Blockchain ETF: ಏನಿದು ಬ್ಲಾಕ್‌ಚೈನ್ ಇಟಿಎಫ್? ಇದು ಹೇಗೆ ಬಿಟ್‌ಕಾಯಿನ್ ಇಟಿಎಫ್ಗಿಂತ ಭಿನ್ನ?
ಬ್ಲಾಕ್‌ಚೈನ್ ಇಟಿಎಫ್ ಎಂದರೇನು? ಅದು ಹೇಗೆ ಬಿಟ್‌ಕಾಯಿನ್ ಇಟಿಎಫ್ಗಿಂತ ಭಿನ್ನ ಎಂಬ ಬಗ್ಗೆ ಈ ಲೇಖನದಲ್ಲಿ ಮಾಹಿತಿಯ ಜತೆಗೆ ವಿವರಣೆ ಇದೆ.
2008ರಲ್ಲಿ ವಹಿವಾಟನ್ನು ಪ್ರಾರಂಭಿಸಿದ ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿಗಳ ಪೈಕಿಯೇ ಅತ್ಯಂತ ಹಳೆಯದು. ಬಿಟ್‌ಕಾಯಿನ್ ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್ಗಳು (ಇಟಿಎಫ್‌ಗಳು) ಹೂಡಿಕೆದಾರರಿಗೆ ಹೊಸ ಪರಿಕಲ್ಪನೆಯಾಗಿದೆ. ಇಲ್ಲಿ ಪ್ರಸ್ತಾಪ ಮಾಡಬೇಕಾದ ಅಂಶವೆಂದರೆ, ಬ್ಲಾಕ್‌ಚೈನ್ ಇಟಿಎಫ್‌ಗಳು ಈಗಾಗಲೇ ಮುಖ್ಯವಾಹಿನಿಯ ಮಾರುಕಟ್ಟೆಗಳಲ್ಲಿ ತಮ್ಮ ಪ್ರವೇಶವನ್ನು ಮಾಡಿವೆ. ಈ ತಿಂಗಳ ಆರಂಭದಲ್ಲಿ ಇನ್ವೆಸ್ಕೊ ಮ್ಯೂಚುವಲ್ ಫಂಡ್ ಘೋಷಣೆ ಮಾಡಿರುವಂತೆ, ಮಾರುಕಟ್ಟೆ ನಿಯಂತ್ರಕ ಸೆಬಿಯಿಂದ ಇನ್ವೆಸ್ಕೊ ಕಾಯಿನ್‌ಶೇರ್ ಗ್ಲೋಬಲ್ ಬ್ಲಾಕ್‌ಚೇನ್ ಇಟಿಎಫ್ ಎಫ್‌ಒಎಫ್‌ಗೆ ಒಪ್ಪಿಗೆ ನೀಡಿದೆ. ಇದು ಇನ್ವೆಸ್ಕೊ ಎಂಎಫ್ನಿಂದ ಫೀಡರ್ ಫಂಡ್ ಆಗಿದೆ ಮತ್ತು ಇನ್ವೆಸ್ಕೊ ಕಾಯಿನ್ಷೇರ್ಸ್ ಗ್ಲೋಬಲ್ ಬ್ಲಾಕ್‌ಚೈನ್ UCITS ಎಕ್ಸ್‌ಚೇಂಜ್-ಟ್ರೇಡೆಡ್ ಫಂಡ್ (ETF)ಗೆ ಹೂಡಿಕೆ ಮಾಡುತ್ತದೆ. ಈ ಫಂಡ್ NFO ಅನ್ನು ನವೆಂಬರ್ 24ರಂದು ಪ್ರಾರಂಭಿಸಬೇಕಿತ್ತು. ಆದರೆ ಕಂಪೆನಿಯು ಭಾರತದಲ್ಲಿ ಕ್ರಿಪ್ಟೋಕರೆನ್ಸಿಗಳ ನಿಯಮಾವಳಿಗಳ ಸುತ್ತಲಿನ ಅನಿಶ್ಚಿತತೆಯ ಕಾರಣವನ್ನು ನೀಡಿ ಅದನ್ನು ವಿಳಂಬಗೊಳಿಸಿತು.
