Ram Donation: ರಾಮಮಂದಿರಕ್ಕೆ ದೇಣಿಗೆ ನೀಡುವ ಹಣಕ್ಕೆ ಇದೆ ತೆರಿಗೆ ವಿನಾಯಿತಿ; ಸ್ವಾಮಿ ಕಾರ್ಯ, ಸ್ವಕಾರ್ಯ ಎಂದರೆ ಇದಾ? ಡೊನೇಟ್ ಮಾಡುವುದು ಹೇಗೆ?

Ayodhya Ram Temple Donation and Tax Deduction: ಸರ್ಕಾರದಿಂದ ಧನ ಸಹಾಯ ಇಲ್ಲದೆಯೇ ಸಾರ್ವಜನಿಕರ ದೇಣಿಗೆ ಸಹಾಯದಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲಾಗುತ್ತಿದೆ. ರಾಮ ಮಂದಿರ ನಿರ್ಮಾಣಕ್ಕೆ ನೀಡಲಾಗುವ ದೇಣಿಗೆಯ ಹಣಕ್ಕೆ ತೆರಿಗೆ ವಿನಾಯಿ ಇರುತ್ತದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಸಂಸ್ಥೆಯ ಅಧಿಕೃತ ವೆಬ್​ಸೈಟ್​ನಲ್ಲಿ ಹೋಗಿ ಹಣ ಡೊನೇಟ್ ಮಾಡಬಹುದು.

Ram Donation: ರಾಮಮಂದಿರಕ್ಕೆ ದೇಣಿಗೆ ನೀಡುವ ಹಣಕ್ಕೆ ಇದೆ ತೆರಿಗೆ ವಿನಾಯಿತಿ; ಸ್ವಾಮಿ ಕಾರ್ಯ, ಸ್ವಕಾರ್ಯ ಎಂದರೆ ಇದಾ? ಡೊನೇಟ್ ಮಾಡುವುದು ಹೇಗೆ?
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ
Follow us
|

Updated on: Jan 22, 2024 | 5:08 PM

ನವದೆಹಲಿ, ಜನವರಿ 22: ಇಂದು ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ (Ram temple consecration ceremony) ಬಹಳ ಯಶಸ್ವಿಯಾಗಿ ನಡೆದಿದೆ. ಸರ್ಕಾರದ ಹಣಕಾಸು ನೆರವಿಲ್ಲದೇ ಭವ್ಯವಾದ ಮಂದಿರ ಕಟ್ಟಲಾಗುತ್ತಿದೆ. ಸಾರ್ವಜನಿಕರ ದೇಣಿಗೆಗಳಿಂದಲೇ ದೇವಸ್ಥಾನದ ನಿರ್ಮಾಣ ಆಗುತ್ತಿದೆ. ರಾಮ ಮಂದಿರ ನಿರ್ಮಾಣಕ್ಕೆ ನೀವು ನೀಡುವ ದೇಣಿಗೆಯ ಹಣಕ್ಕೆ ತೆರಿಗೆ ರಿಯಾಯಿತಿಗಳು ಲಭ್ಯ ಇದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರವನ್ನು 2020-21ರಲ್ಲಿ ಐತಿಹಾಸಕ ಮಹತ್ವದ ಸ್ಥಳ ಮತ್ತು ಸಾರ್ವಜನಿಕ ಪೂಜಾ ಸ್ಥಳವೆಂದು ಪರಿಗಣಿಸಿ ಕೇಂದ್ರ ಸರ್ಕಾರ ನೋಟಿಫೈ ಮಾಡಿತ್ತು. ಆದಾಯ ತೆರಿಗೆ ಸೆಕ್ಷನ್ 80(ಜಿ) ಅಡಿಯಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಜೀರ್ಣೋದ್ಧಾರ ಉದ್ದೇಶಕ್ಕೆ ನೀಡಲಾಗುವ ದೇಣಿಗೆಯ ಹಣಕ್ಕೆ ತೆರಿಗೆ ರಿಯಾಯಿತಿ ಅವಕಾಶವನ್ನು ಕಲ್ಪಿಸಲಾಗಿದೆ.

ದೇಣಿಗೆಯ ಅರ್ಧದಷ್ಟು ಹಣಕ್ಕೆ ತೆರಿಗೆ ವಿನಾಯಿತಿ ಸಿಗುತ್ತದೆ. ಅಂದರೆ, ನೀವು 50,000 ರೂ ದೇಣಿಗೆ ನೀಡಿದ್ದರೆ, 25,000 ರೂ ಮೊತ್ತಕ್ಕೆ ತೆರಿಗೆ ಅನ್ವಯ ಆಗುವುದಿಲ್ಲ.

ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಸಿ

ಈ ಸೆಕ್ಷನ್ ಅಡಿಯಲ್ಲಿ, ಪರಿಹಾರ ನಿಧಿಗಳಿಗೆ ಮತ್ತು ದತ್ತಿ ಸಂಸ್ಥೆಗಳಿಗೆ ನೀಡಲಾಗುವ ದೇಣಿಗೆಯ ಮೊತ್ತಕ್ಕೆ ಟ್ಯಾಕ್ಸ್ ಡಿಡಕ್ಷನ್ ಕ್ಲೈಮ್ ಮಾಡಬಹುದು. ಈಗ ರಾಮಜನ್ಮಭೂಮಿ ತೀರ್ಥ ಕ್ಷೇತ್ರದಲ್ಲಿ ಮಂದಿರ ಜೀರ್ಣೋದ್ಧಾರ ಕಾರ್ಯವನ್ನೂ ಈ ಸೆಕ್ಷನ್ ವ್ಯಾಪ್ತಿಗೆ ತರಲಾಗಿದೆ.

ಇದನ್ನೂ ಓದಿ: Punit Goenka: ಸೋನಿ-ಝೀ ಒಪ್ಪಂದ ರದ್ದು: ಇದು ದೇವರೇ ಕಳುಹಿಸಿದ ಸಂದೇಶ: ಅಯೋಧ್ಯೆಯಿಂದ ಪುನೀತ್ ಗೋಯಂಕಾ ಟ್ವೀಟ್

ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಕೊಡುವುದು ಹೇಗೆ?

  • ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಅಧಿಕೃತ ವೆಬ್​ಸೈಟ್​ಗೆ ಹೋಗಿ ಅಲ್ಲಿ ನೀವು ಡೊನೇಶನ್ ನೀಡಬಹುದು.
  • ವೆಬ್​ಸೈಟ್ ವಿಳಾಸ ಹೀಗಿದೆ: srjbtkshetra.org
  • ಮುಖ್ಯಪುಟದಲ್ಲೇ ದೇಣಿಗೆಯ ಲಿಂಕ್ ಇದೆ. ಅಥವಾ ನೇರವಾಗಿ ಡೊನೇಶನ್ ಪುಟಕ್ಕೆ ಹೋಗುವ ಲಿಂಕ್ ಇಲ್ಲಿದೆ: online.srjbtkshetra.org
  • ಇಲ್ಲಿ ಮುಖ್ಯ ಮೆನುವಿನಲ್ಲಿ ಡೊನೇಶನ್ ಅಡಿಯಲ್ಲಿ ಡೊನೇಟ್ ಅನ್ನು ಕ್ಲಿಕ್ ಮಾಡಿದರೆ ಬಲಬದಿಯಲ್ಲಿ ಪುಟ್ಟ ಫಾರ್ಮ್ ಕಾಣುತ್ತದೆ. ಮೊಬೈಲ್ ನಂಬರ್ ಹಾಕಿ ಅದಕ್ಕೆ ಬರುವ ಒಟಿಪಿಯನ್ನ ನಮೂದಿಸಿ ಪಾಸ್ವರ್ಡ್ ಹಾಕಿ ಲಾಗಿನ್ ಆಗಬಹುದು.
  • ಬಳಿಕ ನಿಮ್ಮ ಹೆಸರು, ಡೊನೇಶನ್ ಮಾಡುವ ಉದ್ದೇಶ, ಪ್ಯಾನ್ ನಂಬರ್, ಹಣ, ವಿಳಾಸ, ಮೊಬೈಲ್ ನಂಬರ್, ಇಮೇಲ್ ಐಡಿ ಇತ್ಯಾದಿ ವಿವರವನ್ನು ಭರ್ತಿ ಮಾಡಬೇಕು.
  • ಮಂದಿರ ಜೀರ್ಣೋದ್ಧಾರಕ್ಕೆ ನಿರ್ದಿಷ್ಟವಾಗಿ ಕಾರಣ ನಮೂದಿಸಬೇಕು.
  • ದೇಣಿಗೆ ಹಣದ ಪಾವತಿಗೆ ಯುಪಿಐ, ನೆಫ್ಟ್, ಐಎಂಪಿಎಸ್, ಡಿಡಿ, ಚೆಕ್ ಇತ್ಯಾದಿ ವಿವಿಧ ಆಯ್ಕೆಗಳಿರುತ್ತವೆ.
  • ಇದು ಯಶಸ್ವಿಯಾದ ಬಳಿಕ ಡೊನೇಶನ್ ರೆಸಿಪ್ಟ್ ಅನ್ನು ನೀವು ಡೌನ್​ಲೋಡ್ ಮಾಡಬಹುದು

ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಡೊನೇಶನ್ ಮೊತ್ತದ ಅರ್ಧದಷ್ಟು ಹಣಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ. ಅಂದರೆ, ಐಟಿ ರಿಟರ್ನ್ ಫೈಲ್ ಮಾಡುವಾಗ ಈ ದೇಣಿಗೆಯ ಹಣವನ್ನು ನಮೂದಿಸಿ ಅದಕ್ಕೆ ಟ್ಯಾಕ್ಸ್ ಡಿಡಕ್ಷನ್ ಕ್ಲೈಮ್ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
VIDEO: ಮೈದಾನದಲ್ಲೇ ಹೊಡೆದಾಡಿಕೊಂಡ ಬ್ಯಾಟರ್-ಬೌಲರ್..!
VIDEO: ಮೈದಾನದಲ್ಲೇ ಹೊಡೆದಾಡಿಕೊಂಡ ಬ್ಯಾಟರ್-ಬೌಲರ್..!