Deepak Parekh: ಷೇರು ಬೇಡ, ಸಂಬಳ ಸಾಕು ಎನ್ನುವ ಮಾಲೀಕ; 5 ಲಕ್ಷ ಕೋಟಿ ಮೌಲ್ಯದ ಕಂಪನಿ ಛೇರ್ಮನ್​ನ ಸರಳತೆ ಎಲ್ಲರಿಗೂ ಮಾದರಿ

HDFC Chairman's Selfless Dedication: ಎಚ್​ಡಿಎಫ್​ಸಿಯ ಛೇರ್ಮನ್ ದೀಪಕ್ ಪರೇಖ್ ಹೊಂದಿರುವ ಷೇರುಪಾಲು ಶೇ. 0.04 ಮಾತ್ರ. ತನಗೆ ಷೇರಿಗಿಂತ ಸಂಬಳವೇ ಸಾಕು ಎನ್ನುವಷ್ಟು ಪ್ರಾಮಾಣಿಕ ಮತ್ತು ಸರಳ ವ್ಯಕ್ತಿ ದೀಪಕ್ ಪರೇಖ್.

Deepak Parekh: ಷೇರು ಬೇಡ, ಸಂಬಳ ಸಾಕು ಎನ್ನುವ ಮಾಲೀಕ; 5 ಲಕ್ಷ ಕೋಟಿ ಮೌಲ್ಯದ ಕಂಪನಿ ಛೇರ್ಮನ್​ನ ಸರಳತೆ ಎಲ್ಲರಿಗೂ ಮಾದರಿ
ದೀಪಕ್ ಪರೇಖ್
Follow us
|

Updated on: Apr 27, 2023 | 4:02 PM

ಗೃಹ ಸಾಲ ನೀಡುವ ಪ್ರಮುಖ ಖಾಸಗಿ ಹಣಕಾಸು ಸಂಸ್ಥೆ ಎಚ್​ಡಿಎಫ್​ಸಿ (HDFC) ಇದೀಗ 5 ಲಕ್ಷ ಕೋಟಿ ರೂನಷ್ಟು ಷೇರುಸಂಪತ್ತು ಹೊಂದಿರುವ ಕಂಪನಿ. ದೀಪಕ್ ಪರೇಖ್ (Deepak Parekh) ಈ ಸಂಸ್ಥೆಯ ಛೇರ್ಮನ್. ಈ ಸಂಸ್ಥೆಯನ್ನು ಸ್ಥಾಪಿಸಿದ್ದೇ ಇವರ ದೊಡ್ಡಪ್ಪ ಎಚ್.ಟಿ. ಪರೇಖ್. ದೊಡ್ಡಪ್ಪನಿಗೆ ದತ್ತು ಮಗನಾಗಿ, ವಿದೇಶದಲ್ಲಿ ಭರ್ಜರಿ ಸಂಬಳ ತರುವ ಕೆಲಸ ಬಿಟ್ಟು ಭಾರತಕ್ಕೆ ಬಂದು ಎಚ್​ಡಿಎಫ್​ಸಿಯನ್ನು ಉಳಿಸಿ ಇಂದು ಹೆಮ್ಮರವಾಗಿ ಬೆಳೆಸಿದವರು ದೀಪಕ್ ಪರೇಖ್. ಈ ಕಂಪನಿಯಲ್ಲಿ ಛೇರ್ಮನ್ ಆಗಿರುವ ಅವರು ಸಂಸ್ಥೆಯ ಒಟ್ಟು ಷೇರು ಸಂಪತ್ತಿನಲ್ಲಿ ಹೊಂದಿರುವ ಪಾಲು ಕೇವಲ ಶೇ. 0.04 ಮಾತ್ರ. ಅಂದರೆ ಪ್ರತೀ 10,000 ರುಪಾಯಿಗೆ ಇವರ ಪಾಲು 4 ಪೈಸೆ ಮಾತ್ರ. ಆದರೆ ಇಂದು ದೀಪಕ್ ಪರೇಖ್ ಅವರು ಭಾರತದ ಉದ್ಯಮ ಮತ್ತು ಹಣಕಾಸು ವಲಯದಲ್ಲಿ ಬಹಳ ಎತ್ತರದ ಮತ್ತು ಗೌರವಾನ್ವಿತ ಸ್ಥಾನದಲ್ಲಿದ್ದಾರೆ. ಹಲವು ಪ್ರಮುಖ ಉದ್ಯಮ ಸಂಸ್ಥೆಗಳ ವಿವಿಧ ಮಂಡಳಿಗಳು, ಸರ್ಕಾರಗಳ ಮಂಡಳಿಗಳಿಗೆ ಅವರ ಸೇವೆ ಬಳಸುವುದುಂಟು. ಅಷ್ಟರಮಟ್ಟಿಗೆ ಅವರು ಅನುಭವಸ್ಥರು ಮತ್ತು ಮಾದರಿ ವ್ಯಕ್ತಿತ್ವದವರು.

