Russian Oil: ರಷ್ಯಾದಿಂದ ತೈಲ ಖರೀದಿಸುತ್ತಿರುವ ಹಾಗೂ ಖರೀದಿ ನಿಲ್ಲಿಸಿದ ದೇಶಗಳ ಪಟ್ಟಿ ಇಲ್ಲಿದೆ

| Updated By: Srinivas Mata

Updated on: Apr 21, 2022 | 1:18 PM

ಉಕ್ರೇನ್​ ಮೇಲೆ ರಷ್ಯಾದಿಂದ ಯುದ್ಧ ಘೋಷಣೆ ಮಾಡಿದ ಮೇಲೆ ಯಾವುದೆಲ್ಲ ದೇಶಗಳು ತೈಲ ಖರೀದಿ ಮಾಡುತ್ತಿವೆ ಮತ್ತು ಯಾವುದೆಲ್ಲ ಖರೀದಿ ನಿಲ್ಲಿಸಿವೆ ಎಂಬುದರ ಮಾಹಿತಿ ಇಲ್ಲಿದೆ.

Russian Oil: ರಷ್ಯಾದಿಂದ ತೈಲ ಖರೀದಿಸುತ್ತಿರುವ ಹಾಗೂ ಖರೀದಿ ನಿಲ್ಲಿಸಿದ ದೇಶಗಳ ಪಟ್ಟಿ ಇಲ್ಲಿದೆ
ರಷ್ಯಾಸ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (ಸಂಗ್ರಹ ಚಿತ್ರ)
Follow us on

ಉಕ್ರೇನ್​ ಮೇಲೆ ರಷ್ಯಾದಿಂದ ಯುದ್ಧ(Russia- Ukraine War) ಸಾರಿದ ನಂತರ ಆಸ್ಟ್ರೇಲಿಯಾ, ಬ್ರಿಟನ್, ಕೆನಡಾ ಮತ್ತು ಅಮೆರಿಕ ದೇಶಗಳು ರಷ್ಯಾದ ತೈಲ ಖರೀದಿ ಮೇಲೆ ಸಂಪೂರ್ಣ ನಿಷೇಧವನ್ನು ವಿಧಿಸಿವೆ. ಆದರೆ ಯುರೋಪಿಯನ್ ಒಕ್ಕೂಟದ 27 ಸದಸ್ಯ ದೇಶಗಳು ಈ ನಿರ್ಬಂಧವನ್ನು ಒಪ್ಪಿಕೊಳ್ಳಲು ಸಾಧ್ಯವಾಗಿಲ್ಲ. ಜರ್ಮನಿಯು ಯುರೋಪಿಯನ್ ಒಕ್ಕೂಟದ ಅತಿದೊಡ್ಡ ಆರ್ಥಿಕತೆ ಮತ್ತು ಅದರ ಅತಿದೊಡ್ಡ ತೈಲ ಮಾರುಕಟ್ಟೆ. ಬೇಸಿಗೆ ವೇಳೆಗೆ ರಷ್ಯಾದ ತೈಲದ ಮೇಲಿನ ಅದರ ಅವಲಂಬನೆಯನ್ನು ಅರ್ಧದಷ್ಟು ಕಡಿಮೆ ಮಾಡಲು ಮತ್ತು ಈ ವರ್ಷದ ಅಂತ್ಯದ ವೇಳೆಗೆ ಅದನ್ನು ಸಂಪೂರ್ಣವಾಗಿ ಕೊನೆಗೊಳಿಸುವ ಗುರಿಯನ್ನು ಹೊಂದಿದೆ. ಆದರೆ ಯುರೋಪ್‌ನಲ್ಲಿನ ಅನೇಕ ಖರೀದಿದಾರರು ಹಾನಿಯನ್ನು ತಪ್ಪಿಸಲು ಸ್ವಯಂಪ್ರೇರಣೆಯಿಂದ ಸ್ಪಾಟ್ ಮಾರುಕಟ್ಟೆಯಲ್ಲಿ ರಷ್ಯಾದ ಕಚ್ಚಾ ತೈಲವನ್ನು ಖರೀದಿಸುವುದನ್ನು ನಿಲ್ಲಿಸಿದ್ದಾರೆ. ದೀರ್ಘಾವಧಿಯ ಒಪ್ಪಂದಗಳಿಗೆ ಸಹಿ ಹಾಕಿದಾಗ ಖರೀದಿಗಳನ್ನು ಸಂಪೂರ್ಣವಾಗಿ ನಿಲ್ಲಿಸುವುದಾಗಿ ಭರವಸೆ ನೀಡಿವೆ.

