PAN- Aadhaar Linking: ಪ್ಯಾನ್- ಆಧಾರ್ ಜೋಡಣೆ ಆಗದಿದ್ದಲ್ಲಿ ಜುಲೈ 1ರಿಂದ ದುಪ್ಪಟ್ಟು ದಂಡ; ಸ್ಥಿತಿ ಪರಿಶೀಲನೆ, ಜೋಡಣೆ ಹೇಗೆ ಇಲ್ಲಿದೆ ವಿವರ

| Updated By: Srinivas Mata

Updated on: Jun 29, 2022 | 10:02 AM

ಒಂದು ವೇಳೆ ಜೂನ್ 30ನೇ ತಾರೀಕಿನೊಳಗೆ ಆಧಾರ್- ಪ್ಯಾನ್ ಜೋಡಣೆ ಆಗದಿದ್ದಲ್ಲಿ ಜುಲೈ 1ರಿಂದ ದುಪ್ಪಟ್ಟು ದಂಡವನ್ನು ತೆರಬೇಕಾಗುತ್ತದೆ. ಆಧಾರ್ -ಪ್ಯಾನ್ ಜೋಡಣೆ ಹೇಗೆ, ಸ್ಥಿತಿ ಪರಿಶೀಲನೆ ಮಾಡುವುದು ಹೇಗೆ ಎಂಬಿತ್ಯಾದಿ ವಿವರ ಇಲ್ಲಿದೆ.

PAN- Aadhaar Linking: ಪ್ಯಾನ್- ಆಧಾರ್ ಜೋಡಣೆ ಆಗದಿದ್ದಲ್ಲಿ ಜುಲೈ 1ರಿಂದ ದುಪ್ಪಟ್ಟು ದಂಡ; ಸ್ಥಿತಿ ಪರಿಶೀಲನೆ, ಜೋಡಣೆ ಹೇಗೆ ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
Follow us on

ಪ್ರತಿಯೊಬ್ಬ ಭಾರತೀಯ ನಾಗರಿಕರು ತಮ್ಮ ಎರಡು ಪ್ರಮುಖ ದಾಖಲೆಗಳನ್ನು ಜೋಡಣೆ ಮಾಡಬೇಕಾಗುತ್ತದೆ – ಶಾಶ್ವತ ಖಾತೆ ಸಂಖ್ಯೆ ಅಥವಾ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ (Aadhaar Card). ಅದು ಕೂಡ ಸರ್ಕಾರದ ಆದೇಶದ ಪ್ರಕಾರ. ಅಂದ ಹಾಗೆ ಆದಾಯ ತೆರಿಗೆ ಇಲಾಖೆಯು ಪ್ಯಾನ್ ಮತ್ತು ಆಧಾರ್ ಜೋಡಣೆ ಮಾಡಲು ಮಾರ್ಚ್ 31, 2022 ಅನ್ನು ಗಡುವು ಎಂದು ನಿಗದಿಪಡಿಸಿತ್ತು. ಆ ನಂತರ ಅದನ್ನು ವಿಸ್ತರಿಸಲಾಯಿತು. ಎರಡು ಡೇಟಾಬೇಸ್‌ಗಳ ಜೋಡಣೆಯನ್ನು ಇನ್ನೂ ಪೂರ್ಣಗೊಳಿಸದವರಿಗಾಗಿ ಮಾರ್ಚ್ 29ರಂದು ಕೇಂದ್ರವು ಪ್ಯಾನ್ ಮತ್ತು ಆಧಾರ್ ಅನ್ನು ಜೋಡಣೆ ಮಾಡಲು ಗಡುವನ್ನು ಮಾರ್ಚ್ 31, 2023ಕ್ಕೆ ಒಂದು ವರ್ಷದವರೆಗೆ ವಿಸ್ತರಿಸಿದೆ. ಆದರೆ ಇಲ್ಲಿ ನಿಮಗೆ ಗೊತ್ತಿರಲೇಬೇಕಾದ ವಿಚಾರ ಒಂದಿದೆ.

ಮಾರ್ಚ್ 31ರ ನಂತರ ಮತ್ತು ಜೂನ್ 30, 2022ರೊಳಗೆ ಪ್ಯಾನ್ ಮತ್ತು ಆಧಾರ್ ಜೋಡಣೆ ಮಾಡುವವರು ರೂ. 500 ದಂಡ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ನೇರ ತೆರಿಗೆಯ ಕೇಂದ್ರೀಯ ಮಂಡಳಿ ಸೂಚಿಸಿದೆ. ಆದರೆ ಯಾರಾದರೂ ಆ ದಿನಾಂಕದ ನಂತರ ದಾಖಲೆಗಳನ್ನು ಜೋಡಣೆ ಮಾಡಿದರೆ, ಅಂದರೆ ಜುಲೈ 1ರಿಂದ, ಅವರು 1,000 ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ.

ಪ್ಯಾನ್ ಮತ್ತು ಆಧಾರ್ ಜೋಡಣೆ ಮಾಡದಿದ್ದರೆ ಏನಾಗುತ್ತದೆ?

