Parag Agarwal: ಟ್ವಿಟ್ಟರ್​ನಿಂದ ಇಬ್ಬರು ಉನ್ನತಾಧಿಕಾರಿಗಳ ಕೆಲಸದಿಂದ ತೆಗೆದ ಸಿಇಒ ಪರಾಗ್ ಅಗರ್​ವಾಲ್ ಆ ನಂತರ ಹೇಳಿದ್ದೇನು?

ಟ್ವಿಟ್ಟರ್ ಕಂಪೆನಿಯ ಇಬ್ಬರು ಉನ್ನತಾಧಿಕಾರಿಗಳನ್ನು ಕೆಲಸದಿಂದ ತೆಗೆದ ಬಗ್ಗೆ ಕಂಪೆನಿಯ ಸಿಇಒ ಪರಾಗ್ ಅಗರ್​ವಾಲ್ ಟ್ವೀಟ್ ಮಾಡಿದ್ದಾರೆ.

Parag Agarwal: ಟ್ವಿಟ್ಟರ್​ನಿಂದ ಇಬ್ಬರು ಉನ್ನತಾಧಿಕಾರಿಗಳ ಕೆಲಸದಿಂದ ತೆಗೆದ ಸಿಇಒ ಪರಾಗ್ ಅಗರ್​ವಾಲ್ ಆ ನಂತರ ಹೇಳಿದ್ದೇನು?
ಪರಾಗ್ ಅಗರ್​ವಾಲ್ ಮತ್ತು ಎಲಾನ್ ಮಸ್ಕ್
Follow us
TV9 Web
| Updated By: Srinivas Mata

Updated on: May 14, 2022 | 2:41 PM

ಕಂಪೆನಿಯ ಇಬ್ಬರು ಉನ್ನತ ಅಧಿಕಾರಿಗಳನ್ನು ಯಾಕೆ ಕೆಲಸದಿಂದ ತೆಗೆಯಬೇಕಾಯಿತು ಎಂಬ ಬಗ್ಗೆ ಟ್ವಿಟ್ಟರ್ (Twitter)​ ಸಿಇಒ ಪರಾಗ್ ಅಗರ್​ವಾಲ್ ಸರಣಿ ಟ್ವೀಟ್ ಮಾಡಿದ್ದಾರೆ. ಎಲಾನ್ ಮಸ್ಕ್ ಕಂಪೆನಿಯನ್ನು ಖರೀದಿಸಿದ್ದಾರೆ ಎಂಬ ಕಾರಣಕ್ಕೆ ಕಠಿಣ ಚರ್ಚೆಗಳು ಮಾಡುವುದನ್ನು ನಿಲ್ಲಿಸುವುದಕ್ಕೆ ಆಗಲ್ಲ ಎಂದಿದ್ದಾರೆ. ಅಂದಹಾಗೆ ಅಗರ್​ವಾಲ್ ಅವರು ಟ್ವಿಟ್ಟರ್​ನ ಪ್ರಾಡಕ್ಟ್ ಮುಖ್ಯಸ್ಥ ಕೇಯ್ವಾನ್ ಬೇಯ್ಕ್​ಪೌರ್ ಮತ್ತು ಆದಾಯ ಪ್ರಾಡಕ್ಟ್​ನ ಮುಖ್ಯಸ್ಥ ಬ್ರೂಸ್ ಫಾಲ್ಕ್​ರನ್ನು ಕೆಲಸದಿಂದ ತೆಗೆದಿದ್ದಾರೆ. ಅಗತ್ಯಕ್ಕೆ ತಕ್ಕಂತೆ ಕಠಿಣ ತೀರ್ಮಾನಗಳನ್ನು ಮಾಡುವುದನ್ನು ಮುಂದುವರಿಸುವುದಾಗಿ ಹೇಳಿರುವ ಅಗರ್​ವಾಲ್, ನಮ್ಮ ಸೇವೆ ಮತ್ತು ವ್ಯವಹಾರದ ಆಳವಾದ ಸಂಕೀರ್ಣತೆ ಸ್ವೀಕರಿಸಿ. ಮತ್ತು ಉತ್ತಮವಾದ ಹೆಚ್ಚಿನ ಬದಲಾವಣೆಯನ್ನು ನೀವು ನಿರೀಕ್ಷಿಸಬಹುದು ಎಂದಿದ್ದಾರೆ. ಕಂಪೆನಿಯು ಈ ಹಿಂದೆ ಹೇಳಿಕೊಂಡಂತೆ, ಟ್ವಿಟ್ಟರ್ ಬಳಕೆದಾರರಲ್ಲಿ ಕೇವಲ ಶೇ 5ರಷ್ಟು ಜನರು ಮಾತ್ರ ಬಾಟ್‌ಗಳು ಅಥವಾ ನಕಲಿ ಖಾತೆಗಳು ಎಂದು ಖಚಿತಪಡಿಸುವವರೆಗೆ ಟ್ವಿಟ್ಟರ್ ಸ್ವಾಧೀನ ಒಪ್ಪಂದವನ್ನು ತಡೆಹಿಡಿಯಲಾಗಿದೆ ಎಂಬುದಾಗಿ ಮಸ್ಕ್ ಹೇಳಿದ್ದಾರೆ ಎಂಬುದನ್ನು ಗಮನಿಸಬೇಕು. ಆದರೆ ಅವರು ಇನ್ನೂ ಖರೀದಿಗೆ ಸಂಬಂಧಿಸಿದ ವ್ಯವಹಾರಕ್ಕೆ ಬದ್ಧರಾಗಿರುವುದಾಗಿ ಹೇಳಿದ್ದಾರೆ.

