ರಾಮಮಂದಿರ ಜಾಗದಲ್ಲಿ ಫ್ಯಾಕ್ಟರಿ ಕಟ್ಟಬೇಕಿತ್ತಾ? ತಪ್ಪು, ಮಂದಿರದಿಂದ ಆರ್ಥಿಕತೆಗೆ ಎಷ್ಟು ಲಾಭ ಆಗಬಹುದು ಗೊತ್ತಾ?

|

Updated on: Jan 22, 2024 | 6:10 PM

Ram Temple and Economy: ಉತ್ತರಪ್ರದೇಶದ ಅಯೋಧ್ಯೆಯಲ್ಲಿ 1,800 ಕೋಟಿ ರೂ ವೆಚ್ಚದಲ್ಲಿ ರಾಮ ಮಂದಿರ ನಿರ್ಮಿಸಲಾಗುತ್ತಿದೆ. ಇದರಿಂದ ಏನು ಉಪಯೋಗ ಎನ್ನುವ ಪ್ರಶ್ನೆ ಇದೆ. ಮಂದಿರ ಬದಲು ಫ್ಯಾಕ್ಟರಿ ಕಟ್ಟಿದ್ದರೆ ಆರ್ಥಿಕತೆಗೆ ಹೆಚ್ಚು ಲಾಭ ಸಿಗುತ್ತಿತ್ತು ಎನ್ನುವ ವಾದದಲ್ಲಿ ಹುರುಳಿದೆಯಾ? ಜೆಫ್ರೀಸ್ ಎಂಬ ಗ್ಲೋಬಲ್ ಬ್ರೇಕರಿಂಗ್ ಕಂಪನಿ ಪ್ರಕಾರ ರಾಮಮಂದಿರದಿಂದ ಭಾರತದ ಪ್ರವಾಸೋದ್ಯಮಕ್ಕೆ ಪುಷ್ಟಿ ಸಿಗುವ ನಿರೀಕ್ಷೆ ಇದೆ.

ರಾಮಮಂದಿರ ಜಾಗದಲ್ಲಿ ಫ್ಯಾಕ್ಟರಿ ಕಟ್ಟಬೇಕಿತ್ತಾ? ತಪ್ಪು, ಮಂದಿರದಿಂದ ಆರ್ಥಿಕತೆಗೆ ಎಷ್ಟು ಲಾಭ ಆಗಬಹುದು ಗೊತ್ತಾ?
ರಾಮಮಂದಿರ
Follow us on

ಅಯೋಧ್ಯೆ, ಜನವರಿ 22: ರಾಮ ಮಂದಿರ ನಿರ್ಮಾಣದ ಬಗ್ಗೆ ಭಾರತದ ಕೆಲವೆಡೆ ಅಪಸ್ವರ ಏಳುವುದು ಹೌದು. ಮಂದಿರ ಬದಲು ಆಸ್ಪತ್ರೆ, ಅಥವಾ ಲೈಬ್ರರಿಯೋ ಅಥವಾ ಪಾರ್ಕು ಅಥವಾ ಫ್ಯಾಕ್ಟರಿಯನ್ನೋ ಕಟ್ಟಿದ್ದರೆ ಬಹಳ ಜನರಿಗೆ ಉಪಯೋಗವಾಗುತ್ತಿತ್ತಲ್ಲವಾ ಎಂದು ಕೆಲವರು ಕೇಳುವುದುಂಟು. ಆದರೆ, ರಾಮ ಮಂದಿರ ನಿರ್ಮಾಣದಿಂದ ಭಾರೀ ಲಾಭವಾಗಲಿದೆ ಎಂದು ಹೇಳಲಾಗುತ್ತಿದೆ. ಜಾಗತಿಕ ಬ್ರೋಕರೇಜ್ ಸಂಸ್ಥೆಯಾದ ಜೆಫ್ರೀಸ್ (Jeffries) ಪ್ರಕಾರ ಅಯೋಧ್ಯೆಯ ರಾಮಮಂದಿರವು ಭಾರತದ ಪ್ರವಾಸೋದ್ಯಮಕ್ಕೆ (tourism) ಪುಷ್ಟಿ ಕೊಡಲಿದೆ. ಅದರಲ್ಲೂ ಬಹಳಷ್ಟು ದಶಕಗಳಿಂದ ಏಳ್ಗೆಯನ್ನೇ ಸಾಧಿಸದ ಉತ್ತರಪ್ರದೇಶ ರಾಜ್ಯಕ್ಕೆ ರಾಮ ಮಂದಿರ ಗೇಮ್ ಚೇಂಜರ್ ಎನಿಸಬಹುದು.

