Petrol Price Today: ಪೆಟ್ರೋಲ್​ ಬೆಲೆ ದೆಹಲಿಯಲ್ಲಿ ಮಾತ್ರ ಬದಲಾವಣೆ; ಬೆಂಗಳೂರಿನಲ್ಲಿ ಎಷ್ಟಿದೆ ಪೆಟ್ರೋಲ್​-ಡೀಸೆಲ್​ ಇಂದಿನ ದರ?

| Updated By: Lakshmi Hegde

Updated on: Dec 02, 2021 | 8:11 AM

Fuel Rate Today: ಬೆಂಗಳೂರಿನಲ್ಲಿ ಕೂಡ ಪೆಟ್ರೋಲ್​-ಡೀಸೆಲ್​​ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.  ಪ್ರತಿ ಲೀಟರ್​ ಪೆಟ್ರೋಲ್​ ಬೆಲೆ 100.58 ರೂಪಾಯಿ ಇದ್ದು, ಡೀಸೆಲ್​ ದರ ಪ್ರತಿ ಲೀಟರ್​ಗೆ 85.01 ರೂಪಾಯಿ ಇದೆ. ಇದು ಕಳೆದ ಒಂದು ತಿಂಗಳಿಂದಲೂ ಹಾಗೇ ಇದೆ.

Petrol Price Today: ಪೆಟ್ರೋಲ್​ ಬೆಲೆ ದೆಹಲಿಯಲ್ಲಿ ಮಾತ್ರ ಬದಲಾವಣೆ; ಬೆಂಗಳೂರಿನಲ್ಲಿ ಎಷ್ಟಿದೆ ಪೆಟ್ರೋಲ್​-ಡೀಸೆಲ್​ ಇಂದಿನ ದರ?
ಸಾಂಕೇತಿಕ ಚಿತ್ರ
Follow us on

ದೇಶಾದ್ಯಂತ ಪೆಟ್ರೋಲ್​-ಡೀಸೆಲ್​ ಬೆಲೆಗಳಲ್ಲಿ ಇಂದು ಕೂಡ ಯಾವುದೇ ಬದಲಾವಣೆ ಆಗಿಲ್ಲ. ದೆಹಲಿಯನ್ನು ಹೊರತುಪಡಿಸಿ ಉಳಿದೆಲ್ಲ ಮಹಾನಗರಗಳಲ್ಲೂ ಬೆಲೆ ಸ್ಥಿರವಾಗಿಯೇ ಇದೆ. ಕಳೆದ ಒಂದು ತಿಂಗಳಿಂದ ಇಂಧನಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗದೆ ಇರುವುದು ವಿಶೇಷವಾಗಿದೆ. ನಿನ್ನೆ ದೆಹಲಿ ಸರ್ಕಾರ ಪೆಟ್ರೋಲ್​ ಮೇಲಿನ ಮೌಲ್ಯವರ್ಧಿತ ತೆರಿಗೆ (ವ್ಯಾಟ್​) ಕಡಿತಗೊಳಿಸಿದೆ. ಹೀಗಾಗಿ ಅಲ್ಲಿನ ಪೆಟ್ರೋಲ್​ ಬೆಲೆ ಇಳಿಕೆಯಾಗಿದ್ದು ಬಿಟ್ಟರೆ, ಉಳಿದಂತೆ ಇನ್ಯಾವುದೇ ಪ್ರದೇಶದಲ್ಲಿ ಬದಲಾವಣೆಯಿಲ್ಲ. ದೆಹಲಿ ಸರ್ಕಾರ ನಿನ್ನೆ ಪೆಟ್ರೋಲ್​ ಮೇಲಿನ ವ್ಯಾಟ್​​ನ್ನು ಶೇ.30ರಿಂದ ಶೇ.19.4ಕ್ಕೆ ಇಳಿಸಿದೆ.  ಈ ಮೂಲಕ ಪೆಟ್ರೋಲ್​ ಬೆಲೆ ಪ್ರತಿ ಲೀಟರ್​ಗೆ 8 ರೂಪಾಯಿ ಕಡಿತಗೊಂಡಿದೆ.  ಅಲ್ಲಿಗೆ ದೆಹಲಿಯಲ್ಲಿ 103 ರೂ.ಇದ್ದ ಪೆಟ್ರೋಲ್​ ಬೆಲೆ 95 ರೂ.ಗೆ ಇಳಿಕೆಯಾಗಿದೆ.

ಕಳೆದ ಒಂದು ತಿಂಗಳ ಹಿಂದೆ ಪ್ರತಿನಿತ್ಯವೆಂಬಂತೆ ಪೆಟ್ರೋಲ್​-ಡೀಸೆಲ್​ ಬೆಲೆ ಏರಿಕೆಯಾಗುತ್ತಿತ್ತು. ಆದರೆ ದೀಪಾವಳಿಗೂ ಮೊದಲು ಕೇಂದ್ರ ಸರ್ಕಾರ ಈ ಇಂಧನಗಳ ಮೇಲಿನ ಅಬಕಾರಿ ಸುಂಕ ಕಡಿಮೆ ಮಾಡುವ ಮೂಲಕ ಗ್ರಾಹಕರಿಗೆ ಗುಡ್​ನ್ಯೂಸ್ ಕೊಟ್ಟಿತ್ತು. ಅದಾದ ಬಳಿಕ ಬಿಜೆಪಿ ಸರ್ಕಾರ ಇರುವ ಉಳಿದ ರಾಜ್ಯಗಳೂ ಕೂಡ ಪೆಟ್ರೋಲ್​ ಮೇಲಿನ ವ್ಯಾಟ್​ ಕಡಿತಗೊಳಿಸಿದವು. ಹೀಗಾಗಿ ಸದ್ಯ ಪೆಟ್ರೋಲ್​ ಬೆಲೆಯಲ್ಲಿ ಸದ್ಯಕ್ಕಂತೂ ಯಾವುದೇ ಬದಲಾವಣೆ ಆಗುತ್ತಿಲ್ಲ.

