ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 12ನೇ ಕಂತು ಯಾವಾಗ ಸಿಗಲಿದೆ ಅಂತ ಗೊತ್ತಾ? ಇಲ್ಲಿದೆ ಮಾಹಿತಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 16, 2022 | 6:00 PM

12 ನೇ ಕಂತಿನ ಸ್ಟೇಟಸ್ ಬಗ್ಗೆ ತಿಳಿದುಕೊಳ್ಳಲು ಕಾತುರರಾಗಿದ್ದೀರಾ? ನಿಮಗೆ 12 ನೇ ಕಂತು ಸಿಗುತ್ತೋ ಇಲ್ಲವೋ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಸಿಗೋದಾದರೆ ಯಾವಾಗ ಸಿಗುತ್ತೆ ಅನ್ನೋದನ್ನು ಪರಿಶೀಲಿಸುವ ಮಾರಾಯ್ರೇ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 12ನೇ ಕಂತು ಯಾವಾಗ ಸಿಗಲಿದೆ ಅಂತ ಗೊತ್ತಾ? ಇಲ್ಲಿದೆ ಮಾಹಿತಿ
ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆ
Follow us on

ನವದೆಹಲಿ: ಭಾರತೀಯ ನಾಗರಿಕರ ಆರ್ಥಿಕ ಅಭ್ಯುದಯ (Economic Wellness) ಮತ್ತು ಬೆಂಬಲಕ್ಕಾಗಿ ಹಲವಾರು ಯೋಜನೆಗಳು ದೇಶದಲ್ಲಿ ಜಾರಿಯಲ್ಲಿವೆ. ಇವುಗಳ ನೇರ ಪ್ರಯೋಜನ ದೇಶದ ಕುಗ್ರಾಮ ನಿವಾಸಿಗಳ ಜೊತೆಗೆ ನಗರಗಳಲ್ಲಿ ವಾಸಿಸುವ ಜನರಿಗೂ ಲಭ್ಯವಾಗುತ್ತಿವೆ. ಉಚಿತ ಇಲ್ಲವೇ ಅಗ್ಗದ ರೇಷನ್ ಕಾರ್ಡ್ ನಿಂದ ಹಿಡಿದು ಬಿಪಿಎಲ್ ಕಾರ್ಡ್ (BPL Card) ಹೊಂದಿರುವವರು ಮತ್ತು ಡೀಸೆಲ್ ಮೇಲೆ ಸಬ್ಸಿಡಿ (subsidy) ಪಡೆಯುವ ಕೃಷಿಕರು ಸದರಿ ಪ್ರಯೋಜನಗಳನ್ನು ಪಡೆಯುವ ಫಲಾಭವಿಗಳಾಗಿದ್ದಾರೆ.

ಕೇಂದ್ರ ಸರ್ಕಾರ ರೈತರಿಗೆಂದೇ ಮೀಸಲಾದ ಒಂದು ಯೊಜನೆಯನ್ನು ಜಾರಿಗೊಳಿಸಿದ್ದು ಇದನ್ನು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನಾ ಅಂತ ಕರೆಯಲಾಗುತ್ತದೆ. ಈ ಯೋಜನೆ ಅಡಿ ರೈತರಿಗೆ ಆರ್ಥಿಕವಾಗಿ ನೆರವಾಗಲು ವಾರ್ಷಿಕವಾಗಿ ರೂ. 6,000 ನೀಡಲಾಗುತ್ತದೆ.

ಸದರಿ ಹಣವನ್ನು ತಲಾ ರೂ. 2,000 ಗಳ ಮೂರು ಕಂತುಗಳಲ್ಲಿ ಪ್ರತಿ 4 ತಿಂಗಳಿಗೊಮ್ಮೆ ರೈತರ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಇದುವರೆಗೆ ಸುಮಾರು 10 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ 11 ಕಂತುಗಳನ್ನು ವರ್ಗಾಯಿಸಲಾಗಿದೆ. ಪ್ರಸ್ತುತವಾಗಿ ಯೋಜನೆಯ ಫಲಾನುಭವಿಗಳು 12ನೇ ಕಂತಿಗಾಗಿ ಕಾತುರದಿಂದ ಕಾಯುತ್ತಿದ್ದಾರೆ.

