AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಂದೇ ಭಾರತ್ ಸ್ಲೀಪರ್ ಟ್ರೈನುಗಳ ಬಿಡುಗಡೆ ಮತ್ತಷ್ಟು ವಿಳಂಬ; ಕೆಲ ಸಮಸ್ಯೆಗಳು ಪತ್ತೆ

Vande Bharat Sleeper Train update: ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ಟ್ರೈನುಗಳು ಬಿಡುಗಡೆ ಆಗುವುದು ವಿಳಂಬವಾಗಬಹುದು ಎನ್ನಲಾಗಿದೆ. ಎರಡು ಟ್ರೈನ್ ರೇಕುಗಳನ್ನು ಪರಿಶೀಲಿಸಲಾಗಿದ್ದು, ಅದರಲ್ಲಿ ಹಲವು ಲೋಪದೋಷಗಳು ಕಂಡು ಬಂದಿವೆ. ಈ ಲೋಪದೋಷಗಳನ್ನು ಎತ್ತಿ ತೋರಿಸಿ, ಅದನ್ನು ಸರಿಪಡಿಸುವಂತೆ ರಿಸರ್ಚ್ ಡಿಸೈನ್ಸ್ ಸಂಸ್ಥೆಗಳಿಗೆ ಸೂಚಿಸಲಾಗಿದೆ.

ವಂದೇ ಭಾರತ್ ಸ್ಲೀಪರ್ ಟ್ರೈನುಗಳ ಬಿಡುಗಡೆ ಮತ್ತಷ್ಟು ವಿಳಂಬ; ಕೆಲ ಸಮಸ್ಯೆಗಳು ಪತ್ತೆ
ವಂದೇ ಭಾರತ್ ಸ್ಲೀಪರ್ ಟ್ರೈನು
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Nov 04, 2025 | 1:53 PM

Share

ನವದೆಹಲಿ, ನವೆಂಬರ್ 4: ವಂದೇ ಭಾರತ್ ಸ್ಲೀಪರ್ ಟ್ರೈನುಗಳು ( Vande Bharat Sleeper Trains) ಇನ್ನೊಂದು ಅಥವಾ ಎರಡು ತಿಂಗಳಲ್ಲಿ ಬಿಡುಗಡೆ ಆಗುವ ನಿರೀಕ್ಷೆ ಇತ್ತು. ಆದರೆ, ವರದಿಗಳ ಪ್ರಕಾರ ಈ ಟ್ರೈನುಗಳ ಆಗಮನ ವಿಳಂಬವಾಗಬಹುದು. ಚೆನ್ನೈನ ಐಸಿಎಫ್ (ICF Chennai) ಮತ್ತು ಬೆಂಗಳೂರಿನ ಬೆಮೆಲ್ (BEML) ಸಂಸ್ಥೆಗಳು ಜಂಟಿಯಾಗಿ ಈ ಟ್ರೈನುಗಳನ್ನು ನಿರ್ಮಿಸುತ್ತಿವೆ. ಸದ್ಯದಲ್ಲೇ ಈ ಟ್ರೈನುಗಳ ಎರಡು ರೇಕುಗಳನ್ನು (ಬೋಗಿಗಳಿರುವ ಪೂರ್ಣ ಟ್ರೈನು) ಒಟ್ಟಿಗೆ ಉದ್ಘಾಟನೆ ಮಾಡುವುದಾಗಿ ಹೇಳಿದ್ದರು. ಈ ನಡುವೆ ನಿರ್ಮಾಣ ಹಂತದಲ್ಲಿರುವ ಟ್ರೈನುಗಳಲ್ಲಿ ಕೆಲ ಲೋಪದೋಷಗಳನ್ನು ರೈಲ್ವೆ ಮಂಡಳಿ ಪತ್ತೆ ಮಾಡಿದೆ. ಅವುಗಳನ್ನು ಬಗೆಹರಿಸುವವರೆಗೂ ಟ್ರೈನುಗಳ ಬಿಡುಗಡೆ ವಿಳಂಬವಾಗಲಿದೆ.

ವಂದೇ ಭಾರತ್ ಸ್ಲೀಪರ್ ಟ್ರೈನುಗಳಲ್ಲಿ ಕಂಡು ಬಂದ ಲೋಪದೋಷಗಳಿವು…

ಟ್ರೈನ್​ನಲ್ಲಿ ಪ್ಯಾಸೆಂಜರ್ ಬಳಸುವ ಸ್ಥಳದಲ್ಲಿ ವಿನ್ಯಾಸದ ಬಗ್ಗೆ ರೈಲ್ವೆ ಮಂಡಳಿ ಅಸಮಾಧಾನ ವ್ಯಕ್ತಪಡಿಸಿದೆ. ಟ್ರೈನ್​ನ ಬರ್ತಿಂಗ್ ಏರಿಯಾದಲ್ಲಿ (ಸೀಟುಗಳು) ಚೂಪು ತುದಿಗಳಿರುವುದನ್ನು ಅದು ಗಮನಿಸಿದೆ. ವಿಂಡೋ ಕರ್ಟನ್ ಹ್ಯಾಂಡಲ್, ಬರ್ತ್ ಕನೆಕ್ಟರ್​ಗಳ ನಡುವಿನ ಪಿಜನ್ ಪಾಕೆಟ್​ಗಳನ್ನು ಸರಿಯಾಗಿ ರೂಪಿಸಿಲ್ಲದಿರುವುದು ಮಂಡಳಿಯ ಗಮನಕ್ಕೆ ಬಂದಿದೆ.

