Sugar Price: ಪೆಟ್ರೋಲ್, ಮಳೆ ಎಫೆಕ್ಟ್; ಗಗನಕ್ಕೇರುತ್ತಿದೆ ಸಕ್ಕರೆ ಬೆಲೆ; ಹಣದುಬ್ಬರ, ಬಡ್ಡಿ ದರ ಎಲ್ಲಕ್ಕೂ ಸಕ್ಕರೆ ಕಾರಣ ಹೇಗೆ?

Sugar Effect On Economy: ಭಾರತದಾದ್ಯಂತ ಕಳೆದ ಮೂರ್ನಾಲ್ಕು ವಾರಗಳಿಂದ ಸಕ್ಕರೆ ದುಬಾರಿಯಾಗಿದೆ. ಕಿಲೋಗೆ 45 ರೂವರೆಗೂ ಬೆಲೆ ಪಡೆದಿರುವ ಸಕ್ಕರೆ ಮುಂಬರುವ ದಿನಗಳಲ್ಲಿ ತೀರಾ ತುಟ್ಟಿಯಾಗಲಿದೆ. ಈ ಸೀಸನ್​ನಲ್ಲಿ ಸುಮಾರು 3 ಲಕ್ಷ ಟನ್​ಗಳಷ್ಟು ಸಕ್ಕರೆಯ ಕೊರತೆ ಎದುರಾಗುತ್ತಿದೆ.

Sugar Price: ಪೆಟ್ರೋಲ್, ಮಳೆ ಎಫೆಕ್ಟ್; ಗಗನಕ್ಕೇರುತ್ತಿದೆ ಸಕ್ಕರೆ ಬೆಲೆ; ಹಣದುಬ್ಬರ, ಬಡ್ಡಿ ದರ ಎಲ್ಲಕ್ಕೂ ಸಕ್ಕರೆ ಕಾರಣ ಹೇಗೆ?
ಸಕ್ಕರೆ
Follow us
|

Updated on:Apr 11, 2023 | 1:44 PM

ನವದೆಹಲಿ: ಭಾರತದಾದ್ಯಂತ ಕಳೆದ ಮೂರ್ನಾಲ್ಕು ವಾರಗಳಿಂದ ಸಕ್ಕರೆ (Sugar) ದುಬಾರಿಯಾಗಿದೆ. ಕಿಲೋಗೆ 45 ರೂವರೆಗೂ ಬೆಲೆ ಪಡೆದಿರುವ ಸಕ್ಕರೆ ಮುಂಬರುವ ದಿನಗಳಲ್ಲಿ ತೀರಾ ತುಟ್ಟಿಯಾಗಲಿದೆ. ಸಕ್ಕರೆ ಲಭ್ಯತೆ ಕಡಿಮೆ ಆಗಿರುವುದು ಇದಕ್ಕೆ ಕಾರಣ. ಈ ಸೀಸನ್​ನಲ್ಲಿ ಸುಮಾರು 3 ಲಕ್ಷ ಟನ್​ಗಳಷ್ಟು ಸಕ್ಕರೆಯ ಕೊರತೆ ಎದುರಾಗುತ್ತಿದೆ. 38.6 ಎಂಟಿಯಷ್ಟು ಸಕ್ಕರೆ ಉತ್ಪಾದನೆಯ ನಿರೀಕ್ಷೆ ಇತ್ತು. ಆದರೆ, ಈ ಬಾರಿ ಕೆವಲ 33.5 ಎಂಟಿ ಸಕ್ಕರೆ ಮಾತ್ರ ಉತ್ಪಾದನೆ ಅಗಬಹುದು ಎಂದು ಅಖಿಲ ಭಾರತ ಸಕ್ಕರೆ ವ್ಯಾಪಾರ ಸಂಘಟನೆ ಹೇಳಿದೆ ಎಂದು ಕೇಂದ್ರ ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ ತಿಳಿಸಿದ್ದಾರೆ. ಸರಕು ಮಾರುಕಟ್ಟೆಯಲ್ಲಿ (Commodities Market) ಏಪ್ರಿಲ್ ತಿಂಗಳಲ್ಲಿ ಕಚ್ಛಾ ಸಕ್ಕರೆ ಬೆಲೆ ಪೌಂಡ್​ಗೆ 23.5 ಡಾಲರ್​ನಷ್ಟು ಏರಿಕೆ ಆಗಿದೆ. 2016ರ ನಂತರ ಇದು ಈ ಮಾರುಕಟ್ಟೆಯಲ್ಲಿ ಪಡೆದಿರುವ ಅತ್ಯಂತ ಹೆಚ್ಚಿನ ಬೆಲೆಯಾಗಿದೆ. ಕಚ್ಛಾ ಸಕ್ಕರೆ (Raw sugar) ಬೆಲೆ ಕಳೆದ ಒಂದು ವರ್ಷದಲ್ಲಿ ಶೇ. 16ರಷ್ಟು ಹೆಚ್ಚಾದರೆ, ಕಳೆದ ಒಂದು ತಿಂಗಳಲ್ಲಿ ಬೆಲೆ ಹೆಚ್ಚಳ ಅಗಿದ್ದು ಬರೋಬ್ಬರಿ ಶೇ. 13.27ರಷ್ಟು.

