ಕೇವಲ 1,850 ರೂಗೆ ಹಂಪಿಗೆ ಫ್ಲೈಟ್ ಹತ್ತಿ; ಬೆಂಗಳೂರಿನಿಂದ ಜಿಂದಾಲ್ ಏರ್ಪೋರ್ಟ್ಗೆ ಸ್ಟಾರ್ ಏರ್ ಫ್ಲೈಟ್ ಸೇವೆ ಆರಂಭ
Star Air starts flight services from Bengaluru to Vijayanagar Jindal airport: ಸ್ಟಾರ್ ಏರ್ ಸಂಸ್ಥೆ ಬೆಂಗಳೂರಿನಿಂದ ಜಿಂದಾಲ್ ಏರ್ಪೋರ್ಟ್ಗೆ ಫ್ಲೈಟ್ ಸೇವೆ ಆರಂಭಿಸಿದೆ. ಇದರೊಂದಿಗೆ ಹಂಪಿಗೆ ಹೋಗಬಯಸುವ ಪ್ರವಾಸಿಗರಿಗೆ ಖುಷಿ ಸುದ್ದಿ ಸಿಕ್ಕಿದೆ. ಬೆಳಗ್ಗೆ 9:50ಕ್ಕೆ ವಿಮಾನ ಹೊರಟು 50 ನಿಮಿಷದಲ್ಲಿ ಜಿಂದಾಲ್ ತಲುಪುತ್ತದೆ. ಅಲ್ಲಿಂದ 11:10ಕ್ಕೆ ಫ್ಲೈಟ್ ಹೊರಟು ಬೆಂಗಳೂರಿಗೆ ಬರುತ್ತದೆ. ಇದರ ಟಿಕೆಟ್ ದರ 1,850 ರೂನಿಂದ ಆರಂಭವಾಗುತ್ತದೆ.

ಬೆಂಗಳೂರು, ನವೆಂಬರ್ 3: ಪ್ರಾದೇಶಿಕ ವೈಮಾನಿಕ ಕಂಪನಿಯಾದ ಸ್ಟಾರ್ ಏರ್ (Star Air) ಇದೀಗ ಕರ್ನಾಟಕದಲ್ಲಿ ತನ್ನ ಸಂಪರ್ಕ ಜಾಲ ಹೆಚ್ಚಿಸಿದೆ. ಬೆಂಗಳೂರಿನಿಂದ ವಿಜಯನಗರಕ್ಕೆ ಫ್ಲೈಟ್ ಸೇವೆ ಆರಂಭಿಸಿದೆ. ವಿಜಯನಗರ ಜಿಲ್ಲೆಯ ಖ್ಯಾತ ಪ್ರವಾಸಿ ತಾಣವಾದ ಹಂಪಿಗೆ ತೆರಳಲು ಬಯಸುವ ಪ್ರವಾಸಿಗರಿಗೆ ಈ ಫ್ಲೈಟ್ ಬಹಳ ಉಪಯುಕ್ತವಾಗಲಿದೆ. ಹಂಪಿ ಸಮೀಪವೇ ಇರುವ ಜಿಂದಾಲ್ ವಿದ್ಯಾನಗರ ಏರ್ಪೋರ್ಟ್ (Jindal Vidyanagar Airport) ಅನ್ನು ಈ ಫ್ಲೈಟ್ ಸಂಪರ್ಕಿಸುತ್ತದೆ.
ಸಂಜಯ್ ಘೋದಾವತ್ ಗ್ರೂಪ್ಗೆ ಸೇರಿದ ಸ್ಟಾರ್ ಏರ್ ಸಂಸ್ಥೆಗೆ ಇದು 32ನೇ ಮಾರ್ಗವಾಗಿದೆ. ದೇಶಾದ್ಯಂತ ವಿವಿಧ ಪ್ರದೇಶಗಳನ್ನು ಸಂಪರ್ಕಿಸುವ ಮಹತ್ವದ ಜಾಲ ನಿರ್ಮಿಸಿದೆ. ಕರ್ನಾಟಕದಲ್ಲಿ ಬೆಂಗಳೂರು, ಹಂಪಿ ಅಲ್ಲದೇ, ಹುಬ್ಬಳ್ಳಿ ಬೆಳಗಾವಿ, ಬೀದರ್, ಶಿವಮೊಗ್ಗ ನಗರಗಳಿಗೂ ಫ್ಲೈಟ್ ಸೇವೆ ನೀಡುತ್ತಿದೆ ಸ್ಟಾರ್ ಏರ್.
ಇದನ್ನೂ ಓದಿ: ಭಾರತೀಯ ಮಹಿಳಾ ಕ್ರಿಕೆಟಿಗರಿಗೆ ಹಣದ ಹೊಳೆ; ಇವರಿಗೆ ಎಷ್ಟು ಟ್ಯಾಕ್ಸ್ ಹೊರೆ ಬೀಳುತ್ತೆ ಗೊತ್ತಾ?
ಬೆಂಗಳೂರಿಂದ ವಿದ್ಯಾನಗರ ಏರ್ಪೋರ್ಟ್ಗೆ ಎಷ್ಟು ದರ?
