LIC Jeevan Umang Policy: ಎಲ್​ಐಸಿ ಜೀವನ್ ಉಮಂಗ್ ಪಾಲಿಸಿಯಿಂದ ಎಷ್ಟೆಲ್ಲ ಅನುಕೂಲಗಳಿವೆ ಗೊತ್ತೆ?

| Updated By: Srinivas Mata

Updated on: Jun 11, 2022 | 6:19 PM

ಎಲ್​ಐಸಿ ಉಮಂಗ್ ಪಾಲಿಸಿ ಬಗ್ಗೆ ನಿಮಗೆ ಗೊತ್ತಿರಬೇಕಾದ ಮಾಹಿತಿಗಳು ಇಲ್ಲಿವೆ. ಇದರಿಂದ ಎರಡು ರೀತಿಯ ಅನುಕೂಲಗಳಿದ್ದು ಅದೇನು ಎಂಬುದು ತಿಳಿಯಿರಿ.

LIC Jeevan Umang Policy: ಎಲ್​ಐಸಿ ಜೀವನ್ ಉಮಂಗ್ ಪಾಲಿಸಿಯಿಂದ ಎಷ್ಟೆಲ್ಲ ಅನುಕೂಲಗಳಿವೆ ಗೊತ್ತೆ?
ಸಾಂದರ್ಭಿಕ ಚಿತ್ರ
Follow us on

ಇನ್ಷೂರೆನ್ಸ್ ಪಾಲಿಸಿಗಳು ಅಂದ ಕೂಡಲೇ ಭಾರತೀಯರಿಗೆ ನೆನಪಾಗುವುದು ಎಲ್​ಐಸಿ (LIC)- ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ. ನಿರ್ದಿಷ್ಟ ಗುಂಪಿನ ಜನರಿಗೆ ನಿರ್ದಿಷ್ಟ ಬಗೆಯ ಪ್ಲಾನ್​ಗಳು ಎಲ್​ಐಸಿಯಲ್ಲಿ ಇದೆ. ಎಲ್ಲ ವಯಸ್ಸಿನ ಮತ್ತು ಎಲ್ಲ ಕೆಟಗರಿಯ ಜನರಿಗಾಗಿ ಎಲ್​ಐಸಿಯಿಂದ ಪ್ಲಾನ್​ಗಳಿವೆ. ಅದಕ್ಕೆ ಸರ್ಕಾರದಿಂದ ಬೆಂಬಲ ಸಹ ಇದೆ. ಬ್ಯಾಂಕ್​ನಲ್ಲಿ ಎಫ್​ಡಿ ಇದೆ, ಪೋಸ್ಟ್​ ಆಫೀಸ್​ನಲ್ಲಿ ಉಳಿತಾಯ ಇದೆ. ಅದರ ಮೇಲೆ ಒಂದಿಷ್ಟು ಉಳಿತಾಯ ಮಾಡಬೇಕು, ಅದರಲ್ಲಿ ಅಪಾಯವೂ ಇರಬಾರದು ಎಂದು ಬಯಸುವವರಿಗೆ ಎಲ್​​ಐಸಿ ಪಾಲಿಸಿಗಳು ಅಚ್ಚುಮೆಚ್ಚು. ಏಕೆಂದರೆ ಉಳಿದವುಗಳಿಗೆ ಹೋಲಿಸಿದಲ್ಲಿ ಹೆಚ್ಚಿನ ರಿಟರ್ನ್ ಇವುಗಳಲ್ಲಿ ದೊರೆಯುತ್ತದೆ. ಈ ದಿನ ಉತ್ತಮ ಪಾಲಿಸಿಯೊಂದರ ಬಗ್ಗೆ ತಿಳಿಸಲಾಗುತ್ತಿದೆ.

ಎಲ್​ಐಸಿ ಜೀವನ್ ಉಮಂಗ್ ಪಾಲಿಸಿ: ಏನಿದು?

ಎಲ್​ಐಸಿ ಜೀವನ್ ಉಮಂಗ್ ಪ್ಲಾನ್ ಕುಟುಂಬಕ್ಕೆ ಆದಾಯ ಮತ್ತು ರಕ್ಷಣೆ ಎರಡನ್ನೂ ಒದಗಿಸುತ್ತದೆ. ಪ್ರೀಮಿಯಂ ಪಾವತಿ ಕೊನೆಯಿಂದ ವಾರ್ಷಿಕ ಉಳಿಕೆ ಅನುಕೂಲವನ್ನು ಮೆಚ್ಯೂರಿಟಿ ತನಕ ಒದಗಿಸುತ್ತದೆ. ಇಡಿಗಂಟನ್ನು ಮೆಚ್ಯೂರಿಟಿ ಸಮಯದಲ್ಲಿ ಅಥವಾ ಪಾಲಿಸಿದಾರರು ಪಾಲಿಸಿ ಅವಧಿಯಲ್ಲಿ ಮೃತಪಟ್ಟಾಗ ನೀಡಲಾಗುತ್ತದೆ. ಕಂಪೆನಿಯ ಪ್ರಕಾರ, ಎಲ್​ಐಸಿ ಜೀವನ್ ಉಮಂಗ್ ನಾನ್ ಲಿಂಕ್ಡ್, ಪಾರ್ಟಿಸಿಪೇಟಿಂಗ್, ವೈಯಕ್ತಿಕ, ಹೋಲ್​ ಲೈಫ್ ಅಶ್ಯೂರೆನ್ಸ್ ಪ್ಲಾನ್. ಇದು ಕುಟುಂಬಕ್ಕೆ ರಕ್ಷಣೆ ಮತ್ತು ಆದಾಯ ನೀಡುತ್ತದೆ.