ಪ್ರಮುಖ ಜಾಗತಿಕ ವ್ಯಾಪಾರ ಸಂಸ್ಥೆಗಳು ಮೇ 15ರ ಹೊತ್ತಿಗೆ ರಷ್ಯಾದ ಸರ್ಕಾರಿ ನಿಯಂತ್ರಿತ ತೈಲ ಕಂಪೆನಿಗಳಿಂದ ಕಚ್ಚಾ ಮತ್ತು ಇಂಧನ ಖರೀದಿಯನ್ನು ಕಡಿಮೆ ಮಾಡಲು ಯೋಜಿಸುತ್ತಿವೆ ಎಂದು ಮೂಲಗಳು ರಾಯಿಟರ್ಸ್​ ಸುದ್ದಿ ಸಂಸ್ಥೆಗೆ ತಿಳಿಸಿವೆ. ಅದಕ್ಕೆ ಪ್ರತಿಕ್ರಿಯೆಯಾಗಿ, ರಷ್ಯಾ ತನ್ನ ಎನರ್ಜಿ ರಫ್ತುಗಳನ್ನು ಪಶ್ಚಿಮದಿಂದ ಸ್ನೇಹಪರ ದೇಶಗಳಿಗೆ ಮರುನಿರ್ದೇಶಿಸುತ್ತದೆ ಮತ್ತು ದೇಶೀಯ ಬಳಕೆಯನ್ನು ಉತ್ತೇಜಿಸುತ್ತದೆ. ರಷ್ಯಾದ ಕ್ರಮಗಳನ್ನು ಖಂಡಿಸಲು ನಿರಾಕರಿಸಿರುವ ಚೀನಾ ಮತ್ತು ಭಾರತವು ರಷ್ಯಾದ ಕಚ್ಚಾ ತೈಲವನ್ನು ಖರೀದಿಸುವುದನ್ನು ಮುಂದುವರಿಸಿದೆ. ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರರಾದ ಭಾರತವು ಫೆಬ್ರವರಿ 24ರ ಉಕ್ರೇನ್ ಆಕ್ರಮಣದ ನಂತರ ಕನಿಷ್ಠ 16 ಮಿಲಿಯನ್ ಬ್ಯಾರೆಲ್‌ಗಳ ರಷ್ಯಾದ ತೈಲವನ್ನು ಬುಕ್ ಮಾಡಿದ್ದು, ಇದು 2021 ರಲ್ಲಿ ಖರೀದಿಸಿದಷ್ಟೆ ಎಂಬುದನ್ನು ರಾಯಿಟರ್ಸ್ ಲೆಕ್ಕಾಚಾರಗಳು ತೋರಿಸುತ್ತವೆ.

ರಷ್ಯಾದ ಕಚ್ಚಾ ತೈಲದ ಸದ್ಯದ ಮತ್ತು ಹಿಂದಿನ ಖರೀದಿದಾರರನ್ನು ಕೆಳಗೆ ನೀಡಲಾಗಿದೆ:
ಸದ್ಯದ ಖರೀದಿದಾರರು
ಭಾರತ್ ಪೆಟ್ರೋಲಿಯಂ
ಭಾರತದ ಸರ್ಕಾರಿ ಸ್ವಾಮ್ಯದ ಸಂಸ್ಕರಣಾಗಾರ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ವ್ಯಾಪಾರಿ ಟ್ರಾಫಿಗುರಾದಿಂದ ಮೇ ತಿಂಗಳ ಲೋಡ್ ಮಾಡಲು 2 ಮಿಲಿಯನ್ ಬ್ಯಾರೆಲ್ ರಷ್ಯಾದ ಯುರಲ್ಸ್ ಅನ್ನು ಖರೀದಿಸಿದೆ ಎಂದು ಖರೀದಿಯ ಬಗ್ಗೆ ಮಾಹಿತಿ ಇರುವವರು ಹೇಳಿದ್ದಾರೆ. ಕಂಪೆನಿಯು ನಿಯಮಿತವಾಗಿ ತನ್ನ 3,10,000 ಬ್ಯಾರೆಲ್‌ ದಿನಕ್ಕೆ (ಬಿಪಿಡಿ) ದಕ್ಷಿಣ ಭಾರತದಲ್ಲಿ ಕೊಚ್ಚಿ ರಿಫೈನರಿ ರಷ್ಯಾದ ಯುರಲ್ಸ್ ಅನ್ನು ಖರೀದಿಸುತ್ತದೆ.