ಬೆಂಗಳೂರಿನಿಂದ ವಿಜಯನಗರದ ವಿದ್ಯಾನಗರ ಏರ್ಪೋರ್ಟ್ಗೆ ನಿತ್ಯವೂ ಒಂದು ಫ್ಲೈಟ್ ಇದೆ. ಬೆಳಗ್ಗೆ 9:50ಕ್ಕೆ ಕೆಂಪೇಗೌಡ ಏರ್ಪೋರ್ಟ್ನಿಂದ ಹೊರಟು 10:40ಕ್ಕೆ ವಿದ್ಯಾನಗರ ನಿಲ್ದಾಣ ಮುಟ್ಟುತ್ತದೆ. ಒಟ್ಟು 50 ನಿಮಿಷ ಪ್ರಯಾಣ ಅವಧಿ.
ಈ ಫ್ಲೈಟ್ನಲ್ಲಿ ಎಕನಾಮಿ ಮತ್ತು ಬ್ಯುಸಿನೆಸ್ ಕ್ಲಾಸ್ಗಳಿವೆ. ಎಕನಾಮಿ ಕ್ಲಾಸ್ನಲ್ಲಿ ಒಂದು ಟಿಕೆಟ್ ಬೆಲೆ 5,250 ರೂನಿಂದ 7,088 ರೂ ಇದೆ. ಬ್ಯುಸಿನೆಸ್ ಕ್ಲಾಸ್ನ ಟಿಕೆಟ್ ದರ 10,999 ರೂ ಮತ್ತು 13,359 ರೂ ಇದೆ.
ವಿದ್ಯಾನಗರ ಏರ್ಪೋರ್ಟ್ನಿಂದ ಬೆಂಗಳೂರಿಗೆ ಬೆಳಗ್ಗೆ 11:10ಕ್ಕೆ ಫ್ಲೈಟ್ ಹೊರಡುತ್ತದೆ. 12 ಗಂಟೆಗೆ ಬೆಂಗಳೂರು ತಲುಪುತ್ತದೆ. ಇಲ್ಲಿ ಎಕನಾಮಿ ಕ್ಲಾಸ್ ಟಿಕೆಟ್ ದರ 1,850 ರೂನಿಂದ ಆರಂಭವಾಗುತ್ತದೆ. ಶನಿವಾರ, ಭಾನುವಾರ ಇತ್ಯಾದಿ ಪೀಕ್ ಡಿಮ್ಯಾಂಡ್ ಇರುವ ದಿನಗಳಲ್ಲಿ ಟಿಕೆಟ್ ದರ ಹೆಚ್ಚಿರುತ್ತದೆ. ಮೇಲೆ ನೀಡಿರುವ ಟಿಕೆಟ್ ಮಾಹಿತಿಯು ಸ್ಟಾರ್ ಏರ್ ವೆಬ್ಸೈಟ್ನಿಂದ ಪಡೆಯಲಾಗಿದೆ.
ಇದನ್ನೂ ಓದಿ: ನೋಡಲು 1 ಲೀಟರ್ ಪ್ಯಾಕ್, ತೂಕ ಬೇರೆ ಬೇರೆ; ಗ್ರಾಹಕರನ್ನು ಯಾಮಾರಿಸುವ ಅಡುಗೆ ಎಣ್ಣೆ ಕಂಪನಿಗಳು; ಇದಕ್ಕೆ ಕಡಿವಾಣ ಹೇಗೆ?
ಬ್ರೆಜಿಲ್ನ ಎಂಬ್ರಾಯರ್ ವಿಮಾನಗಳು
2019ರಲ್ಲಿ ಆರಂಭವಾದ ಸ್ಟಾರ್ ಏರ್ ಕೇಂದ್ರ ಸರ್ಕಾರದ ಉಡಾನ್ ಯೋಜನೆಯ (UDAAN scheme) ನೆರವಿನಿಂದ ತನ್ನ ಆಪರೇಷನ್ಸ್ ಹೆಚ್ಚಿಸುತ್ತಿದೆ. ದೇಶದ ಪ್ರಮುಖ ಪ್ರಾದೇಶಿಕ ಏವಿಯೇಶನ್ ಕಂಪನಿಗಳಲ್ಲಿ ಒಂದೆನಿಸುವಷ್ಟು ಬೆಳೆದಿದೆ. ಬ್ರೆಜಿಲ್ನ ವಿಮಾನ ತಯಾರಕರಾದ ಎಂಬ್ರಾಯರ್ (Embraer) ಸಂಸ್ಥೆಯ ವಿಮಾನಗಳನ್ನು ಸ್ಟಾರ್ ಏರ್ ತನ್ನ ಸೇವೆಯಲ್ಲಿ ಬಳಸುತ್ತಿದೆ. 30-60 ಪ್ರಯಾಣಿಕರನ್ನು ಈ ವಿಮಾನಗಳು ಕರೆದೊಯ್ಯಬಲ್ಲುವು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




