Airbnb Layoffs: ಶೇ. 30ರಷ್ಟು ಹೆಚ್​ಆರ್ ಸಿಬ್ಬಂದಿ ಮನೆಗೆ ಕಳುಹಿಸಿದ ಏರ್​ಬಿಎನ್​ಬಿ

|

Updated on: Mar 06, 2023 | 11:31 AM

Airbnb Recruitment Team Face Heat: ಏರ್​ಬಿಎನ್​ಬಿಯ 6,800 ಉದ್ಯೋಗಿಗಳ ಪೈಕಿ 30 ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಇವರೆಲ್ಲರೂ ಈ ಕಂಪನಿಯ ರೆಕ್ರುಟ್ಮೆಂಟ್ ತಂಡದಲ್ಲಿದ್ದವರು. ಆದರೆ, ಮುಂದಿನ ದಿನಗಳಲ್ಲಿ ಉದ್ಯೋಗಿಗಳ ಸಂಖ್ಯೆ ಹೆಚ್ಚಿಸುವುದಾಗಿ ಕಂಪನಿ ಹೇಳಿಕೊಂಡಿದೆ.

Airbnb Layoffs: ಶೇ. 30ರಷ್ಟು ಹೆಚ್​ಆರ್ ಸಿಬ್ಬಂದಿ ಮನೆಗೆ ಕಳುಹಿಸಿದ ಏರ್​ಬಿಎನ್​ಬಿ
ಲಕ್ಸುರಿ ಮನೆ
Follow us on

ನವದೆಹಲಿ: ಅಮೆರಿಕ ಮೂಲದ ಮನೆಗಳ ಬಾಡಿಗೆ ಬ್ರೋಕರ್ ಸಂಸ್ಥೆ ಏರ್​ಬಿಎನ್​ಬಿ (Airbnb) ತನ್ನ ನೇಮಕಾತಿ ವಿಭಾಗದ ಶೇ. 30ರಷ್ಟು ಸಿಬ್ಬಂದಿಯನ್ನು ಲೇ ಆಫ್ (Layoffs) ಮಾಡಿದೆ. ಕೆಲಸ ಕಳೆದುಕೊಂಡವರ ಸಂಖ್ಯೆ ಸುಮಾರು 30 ಎನ್ನಲಾಗಿದೆ. ಈ ಸಂಸ್ಥೆಯಲ್ಲಿ 6,800 ಮಂದಿ ಉದ್ಯೋಗಿಗಳಿದ್ದು, ಕೆಲಸ ಹೋದವರ ಪ್ರಮಾಣ ಶೇ. 0.4ರಷ್ಟಿರಬಹುದು ಎಂದು ಬ್ಲೂಮ್​ಬರ್ಗ್​ನಲ್ಲಿ ಪ್ರಕಟವಾದ ವರದಿಯಿಂದ ತಿಳಿದುಬರುತ್ತದೆ.

ಆದರೆ, ಏರ್​ಬಿಎನ್​ಬಿ ಈ ವರ್ಷ ತನ್ನ ಸಿಬ್ಬಂದಿ ಸಂಖ್ಯೆ ಹೆಚ್ಚಿಸುವ ಸನ್ನಾಹದಲ್ಲಿದೆ. ಸಂಸ್ಥೆಯ ಮಾರುಕಟ್ಟೆ ತಂತ್ರಗಾರಿಕೆ ತುಸು ಬದಲಾಗಿದೆ. ಈ ನಿಟ್ಟಿನಲ್ಲಿ ಇದಕ್ಕೆ ಪೂರಕವಾಗಿ ರೆಕ್ರೂಟಿಂಗ್ ಟೀಮ್ ಅನ್ನು ಪರಿಷ್ಕರಿಸಲಾಗುತ್ತಿದ್ದು, ಅದರ ಭಾಗವಾಗಿಯೇ 30ಮಂದಿಯನ್ನು ಕೈಬಿಡಲು ನಿರ್ಧರಿಸಲಾಗಿದೆ.