ದೊಡ್ಡ ಬ್ಯಾಂಕರ್ ಆಗಬಹುದಾಗಿದ್ದ ದೀಪಕ್ ಪರೇಖ್ ಎಚ್​ಡಿಎಫ್​ಸಿಗೆ ಬಂದ ಕತೆಯೇ ಬೇರೆ

ದೀಪಕ್ ಪರೇಖ್ ಮುಂಬೈನಲ್ಲಿ ಹುಟ್ಟಿ ಅಲ್ಲಿಯೇ ಶಾಲಾ ಶಿಕ್ಷಣ ಪಡೆದವರು. 1965ರಲ್ಲಿ ಇಂಗ್ಲೆಂಡ್​ನಲ್ಲಿ ವೃತ್ತಿಪರ ಶಿಕ್ಷಣ ಪಡೆದು ಅಲ್ಲಿಯೇ ಚಾರ್ಟರ್ಡ್ ಅಕೌಂಟೆಂಟ್ ಆದರು. ಲಂಡನ್​ನಲ್ಲಿ ವಿನ್ನೀ, ಸ್ಮಿತ್ ಅಂಡ್ ವಿನ್ನೀ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದರು. ಬಳಿಕ ಅವರು ಪ್ರತಿಷ್ಠಿತ ಸಿಎಐಐಬಿ (ಸರ್ಟಿಫೈಡ್ ಅಸೋಷಿಯೇಶನ್ ಆಫ್ ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಬ್ಯಾಂಕರ್ಸ್) ಪರೀಕ್ಷೆ ಪೂರ್ಣಗೊಳಿಸಿದರು. ಇದಾದ ಬಳಿಕ ಅವರು ಗ್ರಿಂಡ್ಲೇಸ್ ಬ್ಯಾಂಕ್, ಚೇಸ್ ಮನ್ಹಟನ್ ಬ್ಯಾಂಕ್​ಗಳಲ್ಲಿ ಕೆಲಸ ಮಾಡಿದರು. ವೃತ್ತಿಪರ ಬದುಕಿನಲ್ಲಿ ಬಹಳ ಎತ್ತರಕ್ಕೆ ಹೋಗುವ ಅವಕಾಶ ಹೊಂದಿದವರು.

ಇದನ್ನೂ ಓದಿMaruti Suzuki: ಮಾರುತಿ ಸುಜುಕಿ 1 ಲಕ್ಷ ಕೋಟಿ ರೂ ಆದಾಯ ದಾಟಿದ ಭಾರತದ ಮೊದಲ ಕಾರ್ ಕಂಪನಿ; ಷೇರುಗಳಿಗೆ ಭಾರೀ ಬೇಡಿಕೆ ಸಾಧ್ಯತೆ

