ಜಿಎಸ್ಟಿ
ನವದೆಹಲಿ, ಜೂನ್ 24: ಇದೇ ಶುಕ್ರವಾರ ನಡೆದ 53ನೇ ಜಿಎಸ್ಟಿ ಮಂಡಳಿ ಸಭೆಯಲ್ಲಿ (GST council meeting) ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಜಿಎಸ್ಟಿ ದರ ಪರಿಷ್ಕರಣೆ, ವಿನಾಯಿತಿ, ರಿಯಾಯಿತಿ ಇತ್ಯಾದಿ ಕ್ರಮಗಳನ್ನು ಈ ಸಭೆಯಲ್ಲಿ ತೆಗೆದುಕೊಳ್ಳಲಾಯಿತು. ಸೋಲಾರ್ ಕುಕರ್, ಕಾರ್ಟನ್ ಬಾಕ್ಸ್, ಮಿಲ್ಕ್ ಕ್ಯಾನ್ ಇತ್ಯಾದಿಗಳಿಗೆ ಜಿಎಸ್ಟಿ ಪರಿಷ್ಕರಣೆ ಮಾಡಲಾಗಿದೆ. ಕೆಲ ಆಮದುಗಳಿಗೆ ಐಜಿಎಸ್ಟಿಯಿಂದ ವಿನಾಯಿತಿ ಕೊಡಲಾಗಿದೆ. ಜಿಎಸ್ಟಿ ಸಭೆಯಲ್ಲಿ ತೆಗೆದುಕೊಳ್ಳಲಾದ ಕೆಲ ಮಹತ್ವದ ನಿರ್ಧಾರಗಳ ಪಟ್ಟಿ ಇಲ್ಲಿದೆ…
ಜಿಎಸ್ಟಿ ದರ ಪರಿಷ್ಕರಣೆಯಾಗಿರುವವು
- ವಿಮಾನ ಬಿಡಿಭಾಗಗಳು, ಪರೀಕ್ಷಾ ಉಪಕರಣ, ಟೂಲ್ಸ್ ಇತ್ಯಾದಿಗಳ ಆಮದಿಗೆ ಶೇ. 5ರಷ್ಟು ಸಮಾನ ಐಜಿಎಸ್ಟಿ ವಿಧಿಸಲಾಗುವುದು
- ಉಕ್ಕು, ಕಬ್ಬಿಣ ಅಥವಾ ಅಲೂಮಿನಿಯಮ್ನ ಯಾವುದೇ ಹಾಲಿನ ಕ್ಯಾನ್ಗಳಿಗೆ ಶೇ. 12ರಷ್ಟು ಜಿಎಸ್ಟಿ ವಿಧಿಸಲಾಗುವುದು.
- ಪೇಪರ್ ಕಾರ್ಟನ್ ಬಾಕ್ಸ್ ಮತ್ತು ಕೇಸ್ಗಳ ಮೇಲಿನ ಜಿಎಸ್ಟಿ ಶೇ. 18ರಿಂದ ಶೇ. 12ಕ್ಕೆ ಇಳಿಕೆ.
- ಎಲ್ಲಾ ರೀತಿಯ ಸೋಲಾರ್ ಕುಕರ್ಗಳಿಗೆ ಶೇ. 12ರಷ್ಟು ಜಿಎಸ್ಟಿ
- ಪೌಲ್ಟ್ರಿ ಯಂತ್ರೋಪಕರಣದಂತೆ ಅದರ ಬಿಡಿಭಾಗಗಳಿಗೂ ಶೇ. 12ರಷ್ಟು ಜಿಎಸ್ಟಿ.
- ಫೈರ್ ವಾಟರ್ ಸ್ಪ್ರಿಂಕ್ಲರ್ ಸೇರಿದಂತೆ ಎಲ್ಲಾ ರೀತಿಯ ಸ್ಪ್ರಿಂಕ್ಲರ್ಗಳಿಗೆ ಶೇ. 12ರಷ್ಟು ಜಿಎಸ್ಟಿ.
ಇದನ್ನೂ ಓದಿ: ಕ್ವಾಂಟ್ ಮ್ಯೂಚುವಲ್ ಫಂಡ್ ಮೇಲೆ ಫ್ರಂಟ್ ರನಿಂಗ್ ಕಪ್ಪು ಚುಕ್ಕೆ; ಸೆಬಿಯಿಂದ ತನಿಖೆ; ಏನಿದು ಪ್ರಕರಣ?