ಹೆಲೆನಿಕ್ ಪೆಟ್ರೋಲಿಯಂ
ಗ್ರೀಸ್‌ನ ಅತಿದೊಡ್ಡ ತೈಲ ಸಂಸ್ಕರಣಾಗಾರವು ಅದರ ಬಳಕೆಯ ಸುಮಾರು ಶೇ 15ರಷ್ಟಕ್ಕೆ ರಷ್ಯಾದ ಕಚ್ಚಾ ತೈಲವನ್ನು ಅವಲಂಬಿಸಿದೆ. ಕಂಪೆನಿಯು ಈ ತಿಂಗಳ ಆರಂಭದಲ್ಲಿ ಸೌದಿ ಅರೇಬಿಯಾದಿಂದ ಹೆಚ್ಚುವರಿ ಸರಬರಾಜು ಪಡೆದುಕೊಂಡಿದೆ.

ಹಿಂದೂಸ್ತಾನ್ ಪೆಟ್ರೋಲಿಯಂ
ವ್ಯಾಪಾರ ಮೂಲಗಳ ಪ್ರಕಾರ, ಕಳೆದ ವಾರ ಭಾರತದ ಈ ಸರ್ಕಾರಿ ಸಂಸ್ಕರಣಾಗಾರವು ಮೇ ತಿಂಗಳ ಲೋಡಿಂಗ್‌ಗಾಗಿ 2 ಮಿಲಿಯನ್ ಬ್ಯಾರೆಲ್ ರಷ್ಯಾದ ಯುರಲ್ಸ್ ಅನ್ನು ಖರೀದಿಸಿದೆ.

ಭಾರತೀಯ ತೈಲ ನಿಗಮ (ಇಂಡಿಯನ್ ಆಯಿಲ್ ಕಾರ್ಪೊರೇಷನ್)
ಫೆಬ್ರವರಿ 24ರಿಂದ ಐಒಸಿ 6 ಮಿಲಿಯನ್ ಬ್ಯಾರೆಲ್‌ಗಳ ಯುರಲ್ಸ್ ಅನ್ನು ಖರೀದಿಸಿದೆ ಮತ್ತು 2022ರಲ್ಲಿ 15 ಮಿಲಿಯನ್ ಬ್ಯಾರೆಲ್ ರಷ್ಯಾದ ಕಚ್ಚಾ ತೈಲಕ್ಕೆ ರೋಸ್‌ನೆಫ್ಟ್‌ನೊಂದಿಗೆ ಸರಬರಾಜು ಒಪ್ಪಂದವನ್ನು ಹೊಂದಿದೆ. ತನ್ನ ಚೆನ್ನೈ ಪೆಟ್ರೋಲಿಯಂ ಅಂಗಸಂಸ್ಥೆಯ ಪರವಾಗಿ ಕಚ್ಚಾ ತೈಲವನ್ನು ಖರೀದಿಸುವ ಈ ರಿಫೈನರ್, ವ್ಯಾಪಾರ ಮೂಲಗಳ ಪ್ರಕಾರ, ಯುರಲ್ಸ್ ಸೇರಿದಂತೆ ಹಲವಾರು ಹೆಚ್ಚಿನ ಸಲ್ಫರ್ ಕಚ್ಚಾ ಶ್ರೇಣಿಗಳನ್ನು ತನ್ನ ಇತ್ತೀಚಿನ ಟೆಂಡರ್‌ನಿಂದ ಹೊರಗಿಟ್ಟಿದೆ.

ISAB (ಇಸಾಬ್)
ಲುಕೋಯಿಲ್-ನಿಯಂತ್ರಿತ ಸ್ವಿಸ್ ಮೂಲದ ಲಿಟಾಸ್ಕೊ SA ಒಡೆತನದ ಇಟಲಿಯ ಅತಿದೊಡ್ಡ ಸಂಸ್ಕರಣಾಗಾರವು ರಷ್ಯನ್ ಮತ್ತು ರಷ್ಯನ್ ಅಲ್ಲದ ಕಚ್ಚಾ ತೈಲಗಳನ್ನು ಸಂಸ್ಕರಿಸುತ್ತದೆ.

