ಒಬ್ಬ ವ್ಯಕ್ತಿ ಎಷ್ಟು ಸಿಮ್ ಕಾರ್ಡ್ ಹೊಂದಬಹುದು? ಸರ್ಕಾರ ತಂದಿದೆ ಹೊಸ ಮಾರ್ಗಸೂಚಿ; ಈ ಹೊಸ ನಿಯಮಗಳೇನು?

How many SIM connections one can take: ಒಬ್ಬ ವ್ಯಕ್ತಿ 9ಕ್ಕಿಂತ ಹೆಚ್ಚು ಸಿಮ್ ಕಾರ್ಡ್​ಗಳನ್ನು ಹೊಂದಿರುವಂತಿಲ್ಲ. ಇಂತಹದ್ದೊಂದು ನಿಯಮವನ್ನು ಸರ್ಕಾರ ಮಾಡಿದೆ. ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ರಾಜ್ಯಗಳಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಈ ಸಿಮ್ ಕಾರ್ಡ್ ಮಿತಿ 6 ಎಂದಿದೆ. ಟೆಲಿಕಾಂ ಕಂಪನಿಗಳಿಗೆ ಸರ್ಕಾರವು ಒಂದು ಪರಿಶೀಲನಾ ವ್ಯವಸ್ಥೆ ಮಾಡಿದ್ದು, ಇದು ಆಗಸ್ಟ್ 24ರಿಂದ ಜಾರಿಗೆ ಬರುತ್ತದೆ.

ಒಬ್ಬ ವ್ಯಕ್ತಿ ಎಷ್ಟು ಸಿಮ್ ಕಾರ್ಡ್ ಹೊಂದಬಹುದು? ಸರ್ಕಾರ ತಂದಿದೆ ಹೊಸ ಮಾರ್ಗಸೂಚಿ; ಈ ಹೊಸ ನಿಯಮಗಳೇನು?
ಸಿಮ್ ಕಾರ್ಡ್
Image Credit source: Getty Images

Updated on: Aug 20, 2026 | 10:14 PM

ನವದೆಹಲಿ, ಆಗಸ್ಟ್ 20: ಅಪರಾಧ ಎಸಗುವವರು ಹತ್ತಾರು ಸಿಮ್ ಕಾರ್ಡ್​ಗಳನ್ನು ಬಳಸುತ್ತಾರೆ. ಯಾರದ್ದೋ ಆಧಾರ್ ಕಾರ್ಡ್​ನಿಂದ ಸಿಮ್​ಗಳನ್ನು ಪಡೆದು ಅವನ್ನು ಅಪರಾಧ ಕೃತ್ಯಗಳಿಗೆ ಬಳಸುವುದುಂಟು. ಇವುಗಳಿಗೆ ಕಡಿವಾಣ ಹಾಕಲು ಕೇಂದ್ರ ದೂರಸಂಪರ್ಕ ಇಲಾಖೆ (DoT – Department of Telecommunications) ಹೊಸ ನಿಯಮ ರೂಪಿಸಿದೆ. ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಹೊಂದಬಹುದಾದ ಮೊಬೈಲ್ ಸಂಪರ್ಕಗಳ (SIM) ಮೇಲಿನ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಿದ್ದು ಈ ಸಂಬಂಧ ಒಂದು ಮಾರ್ಗಸೂಚಿ ಬಿಡುಗಡೆ ಮಾಡಿದೆ. ಈ ನಿಯಮದ ಪ್ರಕಾರ, ಒಬ್ಬ ವ್ಯಕ್ತಿಯ ಹೆಸರಿನಲ್ಲಿ 9ಕ್ಕಿಂತ ಹೆಚ್ಚು ಸಿಮ್ ಕಾರ್ಡ್​ಗಳನ್ನು ಹೊಂದಲು ಅವಕಾಶ ಇರುವುದಿಲ್ಲ.

ಸೂಕ್ಷ್ಮ ಪ್ರದೇಶಗಳೆನಸಿರುವ ಜಮ್ಮು ಮತ್ತು ಕಾಶ್ಮಿರ, ಅಸ್ಸಾಮ್ ಹಾಗು ಈಶಾನ್ಯ ರಾಜ್ಯಗಳಲ್ಲಿ ಒಬ್ಬ ವ್ಯಕ್ತಿ ಗರಿಷ್ಠ 6 ಸಿಮ್ ಕಾರ್ಡ್​ಗಳನ್ನು ಹೊಂದಲು ಮಾತ್ರ ಅನುಮತಿ ಇರುತ್ತದೆ.