ಮಸ್ಕ್​ರಿಂದ ಟ್ವಿಟ್ಟರ್ ಸ್ವಾಧೀನದ ಅವಧಿಯಲ್ಲಿ ಕಂಪೆನಿಯ ಇಬ್ಬರು ಉನ್ನತ ಅಧಿಕಾರಿಗಳನ್ನು ವಜಾ ಮಾಡುವ ಅಗರವಾಲ್ ಅವರ ನಿರ್ಧಾರಗಳು ಕೆಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಬೇಯ್ಕ್​ಪೌರ್ ಪ್ರಕರಣದಲ್ಲಿ, ಕಾರ್ಯನಿರ್ವಾಹಕರು ಪಿತೃತ್ವ ರಜೆಯಲ್ಲಿದ್ದರು ಮತ್ತು ಕಂಪೆನಿಯನ್ನು ತೊರೆಯಲು ಅವರನ್ನು ಸಿಇಒ ಕೇಳಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಟ್ವಿಟ್ಟರ್‌ನಲ್ಲಿನ ಅನೇಕ ಹೊಸ ಉತ್ಪನ್ನ ಉಪಕ್ರಮಗಳಿಗೆ ಬೇಯ್ಕ್​ಪೌರ್ ಅವರಿಗೆ ಶ್ರೇಯ ಸಲ್ಲಬೇಕು. ಆದರೆ ಟ್ವಿಟ್ಟರ್ ಸ್ವಾಧೀನ ನಂತರದ ಕೆಲವು ವ್ಯಾಖ್ಯಾನವನ್ನು ನಿಯಂತ್ರಿಸಲು ಅಗರವಾಲ್ ಈಗ ಮಾತನಾಡುತ್ತಿದ್ದಾರೆಂದು ತೋರುತ್ತದೆ. ಅವುಗಳಲ್ಲಿ ಹೆಚ್ಚಿನವು ಎಲಾನ್ ಮಸ್ಕ್ ಮತ್ತು ಅವರ ನಿರಂತರ ಟ್ವೀಟ್‌ಗಳಿಂದ ನಿಯಂತ್ರಿಸಲ್ಪಟ್ಟಿವೆ.

ಅಗರವಾಲ್ ಮಾಡಿರುವ ಟ್ವೀಟ್​ನಲ್ಲಿ, “ಕಳೆದ ಹಲವು ವಾರಗಳಲ್ಲಿ ಬಹಳಷ್ಟು ಸಂಭವಿಸಿದೆ. ನಾನು ಕಂಪೆನಿಯ ಮೇಲೆ ಗಮನ ಕೇಂದ್ರೀಕರಿಸಿದ್ದೇನೆ ಮತ್ತು ಈ ಸಮಯದಲ್ಲಿ ಹೆಚ್ಚು ಸಾರ್ವಜನಿಕವಾಗಿ ಹೇಳಲಿಲ್ಲ. ಆದರೆ ನಾನು ಈಗ ಹೇಳುತ್ತೇನೆ” ಎಂದಿದ್ದರು. ಆ ನಂತರ ಅವರು ನಾಯಕತ್ವದ ತಂಡದಲ್ಲಿನ ಬದಲಾವಣೆಗಳನ್ನು ತಿಳಿಸಲು ಹೋದರು ಮತ್ತು “ಇನ್ನೇನು ನಮ್ಮನ್ನು (ಟ್ವಿಟ್ಟರ್) ಸ್ವಾಧೀನ ಪಡಿಸಿಕೊಳ್ಳುತ್ತಿರುವಾಗ ‘ಅಸಹಾಯಕ’ ಸಿಇಒ ಈ ಬದಲಾವಣೆಗಳನ್ನು ಏಕೆ ಮಾಡುತ್ತಾರೆ ಎಂದು ಕೆಲವರು ಕೇಳುತ್ತಿದ್ದಾರೆ,” ಎಂದಿದ್ದಾರೆ.