ಹಿನ್ನೆಲೆಯ ವಿಚಾರಕ್ಕೆ ಬಂದರೆ. ಬಿಟ್‌ಕಾಯಿನ್ ಮತ್ತು ಬ್ಲಾಕ್‌ಚೈನ್ ಪದಗಳನ್ನು ಕೆಲವೊಮ್ಮೆ ಮುಖ್ಯವಾಹಿನಿಯ ಮಾಧ್ಯಮದಲ್ಲಿ ಪರಸ್ಪರ ಬದಲಿಯಾಗಿ ಬಳಸಲಾಗುತ್ತದೆ. ಪರಿಣಾಮವಾಗಿ, ಜನರು ಸಾಮಾನ್ಯವಾಗಿ ಬ್ಲಾಕ್‌ಚೈನ್ ಇಟಿಎಫ್‌ಗಳು ಮತ್ತು ಬಿಟ್‌ಕಾಯಿನ್ ಇಟಿಎಫ್‌ಗಳ ನಡುವೆ ಗೊಂದಲಕ್ಕೆ ಒಳಗಾಗುತ್ತಾರೆ. ಆದರೂ ಅವು ವಿಭಿನ್ನ ಹಣಕಾಸು ಇನ್ಸ್ಟ್ರುಮೆಂಟ್ಗಳಾಗಿವೆ. ಈ ಎರಡು ಇನ್ಸ್ಟ್ರುಮೆಂಟ್ಗಳು ಹೇಗೆ ಭಿನ್ನವಾಗಿವೆ ಎಂಬುದನ್ನು ಅರ್ಥ ಮಾಡಿಕೊಳ್ಳೋಣ.
– ಬ್ಲಾಕ್‌ಚೈನ್ ಇಟಿಎಫ್‌ಗಳು ಬ್ಲಾಕ್‌ಚೈನ್ ತಂತ್ರಜ್ಞಾನಕ್ಕೆ ತೆರೆದುಕೊಳ್ಳುವುದರೊಂದಿಗೆ ಷೇರುಗಳಲ್ಲಿ ಹೂಡಿಕೆ ಮಾಡಲು ಹೂಡಿಕೆ ಇನ್ಸ್ಟ್ರುಮೆಂಟ್ ಆಗಿದೆ. ಉದಾಹರಣೆಗೆ, ಇನ್ವೆಸ್ಕ್ ಕಾಯಿನ್ಷೇರ್ಸ್ ಗ್ಲೋಬಲ್ ಬ್ಲಾಕ್‌ಚೈನ್ UCITS ETF ಕೆನಡಾದ ಬಿಟ್‌ಕಾಯಿನ್ ಮೈನರ್ ಬಿಟ್ಫಾರ್ಮ್ಸ್ Ltd, ಯುಎಸ್ ಕ್ರಿಪ್ಟೋ ಎಕ್ಸ್‌ಚೇಂಜ್ ಕಾಯಿನ್ಬೇಸ್ ಗ್ಲೋಬಲ್ ಇಂಕ್ನಲ್ಲಿ ಹೂಡಿಕೆಗಳನ್ನು ಹೊಂದಿದೆ. ಮತ್ತು ವಿಶ್ವದ ಅತಿದೊಡ್ಡ ಕಾರ್ಪೊರೇಟ್ ಕ್ರಿಪ್ಟೋ ಹೋಲ್ಡರ್ ಮೈಕ್ರೋಸ್ಟ್ರಾಟೆಜಿ ಇಂಕ್. ಈ ನಿಧಿಯನ್ನು 2019ರಲ್ಲಿ ಪ್ರಾರಂಭಿಸಲಾಯಿತು.
-ಬ್ಲಾಕ್‌ಚೈನ್ ಇಟಿಎಫ್‌ಗಳ ಸಂಖ್ಯೆಯು ಬೆಳೆಯುತ್ತಲೇ ಇದ್ದರೂ ಬಿಟ್‌ಕಾಯಿನ್ ಇಟಿಎಫ್‌ಗಳು ತುಲನಾತ್ಮಕವಾಗಿ ಹೊಸದು. ವರ್ಚುವಲ್ ಕರೆನ್ಸಿಗಳು ಅನೇಕ ದೇಶಗಳಲ್ಲಿ ನಿಯಂತ್ರಕ ಪರಿಶೀಲನೆಯನ್ನು ಎದುರಿಸುತ್ತಿವೆ. ಏಕೆಂದರೆ ಸಕ್ರಮ ಹಣ ವರ್ಗಾವಣೆಯನ್ನು ಸುಗಮಗೊಳಿಸುವಲ್ಲಿ ಅವುಗಳ ಪಾತ್ರವಿದೆ. ಆದರೆ ಬ್ಲಾಕ್‌ಚೈನ್ ಅನ್ನು ತಂತ್ರಜ್ಞಾನವಾಗಿ ನಿಷೇಧಿಸಲಾಗಿಲ್ಲ ಅಥವಾ ಯಾವುದೇ ನಿಯಂತ್ರಕ ಸಂಸ್ಥೆಯಿಂದ ಪರಿಶೀಲನೆಗೆ ಒಳಪಡಿಸಿಲ್ಲ.