SIM ಕಾರ್ಡ್‌ಗಳ ಪರಿಮಿತಿಯನ್ನು ತಲುಪಿರುವ ಗ್ರಾಹಕರಿಗೆ ಹೊಸ SIM ಕಾರ್ಡ್ ನೀಡಬಾರದು ಎಂದು ದೂರಸಂಪರ್ಕ ಸಂಸ್ಥೆಗಳಿಗೆ (Telecom Operators) ಸೂಚಿಸಲಾಗಿದೆ. ಗರಿಷ್ಠ ಮಟ್ಟದ SIM ಹೊಂದಿರುವ ವ್ಯಕ್ತಿಗಳ ಭಾವಚಿತ್ರ/ಮಾಹಿತಿಯನ್ನು ಸರಕಾರವು ಡಿಜಿಟಲ್ ಇಂಟೆಲಿಜೆನ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಅಪ್‌ಲೋಡ್ ಮಾಡಲಿದ್ದು, ಟೆಲಿಕಾಂ ಕಂಪನಿಗಳು ಇದನ್ನು ಪರಿಶೀಲಿಸಿ ಹೊಸ ಸಂಪರ್ಕಗಳನ್ನು ನಿರಾಕರಿಸಲಿವೆ.

ಇದನ್ನೂ ಓದಿ: ಜಿಯೋಬ್ಲ್ಯಾಕ್‌ರಾಕ್​ ಮ್ಯೂಚುವಲ್ ಫಂಡ್​ನಿಂದ ಡೈರೆಕ್ಟ್ ಪ್ಲಾನ್ ಜೊತೆಗೆ ರೆಗ್ಯುಲರ್ ಪ್ಲಾನ್ ಕೂಡ ಶುರು

ಹೆಚ್ಚುವರಿ SIM ಹೊಂದಿದ್ದರೆ ಕನೆಕ್ಷನ್ ನಿಲ್ಲುತ್ತದೆ

9ಕ್ಕಿಂತ ಹೆಚ್ಚು ಸಿಮ್‌ಗಳನ್ನು ಪಡೆಯಲು ಯತ್ನಿಸಿದರೆ ಅಥವಾ ಹೊಂದಿದ್ದರೆ, ಆ ಹೆಚ್ಚುವರಿ ಸಂಪರ್ಕಗಳನ್ನು ತಕ್ಷಣವೇ ಅಮಾನತುಗೊಳಿಸಲಾಗುತ್ತದೆ (Block/Suspend). ಗಮನಿಸಬೇಕಾದ ಸಂಗತಿ ಎಂದರೆ ಇಲ್ಲಿ ಸಿಮ್ ಮಿತಿ ಎಂದರೆ ಒಂದೇ ಟೆಲಿಕಾಂ ಕಂಪನಿಯದ್ದಲ್ಲ. ಎಲ್ಲಾ ಟೆಲಿಕಾಂ ಕಂಪನಿಗಳಿಂದ ಒಬ್ಬ ವ್ಯಕ್ತಿ ಪಡೆದಿರುವ ಒಟ್ಟು ಸಿಮ್ ಕಾರ್ಡ್​ಗಳಾಗಿವೆ. ಏರ್​ಟೆಲ್​ನಿಂದ 3, ಜಿಯೋದಿಂದ 4, ವೊಡಾಫೋನ್​ನಿಂದ 3 ಸಿಮ್ ಕಾರ್ಡ್​ಗಳಿದ್ದರೆ ಒಟ್ಟು 10 ಆಗುತ್ತದೆ. ಹಾಗೆ ಸಾಧ್ಯವಿಲ್ಲ. ಎಲ್ಲವೂ ಸೇರಿ ಒಟ್ಟು ಸಿಮ್ ಕಾರ್ಡ್ 9 ಮೀರುವಂತಿಲ್ಲ.

ಈ ಹೊಸ ಪರಿಶೀಲನಾ ವ್ಯವಸ್ಥೆಯು 2026ರ ಆಗಸ್ಟ್ 24 ರಿಂದ ಜಾರಿಗೆ ಬರಲಿದ್ದು, ನವೆಂಬರ್ 30 ರ ವೇಳೆಗೆ ರಿಯಲ್-ಟೈಮ್ ಸಿಸ್ಟಮ್ ಆಗಿ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿದೆ.