ಲೆಯುನಾ
ಟೋಟಲ್ ಎನರ್ಜಿಸ್‌ನ ಬಹುಪಾಲು ಒಡೆತನದ ಪೂರ್ವ ಜರ್ಮನಿಯಲ್ಲಿರುವ ಲ್ಯಾಂಡ್-ಲಾಕ್ಡ್ ಲ್ಯೂನಾ ಸಂಸ್ಕರಣಾಗಾರಕ್ಕೆ ಡ್ರುಜ್ಬಾ ಪೈಪ್‌ಲೈನ್‌ನಿಂದ ರಷ್ಯಾದ ಕಚ್ಚಾ ತೈಲವನ್ನು ಸಹ ನೀಡಲಾಗುತ್ತದೆ.

ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ (MRPL)
ಸರ್ಕಾರಿ ಸ್ವಾಮ್ಯದ ಈ ಭಾರತೀಯ ಸಂಸ್ಕರಣಾಗಾರವು ರಷ್ಯಾದಿಂದ ಟೆಂಡರ್ ಮೂಲಕ ಮೇ ತಿಂಗಳ ಲೋಡ್ ಮಾಡಲು 1 ಮಿಲಿಯನ್ ಬ್ಯಾರೆಲ್‌ಗಳ ರಷ್ಯಾದ ಯುರಲ್ಸ್ ಕಚ್ಚಾವನ್ನು ಖರೀದಿಸಿದ್ದು, ಇದು ರಿಯಾಯಿತಿಯಿಂದ ಕೂಡಿದ ಅಪರೂಪದ ಖರೀದಿಯಾಗಿದೆ.

MIRO (ಮಿರೊ)
ಜರ್ಮನಿಯ ಅತಿದೊಡ್ಡ ಸಂಸ್ಕರಣಾಗಾರ ಮಿರೊದಲ್ಲಿ ರಷ್ಯಾದ ಕಚ್ಚಾ ತೈಲವು ಸುಮಾರು ಶೇ 14ರಷ್ಟು ಪ್ರಮಾಣವನ್ನು ಮುಂದುವರಿಸಿದ್ದು, ಇದು ಶೇ 24ರಷ್ಟು ರೋಸ್ನೆಫ್ಟ್ ಒಡೆತನದಲ್ಲಿದೆ.

MOL
ಕ್ರೊವೇಷಿಯಾ, ಹಂಗೇರಿ ಮತ್ತು ಸ್ಲೋವಾಕಿಯಾದಲ್ಲಿ ಮೂರು ಸಂಸ್ಕರಣಾಗಾರಗಳನ್ನು ನಿರ್ವಹಿಸುವ ಹಂಗೇರಿಯನ್ ತೈಲ ಗುಂಪು, ಡ್ರುಜ್ಬಾ ಪೈಪ್‌ಲೈನ್ ಮೂಲಕ ರಷ್ಯಾದ ಕಚ್ಚಾ ತೈಲವನ್ನು ಮತ್ತು ಸಂಸ್ಕರಿಸಿದ ಉತ್ಪನ್ನಗಳನ್ನು ಖರೀದಿಸುವುದನ್ನು ಮುಂದುವರಿಸಿದೆ ಎಂದು ಕಂಪೆನಿಯ ಮೂಲವು ರಾಯಿಟರ್ಸ್‌ಗೆ ತಿಳಿಸಿದೆ. ರಷ್ಯಾದ ತೈಲ ಮತ್ತು ಅನಿಲದ ಮೇಲಿನ ನಿರ್ಬಂಧಗಳನ್ನು ಹಂಗೇರಿ ವಿರೋಧಿಸುತ್ತದೆ.

ನಯರಾ ಎನರ್ಜಿ
ರಾಸ್ನೆಫ್ಟ್​ನ ಭಾಗಶಃ ಮಾಲೀಕತ್ವದ ಭಾರತೀಯ ಖಾಸಗಿ ಸಂಸ್ಕರಣಾಗಾರವಾದ ಇದು ಒಂದು ವರ್ಷದ ನಂತರ ರಷ್ಯಾದ ತೈಲವನ್ನು ಖರೀದಿಸಿದ್ದು, ವ್ಯಾಪಾರಿ ಟ್ರಾಫಿಗುರಾದಿಂದ ಸುಮಾರು 1.8 ಮಿಲಿಯನ್ ಬ್ಯಾರೆಲ್ ಯುರಲ್ಸ್ ಅನ್ನು ಖರೀದಿಸಿದೆ.