ದೀಪಕ್ ಪರೇಖ್ ಎಚ್​ಡಿಎಫ್​ಸಿಗೆ ಅರ್ಧ ಸಂಬಳಕ್ಕೆ ಬಂದ ಕಥೆ

ಎಚ್​ಡಿಎಫ್​ಸಿ (ಹೌಸಿಂಗ್ ಡೆವಲಪ್ಮೆಂಟ್ ಅಂಡ್ ಫೈನಾನ್ಸ್ ಕಾರ್ಪೊರೇಶನ್ ಸಂಸ್ಥೆ) 1977ರಲ್ಲಿ ದೀಪಕ್ ಪರೇಖ್ ದೊಡ್ಡಪ್ಪ ಸ್ಥಾಪನೆ ಮಾಡಿದ್ದು. ಎಚ್.ಡಿ. ಪರೇಖ್ ಅವರ ವಯಸ್ಸು 65 ವರ್ಷ. ತೀರಾ ನಗಣ್ಯ ಸ್ಥಿತಿಯಲ್ಲಿ ಸಂಸ್ಥೆ ಇತ್ತು. ಆ ಸಂದರ್ಭದಲ್ಲಿ ಇಂಗ್ಲೆಂಡ್​ನಲ್ಲಿ ಉತ್ತಮ ಬ್ಯಾಂಕರ್ ವೃತ್ತಿ ಹೊಂದಿದ್ದ ದೀಪಕ್ ಪರೇಖ್ ಅವರನ್ನು ಎಚ್​ಡಿಎಫ್​ಸಿಗೆ ಸೇರುವಂತೆ ದೊಡ್ಡಪ್ಪ ಕೇಳಿದರು. ಮಕ್ಕಳಿಲ್ಲದ ದೊಡ್ಡಪ್ಪನಿಗೆ ದೀಪಕ್ ಪರೇಖ್ ಒಂದು ರೀತಿಯಲ್ಲಿ ದತ್ತುಪುತ್ರರೇ ಆಗಿದ್ದರು. ಇವರ ಮಾತು ನಿರಾಕರಿಸಲಾಗದೇ ದೀಪಕ್ ಪರೇಖ್ ಇಂಗ್ಲೆಂಡ್​ನಲ್ಲಿ ತಮಗೆ ಸಿಗುತ್ತಿದ್ದುದಕ್ಕಿಂತ ಅರ್ಧ ಸಂಬಳಕ್ಕೆ ಎಚ್​ಡಿಎಫ್​ಸಿಗೆ ಬಂದು ಕೆಲಸಕ್ಕೆ ಸೇರಿದರು. ಇದು ಆಗಿದ್ದು 1978ರಲ್ಲಿ. ಅಂದರೆ ಎಚ್​ಡಿಎಫ್​ಸಿ ಸ್ಥಾಪನೆಯಾಗಿ ಒಂದು ವರ್ಷದ ಬಳಿಕ.

ಎಚ್​ಡಿಎಫ್​ಸಿಯಲ್ಲಿ ದೀಪಕ್ ಪರೇಖ್ ಷೇರುಪಾಲು ಯಾಕೆ ಕಡಿಮೆ?

ದೀಪಕ್ ಪರೇಖ್ ಎಚ್​ಡಿಎಫ್​ಸಿಗೆ ಬಂದಾಗ ಕಡಿಮೆ ವೇತನ ಪಡೆದರಾದರೂ ಅವರ ಗುರಿ ಇದ್ದದ್ದು ಸಂಸ್ಥೆಯ ಉನ್ನತಿ. ಸಂಸ್ಥಾಪಕರಾದ ಅವರ ದೊಡ್ಡಪ್ಪರಿಗೆ ಆಗಲೇ ವಯಸ್ಸಾಗಿತ್ತಾದ್ದರಿಂದ 33 ವರ್ಷದ ದೀಪಕ್ ಪರೇಖ್ ಅವರ ಹೆಗಲಿಗೆ ಕಂಪನಿ ಕಟ್ಟುವ ಗುರುತರ ಹೊಣೆಗಾರಿಕೆ ಇತ್ತು. ಬಹಳ ಶ್ರಮಪಟ್ಟು ಈ ಕಾರ್ಯ ಮಾಡುವಾಗ ದೀಪಕ್ ಪರೇಖ್ ಅವರಿಗೆ ಎಚ್​ಡಿಎಫ್​ಸಿಯಲ್ಲಿ ಹೆಚ್ಚು ಷೇರುಪಾಲು ಹೊಂದಬೇಕೆಂಬ ಆಲೋಚನೆಯೇ ಸುಳಿಯಲಿಲ್ಲ.