ಇದನ್ನೂ ಓದಿ: ಕೇವಲ 1,850 ರೂಗೆ ಹಂಪಿಗೆ ಫ್ಲೈಟ್ ಹತ್ತಿ; ಬೆಂಗಳೂರಿನಿಂದ ಜಿಂದಾಲ್ ಏರ್​ಪೋರ್ಟ್​​ಗೆ ಸ್ಟಾರ್ ಏರ್ ಫ್ಲೈಟ್ ಸೇವೆ ಆರಂಭ

ಮೇಲಿನದೂ ಸೇರಿ ಹಲವು ಲೋಪದೋಷಗಳನ್ನು ಗುರುತಿಸಿರುವ ರೈಲ್ವೆ ಮಂಡಳಿಯು ಎಲ್ಲಾ ರೈಲ್ವೆ ವಲಯಗಳ ಜನರಲ್ ಮ್ಯಾನೇಜರ್​ಗಳು ಹಾಗೂ ರಿಸರ್ಚ್ ಡಿಸೈನ್ಸ್ ಅಂಡ್ ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್​ನ (ಆರ್​ಡಿಎಸ್​ಒ) ಮಹಾನಿರ್ದೇಶಕರಿಗೆ ಪತ್ರ ಬರೆದು ತಿಳಿಸಿದೆ. ಈ ಲೋಪದೋಷಗಳನ್ನು ನಿವಾರಿಸಬೇಕು ಎಂದು ಸೂಚಿಸಿದೆ.

ವರದಿಗಳ ಪ್ರಕಾರ, ಎರಡು ರೇಕ್​ಗಳ ಪ್ರಯೋಗದ ವೇಳೆ ಈ ಲೋಪದೋಷಗಳನ್ನು ಸಿಸಿಆರ್​ಎಸ್ ಗುರುತಿಸಿದೆ. ಸೆಪ್ಟೆಂಬರ್ 1ಕ್ಕೆ ಅದು ಆರ್​ಡಿಎಸ್​ಒನ ಗಮನಕ್ಕೆ ತಂದಿದೆ. ಅಕ್ಟೋಬರ್ 28ಕ್ಕೆ ರೈಲ್ವೆ ಸಚಿವಾಲಯವು ಎಲ್ಲಾ ರೈಲ್ವೆ ವಲಯಗಳಿಗೂ ಪತ್ರ ಬರೆದು ತಿಳಿಸಿದೆ. ಅಗ್ನಿ ಸುರಕ್ಷತೆ ಕ್ರಮಗಳು, ಕವಚ್ 4.0 ಸಿಸ್ಟಂನ ಅಳವಡಿಕೆ, ಲೋಕೋ ಪೈಲಟ್​ಗಳ ನಡುವೆ ಸಮರ್ಪಕವಾದ ಸಂವಹನ ಇತ್ಯಾದಿ ಅಂಶಗಳನ್ನು ತಪ್ಪದೇ ಅಳವಡಿಸಬೇಕು ಎಂದು ಸಚಿವಾಲಯವು ಕಟ್ಟುನಿಟ್ಟಾಗಿ ನಿಳಿಸಿದೆ.

ವಂದೇ ಭಾರತ್ ಸ್ಲೀಪರ್ ಟ್ರೈನುಗಳ ವಿಶೇಷತೆಗಳೇನು?

ವಂದೇ ಭಾರತ್ ಸ್ಲೀಪರ್ ಟ್ರೈನುಗಳಲ್ಲಿ ಸೀಟುಗಳ ಜಾಗ ವಿಶಾಲವಾಗಿರುತ್ತವೆ. ಪ್ರಯಾಣಿಕರು ಆರಾಮವಾಗಿ ಪ್ರಯಾಣಿಸಬಹುದು. ವೈಫೈ, ಚಾರ್ಜಿಂಗ್ ಪಾಯಿಂಟ್ ಇತ್ಯಾದಿ ಸೌಕರ್ಯಗಳು ಇರುತ್ತವೆ.

ಇದನ್ನೂ ಓದಿ: ಭಾರತೀಯ ಮಹಿಳಾ ಕ್ರಿಕೆಟಿಗರಿಗೆ ಹಣದ ಹೊಳೆ; ಇವರಿಗೆ ಎಷ್ಟು ಟ್ಯಾಕ್ಸ್ ಹೊರೆ ಬೀಳುತ್ತೆ ಗೊತ್ತಾ?

ವಂದೇ ಭಾರತ್ ರೈಲುಗಳು 160 ಕಿಮೀ ವೇಗದಲ್ಲಿ ಓಡುವಂತೆ ವಿನ್ಯಾಸ ಮಾಡಲಾಗಿದೆ. ಟ್ರೈನಿನ ಒಳಗೆ ಪ್ರಯಾಣಿಕರಿಗೆ ಕಿರಿಕಿರಿ ಆಗದ ರೀತಿಯಲ್ಲಿ ಉಷ್ಣಾಂಶವನ್ನು ನಿಗದಿ ಮಾಡಲಾಗಿರುತ್ತದೆ. ಟ್ರೈನ್ ಹೊರಡುವುದಕ್ಕೆ ಮುನ್ನ ಎಲ್ಲಾ ಪ್ರಯಾಣಿಕರಿಗೂ ಪಿಎ ಸಿಸ್ಟಂ ಮೂಲಕ ಅಲರ್ಟ್ ಹೊರಡಿಸುವುದು ಇತ್ಯಾದಿ ಹಲವು ರೀತಿಯ ಪ್ರಯಾಣಿಕರ ಪರ ವ್ಯವಸ್ಥೆ ವಂದೇ ಭಾರತ್ ಸ್ಲೀಪರ್ ಟ್ರೈನುಗಳಲ್ಲಿ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:51 pm, Tue, 4 November 25

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