ಹಿಂದೂಜಾ ಗ್ರೂಪ್ ಮುಖ್ಯಸ್ಥ ಗೋಪಿಚಂದ್ ಹಿಂದೂಜಾ ನಿಧನ; ಬ್ರಿಟನ್​ನ ಅತ್ಯಂತ ಶ್ರೀಮಂತ ಮನೆತನ ಅವರದ್ದು

G.P. Hinduja, Hinduja Group Chairman, Passes Away at 85: ಹಿಂದೂಜಾ ಗ್ರೂಪ್​ನ ಅಧ್ಯಕ್ಷ ಗೋಪಿಚಂದ್ ಹಿಂದೂಜಾ (85) ಲಂಡನ್​ನಲ್ಲಿ ನಿಧನರಾಗಿದ್ದಾರೆ. ಕೆಲ ವಾರಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬ್ರಿಟನ್‌ನ ಶ್ರೀಮಂತರಲ್ಲಿ ಒಬ್ಬರಾಗಿದ್ದರು. ಅವರ ನಿಧನವು ಹಿಂದೂಜಾ ಗ್ರೂಪ್​ನ 20ಕ್ಕೂ ಹೆಚ್ಚು ಕಂಪನಿಗಳ ವಿಸ್ತಾರವಾದ ವ್ಯಾಪಾರ ಸಾಮ್ರಾಜ್ಯದ ಒಂದು ಯುಗದ ಅಂತ್ಯವನ್ನು ಸೂಚಿಸುತ್ತದೆ. ಹಾಗೆಯೇ, ಮುಂದಿನ ಮುಖ್ಯಸ್ಥರು ಯಾರು ಎಂಬ ಬಗ್ಗೆ ಕುತೂಹಲ ಮೂಡಿಸಿದೆ.

ಹಿಂದೂಜಾ ಗ್ರೂಪ್ ಮುಖ್ಯಸ್ಥ ಗೋಪಿಚಂದ್ ಹಿಂದೂಜಾ ನಿಧನ; ಬ್ರಿಟನ್​ನ ಅತ್ಯಂತ ಶ್ರೀಮಂತ ಮನೆತನ ಅವರದ್ದು
Gp Hinduja
Updated By: Digi Tech Desk

Updated on: Nov 04, 2025 | 6:07 PM

ಲಂಡನ್, ನವೆಂಬರ್ 4: ಹಲವಾರು ಕಂಪನಿಗಳ ಸಮೂಹವಾದ ಹಿಂದೂಜಾ ಗ್ರೂಪ್​ನ ಛೇರ್ಮನ್ ಆಗಿದ್ದ ಗೋಪಿಚಂದ್ ಹಿಂದೂಜಾ (85 ವರ್ಷ) ಇಹಲೋಕ ತ್ಯಜಿಸಿದ್ದಾರೆ. ಕೆಲ ವಾರಗಳಿಂದ ಅವರು ಅನಾರೋಗ್ಯದಿಂದ ಬಳಸುತ್ತಿದ್ದರು. ಪತ್ನಿ ಸುನೀತಾ ಹಾಗು ಮೂವರು ಮಕ್ಕಳನ್ನು ಅವರು ಅಗಲಿದ್ದಾರೆ. ಲಂಡನ್​ನ ನಿವಾಸಿಯಾಗಿದ್ದ ಜಿ.ಪಿ. ಹಿಂದೂಜಾ (Gopichand Hinduja) ಅವರು ಬ್ರಿಟನ್ ದೇಶದ ಅತ್ಯಂತ ಶ್ರೀಮಂತರಲ್ಲಿ ಒಬ್ಬರೆನಿಸಿದ್ದರು. ಮೂರು ವರ್ಷಗಳ ಹಿಂದೆ 2023ರ ಮೇ ತಿಂಗಳಲ್ಲಿ ಅವರ ಹಿರಿಯಣ್ಣ ಶ್ರೀಚಂದ್ ಹಿಂದೂಜಾ ಮೃತಪಟ್ಟಿದ್ದರು.

ಯಾರು ಇವರು ಗೋಪಿಚಂದ್ ಹಿಂದೂಜಾ?

ಹಿಂದೂಜಾ ಗ್ರೂಪ್​ನ ಮೂಲ ಸಂಸ್ಥಾಪಕರಾಗಿದ್ದ ಪರಮಾನಂದ್ ದೀಪ್​ಚಂದ್ ಹಿಂದೂಜಾ ಅವರ ಎರಡನೇ ಮಗ ಗೋಪಿಚಂದ್. ಮೊದಲನೆಯ ಮಗ ಶ್ರೀಚಂದ್. ಪಿ.ಡಿ. ಹಿಂದೂಜಾ (ಪರಮಾನಂದ್) ಅವರು ಸ್ವಾತಂತ್ರ್ಯಪೂರ್ವದ ಭಾರತದ ಭಾಗವಾಗಿದ್ದ ಸಿಂಧ್ ಪ್ರಾಂತ್ಯದ ಮೂಲದವರು. 1914ರಲ್ಲಿ ಇವರು ಬ್ಯುಸಿನೆಸ್ ಆರಂಭಿಸಿದರು. ಮೊದಲಿಗೆ ಬಾಂಬೆ ಮತ್ತು ಶಿಖರ್​ಪುರ್ (ಈಗಿನ ಪಾಕಿಸ್ತಾನದಲ್ಲಿದೆ) ನಗರಗಳಲ್ಲಿ ಇವರ ಬ್ಯುಸಿನೆಸ್ ಇತ್ತು.