ಇದನ್ನೂ ಓದಿBig Rise: ಬೆಂಗಳೂರು, ಹೈದರಾಬಾದ್​ನ ಈ ಪುಟ್ಟ ಮೆಷೀನ್ ಟೂಲ್ ಕಂಪನಿಗೆ ಹಣ ಹಾಕಿದವರೇ ಸಿರಿವಂತರು; 3 ವರ್ಷದಲ್ಲಿ 7 ಪಟ್ಟು ಬೆಳೆದಿದೆ ಷೇರು

ಈಗಲೂ ಕೂಡ ಅವರಿಗೆ ಹೆಚ್ಚು ಷೇರು ಇಲ್ಲದಿರುವ ಬಗ್ಗೆ ಯಾವ ನಿರಾಸೆಯೂ ಇಲ್ಲ. ತನ್ನ ದೊಡ್ಡಪ್ಪ ಕೂಡ ಸಂಬಳ ಮಾತ್ರ ಪಡೆಯುತ್ತಿದ್ದರು. ನಾನೂ ಸಂಬಳ ಮಾತ್ರವೇ ಪಡೆದು ಕೆಲಸ ಮಾಡಲು ಬಯಸುತ್ತೇನೆ. ಆದರೆ, ಸಂಬಳದ ಉದ್ಯೋಗಿಗಳಂತೆ ಅವರು ನಿರ್ದಿಷ್ಟ ಸಮಯ, ಕೆಲಸಕ್ಕೆ ಸೀಮಿತರಾಗದೇ ಮಾಲೀಕರಂತೆ ಸರ್ವಮುಖಿಯಾಗಿ ಕೆಲಸ ಮಾಡಿದ್ದಂತೂ ಹೌದು.

ದೀಪಕ್ ಪರೇಖ್ ಅವರಿಗೆ ಎಚ್​ಡಿಎಫ್​ಸಿ ಷೇರುಗಳೇ ಇಲ್ಲವೆಂದಲ್ಲ. ಅವರ ಬಳಿ ಇರುವ ಷೇರುಗಳ ಒಟ್ಟು ಮೌಲ್ಯ ಈಗ 155 ಕೋಟಿ ರೂ ಎನ್ನಲಾಗಿದೆ. 5 ಲಕ್ಷ ಕೋಟಿ ಷೇರುಸಂಪತ್ತಿನಲ್ಲಿ 155 ಕೋಟಿ ಯಾವ ಮೂಲೆಗೆ? ಇನ್ಫೋಸಿಸ್​ನಲ್ಲಿ ನಾರಾಯಣಮೂರ್ತಿ ಅವರ ಕುಟುಂಬಸದಸ್ಯರು ಶೇ. 5ರವರೆಗೆ ಷೇರುಪಾಲು ಹೊಂದಿದ್ದಾರೆ. ದೀಪಕ್ ಬಳಿ ಇರುವ ಷೇರುಪಾಲು ಶೇ. 0.04ಕೂಡ ಇಲ್ಲ.

ಇವತ್ತು ದೀಪಕ್ ಪರೇಖ್ ಅವರ ಶ್ರಮದ ಫಲವಾಗಿ ಎಚ್​ಡಿಎಫ್​ಸಿಗೆ ಗ್ರಾಹಕರ ಸಂಖ್ಯೆ 6.8 ಕೋಟಿಯಷ್ಟಿದೆ. 3,000 ನಗರ, ಪಟ್ಟಣಗಳಲ್ಲಿ 6,300ಕ್ಕೂ ಹೆಚ್ಚು ಶಾಖೆಗಳನ್ನು ಎಚ್​ಡಿಎಫ್​ಸಿ ಹೊಂದಿದೆ. ಈ ಎಚ್​ಡಿಎಫ್​ಸಿಯ ಅಂಗಸಂಸ್ಥೆಯೇ ಎಚ್​ಡಿಎಫ್​ಸಿ ಬ್ಯಾಂಕ್.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