Most Valuable Banks: ಎಚ್​ಡಿಎಫ್​ಸಿಗಳ ವಿಲೀನದ ಬಳಿಕ ಸೃಷ್ಟಿಯಾಗಲಿದೆ ವಿಶ್ವದ ಅಗ್ರಗಣ್ಯ ಬ್ಯಾಂಕ್; ಜರ್ಮನಿ ಜನಸಂಖ್ಯೆಗಿಂತಲೂ ಹೆಚ್ಚಿನ ಗ್ರಾಹಕರು, ಅಗಾಧ ಷೇರುಸಂಪತ್ತು

|

Updated on: Jun 30, 2023 | 12:33 PM

HDFC Bank Becomes World Giant After Merger: ಎಚ್​ಡಿಎಫ್​ಸಿ ಮತ್ತು ಎಚ್​ಡಿಎಫ್​ಸಿ ಬ್ಯಾಂಕ್ ಸಂಸ್ಥೆಗಳು ವಿಲೀನಗೊಳ್ಳುತ್ತಿದ್ದು, ಇದರಿಂದ ವಿಶ್ವದ ನಾಲ್ಕನೇ ಅತಿದೊಡ್ಡ ಬ್ಯಾಂಕ್ ಅಗಿ ಬೆಳೆಯಲಿದೆ ಎಚ್​ಡಿಎಫ್​ಸಿ. ಗ್ರಾಹಕರ ಸಂಖ್ಯೆ 12 ಕೋಟಿಗೆ ಏರಲಿದ್ದು ಇದು ಜರ್ಮನಿ, ಬ್ರಿಟನ್ ಇತ್ಯಾದಿ ದೇಶಗಳ ಜನಸಂಖ್ಯೆಗಿಂತಲೂ ಹೆಚ್ಚು.

Most Valuable Banks: ಎಚ್​ಡಿಎಫ್​ಸಿಗಳ ವಿಲೀನದ ಬಳಿಕ ಸೃಷ್ಟಿಯಾಗಲಿದೆ ವಿಶ್ವದ ಅಗ್ರಗಣ್ಯ ಬ್ಯಾಂಕ್; ಜರ್ಮನಿ ಜನಸಂಖ್ಯೆಗಿಂತಲೂ ಹೆಚ್ಚಿನ ಗ್ರಾಹಕರು, ಅಗಾಧ ಷೇರುಸಂಪತ್ತು
ಎಚ್​ಡಿಎಫ್​ಸಿ
Follow us on

ಹೌಸಿಂಗ್ ಡೆವಲಪ್ಮೆಂಟ್ ಕಾರ್ಪೊರೇಷನ್ ಕಾರ್ಪೊರೇಷನ್ (HDFC) ಮತ್ತು ಎಚ್​ಡಿಎಫ್​ಸಿ ಬ್ಯಾಂಕ್​ನ ವಿಲೀನದ ಬಳಿಕ ಭಾರತದ ಅತಿದೊಡ್ಡ ಬ್ಯಾಂಕ್ ಆಗಿ ರೂಪುಗೊಳ್ಳಲಿದೆ. ವಿಲೀನದ ಬಳಿಕ ಎಚ್​ಡಿಎಫ್​ಸಿ ಬ್ಯಾಂಕ್ ವಿಶ್ವದ ಅಗ್ರಗಣ್ಯ ಬ್ಯಾಂಕುಗಳ ಸಾಲಿನಲ್ಲಿ ನಿಲ್ಲಲಿದೆ. ವಿಶ್ವದ ಟಾಪ್-5 ಬ್ಯಾಂಕುಗಳಲ್ಲಿ ಎಚ್​ಡಿಎಫ್​ಸಿ ಬ್ಯಾಂಕ್ ಇರಲಿದೆ. ಅಮೆರಿಕ ಮತ್ತು ಚೀನಾದ ಬ್ಯಾಂಕಿಂಗ್ ದೈತ್ಯರಿಗೆ ಸವಾಲೆಸೆಯುವ ಮಟ್ಟಕ್ಕೆ ಎಚ್​ಡಿಎಫ್​ಸಿ ಬೆಳೆಯಲಿದೆ. ಷೇರುಸಂಪತ್ತಿನ ಪ್ರಮಾಣದಲ್ಲಿ ಜೆಪಿ ಮಾರ್ಗನ್ ಚೇಸ್, ಕಮರ್ಷಿಯಲ್ ಬ್ಯಾಂಕ್ ಆಫ್ ಚೀನಾ (ICBC) ಮತ್ತು ಬ್ಯಾಂಕ್ ಆಫ್ ಅಮೆರಿಕ ಕಾರ್ಪೊರೇಷನ್ ನಂತರದ ಸ್ಥಾನ ಎಚ್​ಡಿಎಫ್​ಸಿಯದ್ದಾಗಿರಲಿದೆ. ಈ ಮಟ್ಟಕ್ಕೆ ಬೆಳೆದ ಮೊದಲ ಭಾರತೀಯ ಬ್ಯಾಂಕ್ ಎಚ್​ಡಿಎಫ್​ಸಿಯಾಗಿದೆ. ಮಾರ್ಗನ್ ಸ್ಟಾನ್ಲೀ, ಎಚ್​ಎಸ್​ಬಿಸಿ, ಸಿಸಿಬಿ ಇತ್ಯಾದಿ ಬ್ಯಾಂಕಿಂಗ್ ದೈತ್ಯರಿಗಿಂತಲೂ ಎಚ್​ಡಿಎಫ್​ಸಿ ಬೃಹತ್ತಾಗಿರಲಿದೆ.

