3rd Richest Lady: ಗಂಡ ಸತ್ತ ಬಳಿಕ ಸಿಕ್ಕ ಷೇರುಗಳಿಂದಲೇ ಭಾರತದ 3ನೇ ಅತೀ ಶ್ರೀಮಂತ ಮಹಿಳೆ ಎನಿಸಿರುವ ರೇಖಾ

|

Updated on: Apr 11, 2023 | 11:14 AM

Rekha Jhunjhunwala Interesting Story: ತಮ್ಮ ದಿವಂಗತ ಪತಿ ರಾಕೇಶ್ ಝುನಝುನವಾಲರ ಮಾರ್ಗದಲ್ಲೇ ನಡೆಯುತ್ತಿರುವ ಪತ್ನಿ ರೇಖಾ ಕೆಲ ಷೇರುಗಳಲ್ಲಿ ಹೆಚ್ಚುವರಿ ಹೂಡಿಕೆ ಮಾಡುವುದು ಸೇರಿದಂತೆ ಸ್ವಂತ ನಿರ್ಧಾರಗಳನ್ನು ಕೈಗೊಂಡು ಅದರಲ್ಲಿ ಯಶಸ್ಸನ್ನೂ ಗಳಿಸಿದ್ದಾರೆ. ಪರಿಣಾಮವಾಗಿ ಈಗ ಅವರು ಭಾರತದ ಮೂರನೇ ಅತೀ ಶ್ರೀಮಂತ ಮಹಿಳೆ ಎನಿಸಿದ್ದಾರೆ.

3rd Richest Lady: ಗಂಡ ಸತ್ತ ಬಳಿಕ ಸಿಕ್ಕ ಷೇರುಗಳಿಂದಲೇ ಭಾರತದ 3ನೇ ಅತೀ ಶ್ರೀಮಂತ ಮಹಿಳೆ ಎನಿಸಿರುವ ರೇಖಾ
ರೇಖಾ ಮತ್ತು ರಾಕೇಶ್ ಝುಂಝುನವಾಲ ದಂಪತಿ
Follow us on

ನವದೆಹಲಿ: ರಾಕೇಶ್ ಝುಂಝನವಾಲ (Rakesh Jhunjhunwala) ಹೆಸರು ಕೇಳಿರಬಹುದು. ಕಳೆದ ವರ್ಷ ಇಹಲೋಕ ತ್ಯಜಿಸಿದ್ದ ಇವರು ಭಾರತದ ಷೇರುಮಾರುಕಟ್ಟೆಗಳಲ್ಲಿ ಅಗ್ರಗಣ್ಯ ಹೂಡಿಕೆದಾರರಲ್ಲಿ ಒಬ್ಬರೆನಿಸಿದ್ದವರು. ಸಾವಿರಾರು ಕೋಟಿ ರೂ ಹೂಡಿಕೆ ಮಾಡಿ ಯಶಸ್ಸು ಸಾಧಿಸಿದ ಉದ್ಯಮಿ ಅವರು. ಅವರು ಸತ್ತ ಬಳಿಕ ಅವರ ಇಡೀ ಷೇರು ಮಾಲಿಕತ್ವವು ಅವರ ಪತ್ನಿ ರೇಖಾ ಝುಂಝನವಾಲ (Rekha Jhunjhunwala) ಅವರಿಗೆ ವರ್ಗಾವಣೆ ಆಗಿದೆ. ತಮ್ಮ ಪತಿಯ ಮಾರ್ಗದಲ್ಲೇ ನಡೆಯುತ್ತಿರುವ ರೇಖಾ ಅವರು ಕೆಲ ಷೇರುಗಳಲ್ಲಿ ಹೆಚ್ಚುವರಿ ಹೂಡಿಕೆ ಮಾಡುವುದು ಸೇರಿದಂತೆ ಸ್ವಂತ ನಿರ್ಧಾರಗಳನ್ನು ಕೈಗೊಂಡು ಅದರಲ್ಲಿ ಯಶಸ್ಸನ್ನೂ ಗಳಿಸಿದ್ದಾರೆ. ಪರಿಣಾಮವಾಗಿ ಈಗ ಅವರು ಭಾರತದ ಮೂರನೇ ಅತೀ ಶ್ರೀಮಂತ ಮಹಿಳೆ ಎನಿಸಿದ್ದಾರೆ. ಫೋರ್ಬ್ಸ್ ಪ್ರಕಾರ 59 ವರ್ಷದ ರೇಖಾ ಝುಂಝುನವಾಲ ಅವರ ಆಸ್ತಿ ಮೌಲ್ಯ 5.2 ಬಿಲಿಯನ್ ಡಾಲರ್ (ಸುಮಾರು 42,000 ಕೋಟಿ ರೂ) ಇದೆ. ಇದರ ಬಹುತೇಕ ಆಸ್ತಿ ಷೇರುಗಳೇ ಆಗಿವೆ.