ಹೊಸ ಗಡುವಿನ ಮೊದಲು ಎರಡನ್ನೂ ಜೋಡಣೆ ಮಾಡಲು ಯಾರಾದರೂ ವಿಫಲರಾದರೆ ಆ ವ್ಯಕ್ತಿಯ ಪ್ಯಾನ್ ನಿಷ್ಕ್ರಿಯ ಆಗಬಹುದು. ಅಂತಹ ಸಂದರ್ಭದಲ್ಲಿ, ಮಾರ್ಚ್ 30, 2022ರ CBDT ಸುತ್ತೋಲೆಯ ಪ್ರಕಾರ, ವ್ಯಕ್ತಿಯು “ಅವರ PAN ಅನ್ನು ಒದಗಿಸಲು, ಬಳಸಲು ಅಥವಾ ಉಲ್ಲೇಖಿಸಲು ಸಾಧ್ಯವಾಗುವುದಿಲ್ಲ ಮತ್ತು ಅಂತಹ ವೈಫಲ್ಯಕ್ಕಾಗಿ ಕಾಯ್ದೆ ಅಡಿಯಲ್ಲಿ ಎಲ್ಲ ಪರಿಣಾಮಗಳಿಗೆ ಜವಾಬ್ದಾರರಾಗಿರುತ್ತಾರೆ”.

ಪ್ಯಾನ್-ಆಧಾರ್ ಜೋಡಣೆ ಮಾಡಲಾಗಿದೆಯೇ ಎಂದು ಪರಿಶೀಲಿಸುವುದು ಹೇಗೆ?

– ಅಧಿಕೃತ ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಿ: incometaxindiaefiling.gov.in/aadhaarstatus

– ನಿಮ್ಮ ಪ್ಯಾನ್ ಮತ್ತು ಆಧಾರ್ ವಿವರಗಳನ್ನು ನಮೂದಿಸಿ

– ‘View Link Aadhaar Status’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ

– ಜೋಡಣೆಯ ಸ್ಥಿತಿಯನ್ನು ಪರಿಶೀಲಿಸಿ ಮುಂದಿನ ಪರದೆಯಲ್ಲಿ ಪ್ರದರ್ಶಿಸಲಾಗುತ್ತದೆ

ಆನ್‌ಲೈನ್‌ನಲ್ಲಿ ಪ್ಯಾನ್ ಮತ್ತು ಆಧಾರ್ ಜೋಡಣೆ ಮಾಡುವುದು ಹೇಗೆ ಎಂಬುದು ಇಲ್ಲಿದೆ:

– ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್‌ಗೆ ಭೇಟಿ ನೀಡಿ (www.incometaxindiaefiling.gov.in)

– ‘ಕ್ವಿಕ್ ಲಿಂಕ್ಸ್’ ವಿಭಾಗದ ಅಡಿಯಲ್ಲಿ, ‘ಲಿಂಕ್ ಆಧಾರ್’ ಮೇಲೆ ಕ್ಲಿಕ್ ಮಾಡಿ

– ಪ್ಯಾನ್, ಆಧಾರ್ ಸಂಖ್ಯೆ ಮತ್ತು ಇತರ ಅಗತ್ಯವಿರುವ ವಿವರಗಳನ್ನು ನಮೂದಿಸಿ

– ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಜನ್ಮ ವರ್ಷವನ್ನು ನಮೂದಿಸಿದ್ದರೆ ಮಾತ್ರ ಬಾಕ್ಸ್‌ನಲ್ಲಿ ಟಿಕ್ ಅನ್ನು ಹಾಕಿ ಮತ್ತು ನಂತರ UIDAIನೊಂದಿಗೆ ನಿಮ್ಮ ಆಧಾರ್ ವಿವರಗಳನ್ನು ವ್ಯಾಲಿಡೇಟ್​ಗೆ ಸಮ್ಮತಿಸಲು ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ

– ನಿಮ್ಮ ಪರದೆಯ ಮೇಲೆ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ

– ‘ಲಿಂಕ್ ಆಧಾರ್’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.

ಎಸ್‌ಎಂಎಸ್ ಮೂಲಕ ಆನ್‌ಲೈನ್‌ನಲ್ಲಿ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವುದು ಹೇಗೆ ಎಂಬುದು ಇಲ್ಲಿದೆ:

– 567678 ಅಥವಾ 56161ರಲ್ಲಿ ಆಧಾರ್ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಸಂದೇಶವನ್ನು ಕಳುಹಿಸಿ, ಫಾರ್ಮ್ಯಾಟ್: UIDPAN <12-ಅಂಕಿಯ ಆಧಾರ್><10-ಅಂಕಿಯ PAN>

ಇದನ್ನೂ ಓದಿ: PAN Or Aadhaar: 20 ಲಕ್ಷ ರೂ. ಮೊತ್ತದ ಜಮೆ, ಹಿಂತೆಗೆತಕ್ಕೆ ಮೇ 26ರಿಂದ ಪ್ಯಾನ್ ಅಥವಾ ಆಧಾರ್ ಕಡ್ಡಾಯ

Published On - 10:02 am, Wed, 29 June 22