-ಬ್ಲಾಕ್‌ಚೈನ್ ಇಟಿಎಫ್‌ಗಳು ತಮ್ಮ ನಿಧಿಗಳಲ್ಲಿ ಬ್ಲಾಕ್‌ಚೈನ್ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡಿದ ಕಂಪೆನಿಗಳ ಷೇರು ಮಾರುಕಟ್ಟೆ ಬೆಲೆಗಳನ್ನು ಟ್ರ್ಯಾಕ್ ಮಾಡುತ್ತವೆ. ಬ್ಲಾಕ್‌ಚೈನ್ ನಿರ್ದಿಷ್ಟ ಸ್ಟಾಕ್‌ಗಳು ಬ್ಲಾಕ್‌ಚೈನ್ ತಂತ್ರಜ್ಞಾನ-ಸಂಬಂಧಿತ ಕಾರ್ಯಾಚರಣೆಗಳು ಅಥವಾ ಬ್ಲಾಕ್‌ಚೈನ್ ತಂತ್ರಜ್ಞಾನದ ಅಭಿವೃದ್ಧಿ ಮತ್ತು ಬಳಕೆಯಿಂದ ಲಾಭವನ್ನು ಹೊಂದಿವೆ.
-ತಜ್ಞರ ಪ್ರಕಾರ, ಬ್ಲಾಕ್‌ಚೈನ್ ತಂತ್ರಜ್ಞಾನವು ಅದನ್ನು ಬಳಸುವ ಕಂಪೆನಿಗಳಿಗೆ ವೆಚ್ಚವನ್ನು ಕಡಿಮೆ ಮಾಡಲು ಮತ್ತು ವಿಕೇಂದ್ರೀಕರಣದ ಮೂಲಕ ತಮ್ಮ ಕಾರ್ಯಾಚರಣೆಗಳನ್ನು ಸರಳಗೊಳಿಸಲು ಅನುವು ಮಾಡಿಕೊಡುತ್ತದೆ.
-ಹೋಲಿಕೆ ಮಾಡಿದರೆ ಯುಎಸ್ ಮಾರುಕಟ್ಟೆ ನಿಯಂತ್ರಕ SECಗೆ ತಮ್ಮ ಅರ್ಜಿಯನ್ನು ಸಲ್ಲಿಸಿದ ಹೆಚ್ಚಿನ ಬಿಟ್‌ಕಾಯಿನ್ ಇಟಿಎಫ್‌ಗಳು ಶಿಕಾಗೋ ಬೋರ್ಡ್ ಆಪ್ಷನ್ಸ್ಗಳ ವಿನಿಮಯ ಕೇಂದ್ರದಲ್ಲಿ ಮತ್ತು CME ಗುಂಪಿನ ಮೂಲಕ ವ್ಯಾಪಾರ ಮಾಡುವ ಫ್ಯೂಚರ್ ಕಾಂಟ್ರ್ಯಾಕ್ಟ್ಗಳ ಮೂಲಕ ಬಿಟ್‌ಕಾಯಿನ್ ಬೆಲೆಯನ್ನು ಟ್ರ್ಯಾಕ್ ಮಾಡಲು ಪ್ರಸ್ತಾಪಿಸಿವೆ. ಈ ಮಾದರಿಯಲ್ಲಿ, ಇಟಿಎಫ್‌ಗಳು ಫ್ಯೂಚರ್ಸ್ ಕಾಂಟ್ರಾಕ್ಟ್ ಒಪ್ಪಂದಗಳ ಮಾಲೀಕತ್ವದ ಮೂಲಕ ಬಿಟ್‌ಕಾಯಿನ್‌ನ ಬೆಲೆಯನ್ನು ಟ್ರ್ಯಾಕ್ ಮಾಡುತ್ತವೆ.
– ProShares Bitcoin ಸ್ಟ್ರಾಟಜಿ ETF – ಮೊದಲ ಬಿಟ್‌ಕಾಯಿನ್ ಫ್ಯೂಚರ್ಸ್ ಇಟಿಎಫ್ – ಅಕ್ಟೋಬರ್ 2021ರಲ್ಲಿ ಪ್ರಾರಂಭಿಸಲಾಯಿತು. ಇದು ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿಯ ಫ್ಯೂಚರ್ಸ್ ಬೆಲೆಗೆ ಜೋಡಿಸಲಾದ ಫ್ಯೂಚರ್ಸ್ ಕಾಂಟ್ರಾಕ್ಟ್ಗಳನ್ನು ಟ್ರ್ಯಾಕ್ ಮಾಡುತ್ತದೆ.
ಇದನ್ನೂ ಓದಿ: Bitcoin ETF: ನ್ಯೂ ಯಾರ್ಕ್ ವಿನಿಮಯ ಕೇಂದ್ರದಲ್ಲಿ ಬಿಟ್‌ಕಾಯಿನ್ ಇಟಿಎಫ್ ವಹಿವಾಟು ಶುರು