ಎಚ್​ಡಿಎಫ್​ಸಿ ಎಂಬುದು ಮೂಲ ಕಂಪನಿ. ಗೃಹ ನಿರ್ಮಾಣಕ್ಕೆ ಸಾಲ ಒದಗಿಸುವ ಕಂಪನಿಯಾಗಿ ಬೆಳೆದ ಎಚ್​ಡಿಎಫ್​ಸಿಯ ಬ್ಯಾಂಕಿಂಗ್ ಅಂಗವಾಗಿ ಎಚ್​ಡಿಎಫ್​ಸಿ ಬ್ಯಾಂಕ್ ಸ್ಥಾಪನೆಯಾಗಿತ್ತು. ಈಗ ಅಂಗಸಂಸ್ಥೆಯೊಂದಿಗೆ ಎಚ್​ಡಿಎಫ್​ಸಿ ವಿಲೀನಗೊಂಡಿದೆ. ಬಿಎಸ್​ಇ ಮತ್ತು ಎನ್​ಎಸ್​ಇ ಎರಡೂ ಷೇರುಪೇಟೆಗಳಲ್ಲಿ ಈ ಎರಡೂ ಕೂಡ ಲಿಸ್ಟ್ ಆಗಿದ್ದವು. ಈಗ ವಿಲೀನದ ಬಳಿಕ ಎಚ್​ಡಿಎಫ್​ಸಿಯ ಷೇರುಸಂಪತ್ತು ಎಚ್​ಡಿಎಫ್​ಸಿ ಬ್ಯಾಂಕ್​ಗೆ ಜೋಡಿತಗೊಳ್ಳಲಿದೆ. ಎಚ್​ಡಿಎಫ್​ಸಿ ಬದಲು ಎಚ್​ಡಿಎಫ್​ಸಿ ಬ್ಯಾಂಕ್ ಮಾತ್ರ ಇರಲಿದೆ. ಎರಡೂ ಸೇರಿ ಒಟ್ಟು ಷೇರುಸಂಪತ್ತು 172 ಬಿಲಿಯನ್ ಡಾಲರ್ ಆಗಲಿದೆ. ಅಂದರೆ ಸುಮಾರು 14 ಲಕ್ಷ ಕೋಟಿ ರೂನಷ್ಟು ಷೇರುಸಂಪತ್ತು ಎಚ್​ಡಿಎಫ್​ಸಿ ಬ್ಯಾಂಕ್​ನದ್ದಾಗಿರಲಿದೆ.

ಇದನ್ನೂ ಓದಿHDFC Merger: ಜುಲೈ 1ರಂದು ಎಚ್​ಡಿಎಫ್​ಸಿ ವಿಲೀನ; 13ಕ್ಕೆ ಷೇರುಪೇಟೆಗಳಿಂದ ಹೊರಕ್ಕೆ; ಎಚ್​ಡಿಎಫ್​ಸಿ ಜಾಗಕ್ಕೆ ಅದಾನಿ ಎಂಟರ್​ಪ್ರೈಸಸ್, ಎಲ್​ಟಿಐ ಮೈಂಡ್​ಟ್ರೀಗೆ ಮಣೆಸಾಧ್ಯತೆ

ಅಲ್ಲದೇ ವಿಲೀನದ ಬಳಿಕ ಎಚ್​ಡಿಎಫ್​ಸಿ ಬ್ಯಾಂಕ್​ನ ಗ್ರಾಹಕರ ಸಂಖ್ಯೆ 12 ಕೋಟಿಗೆ ಏರಲಿದೆ. ಇದು ಜರ್ಮನಿ, ಇರಾನ್ ಇತ್ಯಾದಿ ದೇಶಗಳ ಜನಸಂಖ್ಯೆಗಿಂತಲೂ ದೊಡ್ಡ ಸಂಖ್ಯೆ. ಜನಸಂಖ್ಯೆಯಲ್ಲಿ ವಿಶ್ವದ 13ನೇ ಸ್ಥಾನದಲ್ಲಿರುವ ಫಿಲಿಪ್ಪೈನ್ಸ್ ದೇಶದಲ್ಲಿರುವ ಒಟ್ಟು ಜನರ ಸಂಖ್ಯೆಗಿಂತಲೂ ಹೆಚ್ಚು ಗ್ರಾಹಕರನ್ನು ಎಚ್​ಡಿಎಫ್​ಸಿ ಬ್ಯಾಂಕ್ ಹೊಂದಿರಲಿದೆ.

