ಆನ್ ಲೈನ್ ಶಾಪಿಂಗ್​ ವೇಳೆ ದೊಡ್ಡ ಮೊತ್ತ ಉಳಿಸೋದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ

| Updated By: ವಿವೇಕ ಬಿರಾದಾರ

Updated on: May 14, 2022 | 6:46 PM

ಆನ್ ಲೈನ್ ಶಾಪಿಂಗ್ ಮೂಲಕ ಬೆಲೆ ಬಾಳುವ ವಸ್ತುಗಳನ್ನು ಕಡಿಮೆ ಬೆಲೆಯಲ್ಲಿ ಕೊಂಡುಕೊಳ್ಳುವುದ ಹೇಗೆ?

ಆನ್ ಲೈನ್ ಶಾಪಿಂಗ್​ ವೇಳೆ ದೊಡ್ಡ ಮೊತ್ತ ಉಳಿಸೋದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ
ಆನ್ ಲೈನ್ ಶಾಪಿಂಗ್
Follow us on

ಒಂದು ಮಧ್ಯಮ ವರ್ಗದ ವ್ಯಕ್ತಿ ತಾನು ಉಳಿತಾಯ ಮಾಡಿದ ಹಣದಲ್ಲಿ ತನ್ನ ಬೆಲೆಬಾಳುವ ಗೃಹ ಉಪಯೋಗಿ ವಸ್ತುಗಳು ಕೊಂಡುಕೊಳ್ಳಲು ಬಯಸುತ್ತಾನೆ. ಅದು ಕಡಿಮೆ ಮೊತ್ತದಲ್ಲಿ. ಹೀಗಿರುವಾಗ ಆನ್ ಲೈನ್ ಶಾಪಿಂಗ್ (Online Shopping) ಮೊರೆ ಹೋಗುತ್ತಾನೆ. ಅಲ್ಲಿ ತನಗೆ ಬೇಕಾದ ವಸ್ತು ಹೆಚ್ಚಿನ ಬೆಲೆಯಲ್ಲಿ ಇರುತ್ತದೆ. ಹೀಗಿರುವಾಗ ಆತನು ಕೊಂಡುಕೊಳ್ಳಲು ಹಿಂದೇಟು ಹಾಕುತ್ತಾನೆ. ಈ ಸಮಯದಲ್ಲಿ ಆತನು ಏನು ಮಾಡಬೇಕು? ಹೇಗೆ ಕೊಂಡುಕೊಳ್ಳಬೇಕು? ಯೋಚಿಸಲು ಪ್ರಾರಂಭಿಸುತ್ತಾನೆ. ಇದಕ್ಕೆ ಉತ್ತರ ಮುಂದೆ ನೀಡುತ್ತೇವೆ.

ಉದಾಹರಣೆಗೆ ಮೋಹಿತ್ ಎಂಬ ವ್ಯಕ್ತಿ ತಮ್ಮ ಎಲ್ಲಾ ಶಾಪಿಂಗ್ ಗಳನ್ನು ಆನ್ ಲೈನ್ ಮೂಲಕವೇ ಮಾಡುತ್ತಾರೆ. ವಾಷಿಂಗ್ ಮಷೀನ್ ಹುಡುಕಾಟದಲ್ಲಿದ್ದ ಅವರಿಗೆ, ಸಾಕಷ್ಟು ಹುಡುಕಾಟದ ನಂತರ 22,000ರೂಪಾಯಿ ಬೆಲೆಯ ಅತ್ಯುತ್ತಮ ಎನ್ನಿಸುವಂಥದ್ದೇ ಸಿಕ್ಕಿತು. ಆದರೆ ಕೇವಲ 6-7 ದಿನಗಳ ನಂತರ, ಅವರ ಸ್ನೇಹಿತ ಅಂಕಿತ್ ಅದೇ ರೀತಿಯ ವಾಷಿಂಗ್ ಮಷೀನ್ ನ್ನು ಹಬ್ಬದ ಡಿಸ್ಕೌಂಟ್ ಕಾರಣ ಮೋಹಿತ್ ನೀಡಿದ ಹಣಕ್ಕಿಂತ 2000 ರೂಪಾಯಿ ಕಡಿಮೆ ಕೊಟ್ಟು ಕೊಂಡುಕೊಂಡರು. ಈಗ ನಾನೂ ಸ್ವಲ್ಪ ಕಾಲ ಕಾಯ್ದು ವಾಷಿಂಗ್ ಮಷೀನ್ ತೊಗೊಂಡಿದ್ರೆ 2000 ರೂಪಾಯಿ ಉಳಿಸಬಹುದಿತ್ತು ಎಂದು ಮೋಹಿತ್ ಪಶ್ಚಾತ್ತಾಪ ಪಡುತ್ತಾರೆ!

