ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ (HUL) ಕೆಲವು ಉತ್ಪನ್ನಗಳ ಬೆಲೆಗಳನ್ನು 7ರಿಂದ ಶೇ 10 ರಷ್ಟು ಹೆಚ್ಚಿಸಿದೆ ಎಂದು ಡಿಸೆಂಬರ್ 20ರಂದು ಪ್ರಮುಖ ವಾಣಿಜ್ಯ ಮಾಧ್ಯಮವೊಂದು ವರದಿ ಮಾಡಿದೆ. ಇದು ಲೈಫ್‌ಬಾಯ್ ಸೋಪ್, ಲಕ್ಸ್, ಸರ್ಫ್ ಎಕ್ಸೆಲ್ ಡಿಟರ್ಜೆಂಟ್ ಕೇಕ್ ಮತ್ತು ರಿನ್ ಡಿಟರ್ಜೆಂಟ್ ಬಾರ್‌ನಂತಹ ಸೋಪ್‌ಗಳು ಮತ್ತು ಡಿಟರ್ಜೆಂಟ್‌ಗಳನ್ನು ಒಳಗೊಂಡಿದೆ. ಲೈಫ್‌ಬಾಯ್ ಮಲ್ಟಿಪ್ಯಾಕ್‌ನ ಬೆಲೆಯನ್ನು 115 ರಿಂದ 124 ರೂಪಾಯಿಗಳಿಗೆ ಹೆಚ್ಚಿಸಿದ್ದರೆ, ಲಕ್ಸ್ ಮಲ್ಟಿಪ್ಯಾಕ್‌ನ ಬೆಲೆಯನ್ನು 140 ರಿಂದ 150 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಈ ಮಧ್ಯೆ, ಲಕ್ಸ್ ಸೋಪಿನ ಒಂದು ಬಾರ್ ಬೆಲೆ 28 ರಿಂದ 30 ರೂಪಾಯಿಗೆ ಏರಿಕೆಯಾಗಿದೆ.
ಡಿಟರ್ಜೆಂಟ್ ಬಾರ್‌ಗಳಿಗೆ ಸಂಬಂಧಿಸಿದಂತೆ, ಸರ್ಫ್ ಎಕ್ಸೆಲ್ ಕೇಕ್‌ಗಳ ಒಂದು ಬಂಡಲ್ ಈಗ ರೂ. 98ರ ಬದಲು 108 ರೂಪಾಯಿಗೆ ಮತ್ತು ರಿನ್ ಡಿಟರ್ಜೆಂಟ್ ಬಾರ್‌ನ ಒಂದು ಯೂನಿಟ್ ರೂ.16ರ ಬದಲು ರೂ. 18ರಷ್ಟಿದೆ. ಕೇವಲ ಒಂದು ತಿಂಗಳ ಹಿಂದೆ, ನವೆಂಬರ್ 25ರಂದು ಸೋಪ್ ಮತ್ತು ಡಿಟರ್ಜೆಂಟ್‌ಗಳು ಸೇರಿದಂತೆ ಆಯ್ದ ವಸ್ತುಗಳ ಬೆಲೆಗಳನ್ನು HULನಿಂದ ಇನ್‌ಪುಟ್ ವೆಚ್ಚಗಳ ಹೆಚ್ಚಳದ ಕಾರಣವನ್ನು ನೀಡಿ, ಹೆಚ್ಚಿಸಲಾಯಿತು.
ಎಚ್‌ಯುಎಲ್ ತನ್ನ 1 ಕೇಜಿ ಪ್ಯಾಕ್‌ಗೆ ವ್ಹೀಲ್ ಡಿಟರ್ಜೆಂಟ್ ಪೌಡರ್‌ನ ಬೆಲೆಯನ್ನು ಶೇಕಡಾ 3.4ರಷ್ಟು ಹೆಚ್ಚಿಸಿದೆ. ಇದರ ಪರಿಣಾಮವಾಗಿ ರೂ. 2 ಹೆಚ್ಚಳವಾಯಿತು. ವ್ಹೀಲ್ ಪೌಡರ್‌ನ 500 ಗ್ರಾಂ ಪ್ಯಾಕ್‌ನ ಬೆಲೆಯನ್ನು ರೂ. 2 ಹೆಚ್ಚಿಸಿದ್ದರಿಂದ ರೂ. 28 ಇದ್ದದ್ದು ರೂ. 30 ತಲುಪಿತು. ಆ ಸಮಯದಲ್ಲಿ ರಿನ್ ಬಾರ್‌ನ ಬೆಲೆಯು 250-ಗ್ರಾಂ ಪ್ಯಾಕ್‌ಗೆ ಶೇಕಡಾ 5.8ರಷ್ಟು ಹೆಚ್ಚಾಗಿದ್ದು ಮತ್ತು ಲಕ್ಸ್ ಸೋಪ್ 100 ಗ್ರಾಂ ಮಲ್ಟಿಪ್ಯಾಕ್‌ನ ಬೆಲೆಯನ್ನು ಶೇಕಡಾ 21.7ರಷ್ಟು ಹೆಚ್ಚಿಸಲಾಯಿತು, ಅಂದರೆ, ಅದು 25 ರೂಪಾಯಿ ಆಯಿತು.
ಇದನ್ನೂ ಓದಿ: LPG Cylinder Price: ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯಲ್ಲಿ ಮತ್ತೆ 100 ರೂ.ಏರಿಕೆ; ಗ್ರಾಹಕರಿಗೆ ತಲೆನೋವಾದ ಬೆಲೆ ಹೆಚ್ಚಳ