ಅಷ್ಟೇ ಅಲ್ಲ, ಎಚ್​ಡಿಎಫ್​ಸಿ ಬ್ಯಾಂಕ್​ನ ಶಾಖೆಗಳ ಸಂಖ್ಯೆ 8,300 ಹಾಗೂ ಉದ್ಯೋಗಿಗಳ ಸಂಖ್ಯೆ 1,77,000ಕ್ಕೂ ಹೆಚ್ಚಿರಲಿದೆ.

ವಿಶ್ವದ ಅತ್ಯಂತ ಮೌಲ್ಯಯುತ ಬ್ಯಾಂಕುಗಳು

  1. ಜೆಪಿ ಮಾರ್ಗನ್ ಚೇಸ್: 416.5 ಬಿಲಿಯನ್ ಡಾಲರ್
  2. ಐಸಿಬಿಸಿ: 228.3 ಬಿಲಿಯನ್ ಡಾಲರ್
  3. ಬ್ಯಾಂಕ್ ಆಫ್ ಅಮೇರಿಕಾ: 227.7 ಬಿಲಿಯನ್ ಡಾಲರ್
  4. ಎಚ್​ಡಿಎಫ್​ಸಿ ಬ್ಯಾಂಕ್: 171.8 ಬಿಲಿಯನ್ ಡಾಲರ್
  5. ಅಗ್ರಿಕಲ್ಚರಲ್ ಬ್ಯಾಂಕ್ ಆಫ್ ಚೀನಾ: 168.9 ಬಿಲಿಯನ್ ಡಾಲರ್
  6. ಚೀನಾ ಕನ್ಸ್​ಟ್ರಕ್ಷನ್ ಬ್ಯಾಂಕ್: 162.8 ಬಿಲಿಯನ್ ಡಾಲರ್
  7. ಎಚ್​ಎಸ್​ಬಿಸಿ: 156.6 ಬಿಲಿಯನ್ ಡಾಲರ್
  8. ವೆಲ್ಸ್ ಫಾರ್ಗೋ: 156.2 ಬಿಲಿಯನ್ ಡಾಲರ್
  9. ಬ್ಯಾಂಕ್ ಆಫ್ ಚೀನಾ: 147.3 ಬಿಲಿಯನ್ ಡಾಲರ್
  10. ಮಾರ್ಗನ್ ಸ್ಟಾನ್ಲೀ: 144.2 ಬಿಲಿಯನ್ ಡಾಲರ್

ಇದನ್ನೂ ಓದಿDeepak Parekh: ಷೇರು ಬೇಡ, ಸಂಬಳ ಸಾಕು ಎನ್ನುವ ಮಾಲೀಕ; 5 ಲಕ್ಷ ಕೋಟಿ ಮೌಲ್ಯದ ಕಂಪನಿ ಛೇರ್ಮನ್​ನ ಸರಳತೆ ಎಲ್ಲರಿಗೂ ಮಾದರಿ

ಭಾರತೀಯ ಬ್ಯಾಂಕುಗಳ ಒಟ್ಟು ಷೇರುಸಂಪತ್ತಿನಲ್ಲಿ ಎಚ್​ಡಿಎಫ್​ಸಿ ನಂಬರ್ ಒನ್

  1. ಎಚ್​ಡಿಎಫ್​ಸಿ ಬ್ಯಾಂಕ್: 9.47 ಲಕ್ಷ ಕೋಟಿ ರೂ
  2. ಐಸಿಐಸಿಐ ಬ್ಯಾಂಕ್: 6.53 ಲಕ್ಷ ಕೋಟಿ ರೂ
  3. ಎಸ್​ಬಿಐ: 5.09 ಲಕ್ಷ ಕೋಟಿ ರೂ
  4. ಕೋಟಕ್ ಮಹೀಂದ್ರ: 3.64 ಲಕ್ಷ ಕೋಟಿ ರೂ
  5. ಆ್ಯಕ್ಸಿಸ್ ಬ್ಯಾಂಕ್: 3 ಲಕ್ಷ ಕೋಟಿ ರೂ
  6. ಇಂಡಸ್​ಇಂಡ್ ಬ್ಯಾಂಕ್: 1.05 ಲಕ್ಷ ಕೋಟಿ ರೂ
  7. ಐಡಿಬಿಐ: 59,000 ಕೋಟಿ ರೂ
  8. ಬ್ಯಾಂಕ್ ಆಫ್ ಬರೋಡಾ: 56,000 ಕೋಟಿ ರೂ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