ಸೆಪ್ಟೆಂಬರ್​​ ತಿಂಗಳಲ್ಲಿ 1.45 ಲಕ್ಷ ಕೋಟಿ ಜಿಎಸ್​ಟಿ ಸಂಗ್ರಹ

| Updated By: ರಮೇಶ್ ಬಿ. ಜವಳಗೇರಾ

Updated on: Sep 28, 2022 | 4:33 PM

2022-23ನೇ ಸಾಲಿನ ಸೆಪ್ಟೆಂಬರ್ ತಿಂಗಳ ಜಿಎಸ್​ಟಿ ಸಂಗ್ರಹ ಎಷ್ಟು ಆಗಲಿದೆ ಎನ್ನುವುದನ್ನು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೆಪ್ಟೆಂಬರ್​​ ತಿಂಗಳಲ್ಲಿ 1.45 ಲಕ್ಷ ಕೋಟಿ ಜಿಎಸ್​ಟಿ ಸಂಗ್ರಹ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಈ ವರ್ಷ ಅಂದ್ರೆ 2022ರ  ಸೆಪ್ಟಂಬರ್ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆದಾಯವು ಸುಮಾರು 1.45 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗುವ ನಿರೀಕ್ಷೆಯಿದೆ ಎಂದು  ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಾರ್ಚ್ ನಿಂದ 1.4 ಲಕ್ಷ ಕೋಟಿಗೂ ಅಧಿಕ ಸಂಗ್ರಹವಾಗಿದ್ದು, ಆಗಸ್ಟ್ ನಲ್ಲಿ 1.43 ಲಕ್ಷ ಕೋಟಿ ರೂ. ಸಂಗ್ರಹವಾಗಿತ್ತು, ಸೆಪ್ಟೆಂಬರ್‌ನಲ್ಲಿ 1.45 ಲಕ್ಷ ಕೋಟಿ ರೂ.ಗಿಂತ  ಹೆಚ್ಚು ಸಂಗ್ರಹವಾಗುವ ಸಾಧ್ಯತೆ ಇದೆ ಎಂದಿದ್ದಾರೆ.

ಸುಧಾರಿತ ವ್ಯಾಪಾರ ಚಟುವಟಿಕೆಯು ಮುಂಬರುವ ತಿಂಗಳುಗಳಲ್ಲಿ ಇನ್ನಷ್ಟು ಹೆಚ್ಚು ಜಿಎಸ್​ಟಿ ಸಂಗ್ರಹವಾಗುವ ನಿರೀಕ್ಷೆಯೆ ಇದ್ದು. ಅಧಿಕೃತ ಆದಾಯದ ಅಂಕಿ-ಅಂಶಗಳನ್ನು ಅಕ್ಟೋಬರ್ 1 ರಂದು ಬಿಡುಗಡೆ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: GST ಆಗಸ್ಟ್ ತಿಂಗಳಲ್ಲಿ ₹1,43,612 ಕೋಟಿ ಜಿಎಸ್​​ಟಿ ಸಂಗ್ರಹ

ಏಪ್ರಿಲ್‌ನಲ್ಲಿ ದಾಖಲೆಯ ಗರಿಷ್ಠ 1.68 ಲಕ್ಷ ಕೋಟಿ ಸಂಗ್ರಹವಾಗಿದ್ರೆ, ಮೇ ತಿಂಗಳಲ್ಲಿ ಜಿಎಸ್‌ಟಿ ಆದಾಯ 1.41 ಲಕ್ಷ ಕೋಟಿ, ಜೂನ್‌ನಲ್ಲಿ 1.44 ಲಕ್ಷ ಕೋಟಿ, 1.49 ಲಕ್ಷ ಕೋಟಿ (ಜುಲೈ) ಮತ್ತು 1.43 ಲಕ್ಷ ಕೋಟಿ (ಆಗಸ್ಟ್) ಆಗಿತ್ತು.

ಅತೀ ಹೆಚ್ಚು ಸರಕು ಮತ್ತು ಸೇವಾ ತೆರಿಗೆ ಸಂಗ್ರಹದಲ್ಲಿ ಆಗಸ್ಟ್​ನಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿತ್ತು. ಆಗಸ್ಟ್​ನಲ್ಲಿ ಮಹಾರಾಷ್ಟ್ರ 18684 ಕೋಟಿ ಜಿಎಸ್​ಟಿ ಸಂಗ್ರಹಿಸಿ ಮೊದಲ ಸ್ಥಾನದಲ್ಲಿದ್ರೆ, ಕರ್ನಾಟಕ 9583 ಕೋಟಿ ರೂ ಸಂಗ್ರಹದೊಂದಿಗೆ ಎರಡನೇ ಸ್ಥಾನಕ್ಕೇರಿದೆ. ಆದ್ರೆ, ಈಗ ಸೆಪ್ಟೆಂಬರ್​ ತಿಂಗಳಲ್ಲಿ  ಎಷ್ಟು ಸಂಗ್ರಹವಾಗಲಿದೆ ಎನ್ನುವುದು ಅಧಿಕೃತವಾಗಿ ಅಕ್ಟೋಬರ್​ 1ರಂದು ತಿಳಿಯಲಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:21 pm, Wed, 28 September 22