ಈ ಕತೆಯಲ್ಲಿ ನಮ್ಮೆಲ್ಲರಿಗೂ ಒಂದು ಪಾಠ ಇದೆ. ಆದಾಗ್ಯೂ, ಹೆಚ್ಚಿನ ಜನರು ಏನನ್ನಾದರೂ ಕೊಳ್ಳುವಾಗ ಆತುರದ ನಿರ್ಧಾರಗಳನ್ನೋ ಅಥವಾ ಇನ್ನಿತರ ತಪ್ಪು ನಿರ್ಧಾರಗಳನ್ನೋ ಮಾಡಿಬಿಡುತ್ತಾರೆ. ಅಂತಹ ತಪ್ಪುಗಳಿಂದ ನಷ್ಟ ಮಾಡಿಕೊಳ್ಳುತ್ತಾರೆ. ಆನ್ಲೈನ್ ಮೂಲಕ ಏನನ್ನಾದರೂ ಕೊಳ್ಳುವಾಗ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುವ ಕೆಲವು ಕಿವಿಮಾತುಗಳನ್ನು ನಾವು ಹೇಳುತ್ತೇವೆ ಕೇಳಿ.

ಇದನ್ನೂ ಓದಿ
ನಿರ್ಮಲಾ ಸೀತಾರಾಮನ್ ರಾಜ್ಯಸಭೆಗೆ ಮತ್ತೊಮ್ಮೆ ಕರ್ನಾಟಕದಿಂದ ಸ್ಪರ್ಧಿಸಲಿ, ಆ್ಯಸಿಡ್ ನಾಗನಿಗೆ ಅತ್ಯಾಚಾರದ ಆರೋಪಿಗೆ ನೀಡುವ ಶಿಕ್ಷೆ ವಿಧಿಸಿ: ಶೋಭಾ ಕರಂದ್ಲಾಜೆ
ಮಂಗಳ ಗ್ರಹದಲ್ಲಿ ಬಂಡೆಗಳ ಮದ್ಯೆ ದ್ವಾರ! ನಾಸಾದ ಚಿತ್ರ ಸೆರೆ ಹಿಡಿದ ಕ್ಯೂರಿಯಾಸಿಟಿ ರೋವರ್ ಉಪಗ್ರಹ
Poor Gut Health: ಕರುಳು ಸರಿಯಾಗಿ ಕಾರ್ಯನಿರ್ವಹಿಸತ್ತಿಲ್ಲ ಎಂದು ತಿಳಿಯುವುದು ಹೇಗೆ?
ಎಲ್ಲಿಂದ ಇನ್ಶೂರೆನ್ಸ್ ಖರೀದಿ ಮಾಡ್ಬೇಕು… ಆನ್ ಲೈನ್ ಬೆಸ್ಟೋ,, ಏಜೆಂಟರೋ? ಇಲ್ಲಿದೆ ಉತ್ತಮ ಮಾಹಿತಿ

ಮುಂದಿನ ಮಾರಾಟದ ಸೀಸನ್ ಯಾವಾಗ ಬರುತ್ತಿದೆ!? ಇದು ಪ್ರಶ್ನೆ ಜತೆ ಅಚ್ಚರಿ… ನಿಮ್ಮ ಮೊದಲ ಹೆಜ್ಜೆಯೆಂದರೆ ಜಾಲತಾಣಗಳಲ್ಲಿ ಮುಂದಿನ ಮಾರಾಟದ ಸೀಸನ್ ಬರುವವರೆಗೆ ಕಾಯುವುದು. ಮಾರಾಟದ ಸೀಸನ್ ಗೂ ಮುನ್ನ ಒಂದಷ್ಟು ವಸ್ತು ಪಟ್ಟಿ ಮಾಡಿಕೊಂಡು ಇಟ್ಟುಕೊಂಡರೆ ಲಾಭ ಮಾಡಿಕೊಳ್ಳಬಹುದು.

