ICICI Bank Fixed Deposits: ಐಸಿಐಸಿಐ ಬ್ಯಾಂಕ್​ ಎಫ್​ಡಿ ಬಡ್ಡಿ ದರಗಳ ಪರಿಷ್ಕರಣೆ; ಎಷ್ಟು ಎಂಬ ಮಾಹಿತಿ ಇಲ್ಲಿದೆ

| Updated By: Srinivas Mata

Updated on: Dec 01, 2021 | 11:29 PM

ಪ್ರಮುಖ ಖಾಸಗಿ ಬ್ಯಾಂಕ್​ ಆದ ಐಸಿಐಸಿಐ ಬ್ಯಾಂಕ್​ ನಿಶ್ಚಿತ ಠೇವಣಿ ಮೇಲಿನ ತನ್ನ ಬಡ್ಡಿದರವನ್ನು ಪರಿಷ್ಕರಣೆ ಮಾಡಿದೆ. ಆ ಬಗ್ಗೆ ಇಲ್ಲಿ ವಿವರ ಇಲ್ಲಿದೆ.

ICICI Bank Fixed Deposits: ಐಸಿಐಸಿಐ ಬ್ಯಾಂಕ್​ ಎಫ್​ಡಿ ಬಡ್ಡಿ ದರಗಳ ಪರಿಷ್ಕರಣೆ; ಎಷ್ಟು ಎಂಬ ಮಾಹಿತಿ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us on

ಐಸಿಐಸಿಐ ಬ್ಯಾಂಕ್ (ICICI Bank) ನಿಶ್ಚಿತ ಠೇವಣಿಗಳ (Fixed Deposits) ಬಡ್ಡಿದರಗಳನ್ನು ಪರಿಷ್ಕರಿಸಿದೆ. 7 ದಿನಗಳಿಂದ 10 ವರ್ಷಗಳ ಅವಧಿಯವರೆಗೆ ಫಿಕ್ಸೆಡ್​ ಡೆಪಾಸಿಟ್​ಗಳನ್ನು ನೀಡುತ್ತದೆ. ಐಸಿಐಸಿಐ ಬ್ಯಾಂಕ್ ಶೇ 2.5ರಿಂದ ಶೇ 5.50ವರೆಗಿನ ಬಡ್ಡಿದರಗಳನ್ನು 7 ದಿನಗಳಿಂದ 10 ವರ್ಷಗಳಲ್ಲಿ ಮೆಚ್ಯೂರಿಟಿ ಠೇವಣಿಗಳ ಮೇಲೆ ನೀಡುತ್ತದೆ. ಈ ದರಗಳು 16ನೇ ನವೆಂಬರ್ 2021ರಿಂದ ಅನ್ವಯಿಸುತ್ತವೆ.

ಐಸಿಐಸಿಐ ಬ್ಯಾಂಕ್ ಸಾಮಾನ್ಯ ಜನರಿಗೆ ನೀಡುವ ಇತ್ತೀಚಿನ ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರಗಳು ಮತ್ತು ಅವಧಿ ಹೀಗಿದೆ (2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತಕ್ಕೆ):
7 ದಿನಗಳಿಂದ 14 ದಿನಗಳು – ಶೇ 2.50
15 ದಿನಗಳಿಂದ 29 ದಿನಗಳು -ಶೇ 2.50
30 ದಿನಗಳಿಂದ 45 ದಿನಗಳು -ಶೇ 3
46 ದಿನಗಳಿಂದ 60 ದಿನಗಳು -ಶೇ 3
61 ದಿನಗಳಿಂದ 90 ದಿನಗಳು-ಶೇ 3
91 ದಿನಗಳಿಂದ 120 ದಿನಗಳು- ಶೇ 3.5
121 ದಿನಗಳಿಂದ 184 ದಿನಗಳು -ಶೇ 3.5
185 ದಿನಗಳಿಂದ 210 ದಿನಗಳು -ಶೇ 4.40
211 ದಿನಗಳಿಂದ 270 ದಿನಗಳು – ಶೇ 4.40
271 ದಿನಗಳಿಂದ 289 ದಿನಗಳು – ಶೇ 4.40
290 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ – ಶೇ 4.40
1 ವರ್ಷದಿಂದ 389 ದಿನಗಳು – ಶೇ 4.9
390 ದಿನಗಳಿಂದ < 18 ತಿಂಗಳುಗಳು – ಶೇ 4.9
18 ತಿಂಗಳ ದಿನಗಳಿಂದ 2 ವರ್ಷಗಳವರೆಗೆ – ಶೇ 5
2 ವರ್ಷಗಳು 1 ದಿನದಿಂದ 3 ವರ್ಷಗಳು – ಶೇ 5.15
3 ವರ್ಷಗಳು 1 ದಿನದಿಂದ 5 ವರ್ಷಗಳು – ಶೇ 5.35
5 ವರ್ಷಗಳು 1 ದಿನದಿಂದ 10 ವರ್ಷಗಳು – ಶೇ 5.50