ಉತ್ತರಪ್ರದೇಶ ಸರ್ಕಾರದ ಪ್ರಕಾರ ರಾಮಮಂದಿರಕ್ಕೆ ಪ್ರತೀ ದಿನ ಒಂದು ಲಕ್ಷ ಪ್ರವಾಸಿಗರು ಬರಬಹುದು. ಮುಂದಿನ ಆರು ತಿಂಗಳಲ್ಲಿ 2 ಕೋಟಿ ಪ್ರವಾಸಿಗರು ಅಯೋಧ್ಯೆಗೆ ಬರಬಹುದು ಎಂಬ ನಿರೀಕ್ಷೆ ಇದೆ. ಜೆಫ್ರೀಸ್ ಸಂಸ್ಥೆ ಪ್ರಕಾರ ವರ್ಷಕ್ಕೆ 5-10 ಕೋಟಿ ಪ್ರವಾಸಿಗರು ಅಯೋಧ್ಯೆಗೆ ಭೇಟಿ ನೀಡಬಹುದು.

‘ಭಾರತದ ಪ್ರವಾಸೋದ್ಯಮದಲ್ಲಿ ಧಾರ್ಮಿಕ ಸ್ಥಳಗಳೇ ಹೆಚ್ಚು ಆದಾಯ ತರುತ್ತಿರುವುದು. ಭಾರತದ ಹಲವು ಜನಪ್ರಿಯ ಧಾರ್ಮಿಕ ಸ್ಥಳಗಳಲ್ಲಿ ಸೀಮಿತ ಇನ್​ಫ್ರಾಸ್ಟ್ರಕ್ಚರ್ ಇದ್ದರೂ ವರ್ಷಕ್ಕೆ ಒಂದರಿಂದ ಮೂರು ಕೋಟಿ ವರೆಗೆ ಪ್ರವಾಸಿಗರು ಹೋಗುತ್ತಾರೆ. ಈಗ ಉತ್ತಮ ಕನೆಕ್ಟಿವಿಟಿ ಮತ್ತು ಇನ್​​ಫ್ರಾಸ್ಟ್ರಕ್ಚರ್ ಇರುವ ಅಯೋಧ್ಯೆಯು ಉತ್ತಮ ಆರ್ಥಿಕ ಪರಿಣಾಮಗಳನ್ನು ಸೃಷ್ಟಿಸಬಲ್ಲುದು’ ಎಂದು ಜಾಗತಿಕ ಬ್ರೋಕರೇಜ್ ಸಂಸ್ಥೆ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: Ram Mandir Inauguration: ಜನವರಿ 22ನ್ನು ಅಯೋಧ್ಯೆ ರಾಮ ಮಂದಿರ ದಿನವನ್ನಾಗಿ ಘೋಷಿಸಿದ ಕೆನಡಾ

ಪುಟ್ಟ ಪಟ್ಟಣವಾಗಿದ್ದ ಅಯೋಧ್ಯೆ ಈಗ ಬಹಳಷ್ಟು ರೂಪಾಂತರಗೊಳ್ಳುತ್ತಿದೆ. ರಾಮಮಂದಿರವು 1,800 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಅಯೋಧ್ಯಾ ಪಟ್ಟಣ ಕೂಡ ಪರಿವರ್ತನೆಯಾಗುತ್ತಿದೆ. ಬರೋಬ್ಬರಿ 85,000 ಕೋಟಿ ರೂ ವೆಚ್ಚದಲ್ಲಿ ಅಯೋಧ್ಯೆಯ ಇನ್​ಫ್ರಾಸ್ಟ್ರಕ್ಚರ್ ರೂಪಿಸಲಾಗುತ್ತಿದೆ.

