ನೀರವ್ ಮೋದಿ, ಮಲ್ಯರಂಥ ಸಾಲಗಾರರ ಆಸ್ತಿ ಮಾರಾಟದಿಂದ ಭಾರತದ ಬ್ಯಾಂಕ್ಗಳಿಂದ ರೂ. 13,109 ಕೋಟಿ ವಸೂಲಿ
ವಿಜಯ್ ಮಲ್ಯ, ನೀರವ್ ಮೋದಿ ಸೇರಿದಂತೆ ಇತರರಿಂದ ಭಾರತದ ಬ್ಯಾಂಕ್ಗಳಿಂದ 13,109 ಕೋಟಿ ರೂಪಾಯಿ ವಸೂಲಿ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ನೀರವ್ ಮೋದಿ, ವಿಜಯ ಮಲ್ಯ ಅವರಂತಹ ಸಾಲಗಾರರ ಆಸ್ತಿ ಮಾರಾಟದಿಂದ ಭಾರತೀಯ ಬ್ಯಾಂಕ್‌ಗಳು ಸುಮಾರು ರೂ. 13,109 ಕೋಟಿ ವಸೂಲಿ ಮಾಡಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಲೋಕಸಭೆಗೆ ತಿಳಿಸಿದರು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಕೇಂದ್ರ ಸಂಸ್ಥೆಗಳು ಈ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿವೆ. ಬ್ರಿಟನ್ನ ನ್ಯಾಯಾಲಯವೊಂದು ವಿಜಯ್ ಮಲ್ಯ ಅವರನ್ನು ದಿವಾಳಿ ಎಂದು ಘೋಷಿಸಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನೇತೃತ್ವದ ಭಾರತೀಯ ಬ್ಯಾಂಕ್‌ಗಳ ಒಕ್ಕೂಟವು ಈಗ ಕಾರ್ಯಾಚರಣೆ ನಿಲ್ಲಿಸಿರುವ ಕಿಂಗ್‌ಫಿಷರ್ ಏರ್‌ಲೈನ್ಸ್‌ನಿಂದ ನೀಡಬೇಕಾದ ಸಾಲವನ್ನು ಮರುಪಾವತಿಸಲು ವಿಶ್ವಾದ್ಯಂತ ಸ್ಥಗಿತ ಆದೇಶವನ್ನು ಅನುಸರಿಸಲು ದಾರಿ ಮಾಡಿಕೊಟ್ಟಿದೆ.
65 ವರ್ಷದ ಉದ್ಯಮಿ ವಿಜಯ್ ಮಲ್ಯ ಈ ಮಧ್ಯೆ ಯುನೈಟೆಡ್ ಕಿಂಗ್ಡಮ್ನಲ್ಲಿ ಜಾಮೀನಿನ ಮೇಲೆ ಉಳಿದುಕೊಂಡಿದ್ದಾರೆ. ಆದರೆ ಅವರ ಆಶ್ರಯ ಅರ್ಜಿಗೆ ಸಂಬಂಧಿಸಿದ್ದು ಎಂದು ನಂಬಲಾದ “ಗೋಪ್ಯ” ಕಾನೂನು ವಿಷಯವು ಸಂಬಂಧ ಇರದ ಹಸ್ತಾಂತರ ಪ್ರಕ್ರಿಯೆಗಳಿಗೆ ಪರಿಷ್ಕಾರವಾಗಿದೆ. ಬ್ಯಾಂಕ್‌ಗಳ ಒಕ್ಕೂಟಕ್ಕೆ ಅಸಲು ಮತ್ತು ಬಡ್ಡಿಯಾಗಿ ಮಲ್ಯ 9,000 ಕೋಟಿ ರೂಪಾಯಿ ಸಾಲ ಬಾಕಿ ಉಳಿಸಿಕೊಂಡಿದ್ದು, ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಸಾಲ ವಂಚನೆ ಪ್ರಕರಣದ ಪ್ರಮುಖ ಆರೋಪಿಗಳಾದ ವಜ್ರ ವ್ಯಾಪಾರಿ ನೀರವ್ ಮೋದಿ ಮತ್ತು ಚೋಕ್ಸಿ ಬ್ಯಾಂಕ್‌ಗೆ 13,000 ಕೋಟಿ ರೂಪಾಯಿಗಳಷ್ಟು ನಷ್ಟ ಉಂಟು ಮಾಡಿದ್ದಾರೆ.
ಅಲ್ಲದೆ, ಕಳೆದ ಏಳು ವರ್ಷಗಳಲ್ಲಿ ಬ್ಯಾಡ್ ಲೋನ್ಗಳ ಪರಿಹಾರದ ಮೂಲಕ 5.49 ಲಕ್ಷ ಕೋಟಿ ರೂಪಾಯಿ ವಸೂಲಿ ಮಾಡಲಾಗಿದೆ ಎಂದು ಸೀತಾರಾಮನ್ ಹೇಳಿದರು. ರಾಜ್ಯಗಳು ಗಣನೀಯ ನಗದು ಬ್ಯಾಲೆನ್ಸ್ ಹೊಂದಿವೆ. ಕೇವಲ ಎರಡು ರಾಜ್ಯಗಳು ನೆಗೆಟಿವ್ ನಗದು ಬಾಕಿಯನ್ನು ಹೊಂದಿವೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಭಾರತದಲ್ಲಿ ಹೂಡಿಕೆದಾರರಿಗೆ ಅವಕಾಶಗಳ ಮಹಾಪೂರ: ನಿರ್ಮಲಾ ಸೀತಾರಾಮನ್