ನಿಮಗೆ ಫ್ಲಿಫ್ ಕಾರ್ಟ್ (flipkart) ಬಿಗ್ ಬಿಲಿಯನ್ ಸೇಲ್ ಹಾಗೂ ಅಮೆಝಾನ್ (Amazon) ಗ್ರೇಟ್ ಇಂಡಿಯನ್ ಫೆಸ್ಟಿವ್ ಸೇಲ್ ಬಗ್ಗೆ ಗೊತ್ತಿರುತ್ತದೆ. ಮಾರಾಟದ ಸೀಸನ್ ಮುಗಿಯುವಾಗ ಹಾಗೂ ಅನೇಕ ಹಬ್ಬಗಳ ಸಮಯದಲ್ಲಿ ಸಹ ನಮಗೆ ಡಿಸ್ಕೌಂಟ್ ಸಿಗುತ್ತದೆ. ಆದ್ದರಿಂದ, ಆತುರದ ನಿರ್ಧಾರಗಳನ್ನು ಮಾಡಬೇಡಿ, ಸ್ವಲ್ಪಸಮಯ ಕಾಯಿರಿ, ಹಾಗೂ ನೀವು ಉಳಿಸಿದ ಹಣದಿಂದ ನಿಮ್ಮ ಇಷ್ಟದ ವಸ್ತುಗಳನ್ನು ಖರೀದಿಸಿಕೊಳ್ಳಬಹುದು.

ಯಾವುದೇ ವಸ್ತುವನ್ನು ತಕ್ಷಣ ಕೊಳ್ಳುವ ಬದಲು ಅದನ್ನು ಮೊದಲು ನಿಮ್ಮ ವಿಶ್ಲಿಸ್ಟ್ ಸೇರಿಸುಕೊಳ್ಳುವುದು ಒಳ್ಳೆಯದು. ಈ ಹವ್ಯಾಸವು ನಿಮಗೆ ಹಣವನ್ನು ಎರಡು ರೀತಿಯಲ್ಲಿ ಉಳಿಸಲು ಸಹಾಯ ಮಾಡುತ್ತದೆ. ನೀವು ಬಯಸಿದ ವಸ್ತುವನ್ನು ಲಿಸ್ಟ್ ನಲ್ಲಿ ಇಟ್ಟ ನಂತರ ಸ್ವಲ್ಪ ಸಮಯದಲ್ಲಿ ನಿಮಗೆ ಅದರ ಅವಶ್ಯಕತೆಯಿಲ್ಲ ಎನಿಸಬಹುದು. ಲಿಸ್ಟ್ ನಲ್ಲಿ ಇದ್ದ ಮಾತ್ರಕ್ಕೆ ಅದನ್ನು ಖರೀದಿ ಮಾಡಲೇಬೇಕು ಎಂದೇನು ಇಲ್ಲವಲ್ಲ!

ಮತ್ತೊಂದು ಗುಟ್ಟನ್ನು ಹೇಳುತ್ತೇವೆ. ನಿಮ್ಮ ಇಷ್ಟದ ವಸ್ತುಗಳನ್ನು ಮಾರಾಟದ ಸೀಸನ್ ಅಂತ್ಯದ ವೇಳೆ ಕಡಿಮೆ ಬೆಲೆಗೆ ಕೊಳ್ಳಬಹುದು. ಒಂದು ಪ್ರೈಸ್ ಅಲರ್ಟ್ ಸೆಟ್ ಮಾಡಿ. ದರಗಳು ಕಡಿಮೆಯಾದಾಗ ಖರೀದಿ ಮಾಡಿ. ಗೂಗಲ್ ಬಾಬಾ ಹೇಗೆ ಹೆಲ್ಪ್ ಮಾಡಬಹುದು?: ಹೌದು, ಗೂಗಲ್ ಕೂಡ ನಿಮಗೆ ಹಣವನ್ನು ಉಳಿಸಲು ಸಹಾಯ ಮಾಡುತ್ತದೆ.