ಕಳೆದ ವರ್ಷ ಏರ್​ಬಿಎನ್​ಬಿಯ ವ್ಯವಹಾರ ಶೇ. 11ರಷ್ಟು ವೃದ್ಧಿಸಿತ್ತು. ಈ ವರ್ಷ ಸಂಸ್ಥೆ ಶೇ. 2ರಿಂದ 4ರಷ್ಟು ಹೊಸಬರನ್ನು ನೇಮಕಾತಿ ಮಾಡಿಕೊಳ್ಳಲು ಯೋಜಿಸಿದೆ. ಹೀಗಾಗಿ, ಕಂಪನಿಯ ಇತರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

2008ರಲ್ಲಿ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಆರಂಭವಾದ ಏರ್​ಬಿಎನ್​ಬಿ ಲಕ್ಸುರಿ ಮನೆ, ರಿಸಾರ್ಟ್, ಹೋಮ್​ಸ್ಟೇ, ಹೋಟೆಲ್​ಗಳ ಬುಕಿಂಗ್ ಮಾಡುವ ಆನ್​ಲೈನ್ ಮಾರುಕಟ್ಟೆಯಾಗಿದೆ. ಇದು ಬ್ರೋಕರ್ ಕಂಪನಿಯಾಗಿದ್ದು ಪ್ರತೀ ಬುಕಿಂಗ್​ಗೆ ಕಮಿಷನ್ ಪಡೆಯುವ ಮೂಲಕ ಆದಾಯ ಗಳಿಸುತ್ತದೆ. ಇಲ್ಲಿ ಏರ್​ಬಿಎನ್​ಬಿ ಎಂದರೆ ಏರ್ ಬೆಡ್ ಅಂಡ್ ಬ್ರೇಕ್ ಫಾಸ್ಟ್ ಡಾಟ್ ಕಾಮ್ ಎಂಬುದು ಮೂಲ ಹೆಸರು ಎಂದು ವಿಕಿಪೀಡಿಯಾದಲ್ಲಿ ಮಾಹಿತಿ ಇದೆ. ಬ್ರಯಾನ್ ಚೆಸ್ಕಿ ಇದರ ಸಹಸಂಸ್ಥಾಪಕರು.

ಇದನ್ನೂ ಓದಿGold Bond: ಕಡಿಮೆ ಬೆಲೆಗೆ ಸರ್ಕಾರದಿಂದ ಚಿನ್ನ; ಮಾರ್ಚ್ 10ರವರೆಗೆ ಹೂಡಿಕೆ ಅವಕಾಶ

ಕಳೆದ ವರ್ಷ ಏರ್​ಬಿಎನ್​ಬಿ ಮೊದಲ ಬಾರಿಗೆ ಲಾಭ ತೋರಿಸಿದೆ. ಡಿಸೆಂಬರ್ ಅಂತ್ಯದ ಕೊನೆಯ ತ್ರೈಮಾಸಿಕದಲ್ಲಿ 2 ಬಿಲಿಯನ್ ಡಾಲರ್​ನಷ್ಟು ಆದಾಯ ಗಳಿಸಿದೆ. ಅದರಲ್ಲಿ 319 ಮಿಲಿಯನ್ ಡಾಲರ್​ನಷ್ಟು ಲಾಭ ಕೂಡ ಬಂದಿದೆಯಂತೆ.

ಎರಡು ಮೂರು ವರ್ಷಗಳ ಹಿಂದೆ ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಜಾಗತಿಕವಾಗಿ ಪ್ರವಾಸ, ಪ್ರಯಾಣಗಳಿಗೆ ನಿರ್ಬಂಧಗಳಿದ್ದುದು ಏರ್​ಬಿಎನ್​ಬಿ ವ್ಯವಹಾರಕ್ಕೆ ಭಾರೀ ನಷ್ಟವಾಗಿತ್ತು. ಆಗ 1,900 ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಹಾಕಲಾಗಿತ್ತು. ಅಂದರೆ ಶೇ. 25ರಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದರು. ಅದು ಆ ಸಂದರ್ಭದ ಅನಿವಾರ್ಯತೆಯೂ ಆಗಿತ್ತು.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