AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Masik Shivratri: ಕಷ್ಟ ದೂರ ಮಾಡಿ ಸಂತೋಷ ತರುವ ಮಾಸಿಕ ಶಿವರಾತ್ರಿ ವ್ರತ ಆಚರಿಸುವುದು ಹೇಗೆ? ಮಹತ್ವ, ಪೂಜಾ ವಿಧಾನ ಏನು

ತಿ ತಿಂಗಳು ಬರುವ ಕೃಷ್ಣ ಪಕ್ಷದ ಚತುರ್ದಶಿಯನ್ನು ಮಾಸಿಕ ಶಿವರಾತ್ರಿ ಎಂದು ಕರೆಯಲಾಗುತ್ತದೆ. ಮಾರ್ಗಶಿರ ಮಾಸದ ಮಾಸಿಕ ಶಿವರಾತ್ರಿ ಗುರುವಾರ, ಡಿಸೆಂಬರ್2ಕ್ಕೆ ಬಂದಿದೆ. ಶಿವನಿಗೆ ಸಮರ್ಪಿತವಾದ ಪ್ರದೋಷ ಉಪವಾಸವನ್ನು ಸಹ ಈ ದಿನ ಆಚರಿಸಲಾಗುತ್ತದೆ.

Masik Shivratri: ಕಷ್ಟ ದೂರ ಮಾಡಿ ಸಂತೋಷ ತರುವ ಮಾಸಿಕ ಶಿವರಾತ್ರಿ ವ್ರತ ಆಚರಿಸುವುದು ಹೇಗೆ? ಮಹತ್ವ, ಪೂಜಾ ವಿಧಾನ ಏನು
ಮಹಾದೇವ
Follow us
TV9 Web
| Updated By: ಆಯೇಷಾ ಬಾನು

Updated on:Dec 02, 2021 | 7:38 AM

ಕೈಲಾಸ ಯೋಗಿ, ಸಕಲ ಸಂಕಷ್ಟಗಳನ್ನು ಬಗೆ ಹರಿಸುವ ಶಂಕರನ ಮಾಸಿಕ ಶಿವರಾತ್ರಿ ಇಂದು. ಮಾಸಿಕ ಶಿವರಾತ್ರಿ ಹಬ್ಬವನ್ನು ಪ್ರತಿ ತಿಂಗಳು ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುತ್ತದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಕೃಷ್ಣ ಪಕ್ಷದ ಚತುರ್ದಶಿ ದಿನದಂದು ಮಹಾದೇವನು ಶಿವಲಿಂಗದ ರೂಪದಲ್ಲಿ ಕಾಣಿಸಿಕೊಂಡಿದ್ದನು. ಈ ಘಟನೆ ನಡೆದ ದಿನವನ್ನು ಮಹಾಶಿವರಾತ್ರಿ ಎಂದು ಕರೆಯಲಾಗುತ್ತದೆ. ಆದರೆ ಅಂದಿನಿಂದ ಪ್ರತಿ ತಿಂಗಳ ಕೃಷ್ಣ ಪಕ್ಷದ ಚತುರ್ದಶಿಯ ದಿನವನ್ನು ಶಿವಪೂಜೆಗೆ ಮೀಸಲಿಡಲಾಗಿದೆ.

ಹೀಗೆ ಪ್ರತಿ ತಿಂಗಳು ಬರುವ ಕೃಷ್ಣ ಪಕ್ಷದ ಚತುರ್ದಶಿಯನ್ನು ಮಾಸಿಕ ಶಿವರಾತ್ರಿ ಎಂದು ಕರೆಯಲಾಗುತ್ತದೆ. ಮಾರ್ಗಶಿರ ಮಾಸದ ಮಾಸಿಕ ಶಿವರಾತ್ರಿ ಗುರುವಾರ, ಡಿಸೆಂಬರ್2ಕ್ಕೆ ಬಂದಿದೆ. ಶಿವನಿಗೆ ಸಮರ್ಪಿತವಾದ ಪ್ರದೋಷ ಉಪವಾಸವನ್ನು ಸಹ ಈ ದಿನ ಆಚರಿಸಲಾಗುತ್ತದೆ. ಇದರಿಂದಾಗಿ ಈ ದಿನದ ಮಹತ್ವ ಇನ್ನಷ್ಟು ಹೆಚ್ಚಿದೆ. ಈ ದಿನದಂದು ಭಗವಾನ್ ಶಿವನನ್ನು ಪೂಜಿಸಿದರೆ, ಕೆಲವೇ ದಿನಗಳಲ್ಲಿ ಅಸಾಧ್ಯವಾದ ಕಾರ್ಯಗಳು ಸಹ ಸಾಧ್ಯವಾಗುತ್ತದೆ ಎಂದು ನಂಬಲಾಗಿದೆ. ಈ ದಿನದ ಮಹತ್ವ, ಪೂಜೆಯ ಮಂಗಳಕರ ಸಮಯ ಮತ್ತು ಇತರ ಪ್ರಮುಖ ವಿಷಯಗಳನ್ನು ಇಲ್ಲಿ ತಿಳಿಯಿರಿ.

