Sensex Stocks: ಷೇರು ಮಾರುಕಟ್ಟೆ ಸೂಚ್ಯಂಕಗಳಲ್ಲಿ ಭರ್ಜರಿ ಏರಿಕೆ; ಐಷರ್ ಮೋಟಾರ್ಸ್ ಷೇರು 115 ರೂಪಾಯಿ ಗಳಿಕೆ

| Updated By: Srinivas Mata

Updated on: Apr 21, 2022 | 5:02 PM

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಏಪ್ರಿಲ್ 21ನೇ ತಾರೀಕಿನ ಗುರುವಾರದಂದು ಭರ್ಜರಿ ಏರಿಕೆ ಕಂಡಿವೆ. ಪ್ರಮುಖವಾಗಿ ಏರಿಕೆ, ಇಳಿಕೆ ದಾಖಲಿಸಿದ ಷೇರುಗಳ ವಿವರ ಇಲ್ಲಿದೆ.

Sensex Stocks: ಷೇರು ಮಾರುಕಟ್ಟೆ ಸೂಚ್ಯಂಕಗಳಲ್ಲಿ ಭರ್ಜರಿ ಏರಿಕೆ; ಐಷರ್ ಮೋಟಾರ್ಸ್ ಷೇರು 115 ರೂಪಾಯಿ ಗಳಿಕೆ
ಸಾಂದರ್ಭಿಕ ಚಿತ್ರ
Follow us on

ಭಾರತೀಯ ಷೇರು ಮಾರುಕಟ್ಟೆ (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಏಪ್ರಿಲ್ 21ನೇ ತಾರೀಕಿನ ಗುರುವಾರದಂದು ಗಳಿಕೆ ಕಂಡಿವೆ. ಎಲ್ಲ ವಲಯಗಳಲ್ಲೂ ಖರೀದಿ ಕಂಡುಬಂದಿದೆ. ಗುರುವಾರದ 874.18 ಪಾಯಿಂಟ್ಸ್ ಅಥವಾ ಶೇ 1.53ರಷ್ಟು ಮೇಲೇರಿ 57,911.68 ಪಾಯಿಂಟ್ಸ್​ನಲ್ಲಿ ದಿನಾಂತ್ಯಕ್ಕೆ ವಹಿವಾಟು ಮುಗಿಸಿತು. ಇನ್ನು ನಿಫ್ಟಿ-50 ಸೂಚ್ಯಂಕವು 256.10 ಪಾಯಿಂಟ್ಸ್ ಅಥವಾ ಶೇ 1.49ರಷ್ಟು ಗಳಿಕೆ ಕಂಡು, 17,392.60 ಪಾಯಿಂಟ್ಸ್​ನಲ್ಲಿ ವ್ಯವಹಾರ ಮುಗಿಸಿತು. ಇಂದಿನ ವಹಿವಾಟಿನಲ್ಲಿ 2252 ಕಂಪೆನಿಯ ಷೇರುಗಳು ಏರಿಕೆಯನ್ನು ದಾಖಲಿಸಿದರೆ, 1089 ಕಂಪೆನಿಯ ಷೇರುಗಳು ಕುಸಿತ ಕಂಡವು ಮತ್ತು 96 ಕಂಪೆನಿಯ ಷೇರುಗಳ ದರದಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ.

ಎಲ್ಲ ವಲಯದ ಷೇರುಗಳು ಗಳಿಕೆಯಲ್ಲೇ ಮುಕ್ತಾಯ ಕಂಡವು. ಬ್ಯಾಂಕ್, ಫಾರ್ಮಾ, ವಾಹನ, ಮಾಹಿತಿ ತಂತ್ರಜ್ಞಾನ, ವಿದ್ಯುತ್, ರಿಯಾಲ್ಟಿ ಮತ್ತು ಕ್ಯಾಪಿಟಲ್ ಗೂಡ್ಸ್ ಸೂಚ್ಯಂಕಗಳು ಶೇ 1ರಿಂದ 2ರಷ್ಟು ಹೆಚ್ಚಳ ದಾಖಲಿಸಿದವು. ಬಿಎಸ್​ಇ ಮಿಡ್​ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ತಲಾ ಶೇ 1ರಷ್ಟು ಹೆಚ್ಚಳ ಕಂಡವು.

ನಿಫ್ಟಿಯಲ್ಲಿ ಏರಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ
ಐಷರ್ ಮೋಟಾರ್ಸ್ ಶೇ 4.52
ಕೋಲ್ ಇಂಡಿಯಾ ಶೇ 3.92
ಮಹೀಂದ್ರಾ ಅಂಡ್ ಮಹೀಂದ್ರಾ ಶೇ 3.38
ಮಾರುತಿ ಸುಜುಕಿ ಶೇ 2.77
ಅದಾನಿ ಪೋರ್ಟ್ಸ್ ಶೇ 2.76

ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ
ಸಿಪ್ಲಾ ಶೇ -1.33
ಟಾಟಾ ಸ್ಟೀಲ್ -0.92
ಹಿಂಡಾಲ್ಕೋ ಶೇ -0.87
ಒಎನ್​ಜಿಸಿ ಶೇ -0.77
ಜೆಎಸ್​ಡಬ್ಲ್ಯು ಸ್ಟೀಲ್ ಶೇ -0.63

ಇದನ್ನೂ ಓದಿ: Stock Market: ಷೇರು ಮಾರುಕಟ್ಟೆ ಬೆಳವಣಿಗೆಯಿಂದ ಜನ ಸಾಮಾನ್ಯರಿಗೇನು ಲಾಭ?