ಝುನಝುನವಾಲಗೆ ಒಂದೇ ತಿಂಗಳಲ್ಲಿ 692 ಕೋಟಿ ರೂ ಲಾಭ ತಂದುಕೊಟ್ಟ ಟೈಟಾನ್ ಷೇರು

ರಾಕೇಶ್ ಝುಂಝುನವಾಲ ಅವರು ಹೂಡಿಕೆ ಮಾಡಿದ್ದ ಬಹುತೇಕ ಕಂಪನಿಗಳ ಷೇರುಗಳು ಲಾಭ ತಂದುಕೊಟ್ಟಿವೆ. ಟಾಟಾ ಒಡೆತನದ ಟೈಟಾನ್ ಕಂಪನಿಯ ಷೇರು ಕಳೆದ ಒಂದು ತಿಂಗಳಲ್ಲಿ ಶೇ. 6.30ರಷ್ಟು ಏರಿದೆ. ರೇಖಾ ಝುಂಝುನವಾಲ ಅವರು 4.59 ಕೋಟಿ ಟೈಟಾನ್ ಷೇರುಗಳನ್ನು ಹೊಂದಿದ್ದಾರೆ. ಈಗ ಟೈಟಾನ್​ನ ಒಂದು ಷೇರು 2590 ರುಪಾಯಿ ಆಗಿದೆ. ಅಂದರೆ ಒಂದು ತಿಂಗಳಲ್ಲಿ ಈ ಷೇರುಬೆಲೆ 150.90 ರುಪಾಯಿಯಷ್ಟು ಹೆಚ್ಚಿದೆ. ರೇಖಾ ಝುಂಝುನವಾಲ ಅವರು ಟೈಟಾನ್ ಷೇರುಳಿಂದಲೇ ಒಂದು ತಿಂಗಳಲ್ಲಿ 692 ಕೋಟಿ ರೂ ಲಾಭ ಮಾಡಿಕೊಂಡಿದ್ದಾರೆ. ಟೈಟಾನ್​ನಲ್ಲಿ ಅವರ ಷೇರುಪಾಲಿನ ಮೊತ್ತ 11,000 ಕೋಟಿ ರುಪಾಯಿಗೂ ಹೆಚ್ಚು.

ಇದನ್ನೂ ಓದಿKarthik Sharma: ಒಂದು ಷೇರಿನ ಕಥೆ; 23,000 ಕೋಟಿ ರೂ ಒಡೆಯನಾದ ಕಾರ್ತಿಕ್ ಶರ್ಮಾ

ಟಾಟಾ ಮಾಲಿಕತ್ವದ ಟೈಟಾನ್ ಕಂಪನಿ ತನ್ನ ವಾಚು ಬ್ಯುಸಿನೆಸ್ ಜೊತೆಗೆ ಆಭರಣ ಹಾಗೂ ಇತರ ಕೆಲ ಹೊಸ ಉದ್ಯಮಗಳತ್ತ ಕಾಲಿಟ್ಟಿದೆ. ತಾನಿಷ್ಕ್ ಜ್ಯುವೆಲರಿಯು ಟೈಟಾನ್​ನ ಮಾಲಿಕತ್ವದಲ್ಲಿದೆ. ಕಳೆದ ಹಣಕಾಸು ವರ್ಷದಲ್ಲಿ ಟೈಟಾನ್ ಒಳ್ಳೆಯ ಲಾಭ ತೋರಿಸಿದೆ. ಹೀಗಾಗಿ, ಅದರ ಷೇರುಗಳಿಗೆ ತುಸು ಬೇಡಿಕೆ ಇದೆ. ಎಲ್​ಐಸಿ ಸಂಸ್ಥೆ ಟೈಟಾನ್​ನಲ್ಲಿ ಬಹಳಷ್ಟು ಷೇರುಗಳನ್ನು ಹೊಂದಿದೆ. ವರದಿಗಳ ಪ್ರಕಾರ 2 ಕೋಟಿಗೂ ಹೆಚ್ಚು ಟೈಟಾನ್ ಷೇರುಗಳು ಎಲ್​ಐಸಿ ಬಳಿ ಇವೆ. ಎಲ್​ಐಸಿ ಮಾತ್ರವಲ್ಲ ಎಸ್​ಬಿಐ ನಿಫ್ಟಿ 50 ಇಟಿಎಫ್ ಮ್ಯೂಚುವಲ್ ಫಂಡ್ ಸಂಸ್ಥೆ ಸುಮಾರು ಒಂದೂವರೆ ಕೋಟಿಯಷ್ಟು ಟೈಟಾನ್ ಷೇರುಗಳಲ್ಲಿ ಹೂಡಿಕೆ ಮಾಡಿದೆ.