ಇದನ್ನೂ ಓದಿ: ಮುಂದಿನ 5 ವರ್ಷ ಈಕ್ವಿಟಿ ಮಾರುಕಟ್ಟೆಯಿಂದ ಶೇ. 15 ವಾರ್ಷಿಕ ಆದಾಯ: ರಾಮದೇವ್ ಅಗರ್ವಾಲ್ ವಿಶ್ವಾಸ

ನಕಲಿ ದಾಖಲೆಗಳನ್ನು ಬಳಸಿ ಸಿಮ್ ಕಾರ್ಡ್ ಪಡೆದು ನಡೆಸುವ ‘ಡಿಜಿಟಲ್ ಅರೆಸ್ಟ್’ ಮುಂತಾದ ಸೈಬರ್ ಮತ್ತು ಆನ್‌ಲೈನ್ ಆರ್ಥಿಕ ವಂಚನೆಗಳಿಗೆ ಕಡಿವಾಣ ಹಾಕುವುದು ಈ ನಿಯಮದ ಮುಖ್ಯ ಉದ್ದೇಶವಾಗಿದೆ.

ಒಬ್ಬ ಹೆಸರಲ್ಲಿ ಎಷ್ಟು ಸಿಮ್ ಕಾರ್ಡ್ ಇದೆ ಎಂದು ತಿಳಿಯುವುದು ಹೇಗೆ?

ಈಗ ಸಿಮ್ ಕಾರ್ಡ್ ಅನ್ನು ಪಡೆಯಬೇಕಾದರೆ ಆಧಾರ್ ದಾಖಲೆ ನೀಡಬೇಕು. ಪ್ರತಿ ಸಿಮ್ ಕಾರ್ಡ್ ಕೂಡ ಆಧಾರ್​ಗೆ ಲಿಂಕ್ ಆಗಿರುತ್ತದೆ. ಹೀಗಾಗಿ, ಒಂದು ಆಧಾರ್ ನಂಬರ್​ನಲ್ಲಿ ಎಷ್ಟು ಸಿಮ್ ಕಾರ್ಡ್​ಗಳನ್ನು ಪಡೆಯಲಾಗಿದೆ ಎಂಬುದನ್ನು ತಿಳಿಸಬಹುದು. ಅದಕ್ಕೆ ಸಂಚಾರ್ ಸಾಥಿ ಪೋರ್ಟಲ್ ಅನ್ನು ಬಳಸಬಹುದು.

ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು (FAQs)

  • ಪ್ರಶ್ನೆ: ಒಬ್ಬ ವ್ಯಕ್ತಿ ಹೆಸರಲ್ಲಿ ಎಷ್ಟು ಸಿಮ್ ಕಾರ್ಡ್ ಪಡೆಯಬಹುದು?
  • ಉತ್ತರ: ಹೆಚ್ಚಿನ ರಾಜ್ಯಗಳಲ್ಲಿ ಒಬ್ಬ ವ್ಯಕ್ತಿ ಹೆಸರಲ್ಲಿ ಗರಿಷ್ಠ 9 ಸಿಮ್ ಕಾರ್ಡ್ ಪಡೆಯಬಹುದು. ಜಮ್ಮು ಕಾಶ್ಮೀರ, ಈಶಾನ್ಯ ರಾಜ್ಯಗಳಲ್ಲಿ ಈ ಮಿತಿ 6 ಇದೆ.
  • ಪ್ರಶ್ನೆ: ಒಂದು ಟೆಲಿಕಾಂ ಕಂಪನಿಯಿಂದ 9 ಸಿಮ್ ಕಾರ್ಡ್ ಪಡೆಯಬಹುದಾ?
  • ಉತ್ತರ: ಇಲ್ಲ. ಏರ್ಟೆಲ್, ಜಿಯೋ, ವೊಡಾಫೋನ್ ಹೀಗೆ ಎಲ್ಲಾ ಟೆಲಿಕಾಂ ಕಂಪನಿಗಳಿಂದ ಸೇರಿಸಿ ಪಡೆಯಲಾದ ಒಟ್ಟು ಸಿಮ್ ಕಾರ್ಡ್​ಗಳು ಲೆಕ್ಕಕ್ಕೆ ಬರುತ್ತವೆ.
  • ಪ್ರಶ್ನೆ: ನಿಮ್ಮ ಹೆಸರಲ್ಲಿ ಎಷ್ಟು ಸಿಮ್ ಕಾರ್ಡ್ ಇವೆ ಎಂದು ಹುಡುಕುವುದು ಹೇಗೆ?
  • ಉತ್ತರ: ಸಂಚಾರ್ ಸಾಥಿ ಪೋರ್ಟಲ್​ಗೆ ಹೋಗಿ ಅಲ್ಲಿ ನಿಮ್ಮ ಹೆಸರಲ್ಲಿ ಎಷ್ಟು ಕನೆಕ್ಷನ್ಸ್ ಇವೆ ಎಂದು ತಿಳಿಯಬಹುದು ಎನ್ನಲಾಗಿದೆ.

Published On - 12:26 pm, Thu, 20 August 26

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us