12 ನೇ ಕಂತಿನ ಸ್ಟೇಟಸ್ ಬಗ್ಗೆ ತಿಳಿದುಕೊಳ್ಳಲು ಕಾತುರರಾಗಿದ್ದೀರಾ? ನಿಮಗೆ 12 ನೇ ಕಂತು ಸಿಗುತ್ತೋ ಇಲ್ಲವೋ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಸಿಗೋದಾದರೆ ಯಾವಾಗ ಸಿಗುತ್ತೆ ಅನ್ನೋದನ್ನು ಪರಿಶೀಲಿಸುವ ಮಾರಾಯ್ರೇ.

ಕೇಂದ್ರ ಸರ್ಕಾರವು ಇಷ್ಟರಲ್ಲೇ ನಿಮ್ಮ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸಲಿದೆ. ನಮಗೆ ಲಭ್ಯವಿರುವ ಮಾಹಿತಿ ಪ್ರಕಾರ 12 ನೇ ಕಂತಿನ ಹಣ ಮುಂದಿನ ಎರಡು ವಾರಗಳಲ್ಲಿ ನಿಮ್ಮ ಖಾತೆಗೆ ಜಮೆಯಾಗಲಿದೆ.

ಪಿಎಮ್ ಕಿಸಾನ್ ಸನ್ಮಾನ್ ನಿಧಿ ಯೋಜನೆಯ 12 ನೇ ಕಂತಿನ ಸ್ಟೇಟಸ್ ತಿಳಿದುಕೊಳ್ಳುವುದು ಹೇಗೆ?

-ಅಧಿಕೃತ ವೆಬ್ ಸೈಟ್ pmkisan.gov.in ಲಾಗಿನ್ ಆಗಿ

-‘ಫಾರ್ಮರ್ಸ್ ಕಾರ್ನರ್’ ಎಂದ ಆಪ್ಶನ್ ಮೇಲೆ ಕ್ಲಿಕ್ ಮಾಡಿ

-ನಂತರ ‘ಬೆನೆಫಿಸಿಯರಿ ಸ್ಟೇಟಸ್’ ಮೇಲೆ ಕ್ಲಿಕ್ ಮಾಡಿ

-ನಿಮ್ಮ ಬ್ಯಾಂಕ್ ಅಕೌಂಟ್ ಇಲ್ಲವೇ ಆಧಾರ್ ನಂಬರ್ ಆಪ್ಶನ್​ಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಿ.

-ಸೂಕ್ತವಾದ ನಂಬರನ್ನು ತಪ್ಪಿಲ್ಲದಂತೆ ಭರ್ತಿ ಮಾಡಿ

-‘ಗೆಟ್ ಡಾಟಾ’ ಎಂಬ ಆಪ್ಶನ್ ಮೇಲೆ ಕ್ಲಿಕ್ ಮಾಡಿ

ಇದನ್ನೆಲ್ಲ ಮಾಡಿದ ಮೇಲೆ ವಹಿವಾಟಿನ ಎಲ್ಲ ವಿವರಗಳು ನಿಮಗೆ ಲಭ್ಯವಾಗುತ್ತವೆ.
ಇದಲ್ಲದೆ ನಿಮ್ಮ ಅರ್ಜಿಯ ಸ್ಟೇಟಸ್ ಬಗ್ಗೆ ತಿಳಿಯಲು ಟೋಲ್ ಫ್ರೀ ನಂಬರ್ 155261 ಗೆ ಕರೆ ಮಾಡಿ. ನಿಮ್ಮ ಖಾತೆಗೆ 12 ನೇ ಕಂತು ಯಾವಾಗ ಜಮೆಯಾಗುತ್ತದೆ ಎನ್ನುವುದನ್ನು ಕೂಡ ನೀವು ಕರೆಮಾಡಿ ತಿಳಿದುಕೊಳ್ಳಬಹುದು