಲಿರುವ ಕಾನೂನಿನ ಪ್ರಕಾರ, ಭಾರತದ ಪುರುಷನೊಬ್ಬ 50,000 ರೂ, ಹಾಗು ಭಾರತೀಯ ಮಹಿಳೆ 1 ಲಕ್ಷ ರೂವರೆಗೂ ಚಿನ್ನವನ್ನು ಖರೀದಿಸಬಹುದು.

ಗಂಡ ಮತ್ತು ಹೆಂಡತಿ ಭೂತಾನ್ ಪ್ರವಾಸಕ್ಕೆ ಹೋದರೆ 1.5 ಲಕ್ಷ ರೂವರೆಗೂ ಚಿನ್ನ ಪಡೆಯಬಹುದು. ಈಗಿನ ಬೆಲೆಯಲ್ಲಿ ಇದಕ್ಕೆ 35 ಗ್ರಾಮ್​ನಷ್ಟು ಅಪರಂಜಿ ಚಿನ್ನ ಸಿಗುತ್ತದೆ. ಭಾರತದಲ್ಲಿ ಈಗಿನ ದರದಲ್ಲಿ 35 ಗ್ರಾಮ್ ಚಿನ್ನ ಖರೀದಿಸಲು 2,00,000 ರೂಗಿಂತ ಹೆಚ್ಚು ವೆಚ್ಚ ಆಗುತ್ತದೆ. ಅಂದರೆ ಚಿನ್ನದ ಖರೀದಿಯಿಂದ 50,000 ರೂ ಉಳಿಸಬಹುದು. ಇದರಿಂದ ನಿಮಗೆ ಭೂತಾನ್ ಪ್ರವಾಸದ ವೆಚ್ಚ ಹೆಚ್ಚು ಹೊರೆ ಆಗದು.

ಎಲ್ಲಿದೆ ಭೂತಾನ್?

ಭೂತಾನ್ ದೇಶ ಭಾರತದ ಈಶಾನ್ಯ ಭಾಗದ ಮೇಲ್ಭಾಗದ ಗಡಿಯಲ್ಲಿದೆ. ಇದು ಚೀನಾ ಮತ್ತು ಭಾರತ ಗಡಿಗಳಿಗೆ ಹೊಂದಿಕೊಂಡಂತಿದೆ. ಸಮೀಪದಲ್ಲಿ ನೇಪಾಳ ಮತ್ತು ಬಾಂಗ್ಲಾದೇಶ ಇವೆ. ಅರುಣಾಚಲಪ್ರದೇಶದ ಜೊತೆ ಭೂತಾನ್ ಗಡಿ ಹಂಚಿಕೊಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್