29 ಕಂಪನಿಗಳಲ್ಲಿ ಷೇರುಗಳನ್ನು ಹೊಂದಿರುವ ರೇಖಾ ಝುಂಝುನವಾಲ

ರೇಖಾ ಝುಂಝುನವಾಲ ತಮ್ಮ ಪತಿಯಿಂದ ವರ್ಗವಾದ ಸಾವಿರಾರು ಕೋಟಿ ರೂ ಮೌಲ್ಯದ ಷೇರುಗಳನ್ನು ಹಾಗೇ ಸುಮ್ಮನೆ ಇಟ್ಟುಕೊಂಡು ಲಾಭ ಮಾಡಿಕೊಳ್ಳುತ್ತಿಲ್ಲ. ತಮ್ಮ ಗಂಡನ ರೀತಿ ಅವರು ಹೊಸ ಹೊಸ ಹೂಡಿಕೆ ನಿರ್ಧಾರಗಳನ್ನು ಕೈಗೊಂಡು ಗಮನ ಸೆಳೆಯುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಅವರು ಜಿಯೋಜಿತ್ ಫೈನಾನ್ಷಿಯಲ್ ಎಂಬ ಸ್ಟಾಕ್ ಬ್ರೋಕಿಂಗ್ ಕಂಪನಿಯಲ್ಲಿ 20 ಲಕ್ಷದಷ್ಟು ಹೆಚ್ಚುವರಿ ಷೇರುಗಳನ್ನು ಖರೀದಿಸಿದ್ದರು. ಕೆನರಾ ಬ್ಯಾಂಕ್​ನ ಒಂದು ಕೋಟಿಗೂ ಅಧಿಕ ಷೇರುಗಳನ್ನು ಖರೀದಿಸಿದ್ದಾರೆ ಇವೆರಡೂ ಕಂಪನಿಗಳ ಷೇರುಗಳು ಭವಿಷ್ಯದಲ್ಲಿ ರೇಖಾ ಝುಂಝುನವಾಲರ ಸಂಪತ್ತು ಹೆಚ್ಚಳಕ್ಕೆ ಕಾರಣವಾಗಬಹುದು.

ಇದನ್ನೂ ಓದಿProfitable Stocks; ಟಾಟಾ ಮೋಟಾರ್ಸ್ ಸೇರಿದಂತೆ ಹಲವು ಷೇರುಗಳಿಗೆ ಬೇಡಿಕೆ; ಹಣ ಹಾಕೋದಾದರೆ ಈ ಷೇರುಗಳು ಗಮನದಲ್ಲಿರಲಿ

ರೇಖಾ ಝುಂಝುನವಾಲ ಯಾವೆಲ್ಲಾ ಷೇರುಗಳಲ್ಲಿ ಹೂಡಿಕೆ ಮಾಡಿದ್ದಾರೆ? ಇಲ್ಲಿದೆ ಪಟ್ಟಿ

ರಾಕೇಶ್ ಝುಂಝುನವಾಲ ಬದುಕಿದ್ದಾಗ ಷೇರುಪೇಟೆಯಲ್ಲಿ ಎಲ್ಲರ ಚಿತ್ತ ಅವರ ಪೋರ್ಟ್​ಫೋಲಿಯೋದತ್ತಲೇ ಇತ್ತು. ಅವರು ಮುಟ್ಟಿದ್ದೆಲ್ಲಾ ಚಿನ್ನ ಎನ್ನುವಂತಹ ಸಂದರ್ಭ ಅದು. ಅವರು ಹೂಡಿಕೆ ಮಾಡಿದ ಕಂಪನಿಯ ಷೇರುಗಳು ಕುಸಿತ ಕಂಡಿದ್ದು ಬಹಳ ಕಡಿಮೆ. ಈಗ ಅವರ ದೇಹಾಂತ್ಯದ ಬಳಿಕ ಷೇರುಗಳ ಮಾಲಿಕತ್ವ ಪತ್ನಿಗೆ ವರ್ಗಾವಣೆ ಆಗಿದೆ. ರೇಖಾ ಕೂಡ ತಮ್ಮ ಪತಿಯ ಹಾದಿಯಲ್ಲಿ ನಡೆಯುತ್ತಿದ್ದಾರೆ.

