ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್ (ICICI Bank) ಫೆಬ್ರವರಿ 10ರಿಂದ ಕ್ರೆಡಿಟ್ ಕಾರ್ಡ್‌ಗಳ ಶುಲ್ಕವನ್ನು ಪರಿಷ್ಕರಿಸಿದೆ. ಈಗ ಎಲ್ಲ ನಗದು ಮುಂಗಡಕ್ಕಾಗಿ ಬ್ಯಾಂಕ್ ಎಲ್ಲ ಕಾರ್ಡ್‌ಗಳ ಮೇಲೆ ಶೇ 2.50ರಷ್ಟು ವಹಿವಾಟು ಶುಲ್ಕ, ಕನಿಷ್ಠ 500 ರೂಪಾಯಿ ಶುಲ್ಕಕ್ಕೆ ಒಳಪಟ್ಟಿರಲಿದೆ. ಚೆಕ್ ಮತ್ತು ಆಟೋ-ಡೆಬಿಟ್ ಹಿಂತಿರರುಗಿದಲ್ಲಿ ಒಟ್ಟು ಮೊತ್ತದ (ಕನಿಷ್ಠ ರೂ. 500) ಶೇ 2 ರಷ್ಟು ಶುಲ್ಕವನ್ನು ಬ್ಯಾಂಕ್ ನಿಗದಿಪಡಿಸಿದೆ.
ಎಮರಾಲ್ಡ್ ಹೊರತುಪಡಿಸಿ ಎಲ್ಲ ಕಾರ್ಡ್‌ಗಳಿಗೆ ವಿಳಂಬ ಶುಲ್ಕವನ್ನು ಬ್ಯಾಂಕ್ ಪರಿಷ್ಕರಿಸಿದೆ. ಈಗ, ಬಾಕಿ ಮೊತ್ತವು 100ಕ್ಕಿಂತ ಕಡಿಮೆಯಿದ್ದರೆ ಯಾವುದೇ ವಿಳಂಬ ಶುಲ್ಕ ಇರುವುದಿಲ್ಲ. ರೂ. 100ರಿಂದ 500ರ ಮಧ್ಯದ ಬಾಕಿ ಮೊತ್ತಕ್ಕೆ ರೂ. 100, ರೂ. 501ರಿಂದ ರೂ. 5000 ಬಾಕಿ ಮೊತ್ತಕ್ಕೆ ರೂ. 500 ವಿಧಿಸಲಾಗುತ್ತದೆ; ರೂ. 10,000ವರೆಗಿನ ಬಾಕಿಗೆ ರೂ. 750; ರೂ. 25000 ವರೆಗೆ ರೂ. 900; ರೂ. 50,000ವರೆಗಿನ ಮೊತ್ತಕ್ಕೆ 1000 ರೂಪಾಯಿ ಮತ್ತು 50000 ಮೇಲ್ಪಟ್ಟ ಬಾಕಿಗೆ 1200 ವಿಧಿಸಲಾಗುತ್ತದೆ.
ಹೆಚ್ಚುವರಿಯಾಗಿ ಗ್ರಾಹಕರ ಉಳಿತಾಯ ಬ್ಯಾಂಕ್ ಖಾತೆಯಿಂದ 50 ಮತ್ತು ಜಿಎಸ್‌ಟಿಯನ್ನು ಡೆಬಿಟ್ ಮಾಡಲಾಗುತ್ತದೆ.
ಇದನ್ನೂ ಓದಿ: ICICI Bank: ಕಸ್ಟಮ್ಸ್ ಸುಂಕ ಆನ್ಲೈನ್ ಪಾವತಿ ಐಸಿಐಸಿಐ ಬ್ಯಾಂಕ್ನಿಂದ ಇನ್ನು ಸುಲಭ