ಅಗರವಾಲ್ ಪ್ರಕಾರ, ಒಪ್ಪಂದವು ಮುಕ್ತಾಯಗೊಳ್ಳಲಿದೆ ಎಂದು ಅವರು ನಿರೀಕ್ಷಿಸುತ್ತಿರುವಾಗ, ಅವರು ಇನ್ನೂ “ಟ್ವಿಟ್ಟರ್ ಅನ್ನು ಮುನ್ನಡೆಸಲು ಮತ್ತು ನಿರ್ವಹಿಸಲು ಜವಾಬ್ದಾರರಾಗಿರುತ್ತಾರೆ” ಮತ್ತು ಕಂಪೆನಿಯಲ್ಲಿ ಯಾರೂ ಕಾಟಾಚಾರಕ್ಕೆ ಕೆಲಸ ಮಾಡುತ್ತಿಲ್ಲ ಎಂದು ಒತ್ತಿ ಹೇಳಿದರು. “ಜನರು ಸಹ ಕೇಳಿದ್ದಾರೆ: ವ್ಯವಹಾರ ಮುಗಿದ ನಂತರ ಈಗ ವೆಚ್ಚವನ್ನು ಏಕೆ ನಿರ್ವಹಿಸಬೇಕು? ಇದೀಗ ನಮ್ಮ ಉದ್ಯಮವು ತುಂಬಾ ಸವಾಲಿನ ಮ್ಯಾಕ್ರೋ ಪರಿಸರದಲ್ಲಿದೆ. ಕಂಪೆನಿಯ ಆರೋಗ್ಯಕ್ಕಾಗಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಲು ನಾನು ಒಪ್ಪಂದವನ್ನು ಕಾರಣ ಎಂಬಂತೆ ತೆಗೆದುಕೊಳ್ಳುವುದಿಲ್ಲ, ಅಥವಾ ಟ್ವಿಟ್ಟರ್‌ನಲ್ಲಿ ಯಾವುದೇ ನಾಯಕ ಹಾಗೆ ಮಾಡುವುದಿಲ್ಲ,”ಎಂದು ಅವರು ಬರೆದಿದ್ದಾರೆ.

ಈ ಹಿಂದಿನ ವರದಿಗಳ ಪ್ರಕಾರ, ಮಸ್ಕ್ ಅವರ ಟ್ವಿಟ್ಟರ್ ಒಪ್ಪಂದದ ನಂತರ ಏನಾದರೂ ಪರಾಗ್ ಅಗರ್​ವಾಲ್ ಅವರನ್ನು ಸಿಇಒ ಹುದ್ದೆಯಿಂದ ಪದಚ್ಯುತಗೊಳಿಸಿದರೆ 42 ಮಿಲಿಯನ್ ಯುಎಸ್​ಡಿ ಗಳಿಸಲಿದ್ದಾರೆ. ಟ್ವಿಟ್ಟರ್ ಸಿಇಒಗೆ ಬದಲಿಯಾಗಿ ಮಸ್ಕ್ ಈಗಾಗಲೇ ಮನಸ್ಸಿನಲ್ಲಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದ್ದು, ಆದರೆ ಇತರರು ಟೆಸ್ಲಾ ಮುಖ್ಯಸ್ಥರು ಒಪ್ಪಂದದ ಮೂಲಕ ಮಧ್ಯಂತರ ಸಿಇಒ ಆಗಬಹುದು ಎಂದಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Elon Musk: ಟ್ವಿಟ್ಟರ್ ಖರೀದಿಗೆ ತಾತ್ಕಾಲಿಕ ತಡೆ; ಬೇಡವೇ ಬೇಡ ಅಂದರೆ ಎಲಾನ್​ ಮಸ್ಕ್​ಗೆ 100 ಕೋಟಿ ಯುಎಸ್​ಡಿ ಬರೆ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