ಹಿರಿಯ ನಾಗರಿಕರಿಗೆ ಐಸಿಐಸಿಐ ಬ್ಯಾಂಕ್​ನಿಂದ ಇತ್ತೀಚಿನ ಎಫ್​.ಡಿ. ಬಡ್ಡಿ ದರಗಳು (2 ಕೋಟಿ ರೂಪಾಯಿಂತ ಕಡಿಮೆ ಮೊತ್ತಕ್ಕೆ):
ಹಿರಿಯ ನಾಗರಿಕರು ಇತರರಿಗಿಂತ 50 ಬೇಸಿಸ್ ಪಾಯಿಂಟ್‌ಗಳ (bps) ಹೆಚ್ಚಿನ ಬಡ್ಡಿದರವನ್ನು ಪಡೆಯುತ್ತಾರೆ. ಇತ್ತೀಚಿನ ಪರಿಷ್ಕರಣೆಯ ನಂತರ, ಹಿರಿಯ ನಾಗರಿಕರು 7 ದಿನಗಳಿಂದ 10 ವರ್ಷಗಳಲ್ಲಿ ಮೆಚ್ಯೂರಿಟಿ ಆಗುವ
ಎಫ್​.ಡಿ.ಗಳ ಮೇಲೆ ಶೇ 3ರಿಂದ ಶೇ 6.3ರ ವರೆಗೆ ಬಡ್ಡಿಯನ್ನು ಪಡೆಯುತ್ತಾರೆ.

ಐಸಿಐಸಿಐ ಬ್ಯಾಂಕ್ ಹಿರಿಯ ನಾಗರಿಕರಿಗೆ ICICI ಬ್ಯಾಂಕ್ ಗೋಲ್ಡನ್ ಇಯರ್ಸ್ ಎಫ್​.ಡಿ. ಎಂಬ ವಿಶೇಷ ನಿಶ್ಚಿತ ಠೇವಣಿ ಯೋಜನೆಯನ್ನು ಸಹ ನೀಡುತ್ತದೆ. ಈ ಯೋಜನೆಯಡಿ ಹಿರಿಯ ನಾಗರಿಕರು 5 ವರ್ಷಗಳಲ್ಲಿ ಮತ್ತು 10 ವರ್ಷಗಳವರೆಗೆ ಮೆಚ್ಯೂರ್ ಆಗುವ ತಮ್ಮ ಠೇವಣಿಗಳ ಮೇಲೆ ವಾರ್ಷಿಕ ಶೇ 0.30 ಹೆಚ್ಚುವರಿ ಬಡ್ಡಿ ದರವನ್ನು ಪಡೆಯುತ್ತಾರೆ.

ಇದನ್ನೂ ಓದಿ: Blockchain ETF: ಏನಿದು ಬ್ಲಾಕ್​ಚೈನ್ ಇಟಿಎಫ್​? ಇದು ಹೇಗೆ ಬಿಟ್​ಕಾಯಿನ್ ಇಟಿಎಫ್​ಗಿಂತ ಭಿನ್ನ?