1,450 ಕೋಟಿ ರೂ ವೆಚ್ಚದಲ್ಲಿ ಹೊಸ ಏರ್ಪೋರ್ಟ್ ನಿರ್ಮಿಸಲಾಗಿದೆ. ಮೊದಲ ಟರ್ಮಿನಲ್ ಸಿದ್ಧವಾಗಿದೆ. 10 ಲಕ್ಷ ಪ್ರಯಾಣಿಕರನ್ನು ಇದು ನಿರ್ವಹಿಸಬಲ್ಲುದು. ಮುಂದಿನ ವರ್ಷದೊಳಗೆ ಇನ್ನೊಂದು ಅಥವಾ ಎರಡು ಟರ್ಮಿನಲ್ ಸಿದ್ಧವಾಗಬಹುದು. ಒಟ್ಟು 60 ಲಕ್ಷ ಪ್ರಯಾಣಿಕರಿಗೆ ಸೇವೆ ನೀಡುವಷ್ಟು ದೊಡ್ಡ ಮಟ್ಟದಲ್ಲಿ ಏರ್ಪೋರ್ಟ್ ಸಿದ್ಧವಾಗುತ್ತಿದೆ.

ಇನ್ನು, ರೈಲ್ವೆ ನಿಲ್ದಾಣವನ್ನೂ ಹಿಗ್ಗಿಸಲಾಗುತ್ತಿದೆ. ಅಯೋಧ್ಯೆಯಲ್ಲಿ 1,200 ಎಕರೆ ಜಾಗದಲ್ಲಿ ಟೌನ್​ಶಿಪ್ ನಿರ್ಮಿಸುವ ಯೋಜನೆ ಇದೆ. ಸಾಕಷ್ಟು ಹೋಟೆಲ್​ಗಳ ನಿರ್ಮಾಣ ಆಗುತ್ತಿದೆ.

ಬೇರೆ ದೇಶಗಳಲ್ಲಿ ಪ್ರವಾಸೋದ್ಯಮ ಹೇಗಿದೆ?

ಭಾರತದಲ್ಲಿ ಪ್ರವಾಸೋದ್ಯಮದಿಂದ ಸದ್ಯ ತೀರಾ ಹೆಚ್ಚಿನ ಆದಾಯ ಬರುತ್ತಿಲ್ಲ. ಜಿಡಿಪಿಯ ಶೇ. 6.8ರಷ್ಟು ಆದಾಯ ಪ್ರವಾಸೋದ್ಯಮದಿಂದ ಬರುತ್ತಿದೆ. ಮೆಕ್ಸಿಕೋ ಜಿಡಿಪಿಯಲ್ಲಿ ಪ್ರವಾಸೋದ್ಯಮ ಪಾಲು ಶೇ. 16ರಷ್ಟು ಇದೆ.

ಇದನ್ನೂ ಓದಿ: Ram Donation: ರಾಮಮಂದಿರಕ್ಕೆ ದೇಣಿಗೆ ನೀಡುವ ಹಣಕ್ಕೆ ಇದೆ ತೆರಿಗೆ ವಿನಾಯಿತಿ; ಸ್ವಾಮಿ ಕಾರ್ಯ, ಸ್ವಕಾರ್ಯ ಎಂದರೆ ಇದಾ? ಡೊನೇಟ್ ಮಾಡುವುದು ಹೇಗೆ?

ಸೌದಿಯಲ್ಲಿ ವರ್ಷಕ್ಕೆ ಎರಡು ಕೋಟಿ ಪ್ರವಾಸಿಗರು ಹೋಗುತ್ತಾರೆ. ಅದರಿಂದ ಅಲ್ಲಿನ ಪ್ರವಾಸೋದ್ಯಮಕ್ಕೆ 12 ಬಿಲಿಯನ್ ಡಾಲರ್ ಆದಾಯ ಬರುತ್ತದೆ. ಇದಕ್ಕೆ ಹೋಲಿಸಿದರೆ ಭಾರತಕ್ಕೆ ಇಷ್ಟೇ ಪ್ರವಾಸಿಗರಿಂದ ಸಿಗುವ ಆದಾಯ ಕಡಿಮೆ. ಆದರೂ ಆದಾಯ ಸೃಷ್ಟಿ ಅವಕಾಶ ಬಹಳ ಹೆಚ್ಚಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:03 pm, Mon, 22 January 24