ನೀವು ಮಾಡಬೇಕಾಗಿರೋದು ಇಷ್ಟೇ, ಯಾವುದೇ ವಸ್ತುವನ್ನು ಯಾವ್ದೇ ಇ-ಕಾಮರ್ಸ್ ಸೈಟ್ನಲ್ಲಿ ಹುಡುಕುವ ಮೊದಲು ಗೂಗಲ್ನಲ್ಲಿ ಹುಡುಕಿ. ಹೀಗೆ ಮಾಡೋದರಿಂದ ನಿಮಗೆ ಬೇರೆ-ಬೇರೆ ಜಾಲತಾಣಗಳಲ್ಲಿನ ಒಂದೇ ವಸ್ತುವಿನ ವಿವಿಧ ಬೆಲೆಗಳು ಗೊತ್ತಾಗುತ್ತವೆ. ಆ ಬೆಲೆಗಳನ್ನು ಹೋಲಿಸಿ ನೋಡಿದಾಗ ನಿಮಗೆ ಬೇಕಾದ ವಸ್ತು ಅತ್ಯಂತ ಕಡಿಮೆ ಬೆಲೆಯಲ್ಲಿ ಎಲ್ಲಿ ಸಿಗುತ್ತದೆ ಎಂದು ನಿಮಗೆ ತಿಳಿಯುತ್ತದೆ.

ಕ್ರೆಡಿಟ್ (Credit) ಮತ್ತು ಡೆಬಿಟ್ ಕಾರ್ಡ್ (Debit Card) ನಿಂದ ನಿಮಗೆ ಸಿಗುವ ಕೊಡುಗೆಗಳೇನು!
ವಿವಿಧ ಜಾಲತಾಣಗಳಲ್ಲಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳಿಂದ ಅನೇಕ ಕೊಡುಗೆಗಳು ಸಿಗುತ್ತವೆ. ಅವುಗಳನ್ನು ಪರಿಶೀಲಿಸಿ. ಯಾವ ಜಾಲತಾಣದಲ್ಲಿ ಈ ಕಾರ್ಡ್ ಗಳಿಂದ ಹಣ ಪಾವತಿ ಮಾಡಿದಾಗ ಅತ್ಯುತ್ತಮ ಡಿಸ್ಕೌಂಟ್ ಸಿಗುವುದೋ ಆ ಜಾಲತಾಣದಲ್ಲಿ ಖರೀದಿ ಮಾಡಿಕೊಂಡರೆ ಸಾವಿರಾರು ರೂ. ಉಳಿಸಿಕೊಳ್ಳಬಹುದು.

ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ನಲ್ಲಿ ಕೂಪನ್ ಕೋಡ್ ಗಳು ಸಹ ಸಿಗುತ್ತಿದ್ದು ಅವುಗಳನ್ನೂ ಹುಡುಕಿ ಅಪ್ಲೈ ಮಾಡಿಕೊಂಡರೆ ಲಾಭ ಮಾಡಿಕೊಳ್ಳಬಹುದು. ಪ್ರೈಸ್ ಟ್ರ್ಯಾಕರ್ ಎಕ್ಸ್ ಟೆನ್​ಶನ್ ಸಹ ಲಾಭ ಮಾಡುತ್ತದೆ. ನೀವು ಡೆಸ್ಕ್ಟಾಪ್ ಕಂಪ್ಯೂಟರ್ ಬಳಸುತ್ತಿದ್ದರೆ ಗೂಗಲ್ ಕ್ರೋಮ್ ಬ್ರೌಸರ್ ಪ್ರೈಸ್ ಟ್ರ್ಯಾಕರ್ ಬಳಸಿಕೊಳ್ಳಬಹುದು. ನೀವು ಅಮೆಜಾನ್ ನಿಂದ ಏನನ್ನಾದರೂ ಕೊಳ್ಳಬೇಕೆಂದು ಬಯಸಿದ್ದೀರಿ ಎಂದು ಇಟ್ಟುಕೊಳ್ಳೋಣ, ಆಗ ನೀವು ಅದರ ಪ್ರೈಸ್ ಗ್ರಾಪ್ ಗೆ ಹೋಗಿ ಆ ವಸ್ತುವಿನ ದರ ಯಾವಾಗ ಕಡಿಮೆ ಇತ್ತು ಹಾಗೂ ಯಾವಾಗ ಜಾಸ್ತಿ ಇತ್ತು ಎಂದು ಪರಿಶೀಲಿಸಿ ಲೆಕ್ಕ ಹಾಕಿಕೊಂಡರೆ ಯಾವಾಗ ಖರೀದಿ ಮಾಡಬಹುದು ಎಂಬ ಸ್ಪಷ್ಟ ಐಡಿಯಾ ಸಿಗುತ್ತದೆ.