ದಿನಕ್ಕೆ 45 ರೂ. ಪಾವತಿಸಿ, ಮೆಚ್ಯೂರಿಟಿ ನಂತರ ಪ್ರತಿ ವರ್ಷ 36 ಸಾವಿರ

26ನೇ ವಯಸ್ಸಿನಲ್ಲಿ ಜೀವನ್ ಉಮಂಗ್ ಪಾಲಿಸಿಯನ್ನು 4.5 ಲಕ್ಷ ರೂಪಾಯಿ ಕವರ್​ಗೆ ಮಾಡಿಸಿದಲ್ಲಿ ದಿನಕ್ಕೆ 45 ರೂಪಾಯಿಯಂತೆ ತಿಂಗಳಿಗೆ 1350 ರೂಪಾಯಿ ಪಾವತಿಸಬೇಕಾಗುತ್ತದೆ. ಇದರೊಂದಿಗೆ ವರ್ಷಕ್ಕೆ 15,882 ರೂಪಾಯಿ, 30ವರ್ಷಕ್ಕೆ 4,76,460 ಪ್ರೀಮಿಯಂ ಆಗುತ್ತದೆ. ಹೀಗೆ 30 ವರ್ಷ ಸತತವಾಗಿ ಕಟ್ಟಿದ ಮೇಲೆ 31ನೇ ವರ್ಷದಿಂದ ಹೂಡಿಕೆ ಮೇಲೆ ವರ್ಷಕ್ಕೆ 36 ಸಾವಿರ ರೂಪಾಯಿ ಪಾವತಿಸಲು ಆರಂಭಿಸಲಾಗುತ್ತದೆ. ಹೀಗೆ 100 ವರ್ಷದ ತನಕ ನೀಡಲಾಗುತ್ತದೆ. ಆ ಮೊತ್ತ 36 ಲಕ್ಷ ಆಗುತ್ತದೆ.

ಎಲ್​ಐಸಿ ಜೀವನ್ ಉಮಂಗ್ ಪಾಲಿಸಿ ಅನುಕೂಲಗಳು

ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಸಿಗುತ್ತದೆ. ಎಲ್​ಐಸಿ ಜೀವನ್ ಉಮಂಗ್ ಪಾಲಿಸಿ ಅಡಿಯಲ್ಲಿ ಬೇಸಿಕ್ ಸಮ್ ಅಶ್ಯೂರ್ಡ್ 2 ಲಕ್ಷ ರೂಪಾಯಿ. ಒಂದು ವೇಳೆ ಪಾಲಿಸಿದಾರರು 100 ವರ್ಷಕ್ಕೆ ಮುಂಚಿತವಾಗಿ ಮೃತಪಟ್ಟಲ್ಲಿ ನಾಮಿನಿಗೆ ಇಡಿಗಂಟು ಪಾವತಿಸಲಾಗುತ್ತದೆ. ಒಂದು ವೇಳೆ ಪಾಲಿಸಿದಾರರು 100 ವರ್ಷದ ತನಕ ಬದುಕಿದಲ್ಲೊ ಪ್ರೀಮಿಯಂ ಪಾವತಿ ಅವಧಿಯ ಕೊನೆಗೆ ಸರ್ವೈವಲ್ ಬೆನಿಫಿಟ್ ಅಂತ ಮೂಲ ಸಮ್ ಅಶ್ಯೂರ್ಡ್​ನ ಶೇ 8ರಷ್ಟನ್ನು ಪ್ರತಿ ವರ್ಷ ಪಾವತಿಸಲಾಗುತ್ತದೆ. ಜೀವನ್ ಉಮಂಗ್ ಅನ್ನು 15, 20, 25 ಮತ್ತು 30 ವರ್ಷಗಳು ಹೀಗೆ ನಾಲ್ಕು ಅವಧಿಗೆ ತೆಗೆದುಕೊಳ್ಳಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: LIC Jeevan Amar: ಎಲ್​ಐಸಿಯ ಜೀವನ್ ಅಮರ್ ಪಾಲಿಸಿ ಇಷ್ವವಾಗದಿದ್ದಲ್ಲಿ 15 ದಿನದಲ್ಲೇ ನಿಮ್ಮ ಹಣ ವಾಪಸ್