Bitcoin: ಡಾಮಿನೋಸ್ ಪಿಜ್ಜಾ, ಬಾಸ್ಕಿನ್ ರಾಬಿನ್ ಐಸ್​ಕ್ರೀಮ್​ ಬಿಟ್​ಕಾಯಿನ್​ ಮೂಲಕವೇ ಭಾರತದಲ್ಲಿ ಖರೀದಿಸಬಹುದು

ಡಾಮಿನೋಸ್ ಪಿಜ್ಜಾ, ಬಾಸ್ಕಿನ್ ರಾಬಿನ್ ಐಸ್​ಕ್ರೀಮ್ ಸೇರಿದಂತೆ 90ಕ್ಕೂಹೆಚ್ಚು ಬ್ರ್ಯಾಂಡ್​ಗಳ ವಸ್ತು- ಸೇವೆಗಳನ್ನು ಭಾರತದಲ್ಲಿ ಬಿಟ್​ಕಾಯಿನ್ ಮೂಲಕ ಖರೀದಿ ಮಾಡಬಹುದು. ಅದು ಹೇಗೆಂಬ ವಿವರ ಇಲ್ಲಿದೆ.

Bitcoin: ಡಾಮಿನೋಸ್ ಪಿಜ್ಜಾ, ಬಾಸ್ಕಿನ್ ರಾಬಿನ್ ಐಸ್​ಕ್ರೀಮ್​ ಬಿಟ್​ಕಾಯಿನ್​ ಮೂಲಕವೇ ಭಾರತದಲ್ಲಿ ಖರೀದಿಸಬಹುದು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Srinivas Mata

Updated on:Aug 12, 2021 | 1:49 PM

ಭಾರತದ ಹಳೇ ಕ್ರಿಪ್ಟೊಕರೆನ್ಸಿ ವಹಿವಾಟಿನ ಪ್ಲಾಟ್​ಫಾರ್ಮ್​ ಯುನೋಕಾಯಿನ್ (UnoCoin). ಅದೀಗ ಬಳಕೆದಾರರಿಗೆ ಬಿಟ್​ ಕಾಯಿನ್​ಗಳನ್ನು ಬಳಸಿಕೊಂಡು ಡಾಮಿನೋಸ್ ಪಿಜ್ಜಾ, ಬಾಸ್ಕಿನ್ ರಾಬಿನ್ ಐಸ್​ಕ್ರೀಮ್ಸ್, ಕೆಫೆ ಕಾಫೀ ಡೇಯಿಂದ ಕಾಫೀ ಖರೀದಿಸುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಅಷ್ಟೇ ಅಲ್ಲ, ಬಿಟ್​ ಕಾಯಿನ್​ ಬಳಸಿ 90 ವಿವಿಧ ಬ್ರ್ಯಾಂಡ್​ಗಳ ವಸ್ತುಗಳ ಖರೀದಿ ಮಾಡಬಹುದು, ಸೇವೆಯನ್ನು ಪಡೆಯಬಹುದು. ಯುನಿಕಾಯಿನ್​ನ ನೋಂದಾಯಿತ ಬಳಕೆದಾರರು ಕನಿಷ್ಠ 100 ರೂಪಾಯಿ ಮೌಲ್ಯದಷ್ಟು ಬಿಟ್​ಕಾಯಿನ್​ನಾದರೂ ಅಥವಾ 5000 ರೂಪಾಯಿ ಮೌಲ್ಯದಷ್ಟಾದರೂ ಬಳಸಬಹುದು ಎಂದು ಬೆಂಗಳೂರು ಮೂಲದ ಸ್ಟಾರ್ಟ್​ ಅಪ್ ತಿಳಿಸಿದೆ. ಅದಕ್ಕಾಗಿ ಬ್ರ್ಯಾಂಡ್​ಗಳಿಂದ ಬಿಟ್​ಕಾಯಿನ್ಸ್ ಮೂಲಕ ವೋಚರ್ ಖರೀದಿಸಬೇಕು. “ಬಿಟ್​ಕಾಯಿನ್ ಎಂಬುದು ಬದಲಿ ಆಸ್ತಿ. ಇದನ್ನು ವಿಶ್ವದಾದ್ಯಂತ ಹತ್ತಾರು ಲಕ್ಷ ಬಳಕೆದಾರರು ಸ್ವೀಕರಿಸುತ್ತಾರೆ ಮತ್ತು ವಹಿವಾಟು ನಡೆಸುತ್ತಾರೆ. ಈಗಿನ ಆರಂಭದಿಂದ ಬಹು-ಆಯಾಮದ ಕ್ರಿಪ್ಟೊಕರೆನ್ಸಿ ಬಗ್ಗೆ ಭಾರತೀಯರಿಗೆ ತಿಳಿವಳಿಕೆ ಮೂಡಿಸಲು ನಾವು ಇಚ್ಛಿಸುತ್ತೇವೆ,” ಎಂದು ಯುನೊಕಾಯಿನ್ ಸಿಇಒ ಹಾಗೂ ಸಹ-ಸಂಸ್ಥಾಪಕ ಸಾತ್ವಿಕ್ ವಿಶ್ವನಾಥ ಹೇಳಿದ್ದಾರೆ.

