AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WhiteHat Jr: ಎರಡು ತಿಂಗಳಲ್ಲಿ ಈ ಕಂಪೆನಿಗೆ 800 ಉದ್ಯೋಗಿಗಳ ರಾಜೀನಾಮೆ; ಮತ್ತೆ ಕಚೇರಿಗೆ ಬನ್ನಿ ಎಂದಿದ್ದಕ್ಕೆ ಬಿತ್ತು ಸಾಲು ಸಾಲು ಪೇಪರ್

ಇನ್ನು ವರ್ಕ್ ಫ್ರಮ್ ಹೋಮ್ ಸಾಕು, ಕಚೇರಿಗಳಿಗೆ ಹಿಂತಿರುಗಿ ಎಂದು ಈ ಭಾರತೀಯ ಕಂಪೆನಿ ಉದ್ಯೋಗಿಗಳಿಗೆ ಹೇಳಿದ ಮೇಲೆ 800 ಮಂದಿ ಎರಡು ತಿಂಗಳಲ್ಲಿ ರಾಜೀನಾಮೆ ಸಲ್ಲಿಸಿದ್ದಾರೆ.

WhiteHat Jr: ಎರಡು ತಿಂಗಳಲ್ಲಿ ಈ ಕಂಪೆನಿಗೆ 800 ಉದ್ಯೋಗಿಗಳ ರಾಜೀನಾಮೆ; ಮತ್ತೆ ಕಚೇರಿಗೆ ಬನ್ನಿ ಎಂದಿದ್ದಕ್ಕೆ ಬಿತ್ತು ಸಾಲು ಸಾಲು ಪೇಪರ್
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:May 14, 2022 | 6:34 PM

Share

ಐದಲ್ಲ, ಹತ್ತಲ್ಲ ಒಟ್ಟು 800 ಉದ್ಯೋಗಿಗಳು ರಾಜೀನಾಮೆ ನೀಡಿದ್ದಾರೆ ಅಂದರೆ ನಂಬುತ್ತೀರಾ? ಎಡ್​ಟೆಕ್​ ಸ್ಟಾರ್ಟ್​ಅಪ್ ವೈಟ್​ಹ್ಯಾಟ್ ಜೂನಿಯರ್ WhiteHat Jrಗೆ ಕಳೆದ ಎರಡು ತಿಂಗಳಲ್ಲಿ ರಾಜೀನಾಮೆ (Resignation) ನೀಡಿರುವವರ ಸಂಖ್ಯೆ ಇದು. ಹಾಗೆ ರಾಜೀನಾಮೆ ನೀಡುವುದಕ್ಕೆ ಕಾರಣ ಏನು ಅಂತೀರಾ? ಇನ್ನು ವರ್ಕ್ ಫ್ರಮ್ ಹೋಮ್ ಸಾಕು, ವರ್ಕ್ ಫ್ರಮ್ ಆಫೀಸ್​ ಶುರು ಮಾಡಬೇಕು ಬನ್ನಿ ಎಂದು ಕರೆಯಲಾಗಿದೆ, ಅಷ್ಟೇ. ಈ ವೈಟ್​ಹ್ಯಾಟ್ ಜೂನಿಯರ್ ಒಡೆತನ ಬೈಜೂಸ್ ಬಳಿಯಿದೆ. ಈ ಸ್ಟಾರ್ಟ್​ಅಪ್ ಅನ್ನು 2020ನೇ ಇಸವಿಯಲ್ಲಿ 300 ಮಿಲಿಯನ್ ಅಮೆರಿಕನ್ ಡಾಲರ್​ಗೆ ಖರೀದಿಸಲಾಗಿದೆ. ಮಾರ್ಚ್ 18, 2022ರಂದು ಕಂಪೆನಿಯಾದ್ಯಂತ ಕಳುಹಿಸಿದ ಇಮೇಲ್​ನಲ್ಲಿ, ರಿಮೋಟ್​ ವರ್ಕಿಂಗ್ ಮಾಡುತ್ತಿರುವವರು ಅದನ್ನು ನಿಲ್ಲಿಸಿ, ಇನ್ನೊಂದು ತಿಂಗಳೊಳಗೆ ಆಯಾ ಕಚೇರಿಗಳಿಗೆ ಹಿಂತಿರುಗಲು ಕೇಳಲಾಗಿದೆ. Inc42 ವರದಿ ಮಾಡಿರುವಂತೆ, ಮಾರಾಟ, ಕೋಡಿಂಗ್ ಮತ್ತು ಗಣಿತ ತಂಡವನ್ನು ಗುರುಗ್ರಾಮ್, ಮುಂಬೈ ಹಾಗೂ ಬೆಂಗಳೂರು ಕಚೇರಿಗಳಿಂದ ಕಾರ್ಯ ನಿರ್ವಹಿಸುವಂತೆ ತಿಳಿಸಲಾಗಿದೆ.