ಉಪವಾಸದ ಪ್ರಾಮುಖ್ಯತೆ ಶಿವರಾತ್ರಿಯಂತೆಯೇ ಮಾಸಿಕ ಶಿವರಾತ್ರಿ ಕೂಡ ಮಾಡಲಾಗುತ್ತೆ. ಈ ದಿನದಂದು ಮಹಾದೇವನಲ್ಲಿ ಸಂಕಲ್ಪ ಮಾಡಿ ಉಪವಾಸವನ್ನು ಆಚರಿಸುವುದರಿಂದ ವ್ಯಕ್ತಿಯ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಕಷ್ಟಕರವಾದ ಕೆಲಸಗಳು ಸಹ ಬಗೆಹರಿಯುತ್ತವೆ. ಶಿವರಾತ್ರಿಯ ರಾತ್ರಿ ಜಾಗರಣ ಮತ್ತು ಶಿವನ ಆರಾಧನೆಗೆ ವಿಶೇಷ ಮಹತ್ವವಿದೆ. ಅವಿವಾಹಿತರು ಈ ದಿನ ವ್ರತವನ್ನು ಆಚರಿಸಿದರೆ ಅವರ ಇಚ್ಛೆಯಂತೆ ಜೀವನ ಸಂಗಾತಿ ಸಿಗುತ್ತಾರೆ ಮತ್ತು ವಿವಾಹಿತರ ಸಮಸ್ಯೆಗಳು ದೂರವಾಗುತ್ತವೆ. ಅವರ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಬರುತ್ತದೆ.

ಶುಭ ಮುಹೂರ್ತ ಕೃಷ್ಣ ಪಕ್ಷದ ಚತುರ್ದಶಿ ತಿಥಿಯು ಗುರುವಾರ, ಡಿಸೆಂಬರ್ 02 ರಂದು ರಾತ್ರಿ 08:26 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಶುಕ್ರವಾರ, ಡಿಸೆಂಬರ್ 03, 2021 ರಂದು ಸಂಜೆ 04:55 ಕ್ಕೆ ಕೊನೆಗೊಳ್ಳುತ್ತದೆ. ಶಿವರಾತ್ರಿಯ ಆರಾಧನೆಯಲ್ಲಿ ರಾತ್ರಿಯ ಪೂಜೆಗೆ ವಿಶೇಷ ಮಹತ್ವವಿರುವುದರಿಂದ ಮತ್ತು ಶುಕ್ರವಾರದಂದು ಮುಂಜಾನೆ 04:55 ರ ನಂತರ ಅಮಾವಾಸ್ಯೆ ಪ್ರಾರಂಭವಾಗುವುದರಿಂದ ಮಾಸಿಕ ಶಿವರಾತ್ರಿಯ ಹಬ್ಬವನ್ನು ಡಿಸೆಂಬರ್ 2 ರ ಗುರುವಾರ ಮಾತ್ರ ಆಚರಿಸಲಾಗುತ್ತದೆ.

ಪೂಜಾ ವಿಧಾನ ಶಿವರಾತ್ರಿ ಪೂಜೆಯು ಮಧ್ಯರಾತ್ರಿಯಲ್ಲಿ ನಡೆಯುತ್ತದೆ, ಇದನ್ನು ನಿಶಿತ ಕಾಲ ಎಂದೂ ಕರೆಯುತ್ತಾರೆ. ಪೂಜೆಯನ್ನು ಪ್ರಾರಂಭಿಸುವ ಮೊದಲು, ಸ್ನಾನ ಮಾಡಿ ಮತ್ತು ಶುಭ್ರವಾದ ಬಟ್ಟೆಗಳನ್ನು ಧರಿಸಿ. ಇದರ ನಂತರ, ಗಂಗಾಜಲ, ಹಾಲು, ತುಪ್ಪ, ಜೇನುತುಪ್ಪ, ಮೊಸರು, ಸಿಂಧೂರ, ಸಕ್ಕರೆ, ಪನ್ನೀರು ಇತ್ಯಾದಿಗಳನ್ನು ಅರ್ಪಿಸಿ ಶಿವಲಿಂಗಕ್ಕೆ ಅಭಿಷೇಕ ಮಾಡಿ. ಅಭಿಷೇಕ ಮಾಡುವಾಗ ಶಿವ ಮಂತ್ರವನ್ನು ಪಠಿಸಿ. ಶ್ರೀಗಂಧವನ್ನು ಹಚ್ಚಿ ಮತ್ತು ದತುರಾ, ಬಿಲ್ ಪತ್ರೆ ಎಲೆಗಳು ಮತ್ತು ಧೂಪವನ್ನು ಇಡಬೇಕು. ದೀಪ ಹಚ್ಚಿ ನೈವೇದ್ಯ ಅರ್ಪಿಸಿ. ಇದರ ನಂತರ, ರುದ್ರಾಕ್ಷಿ ಮಾಲೆಯೊಂದಿಗೆ ಶಿವ ಪುರಾಣ ಮತ್ತು ಶಿವ ಮಂತ್ರವನ್ನು ಜಪಿಸಿ. ಶಿವನ ಆರತಿ ಮಾಡಿ ತಪ್ಪಿಗೆ ದೇವರಲ್ಲಿ ಕ್ಷಮೆ ಯಾಚಿಸಿ.

ಇದನ್ನೂ ಓದಿ: ಶಿವರಾತ್ರಿಯಂದೇ ಮುಸ್ಲಿಂ ವ್ಯಕ್ತಿಗೆ ಲಿಂಗದೀಕ್ಷೆ ನೀಡಿದ ಶ್ರೀಶೈಲ ಪೀಠದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

Published On - 7:34 am, Thu, 2 December 21