“ಅಮೆರಿಕದಂಥ ದೇಶದಲ್ಲಿ ಹತ್ತಾರು ಸಾವಿರ ಭೌತಿಕ ಔಟ್​ಲೆಟ್​ಗಳು ಹಾಗೂ ಇ-ಕಾಮರ್ಸ್​ ಪೋರ್ಟಲ್​ಗಳು ಬಿಟ್​ಕಾಯಿನ್​ ಮೂಲಕ ಪಾವತಿಯನ್ನು ಸ್ವೀಕರಿಸುತ್ತಿವೆ. ನಮ್ಮ ದೇಶದಲ್ಲೂ ಇನ್ನೂ ಅಂಥ ಸ್ವೀಕಾರ ಇಲ್ಲ. ಭಾರತದಲ್ಲಿ ಬಿಟ್​ಕಾಯಿನ್​ ಅನ್ನು ಎಲ್ಲಿ ಖರ್ಚು ಮಾಡಬಹುದು ಎಂಬುದಕ್ಕೆ ನಮ್ಮ ಆಫರಿಂಗ್ ಉತ್ತರ ನೀಡಲಿದೆ,” ಎಂದೂ ಹೇಳಿದ್ದಾರೆ. ಅಂದಹಾಗೆ ಬಿಟ್​ಕಾಯಿನ್ ಅನ್ನು ಪ್ರಯಾಣ, ರೆಸ್ಟೋರೆಂಟ್​ಗಳು, ಲೈಫ್​ಸ್ಟೈಲ್ ಕಂಪೆನಿಗಳು, ಬಟ್ಟೆಗಳು, ಆಕ್ಸೆಸರೀಸ್, ಹೋಟೆಲ್​ಗಳು ಇತರ ವಲಯಗಳಲ್ಲಿ ನಗದು ಬದಲಿಗೆ ಬಿಟ್​ಕಾಯಿನ್ಸ್ ನೀಡಲು ಈ ಟ್ರೇಡಿಂಗ್ ಪ್ಲಾಟ್​ಫಾರ್ಮ್ ಅವಕಾಶ ಮಾಡಿಕೊಡುತ್ತದೆ.

ಬಿಟ್​ಕಾಯಿನ್ ಬಳಸಿ ವೋಚರ್ ಖರೀದಿಸಲು ವಿವಿಧ ಹಂತಗಳು: 1. ಯುನೊಕಾಯಿನ್ ಖಾತೆಗೆ ಲಾಗ್​ ಇನ್ ಆಗಬೇಕು ಮತ್ತು BTC ಪುಟಕ್ಕೆ ತೆರಳಬೇಕು. 2. ಪುಟದಲ್ಲಿ “Shop” ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಯುನೊಕಾಯಿನ್ ಆ್ಯಪ್ ಬಳಸುತ್ತಿದ್ದಲ್ಲಿ ಆ ನಂತರ ಶಾಪ್ ಬಟನ್ ಡ್ಯಾಶ್​ಬೋರ್ಡ್​ನಲ್ಲಿ ಮತ್ತು More ವಿಭಾಗದಲ್ಲಿ ಕಾಣಸಿಗುತ್ತದೆ. 3. ಡಾಮಿನೋಸ್, ಸಿಸಿಡಿ, ಬಾಸ್ಕಿನ್ ಅಂಡ್ ರಾಬಿನ್ಸ್, ಹಿಮಾಲಯ, ಪ್ರೆಸ್ಟೀಜ್ ಒಳಗೊಂಡಂತೆ 90ಕ್ಕೂ ಹೆಚ್ಚು ಆಯ್ಕೆಗಳಿಂದ ಆರಿಸಿಕೊಳ್ಳಬೇಕು. 4. ಯಾವ ಬ್ರ್ಯಾಂಡ್​ ಬೇಕು ಎಂದು ಆರಿಸಿಕೊಂಡ ಮೇಲೆ ವೋಚರ್ ಖರೀದಿಗೆ ಭಾರತದ ರೂಪಾಯಿ ಮೌಲ್ಯದ ವಿವಿಧ ಮುಖಬೆಲೆಯಲ್ಲಿ ಡ್ರಾಪ್​ಡೌನ್ ಮೆನು ಬರುತ್ತದೆ. 5. ಅದಕ್ಕೆ ಎಷ್ಟು ಮೌಲ್ಯದ ಬಿಟ್​ಕಾಯಿನ್ ಎಂಬುದು ಸಹ ಕಾಣುತ್ತದೆ. 6. ಮೊತ್ತವನ್ನು ಪಾವತಿಸಿದ ಮೇಲೆ ಬಳಕೆದಾರರಿಗೆ ವೋಚರ್ ಕೋಡ್ ಬರುತ್ತದೆ. 7. ಮಾಹಿತಿಯನ್ನು ಎಲೆಕ್ಟ್ರಾನಿಕಲಿ ದಾಟಿಸುವ ಮೂಲಕ ಇ-ವೋಚರ್​ಗಳನ್ನು ಕೊಡುಗೆ ನೀಡಬಹುದು ಅಥವಾ ಪ್ರಿಂಟಿಂಗ್ ಮಾಡುವ ಮೂಲಕ ವೋಚರ್ ಕಾಪಿಯನ್ನು ನೀಡಬಹುದು.

ಇದನ್ನೂ ಓದಿ: Crypto Currency: ಕಳುವು ಮಾಡಿದ್ದ ಕ್ರಿಪ್ಟೊಕರೆನ್ಸಿ ಹಿಂತಿರುಗಿಸಿದ ಹ್ಯಾಕರ್ಸ್; ಕದಿಯೋದು ಸುಲಭ ಕ್ಯಾಶ್ ಮಾಡಿಸೋದು ಕಷ್ಟ ಏಕೆ?

(Now Pizza Ice Cream CCD Coffee Can Be Purchased Through Bitcoins In India Know How)

Published On - 1:47 pm, Thu, 12 August 21