Bitcoin ETF: ನ್ಯೂ ಯಾರ್ಕ್ ವಿನಿಮಯ ಕೇಂದ್ರದಲ್ಲಿ ಬಿಟ್ಕಾಯಿನ್ ಇಟಿಎಫ್ ವಹಿವಾಟು ಶುರು
ಅಮೆರಿಕದ ನ್ಯೂ ಯಾರ್ಕ್ ವಿನಿಮಯ ಕೇಂದ್ರದಲ್ಲಿ ಮೊಟ್ಟ ಮೊದಲ ಬಾರಿಗೆ ಬಿಟ್ ಕಾಯಿನ್ ಜೋಡಣೆ ಆದ ಇಟಿಎಫ್ ವಹಿವಾಟನ್ನು ಅಕ್ಟೋಬರ್ 19, 2021ರಿಂದ ಶುರು ಮಾಡಲಾಗಿದೆ. ಆ ಬಗ್ಗೆ ವಿವರಗಳು ಇಲ್ಲಿವೆ.
ಕ್ರಿಪ್ಟೋಕರೆನ್ಸಿಗಳ ಜಗತ್ತಿನ ಅಕ್ಟೋಬರ್ 19ನೇ ತಾರೀಕಿನ ಮಂಗಳವಾರ ಐತಿಹಾಸಿಕ ದಿನವಾಗಿ ದಾಖಲಾಯಿತು. ಆಸ್ತಿ ವಿಭಾಗದ ಅಡಿಯಲ್ಲಿ ಬರುವ ಮೊಟ್ಟಮೊದಲ ಬಿಟ್ಕಾಯಿನ್ ಎಕ್ಸ್ಚೇಂಜ್ ಟ್ರೇಡೆಡ್ ಫಂಡ್ (ETF) ವಹಿವಾಟು ನ್ಯೂ ಯಾರ್ಕ್ ವಿನಿಮಯ ಕೇಂದ್ರದಲ್ಲಿ ಶುರುವಾಯಿತು. ಬಿಟ್ಕಾಯಿನ್ಗೆ ಜೋಡಣೆಯಾದ ಇಟಿಎಫ್ ವಿನಿಮಯ ಕೇಂದ್ರದಲ್ಲಿ ಟಿಕ್ಕರ್ ಹೆಸರಾದ BITO ಎಂಬುದರೊಂದಿಗೆ ವಹಿವಾಟು ಶುರು ಮಾಡಿತು. ProShares ಬಿಟ್ ಕಾಯಿನ್ ಸ್ಟ್ರಾಟೆಜಿ ಇಟಿಎಫ್ ಶೇ 3.2ರಷ್ಟು ಹೆಚ್ಚಳವಾಗಿ 41.2 ಯುಎಸ್ಡಿಗೆ NYSE (ನ್ಯೂ ಯಾರ್ಕ್ ವಿನಿಮಯ ಕೇಂದ್ರ)ದಲ್ಲಿ ವ್ಯವಹಾರ ನಡೆಸಿತು.
ಪ್ರೊಷೇರ್ಸ್ ಇಟಿಎಫ್ ಇದೇ ಮೊಟ್ಟ ಮೊದಲ ಬಿಟ್ಕಾಯಿನ್ ಸಂಬಂಧಿತ ಇಟಿಎಫ್ ವ್ಯವಹಾರ ನಡೆಸುತ್ತಿದೆ ಅಂತ ಅರ್ಥ ಅಲ್ಲ. ಕೆನಡಾದಂಥ ದೇಶದಲ್ಲಿ ಈಗಾಗಲೇ ಬಿಟ್ಕಾಯಿನ್ ಇಟಿಎಫ್ ಆರಂಭಿಸಲಾಗಿದೆ. ಆದರೆ ಇಟಿಎಫ್ನ ಲಿಸ್ಟಿಂಗ್ನಿಂದ ಕ್ರಿಪ್ಟೋಕರೆನ್ಸಿಗಳ ಜಗತ್ತು ಸಂಭ್ರಮಿಸಿದೆ. ಬಿಟ್ಕಾಯಿನ್ ಶೇ 1.3ರಷ್ಟು ಹೆಚ್ಚಳವಾಗಿ 63,451 ಯುಎಸ್ಡಿಯೊಂದಿಗೆ ಸಾರ್ವಕಾಲಿಕ ಗರಿಷ್ಠದ ಸಮೀಪದಲ್ಲಿದೆ.
ಇದರೊಂದಿಗೆ ಹಲವು ಪ್ಯಾಸಿವ್ ಫಂಡ್ಗಳು ತೆರೆದುಕೊಳ್ಳಲು ಸಹಾಯ ಮಾಡುತ್ತವೆ. ಅದರಲ್ಲಿ ನಿವೃತ್ತಿ ಮತ್ತು ತೆರಿಗೆ ಉಳಿತಾಯದ ಖಾತೆಗಳು ಸಹ ಬಿಟ್ಕಾಯಿನ್ ಖರೀದಿ ಮಾಡಲಿವೆ. ನಗದು ಲಭ್ಯತೆ ಮೇಲೆ ಆಧಾರ ಪಟ್ಟು, ದೊಡ್ಡ ಮೊತ್ತ ಸೇರ್ಪಡೆ ಆಗುತ್ತಾ ಸಾಗುತ್ತದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ವಿಶ್ಲೇಷಕರು ಅಭಿಪ್ರಾಯ ಪಡುವಂತೆ, ಬಿಟ್ಕಾಯಿನ್ ಇಟಿಎಫ್ ಅನ್ನು ಅಮೆರಿಕದಲ್ಲಿ ಆರಂಭಿಸಿರುವುದರಿಂದ ಬಿಟ್ಕಾಯಿನ್ ಬೆಲೆ ಇನ್ನಷ್ಟು ಏರಲು ಕಾರಣ ಆಗಲಿದೆ. ಜತೆಗೆ 2021ರ ಏಪ್ರಿಲ್ನಲ್ಲಿ ಮುಟ್ಟಿದ್ದ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ದಾಟುವ ಸಾಧ್ಯತೆ ಇದೆ.
ಇದನ್ನೂ ಓದಿ: Bitcoin: ಡಾಮಿನೋಸ್ ಪಿಜ್ಜಾ, ಬಾಸ್ಕಿನ್ ರಾಬಿನ್ ಐಸ್ಕ್ರೀಮ್ ಬಿಟ್ಕಾಯಿನ್ ಮೂಲಕವೇ ಭಾರತದಲ್ಲಿ ಖರೀದಿಸಬಹುದು