ನೆಫ್ಟೋಚಿಮ್ ಬರ್ಗಾಸ್
ರಷ್ಯಾದ ಲುಕೋಯಿಲ್ ಒಡೆತನದ ಬಲ್ಗೇರಿಯನ್ ಸಂಸ್ಕರಣಾಗಾರ ಮತ್ತು ರಷ್ಯಾದ ಕಚ್ಚಾ ತೈಲವು ಅದರ ಬಳಕೆಯ ಸುಮಾರು ಶೇ 60ರಷ್ಟನ್ನು ಹೊಂದಿದ್ದು, ರಷ್ಯಾದ ಕಚ್ಚಾ ತೈಲವನ್ನು ಸಂಸ್ಕರಿಸುವುದನ್ನು ಮುಂದುವರಿಸಿದೆ.

PCK SCHWEDT
ಜರ್ಮನಿಯ PCK Schwedt ಸಂಸ್ಕರಣಾಗಾರ ಶೇ 54ರಷ್ಟು ರೋಸ್ನೆಫ್ಟ್ ಒಡೆತನದಲ್ಲಿದ್ದು, ಡ್ರುಜ್ಬಾ ಪೈಪ್​ಲೈನ್ ​​ಮೂಲಕ ಕಚ್ಚಾ ತೈಲವನ್ನು ಪಡೆಯುತ್ತದೆ.

ಪೆರ್ಟಮಿನಾ
ಇಂಡೋನೇಷ್ಯಾದ ಸರ್ಕಾರಿ ಇಂಧನ ಸಂಸ್ಥೆ PT ಪರ್ಟಮಿನಾ ಹೊಸದಾಗಿ ನವೀಕರಿಸಿದ ಸಂಸ್ಕರಣಾಗಾರಕ್ಕೆ ತೈಲವನ್ನು ಹುಡುಕುತ್ತಿರುವ ಕಾರಣ ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸಲು ಪರಿಗಣಿಸುತ್ತಿದೆ.

ಪಿಕೆಎನ್ ಓರ್ಲೆನ್
ಪೋಲೆಂಡ್‌ನ ಅತಿದೊಡ್ಡ ಸಂಸ್ಕರಣಾಗಾರವು ರಷ್ಯಾದ ಕಚ್ಚಾ ತೈಲವನ್ನು ಸ್ಪಾಟ್ ಮಾರುಕಟ್ಟೆಯಲ್ಲಿ ಖರೀದಿಸುವುದನ್ನು ನಿಲ್ಲಿಸಿದ್ದು, ಉತ್ತರ ಸಮುದ್ರದ ತೈಲಕ್ಕೆ ಬದಲಾಯಿಸಿದೆ. ಆದರೆ ಈ ವರ್ಷದ ಅಂತ್ಯದ ವೇಳೆಗೆ ಅಥವಾ ನಂತರ ಮುಕ್ತಾಯಗೊಳ್ಳುವ ಹಿಂದೆ ಸಹಿ ಮಾಡಿದ ಒಪ್ಪಂದಗಳ ಅಡಿಯಲ್ಲಿ ಯುರಲ್ಸ್ ಅನ್ನು ಇನ್ನೂ ಖರೀದಿಸುತ್ತಿದೆ. ಲಿಥುವೇನಿಯಾ, ಪೋಲೆಂಡ್ ಮತ್ತು ಜೆಕ್ ರಿಪಬ್ಲಿಕ್‌ನಲ್ಲಿ ಸಂಸ್ಕರಣಾಗಾರಗಳನ್ನು ನಿರ್ವಹಿಸುವ ಕಂಪೆನಿಯು ರಷ್ಯಾದ ತೈಲಕ್ಕೆ ಪಾವತಿಸುವ ರಿಯಾಯಿತಿಗೆ ಮಾರ್ಚ್‌ನಲ್ಲಿ ಸಂಸ್ಕರಣೆ ಹೆಚ್ಚಳದಿಂದ ಲಾಭವನ್ನು ಕಂಡಿತು.