ಸಕ್ಕರೆ ಬೆಲೆ ಈ ಪರಿ ಹೆಚ್ಚಲು ಏನು ಕಾರಣ?

  • ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿರುವ ಸಕ್ಕರೆ ಕಾರ್ಖಾನೆಗಳಲ್ಲಿ ಸಕ್ಕರೆ ಉತ್ಪಾದನೆ ಕಡಿಮೆ ಆಗಿದೆ.
  • ಮಹಾರಾಷ್ಟ್ರದಲ್ಲಿ ಬಿದ್ದ ಅಕಾಲಿಕ ಮಳೆ ಕಬ್ಬು ಬೆಳೆಯ (Sugarcane crop) ಪ್ರಮಾಣವನ್ನು ಕಡಿಮೆ ಮಾಡಿದೆ
  • ಎಥನಾಲ್ ಉತ್ಪಾದನೆಗಾಗಿ ಕಬ್ಬಿನ ಬೆಳೆಯನ್ನು ವಿನಿಯೋಗಿಸಲಾಗುತ್ತಿದೆ.
  • ಈ ಬಾರಿ ಮಳೆಯ ಪ್ರಮಾಣ ಕಡಿಮೆ ಅಗುವ ಭೀತಿ ಇದ್ದು, ಕಬ್ಬು ಬೆಳೆ ಪ್ರಮಾಣ ಕಡಿಮೆ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿRBI: ಐಟಿ ಸರ್ವಿಸ್ ಹೊರಗುತ್ತಿಗೆ: ಗ್ರಾಹಕರ ಜವಾಬ್ದಾರಿಯಿಂದ ಬ್ಯಾಂಕುಗಳು ತಪ್ಪಿಸಿಕೊಳ್ಳುವಂತಿಲ್ಲ: ಆರ್​ಬಿಐ ಹೊಸ ನಿಯಮ

ಸಕ್ಕರೆ ಉತ್ಪಾದನೆಯಲ್ಲಿ ಮಹಾರಾಷ್ಟ್ರ ನಂಬರ್ ಒನ್ ರಾಜ್ಯ. ಇಲ್ಲಿಯ 190ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳಲ್ಲಿ 60 ಲಕ್ಷ ಟನ್​ಗಳಷ್ಟು (13.9 ಎಂಟಿ) ಸಕ್ಕರೆ ಉತ್ಪಾದನೆ ಉತ್ಪಾದನೆ ಅಗುತ್ತದೆ. ನಂತರದ ಸ್ಥಾನ ಉತ್ತರಪ್ರದೇಶದ್ದು. ಇದು ಬಿಟ್ಟರೆ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ 70ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳಿದ್ದು 33 ಲಕ್ಷ ಟನ್ (6.3 ಎಂಟಿ) ಸಕ್ಕರೆ ಉತ್ಪಾದನೆ ಆಗುತ್ತದೆ. ಅದರೆ ಈ ಬಾರಿ ಸಕ್ಕರೆ ಉತ್ಪಾದನೆ ಗಣನೀಯವಾಗಿ ಇಳಿಕೆಯಾಗುವ ನಿರೀಕ್ಷೆ ಇದೆ.