ಬೆಂಗಳೂರಲ್ಲಿ ಏನಿದೆ ಬೆಲೆ?
ಬೆಂಗಳೂರಿನಲ್ಲಿ ಕೂಡ ಪೆಟ್ರೋಲ್​-ಡೀಸೆಲ್​​ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.  ಪ್ರತಿ ಲೀಟರ್​ ಪೆಟ್ರೋಲ್​ ಬೆಲೆ 100.58 ರೂಪಾಯಿ ಇದ್ದು, ಡೀಸೆಲ್​ ದರ ಪ್ರತಿ ಲೀಟರ್​ಗೆ 85.01 ರೂಪಾಯಿ ಇದೆ. ಇದು ಕಳೆದ ಒಂದು ತಿಂಗಳಿಂದಲೂ ಹಾಗೇ ಇದೆ. ದರದಲ್ಲಿ ಬದಲಾವಣೆಯಾಗಿಲ್ಲ. ಆದರೂ ಪೆಟ್ರೋಲ್​ ಬೆಲೆ 100 ರೂ.ಇದ್ದಿದ್ದು ವಾಹನ ಸವಾರರಿಗೆ ಹೊರೆಯೇ ಆಗಿದೆ. ಇನ್ನು ಮಂಗಳೂರಿನಲ್ಲಿ ಪೆಟ್ರೋಲ್​ ಬೆಲೆ 99.76 ರೂ, ಡೀಸೆಲ್​ ಬೆಲೆ 84.24 ರೂ. ಆಗಿದೆ. ಅಂತೆಯೇ ಮೈಸೂರಿನಲ್ಲಿ ಪೆಟ್ರೋಲ್​  100.08 ರೂ. ಮತ್ತು ಡೀಸೆಲ್​ 84.56 ರೂ.ಗೆ ಮಾರಾಟವಾಗುತ್ತಿದೆ.

ಇನ್ನುಳಿದಂತೆ ದೆಹಲಿಯಲ್ಲಿ ಲೀಟರ್ ಪೆಟ್ರೋಲ್​ ಬೆಲೆ 103.97 ರೂ. ಇದ್ದು, ಡೀಸೆಲ್​ ದರ 86.67 ರೂ.ಆಗಿದೆ. (ಡೀಸೆಲ್​ ಮೇಲಿನ ವ್ಯಾಟ್​ ಕಡಿಮೆ ಮಾಡಿಲ್ಲ). ಹಾಗೇ ಉಳಿದ ಪ್ರಮುಖ ಮಹಾನಗರಗಳಾದ ಮುಂಬೈನಲ್ಲಿ  ಪೆಟ್ರೋಲ್​ ದರ 109.98 ರೂ. ಮತ್ತು ಡೀಸೆಲ್​ 94.14 ರೂ. ಆಗಿದೆ. ಚೆನ್ನೈನಲ್ಲಿ ಪೆಟ್ರೋಲ್​ 101.40 ರೂ., ಡೀಸೆಲ್​ 91.43 ರೂ., ಕೋಲ್ಕತ್ತದಲ್ಲಿ ಪೆಟ್ರೋಲ್​  104.67 ರೂ ಮತ್ತು ಡೀಸೆಲ್​ 89.79 ರೂ.ಇದೆ. ಒಟ್ಟಾರೆ ಯಾವ ಮಹಾನಗರಗಳಲ್ಲೂ ಇಂಧನ ದರ ಬದಲಾವಣೆಯಾಗಿಲ್ಲ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್) ಇಂಧನ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ವಿದೇಶಿ ವಿನಿಮಯ ದರಗಳೊಂದಿಗೆ ಪರಿಷ್ಕರಿಸುತ್ತವೆ.

ಇದನ್ನೂ ಓದಿ:

ವಿವಿಧ ನಗರದಲ್ಲಿ ಪೆಟ್ರೋಲ್ ದರ ಎಷ್ಟಿದೆ ಎಂಬುದನ್ನು ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ:
https://tv9kannada.com/business/petrol-price-today.html

ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ:
https://tv9kannada.com/business/diesel-price-today.htm

Masik Shivratri: ಕಷ್ಟ ದೂರ ಮಾಡಿ ಸಂತೋಷ ತರುವ ಮಾಸಿಕ ಶಿವರಾತ್ರಿ ವ್ರತ ಆಚರಿಸುವುದು ಹೇಗೆ? ಮಹತ್ವ, ಪೂಜಾ ವಿಧಾನ ಏನು

Published On - 8:09 am, Thu, 2 December 21