ರೋಟರ್​ಡ್ಯಾಮ್ ಸಂಸ್ಕರಣಾಗಾರ
ಎಕ್ಸಾನ್ ಮೊಬಿಲ್ ರೋಟರ್‌ಡ್ಯಾಮ್‌ನಲ್ಲಿರುವ ಡಚ್ ರಿಫೈನರಿ ರಷ್ಯಾದ ಕಚ್ಚಾ ತೈಲವನ್ನು ಬಳಸುತ್ತಿದೆಯೇ ಎಂಬುದರ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದೆ.

ಸಿನೋಪೆಕ್
ಏಷ್ಯಾದ ಅತಿದೊಡ್ಡ ರಿಫೈನರ್‌ ಆಗಿರುವ ಚೀನಾದ ಸರ್ಕಾರಿ-ಸ್ವಾಮ್ಯದ ಸಿನೊಪೆಕ್ ಈ ಹಿಂದೆ ಸಹಿ ಮಾಡಿದ ದೀರ್ಘಾವಧಿ ಒಪ್ಪಂದಗಳ ಅಡಿಯಲ್ಲಿ ರಷ್ಯಾದ ಕಚ್ಚಾ ತೈಲ ಖರೀದಿಸುವುದನ್ನು ಮುಂದುವರಿಸುತ್ತಿದೆ. ಆದರೆ ಹೊಸ ಸ್ಪಾಟ್ ಡೀಲ್‌ಗಳನ್ನು ಸ್ಪಷ್ಟಪಡಿಸುತ್ತಿದೆ.

ಝೀಲ್ಯಾಂಡ್ ಸಂಸ್ಕರಣಾಗಾರ
ಈ ಡಚ್​ ರಿಫೈನರಿಯ ಶೇ 45ರಷ್ಟು ಒಡೆತನ ಲುಕೋಯಿಲ್ ಬಳಿ ಇದೆ. ಈ ಸಂಸ್ಕರಣಾಗಾರವು ರಷ್ಯಾದ ಕಚ್ಚಾ ತೈಲವನ್ನು ಬಳಸುತ್ತಿದೆಯೇ ಎಂಬ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ.

ಮಾಜಿ ಖರೀದಿದಾರರು
ಬಿಪಿ
ರೋಸ್‌ನೆಫ್ಟ್‌ನಲ್ಲಿನ ತನ್ನ ಪಾಲನ್ನು ಬಿಟ್ಟುಕೊಡುತ್ತಿರುವ ಬ್ರಿಟಿಷ್ ತೈಲ ಪ್ರಮುಖ ಕಂಪೆನಿ, “ಸರಬರಾಜಿನ ಭದ್ರತೆ ಖಚಿತಪಡಿಸಿಕೊಳ್ಳಲು ಅತ್ಯಗತ್ಯ” ಪ್ರಮಾಣವನ್ನು ಹೊರತುಪಡಿಸಿ ರಷ್ಯಾದ ಬಂದರುಗಳಲ್ಲಿ ಲೋಡ್ ಮಾಡಲು ರಷ್ಯಾದ ಘಟಕಗಳೊಂದಿಗೆ ಹೊಸ ಒಪ್ಪಂದಗಳನ್ನು ಮಾಡಿಕೊಳ್ಳುವುದಿಲ್ಲ.

ENEOS
ಜಪಾನ್‌ನ ಅತಿದೊಡ್ಡ ಸಂಸ್ಕರಣಾಗಾರವು ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸುವುದನ್ನು ನಿಲ್ಲಿಸಿದ್ದು, ಆದರೆ ಹಿಂದಿನ ಒಪ್ಪಂದಗಳ ಅಡಿಯಲ್ಲಿ ಸಹಿ ಮಾಡಿದ ಕೆಲವು ಸರಕುಗಳು ಸುಮಾರು ಏಪ್ರಿಲ್‌ವರೆಗೆ ಜಪಾನ್‌ಗೆ ರವಾನೆ ಆಗುತ್ತವೆ. ಕಂಪೆನಿಯು ಮಧ್ಯಪ್ರಾಚ್ಯದಿಂದ ಪರ್ಯಾಯ ಸರಬರಾಜುಗಳನ್ನು ಪಡೆಯಲು ಯೋಜಿಸಿದೆ.