ಮಹಾರಾಷ್ಟ್ರ ಮತ್ತು ಕರ್ನಾಟಕದ ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯುವುದನ್ನು ನಿಲ್ಲಿಸಿವೆ. 2023 ಮಾರ್ಚ್ 31ರವರೆಗೆ ಈ ಎರಡು ರಾಜ್ಯಗಳಲ್ಲಿ ಕ್ರಮವಾಗಿ 104 ಎಂಟಿ ಮತ್ತು 53ಎಂಟಿಯಷ್ಟು ಕಬ್ಬನ್ನು ಮಾತ್ರ ಅರೆದಿವೆ. ಹೀಗಾಗಿ, ಮಹಾರಾಷ್ಟ್ರದಲ್ಲಿ ಸಕ್ಕರೆ ಉತ್ಪಾದನೆ 10.5 ಮತ್ತು ಕರ್ನಾಟಕದಲ್ಲಿ ಸಕ್ಕರೆ ಉತ್ಪಾದನೆ 5.6 ಎಂಟಿಯಷ್ಟು ಇರಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿPM Kisan: ಪಿಎಂ ಕಿಸಾನ್ 14ನೇ ಕಂತು ಯಾವಾಗ? ಹೊಸ ರೈತರು ನೊಂದಾಯಿಸುವುದು ಹೇಗೆ? ಎಲ್ಲಾ ವಿವರ ಇಲ್ಲಿದೆ

ಎಥನಾಲ್ ಉತ್ಪಾದನೆಗೆ ಕಬ್ಬಿನ ಬಳಕೆ ಯಾಕೆ?

ಓಪೆಕ್ ಪ್ಲಸ್ ಗುಂಪಿನ (OPEC+) ದೇಶಗಳು ಕಚ್ಛಾ ತೈಲ ಉತ್ಪಾದನೆಯನ್ನು ಕಡಿಮೆ ಮಾಡಲು ನಿರ್ಧರಿಸಿವೆ. ಹೀಗಾಗಿ, ಜೈವಿಕ ಇಂಧನ (Biofuel) ಉತ್ಪಾದನೆಗೆ ಬೇಕಾದ ಎಥನಾಲ್​ನ ಕೊರತೆ ಎದುರಾಗಿದೆ. ಈ ಕೊರತೆ ನೀಗಿಸಲು ಕಬ್ಬನ್ನು ಉಪಯೋಗಿಸಲಾಗುತ್ತಿದೆ. ಕಬ್ಬಿನ ಮೂಲಕ ಎಥನಾಲ್ ತಯಾರಿಸಬಹುದಾಗಿದೆ.

ಸಕ್ಕರೆ ಬೆಲೆ ಹೆಚ್ಚಳದಿಂದ ಏನೇನು ಅನಾಹುತ?

ಸಕ್ಕರೆ ಬೆಲೆ ತುಟ್ಟಿಯಾದರೆ ಅದರಿಂದ ಅಗುವ ನೇರ ಮತ್ತು ಪರೋಕ್ಷ ಪರಿಣಾಮಗಳು ಹಲವು. ಮೊದಲಿಗೆ ಹಣದುಬ್ಬರ. ಇದು ಅಗತ್ಯವಸ್ತುಗಳ ಬೆಲೆ ಏರಿಕೆಗೂ ಹಣದುಬ್ಬರಕ್ಕೂ ನೇರ ಸಂಬಂಧ ಇದೆ. ಅಗತ್ಯವಸ್ತುಗಳಲ್ಲಿ ಸಕ್ಕರೆಯೂ ಪ್ರಮುಖವಾದುದು. ಸಕ್ಕರೆ ಬೆಲೆ ಏರಿದರೆ ಹಣದುಬ್ಬರ ಏರಿಕೆಯ ವೇಗವೂ ಹೆಚ್ಚುತ್ತದೆ.

ಇದನ್ನೂ ಓದಿ3rd Richest Lady: ಗಂಡ ಸತ್ತ ಬಳಿಕ ಸಿಕ್ಕ ಷೇರುಗಳಿಂದಲೇ ಭಾರತದ 3ನೇ ಅತೀ ಶ್ರೀಮಂತ ಮಹಿಳೆ ಎನಿಸಿರುವ ರೇಖಾ

ಹಣದುಬ್ಬರ ಏರಿಕೆಯಾದರೆ ಅದನ್ನು ನಿಯಂತ್ರಿಸಲು ಆರ್​ಬಿಐ ಮತ್ತೆ ಬಡ್ಡಿ ದರಗಳನ್ನು ಹೆಚ್ಚಿಸುವುದು ಅನಿವಾರ್ಯ. ಬಡ್ಡಿ ದರ ಹೆಚ್ಚಾದರೆ ಆರ್ಥಿಕತೆಯ ಚಟುವಟಿಕೆ ಮಂಕಾಗುತ್ತದೆ. ಇದನ್ನು ತಪ್ಪಿಸಲು ಕೇಂದ್ರ ಸರ್ಕಾರ ಸಕ್ಕರೆ ರಫ್ತನ್ನು ಕಡಿಮೆ ಮಾಡುವ ಸಾಧ್ಯತೆ ಇದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:44 pm, Tue, 11 April 23

ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್