ಇದಾದ ಮೇಲೆ ಸಾಮೂಹಿಕವಾಗಿ ರಾಜೀನಾಮೆಗಳ ಸಲ್ಲಿಕೆ ಆಗಿದೆ. ಮಾರಾಟ, ಕೋಡಿಂಗ್ ಹಾಗೂ ಗಣಿತ ತಂಡವು ಸೇರಿದಂತೆ ಕಂಪೆನಿಯಾದ್ಯಂತ 800ರಷ್ಟು ಪೂರ್ಣಾವಧಿ ಉದ್ಯೋಗಿಗಳು ರಾಜೀನಾಮೆ ಸಲ್ಲಿಸಿದ್ದಾರೆ. ತಮ್ಮ ಕಚೇರಿ ಸ್ಥಳಗಳಿಗೆ ಹಿಂತಿರುಗಲು ಇಷ್ಟವಿಲ್ಲದ ಕಾರಣವನ್ನು ನೀಡಿ, ಇಂಥದ್ದೊಂದು ನಿರ್ಧಾರ ಕೈಗೊಂಡಿದ್ದಾರೆ.

“ಕೆಲಸಕ್ಕೆ ಮತ್ತೆ ಹಿಂತಿರುಗುವ ಭಾಗವಾಗಿ ನಮ್ಮ ಮಾರಾಟ ವಿಭಾಗ ಮತ್ತು ಸಪೋರ್ಟ್ ಉದ್ಯೋಗಿಗಳನ್ನು ಏಪ್ರಿಲ್​ 18ನೇ ತಾರೀಕಿನಿಂದ ಗುರುಗ್ರಾಮ್ ಮತ್ತು ಮುಂಬೈ ಕಚೇರಿಗಳಿಗೆ ಬರುವಂತೆ ಕೇಳಲಾಯಿತು. ವೈದ್ಯಕೀಯ ಮತ್ತು ವೈಯಕ್ತಿಕ ಕಾರಣಗಳು ಇರುವವರಿಗೆ ವಿನಾಯಿ ನೀಡಿದ್ದೆವು. ಅಗತ್ಯಕ್ಕೆ ತಕ್ಕಂತೆ ಕೆಲಸ ಮಾಡುವ ಅವಕಾಶ ನೀಡುವ ಬಗ್ಗೆ ಹೇಳಿದ್ದೆವು. ನಮ್ಮ ಶಿಕ್ಷಕರು ವರ್ಕ್ ಫ್ರಮ್ ಹೋಮ್ ಮುಂದುವರಿಸಲಿದ್ದಾರೆ,” ಎಂದು WhiteHat Jr ಹೇಳಿರುವುದಾಗಿ ವರದಿ ಆಗಿದೆ.

ಅಂದಹಾಗೆ, WhiteHat Jr ನಷ್ಟದಲ್ಲಿ ನಡೆಯುತ್ತಿದೆ. ಹಣಕಾಸು ವರ್ಷ 2021ಕ್ಕೆ 1690 ಕೋಟಿ ರೂಪಾಯಿ ಒಟ್ಟು ನಷ್ಟವನ್ನು ದಾಖಲಿಸಿದೆ. ಏಪ್ರಿಲ್ 1, 2020ರಿಂದ ಮಾರ್ಚ್ 31, 2021ರ ಮಧ್ಯೆ ಈ ಸ್ಟಾರ್ಟ್ ಅಪ್ ಕಂಪೆನಿ ತನ್ನ ಕಾರ್ಯಾಚರಣೆ ಮೂಲಕ 483.9 ಕೋಟಿ ಗಳಿಸಿದ್ದು, ಒಟ್ಟು ವೆಚ್ಚ 2,175.2 ಕೋಟಿ ರೂಪಾಯಿ ದಾಖಲಿಸಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Work From Home: ಕಚೇರಿಗೆ ಬನ್ನಿ, ಇಲ್ಲ ಬೇರೆ ಕೆಲಸ ಹುಡುಕಿಕೊಳ್ಳಿ ಎಂದಿದ್ದಕ್ಕೆ ಆ ಕಂಪೆನಿ ಸಿಬ್ಬಂದಿ ಮಾಡಿದ್ದೇನು?

Published On - 11:49 am, Sat, 14 May 22

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್