ENI
ಈ ಎನರ್ಜಿ ಗುಂಪು ಶೇ 30.3ರಷ್ಟು ಇಟಾಲಿಯನ್ ಸರ್ಕಾರದ ಒಡೆತನದಲ್ಲಿದ್ದು, ರಷ್ಯಾದ ತೈಲದ ಖರೀದಿಯನ್ನು ಸ್ಥಗಿತಗೊಳಿಸುತ್ತಿದೆ. ಎನಿ ಮತ್ತು ರೋಸ್​ನೆಫ್ಟ್ ಪಾಲನ್ನು ಹೊಂದಿರುವ ಜರ್ಮನಿಯ ಬೇಯರ್ನಾಯ್ಲ್ ಸಂಸ್ಕರಣಾಗಾರದಲ್ಲಿ ರಷ್ಯಾದ ಕಚ್ಚಾ ತೈಲವನ್ನು ಬಳಸಲಾಗುವುದಿಲ್ಲ.

EQUINOR
ನಾರ್ವೆಯ ಬಹುಪಾಲು ಸರ್ಕಾರಿ ಸ್ವಾಮ್ಯದ ಇಂಧನ ಸಂಸ್ಥೆಯು ರಷ್ಯಾದ ತೈಲದ ವ್ಯಾಪಾರವನ್ನು ನಿಲ್ಲಿಸಿವೆ. ಏಕೆಂದರೆ ಅದು ದೇಶದಲ್ಲಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ.

GALP
ಪೋರ್ಚುಗೀಸ್ ತೈಲ ಮತ್ತು ಅನಿಲ ಕಂಪೆನಿಯು ರಷ್ಯಾ ಅಥವಾ ರಷ್ಯಾದ ಕಂಪೆನಿಗಳಿಂದ ಪೆಟ್ರೋಲಿಯಂ ಉತ್ಪನ್ನಗಳ ಎಲ್ಲ ಹೊಸ ಖರೀದಿಗಳನ್ನು ಸ್ಥಗಿತಗೊಳಿಸಿದೆ.

ಗ್ಲೆನ್ಕೋರ್
ರೋಸ್​ನೆಫ್ಟ್‌ನಲ್ಲಿ ಶೇ 0.57ರಷ್ಟು ಪಾಲನ್ನು ಹೊಂದಿರುವ ಜಾಗತಿಕ ಗಣಿಗಾರಿಕೆ ಮತ್ತು ವ್ಯಾಪಾರ ಸಂಸ್ಥೆಯು ಈ ಹಿಂದೆ ಸಹಿ ಮಾಡಿದ ಒಪ್ಪಂದಗಳ ಅಡಿಯಲ್ಲಿ ತನ್ನ ಬಾಧ್ಯತೆಗಳನ್ನು ಗೌರವಿಸುವುದನ್ನು ಮುಂದುವರಿಸುವುದಾಗಿ ಹೇಳಿದೆ. ಆದರೆ “ಸಂಬಂಧಿತ ಸರ್ಕಾರದ ಅಧಿಕಾರಿಗಳು ನಿರ್ದೇಶಿಸದ ಹೊರತು ರಷ್ಯಾ ಮೂಲದ ಸರಕುಗಳಿಗೆ ಸಂಬಂಧಿಸಿದಂತೆ ಯಾವುದೇ ಹೊಸ ವ್ಯಾಪಾರ- ವ್ಯವಹಾರಕ್ಕೆ ಒಪ್ಪಂದ ಮಾಡಿಕೊಳ್ಳುವುದಿಲ್ಲ.”

NESTE
ಫಿನ್ನಿಷ್ ಸಂಸ್ಕರಣಾಗಾರವು ಉಕ್ರೇನ್ ಯುದ್ಧದ ಆರಂಭದಿಂದಲೂ ರಷ್ಯಾದ ಕಚ್ಚಾ ತೈಲವನ್ನು ಸ್ಪಾಟ್ ಮಾರುಕಟ್ಟೆಯಲ್ಲಿ ಖರೀದಿಸಿಲ್ಲ ಮತ್ತು ಅಸ್ತಿತ್ವದಲ್ಲಿರುವ ದೀರ್ಘಾವಧಿ ಪೂರೈಕೆ ಒಪ್ಪಂದವು ಜುಲೈನಲ್ಲಿ ಕೊನೆಗೊಂಡಾಗ ಹೊಸ ಒಪ್ಪಂದಗಳಿಗೆ ಸಹಿ ಹಾಕಲು ಯೋಜಿಸುತ್ತಿಲ್ಲ. ಏಪ್ರಿಲ್ ಆರಂಭದಿಂದ ರಷ್ಯಾದ ಕಚ್ಚಾ ತೈಲದ ಸುಮಾರು ಶೇ 85ರಷ್ಟನ್ನು ಇತರ ಕಚ್ಚಾ ತೈಲಗಳೊಂದಿಗೆ ಬದಲಿಸಿದೆ.