ತೆರಿಗೆ ವಿನಾಯಿತಿ ಇರುವ ಟ್ರೇಡ್ ಮತ್ತು ಸರ್ವಿಸಸ್
- ರಕ್ಷಣಾ ಕ್ಷೇತ್ರದ ಕೆಲ ನಿರ್ದಿಷ್ಟ ವಸ್ತುಗಳ ಆಮದು ಮೇಲೆ ಐಜಿಎಸ್ಟಿಯಿಂದ ವಿನಾಯಿತಿ ಇದೆ. ಇದನ್ನು ಇನ್ನೂ ಐದು ವರ್ಷ ವಿಸ್ತರಿಸಲಾಗಿದೆ.
- RAMA ಯೋಜನೆ ಅಡಿಯಲ್ಲಿ ರೀಸರ್ಚ್ ಉಪಕರಣಗಳ ಆಮದಿಗೆ ಐಜಿಎಸ್ಟಿ ವಿನಾಯಿತಿ.
- ಪ್ಲಾಟ್ಫಾರ್ಮ್ ಟಿಕೆಟ್ ಮಾರಾಟ, ಬ್ಯಾಟರಿ ಚಾಲಿತ ಕಾರ್ ಸರ್ವಿಸ್ ಸೇರಿದಂತೆ ಸಾರ್ವಜನಿಕರಿಗೆ ರೈಲ್ವೆಯಿಂದ ನೀಡಲಾಗುವ ಸರ್ವಿಸ್ಗೆ ಜಿಎಸ್ಟಿಯಿಂದ ವಿನಾಯಿತಿ ನೀಡಲಾಗುವುದು.
- ಇನ್ಷೂರೆನ್ಸ್ ಕಂಪನಿಗಳ ಮಧ್ಯೆ ನಡೆಯುವ ಕೋ ಇನ್ಷೂರೆನ್ಸ್ ಪ್ರೀಮಿಯಮ್ಗಳು ಮತ್ತು ರೀ-ಇನ್ಷೂರೆನ್ಸ್ ಕಮಿಷನ್ನ ವಹಿವಾಟುಗಳಿಗೆ ಜಿಎಸ್ಟಿ ಇರುವುದಿಲ್ಲ.
ಜಿಎಸ್ಟಿ ಸಭೆಯಲ್ಲಿ ಇತರ ಕ್ರಮಗಳು
- ಜಿಎಸ್ಟಿ ರಿಜಿಸ್ಟ್ರೇಶನ್ನಲ್ಲಿ ವಂಚನೆ ನಿಯಂತ್ರಿಸಲು ಬಯೋಮೆಟ್ರೆಕ್ ಆಧಾರಿತ ಆಧಾರ್ ದೃಢೀಕರಣ ಅಗತ್ಯ.
- 2017-18ರಿಂದ 2019-20ರವರೆಗೆ ಇರುವ ಟ್ಯಾಕ್ಸ್ ಡಿಮ್ಯಾಂಡ್ ಮೊತ್ತವನ್ನು 2025ರ ಮಾರ್ಚ್ 31ರೊಳಗೆ ಪಾವತಿಸಿದರೆ ಬಡ್ಡಿ ಮತ್ತು ದಂಡದ ವಿನಾಯಿತಿ ಸಿಗುತ್ತದೆ.
- ಮದ್ಯ ತಯಾರಿಕೆಯಲ್ಲಿ ಬಳಸಲಾಗುವ ಇಎನ್ಎ ಆಲ್ಕೋಹಾಲ್ ಅನ್ನು ಜಿಎಸ್ಟಿ ವ್ಯಾಪ್ತಿಯಿಂದ ಹೊರಗಿಡಲಾಗುವುದು.
- ಎಲೆಕ್ಟ್ರಾನಿಕ್ ಕಾಮರ್ಸ್ ಆಪರೇಟರ್ಸ್ಗೆ ವಿಧಿಸಲಾಗುವ ಟಿಸಿಎಸ್ ತೆರಿಗೆಯನ್ನು ಶೇ. 1ರಿಂದ ಶೇ. 0.5ಕ್ಕೆ ಇಳಿಸಲಾಗುವುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