1919ರಲ್ಲಿ ಇರಾನ್​ಗೆ ಇವರ ಬ್ಯುಸಿನೆಸ್ ವಿಸ್ತಾರಗೊಂಡಿತು. 1919ರಿಂದ 1979ರವರೆಗೂ ಇರಾನ್ ದೇಶದಲ್ಲೇ ಇವರ ಹೆಡ್​ಕ್ವಾರ್ಟರ್ಸ್ ಇತ್ತು. ನಂತರ ಐರೋಪ್ಯ ಪ್ರದೇಶಕ್ಕೆ ಮುಖ್ಯಕಚೇರಿ ವರ್ಗವಾಯಿತು. ಈಗ ಅದರ ಮುಖ್ಯ ಕಚೇರಿ ಯುಕೆಯಲ್ಲಿದೆ.

ಇದನ್ನೂ ಓದಿ: ಅಮೆರಿಕ, ಸಿಂಗಾಪುರ್ ಮಾದರಿಯಲ್ಲಿ ಭಾರತದಲ್ಲಿ ಶಾಲಾ ಮಕ್ಕಳ ಸುರಕ್ಷತೆಗೆ ಆರ್​ಎಫ್​ಐಡಿ ಟ್ರ್ಯಾಕಿಂಗ್ ಸಿಸ್ಟಂ?

ಪರಮಾನಂದ್ ಹಿಂದೂಜಾ ಅವರು 1971ರಲ್ಲಿ ಮೃತಪಟ್ಟ ಬಳಿಕ ಎರಡನೇ ಮಗ ಶ್ರೀಚಂದ್ ಹಿಂದೂಜಾ ಅವರು ಛೇರ್ಮನ್ ಆದರು. ಮೂರನೇ ಮಗ ಗೋಪಿಚಂದ್ ಅವರು ಕೋ-ಛೇರ್ಮನ್ ಆದರು. 2023ರಲ್ಲಿ ಶ್ರೀಚಂದ್ ನಿಧನದ ನಂತರ ಗೋಪಿಚಂದ್ ಅವರು ಹಿಂದೂಜಾ ಗ್ರೂಪ್​ನ ಮುಖ್ಯಸ್ಥರಾದರು.

ಹಿಂದೂಜಾ ಗ್ರೂಪ್​ನಲ್ಲಿ ಇರುವ ಕಂಪನಿಗಳ ಸಂಖ್ಯೆ 20ಕ್ಕೂ ಹೆಚ್ಚು. ಅಶೋಕ್ ಲೇಲ್ಯಾಂಡ್, ಇಂಡಸ್​ಇಂಡ್ ಬ್ಯಾಂಕ್, ಗಲ್ಫ್ ಆಯಿಲ್, ಜಿಒಸಿಎಲ್ ಇತ್ಯಾದಿ ಹಲವು ಕಂಪನಿಗಳಿವೆ. ವಾಹನ, ಲೂಬ್ರಿಕೆಂಟ್, ರಿಯಲ್ ಎಸ್ಟೇಟ್, ಬ್ಯಾಂಕಿಂಗ್ ಹೀಗೆ 11 ಸೆಕ್ಟರ್​ಗಳಲ್ಲಿ ಇವರ ಕಂಪನಿಗಳ ಬ್ಯುಸಿನೆಸ್ ಇದೆ.

ಹಿಂದೂಜಾ ಗ್ರೂಪ್​ನ ವ್ಯಾಪಕ ಬ್ಯುಸಿನೆಸ್​ನಂತೆ ಹಿಂದೂಜಾ ಕುಟುಂಬವೂ ವಿಶಾಲವಾಗಿದೆ. ಪರಮಾನಂದ್ ದೀಪ್​ಚಂದ್ ಹಿಂದೂಜಾ ಅವರಿಗೆ ಶ್ರೀಚಂದ್, ಗೋಪಿಚಂದ್ ಮಾತ್ರವಲ್ಲ, ಗಿರಧರ್, ಪ್ರಕಾಶ್ ಮತ್ತು ಅಶೋಕ್ ಹಿಂದೂಜಾ ಹೀಗೆ ಐವರು ಮಕ್ಕಳಿದ್ದಾರೆ. ಈ ಪೈಕಿ ಪ್ರಕಾಶ್ ಹಿಂದೂಜಾ ಮತ್ತು ಅಶೋಕ್ ಹಿಂದೂಜಾ ಅವರು ಜೀವಂತ ಇದ್ದಾರೆ.

ಇದನ್ನೂ ಓದಿ: ವಂದೇ ಭಾರತ್ ಸ್ಲೀಪರ್ ಟ್ರೈನುಗಳ ಬಿಡುಗಡೆ ಮತ್ತಷ್ಟು ವಿಳಂಬ; ಕೆಲ ಸಮಸ್ಯೆಗಳು ಪತ್ತೆ

ಈ ಐವರು ಮಕ್ಕಳಿಗೂ ಹಲವು ಮಕ್ಕಳಿದ್ದಾರೆ. ಸದ್ಯ ಗೋಪಿಚಂದ್ ಹಿಂದೂಜಾ ಮೃತಪಟ್ಟ ಬಳಿಕ ಹಿಂದೂಜಾ ಗ್ರೂಪ್​ನ ಮುಂದಿನ ಛೇರ್ಮನ್ ಯಾರು ಆಗಲಿದ್ದಾರೆ ಎಂಬುದು ಕುತೂಹಲ ಮೂಡಿಸುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