ರೇಖಾ ಝುಂಝುನವಾಲ ಅವರು ಹೂಡಿಕೆ ಮಾಡಿರುವ ಷೇರುಗಳು ಇಲ್ಲಿ ಮುಂದಿವೆ:

  1. ಆಪ್​ಟೆಕ್
  2. ಆಗ್ರೋ ಟೆಕ್ ಫೂಡ್ಸ್ ಲಿ
  3. ಆಟೋಲೈನ್ ಇಂಡಸ್ಟ್ರೀಸ್ ಲಿ
  4. ಕೆನರಾ ಬ್ಯಾಂಕ್
  5. ಕ್ರಿಸಿಲ್ ಲಿ
  6. ಡಿ ಬಿ ರಿಯಾಲ್ಟಿ ಲಿ
  7. ಎಡೆಲ್​ವೇಸ್ ಫೈನಾನ್ಷಿಯಲ್ ಸರ್ವಿಸಸ್ ಲಿ
  8. ಎಸ್ಕಾರ್ಟ್ಸ್ ಕುಬೋಟ ಲಿ
  9. ಫೆಡರಲ್ ಬ್ಯಾಂಕ್ ಲಿ
  10. ಫೋರ್ಟಿಸ್ ಹೆಲ್ತ್ ಕೇರ್
  11. ಜಿಯೋಜಿತ್ ಫೈನಾನ್ಷಿಯಲ್ ಸರ್ವಿಸಸ್
  12. ಇಂಡಿಯನ್ ಹೋಟೆಲ್ಸ್ ಕಂಪನಿ
  13. ಜುಬಿಲೆಂಟ್ ಫಾರ್ಮೋವಾ
  14. ಕರೂರ್ ವೈಶ್ಯ ಬ್ಯಾಂಕ್
  15. ಎನ್​ಸಿಸಿ ಲಿ
  16. ಪ್ರೋಝೋನ್ ಇಂಟು ಪ್ರಾಪರ್ಟೀಸ್ ಲಿ
  17. ರಾಲ್ಲಿಸ್ ಇಂಡಿಯಾ
  18. ಟಾಟಾ ಕಮ್ಯೂನಿಕೇಶನ್ಸ್
  19. ಟಾಟಾ ಮೋಟಾರ್ಸ್
  20. ಟೈಟಾನ್ ಕಂಪನಿ
  21. ವಾ ಟೆಕ್ ವಾಬಾಗ್
  22. ವಾಕ್​ಹಾರ್ಟ್ ಲಿ
  23. ಸಿಂಗರ್ ಇಂಡಿಯಾ
  24. ಬಿಲ್​ಕೇರ್
  25. ದಿಶ್ಮನ್ ಕಾರ್ಬೊಜೆನ್ ಆಮ್ಸಿಸ್
  26. ನಜರಾ ಟೆಕ್ನಾಲಜೀಸ್
  27. ಜುಬಿಲೆಂಟ್ ಇಂಗ್ರೇವಿಯಾ ಲಿ
  28. ಸ್ಟಾರ್ ಹೆಲ್ತ್ ಅಂಡ್ ಆ್ಯಲೀಡ್ ಇನ್ಷೂರೆನ್ಸ್ ಕಂಪನಿ
  29. ಮೆಟ್ರೋ ಬ್ರ್ಯಾಂಡ್ಸ್

ಇದನ್ನೂ ಓದಿSuicide Insurance: ಇನ್ಷೂರೆನ್ಸ್ ಮಾಡಿಸಿದವರು ಆತ್ಮಹತ್ಯೆ ಮಾಡಿಕೊಂಡರೆ ಪರಿಹಾರ ಸಿಗಬಹುದು; ಈ ಬಗ್ಗೆ ನಿಯಮಗಳು ತಿಳಿದಿರಲಿ

ಈ ಪೈಕಿ ಟೈಟಾನ್, ಮೆಟ್ರೋ ಬ್ರ್ಯಾಂಡ್ಸ್, ಸ್ಟಾರ್ ಹೆಲ್ತ್, ಟಾಟಾ ಮೋಟಾರ್ಸ್, ಕ್ರಿಸಿಲ್ ಮತ್ತು ಕೆನರಾ ಬ್ಯಾಂಕ್​ನಲ್ಲಿ ರೇಖಾ ಝುಂಝುನವಾಲ ಅವರು 1 ಸಾವಿರ ಕೋಟಿ ರೂಗಿಂತಲೂ ಅಧಿಕ ಮೌಲ್ಯದ ಷೇರುಗಳನ್ನು ಹೊಂದಿದ್ದಾರೆ.

ಇನ್ನಷ್ಟು ಷೇರುಪೇಟೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:14 am, Tue, 11 April 23