ಹಣ ಉಳಿತಾಯ ಮಾಡಿಕೊಳ್ಳಲಲು ಸೋಶಿಯಲ್ ಮೀಡಿಯಾ ಸಹಾಯ ಸಹ ಪಡೆದುಕೊಳ್ಳಬಹುದು. ಟೆಲಿಗ್ರಾಮ್ ಅತ್ಯುತ್ತಮ ಮಾರಾಟದ ವ್ಯವಹಾರಗಳ ಮಾಹಿತಿ ಹಂಚುತ್ತಿರುತ್ತದೆ. ಅಲ್ಲಿ ಚಾನಲ್ ಗಳನ್ನು ಸೇರಿಕೊಂಡರೆ ಇದು ಅತ್ಯಂತ ಲಾಭದಾಯಕವಾಗುತ್ತದೆ. ಆದರೆ ಲಿಂಕ್ ಕ್ಲಿಕ್ ಮಾಡುವ ಮುನ್ನ ಎಚ್ಚರ ಇರಲಿ.

– ನೀವು ಅಮೆಜಾನ್ ಪ್ರೈಮ್ ಮೆಂಬರ್ಶಿಪ್ ಹಾಗೂ ಫ್ಲಿಫ್ ಕಾರ್ಟ್ ಪ್ಲಸ್ ಮೆಂಬರ್ಶಿಪ್ ಪಡೆದುಕೊಂಡರೆ ಲಾಭ ಗಳಿಸಬಹುದು.

– ಅಮೆಜಾನ್ ನಲ್ಲಿ ಸಬ್ ಸ್ಕ್ರೈಬ್ ಅಂಡ್ ಸೇವ್ ವಿಧಾನವನ್ನು ಆಯ್ಕೆ ಮಾಡಿಕೊಂಡು ಯಾವುದೇ ವಸ್ತುವಿನ ಮೇಲೆ ಶೇ 15ರ ಡಿಸ್ಕೌಂಟ್ ಪಡೆಯಬಹುದು.

– ಅನೇಕ ಇ-ಕಾಮರ್ಸ್ ಜಾಲತಾಣಗಳು ತಮ್ಮದೇ ಆದ ಇ-ವ್ಯಾಲೆಟ್ ಗಳನ್ನು ಹೊಂದಿದ್ದು ಅವು ಕ್ಯಾಶ್ಬ್ಯಾಕ್ ಆಫರ್ ಗಳನ್ನು ನೀಡುತ್ತವೆ.

ಆನ್ಲೈನ್ ಪಾವತಿಯನ್ನೇ ಮಾಡಿ, ಏಕೆಂದರೆ ಕ್ಯಾಶ್ ಆನ್ ಡೆಲಿವರಿ ವಿಧಾನ ಆಯ್ಕೆ ಮಾಡಿಕೊಂಡರೆ, ವಸ್ತುವಿನ ದರ ಹೆಚ್ಚಾಗುತ್ತದೆ.
ಕ್ಯಾಶ್ ಕರೋ ಹಾಗೂ ಕ್ಯಾಶ್ ಬ್ಯಾಕ್ ಮತ್ತು ಕೂಪನ್ಸ್ ಗಳಂತಹ ಅನೇಕ ಆಪ್ ಗಳೂ ಇದ್ದು ನೀವು ಇ-ಕಾಮರ್ಸ್ ಜಾಲತಾಣಗಳ ಮುಖಾಂತರ ವ್ಯವಹಾರ ಮಾಡಿದಾಗಲೂ ಇವುಗಳಿಂದ ನಿಮಗೆ ಕ್ಯಾಶ್ ಬ್ಯಾಕ್ ಸಿಗುತ್ತದೆ.