ಪ್ರೀಮ್
ಸೌದಿಯ ಬಿಲಿಯನೇರ್ ಮೊಹಮ್ಮದ್ ಹುಸೇನ್ ಅಲ್-ಅಮೌದಿ ಒಡೆತನದ ಸ್ವೀಡನ್‌ನ ಅತಿದೊಡ್ಡ ರಿಫೈನರ್ ರಷ್ಯಾದ ಕಚ್ಚಾ ತೈಲದ ಹೊಸ ಆರ್ಡರ್‌ಗಳನ್ನು “ನಿಲ್ಲಿಸಿದ್ದು”, ಇದು ಅದರ ಖರೀದಿಗಳಲ್ಲಿ ಸುಮಾರು ಶೇ 7ರಷ್ಟು ಭಾಗವನ್ನು ಹೊಂದಿದ್ದು, ಅವುಗಳನ್ನು ಉತ್ತರ ಸಮುದ್ರದ ಬ್ಯಾರೆಲ್‌ಗಳೊಂದಿಗೆ ಬದಲಾಯಿಸಿದೆ.

REPSOL
ಸ್ಪಾಟ್ ಮಾರುಕಟ್ಟೆಯಲ್ಲಿ ರಷ್ಯಾದ ಕಚ್ಚಾ ತೈಲವನ್ನು ಖರೀದಿಸುವುದನ್ನು ಸ್ಪ್ಯಾನಿಷ್ ಕಂಪೆನಿ ನಿಲ್ಲಿಸಿದೆ.

ಶೆಲ್
ವಿಶ್ವದ ಅತಿದೊಡ್ಡ ಪೆಟ್ರೋಲಿಯಂ ವ್ಯಾಪಾರಿ ಆದ ಶೆಲ್ ರಷ್ಯಾದ ಕಚ್ಚಾ ತೈಲವನ್ನು ಖರೀದಿಸುವುದನ್ನು ನಿಲ್ಲಿಸಿದೆ ಮತ್ತು ರಷ್ಯಾದ ಎಲ್ಲ ಹೈಡ್ರೋಕಾರ್ಬನ್‌ಗಳಲ್ಲಿ ತನ್ನ ಪಾಲ್ಗೊಳ್ಳುವಿಕೆಯನ್ನು ಹಂತಹಂತವಾಗಿ ತೆಗೆದುಹಾಕುತ್ತದೆ.

ಟೋಟಲ್ ಎನರ್ಜಿ
ಫ್ರೆಂಚ್ ತೈಲ ಪ್ರಮುಖ ಕಂಪೆನಿ ಯಾವುದೇ ಹೊಸ ಒಪ್ಪಂದಗಳಿಗೆ ಸಹಿ ಮಾಡುವುದಿಲ್ಲ. ಈ ವರ್ಷದ ಅಂತ್ಯದ ವೇಳೆಗೆ ರಷ್ಯಾದ ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಖರೀದಿಸುವುದನ್ನು ನಿಲ್ಲಿಸುವುದಾಗಿ ಭರವಸೆ ನೀಡಿದೆ.

VARO ಎನರ್ಜಿ
ಜರ್ಮನಿಯ ಬೇಯರ್‌ನಾಯ್ಲ್ ಸಂಸ್ಕರಣಾಗಾರದಲ್ಲಿ ಶೇ 51.4ರಷ್ಟು ಮಾಲೀಕತ್ವ ಹೊಂದಿರುವ ಸ್ವಿಸ್ ರಿಫೈನರ್ ರಷ್ಯಾದ ಕಚ್ಚಾ ತೈಲವನ್ನು ಖರೀದಿಸಲು ಹೊಸ ಒಪ್ಪಂದಗಳಿಗೆ ಸಂಪರ್ಕಿಸಲು ಯೋಜಿಸಿಲ್ಲ ಎಂದು ಹೇಳಿದೆ.

ಇದನ್ನೂ ಓದಿ: ರಿಯಾಯಿತಿ ಬೆಲೆಯಲ್ಲಿ ರಷ್ಯಾ ತೈಲ ಮಾರಾಟ ಮಾಡಲು ಕಾರಣವೇನು?