AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ನಗದು ವರ್ಗಾವಣೆ ಯೋಜನೆಯನ್ನು ಶ್ಲಾಘಿಸಿದ ಐಎಂಎಫ್

ಭಾರತದ ನಗದು ವರ್ಗಾವಣೆ ಯೋಜನೆಯನ್ನು ಐಎಂಎಫ್​ನ ಹಣಕಾಸು ವ್ಯವಹಾರಗಳ ವಿಭಾಗದ ಉಪ ನಿರ್ದೇಶಕ ಪಾವೊಲೊ ಮೌರೊ ಅವರು ಶ್ಲಾಘಿಸಿದ್ದು, ಭಾರತದಿಂದ ಕಲಿಯಲು ಬಹಳಷ್ಟು ಇವೆ ಎಂದಿದ್ದಾರೆ.

ಭಾರತದಲ್ಲಿ ನಗದು ವರ್ಗಾವಣೆ ಯೋಜನೆಯನ್ನು ಶ್ಲಾಘಿಸಿದ ಐಎಂಎಫ್
ಭಾರತದಲ್ಲಿ ನಗದು ವರ್ಗಾವಣೆ ಯೋಜನೆಯನ್ನು ಶ್ಲಾಘಿಸಿದ ಐಎಂಎಫ್Image Credit source: flickr.com
TV9 Web
| Edited By: |

Updated on:Oct 13, 2022 | 11:39 AM

Share

ವಾಷಿಂಗ್ಟನ್: ಅಂತಾರಾಷ್ಟ್ರೀಯ ಹಣಕಾಸು ನಿಧಿ (International Monetary Fund- IMF)ನ ಹಣಕಾಸು ವ್ಯವಹಾರಗಳ ವಿಭಾಗದ ಉಪ ನಿರ್ದೇಶಕ ಪಾವೊಲೊ ಮೌರೊ ಅವರು ಭಾರತದ ನಗದು ವರ್ಗಾವಣೆ ಯೋಜನೆಯನ್ನು ಶ್ಲಾಘಿಸಿದ್ದು, ದೇಶದ ಸಂಪೂರ್ಣ ಗಾತ್ರವನ್ನು ಪರಿಗಣಿಸಿ ಇದನ್ನು “ಆರ್ಥಿಕ ಮೂಲಸೌಕರ್ಯಗಳ ಅದ್ಭುತ” ಎಂದು ಬಣ್ಣಿಸಿದ್ದಾರೆ. ಇದರೊಂದಿಗೆ ಭಾರತದಿಂದ ಕಲಿಯಲು ಬಹಳಷ್ಟಿದೆ ಎಂಬುದಕ್ಕೆ ಜಾಗತಿಕ ಸಾಲದಾತರು ಹಲವಾರು ಉದಾಹರಣೆಗಳನ್ನು ಹೊಂದಿದ್ದಾರೆ ಎಂದು ಹೇಳಿದರು. ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಮತ್ತು ವಿಶ್ವ ಬ್ಯಾಂಕ್ ಗ್ರೂಪ್ (WBG)ನ ಆಡಳಿತ ಮಂಡಳಿಗಳ ವಾರ್ಷಿಕ ಸಭೆಯಲ್ಲಿ ಈ ಹೇಳಿಕೆ ನೀಡಿದ್ದಾರೆ. “ನಮ್ಮಲ್ಲಿ ಪ್ರತಿಯೊಂದು ಖಂಡದಿಂದ ಮತ್ತು ಪ್ರತಿಯೊಂದು ಹಂತದ ಆದಾಯದ ಉದಾಹರಣೆಗಳಿವೆ. ನಾನು ಭಾರತದವನ್ನು ಪರಿಗಣಿಸಿದಾಗ ಅದು ನಿಜವಾಗಿಯೂ ಸಾಕಷ್ಟು ಪ್ರಭಾವಶಾಲಿಯಾಗಿದೆ” ಎಂದು ಅವರು ಹೇಳಿದರು.

ಭಾರತದ ನಗದು ವರ್ಗಾವಣೆ ಯೋಜನೆಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದಾಗ ದೇಶದ ಸಂಪೂರ್ಣ ಗಾತ್ರವನ್ನು ಒತ್ತಿಹೇಳುತ್ತಾ ಮಾತನಾಡಿದ ಮೌರೊ, ” ನಿರ್ದಿಷ್ಟವಾಗಿ ಗುರಿಪಡಿಸುವ ಕಾರ್ಯಕ್ರಮಗಳಿವೆ. ಮಹಿಳೆಯರು, ವೃದ್ಧರು, ರೈತರನ್ನು ಗುರಿಯಾಗಿಸುವ ಕಾರ್ಯಕ್ರಮಗಳಿವೆ” ಎಂದರು. ಅಲ್ಲದೆ ಭಾರತದ ಸಾಕಷ್ಟು ತಾಂತ್ರಿಕ ಆವಿಷ್ಕಾರಗಳ ಯಶಸ್ಸಿನ ಬಗ್ಗೆ ಗಮನಸೆಳೆದರು.

ಐಎಂಎಫ್‌ನ ಹಣಕಾಸು ವ್ಯವಹಾರಗಳ ವಿಭಾಗದ ನಿರ್ದೇಶಕ ವಿಟರ್ ಗ್ಯಾಸ್ಪರ್, “ತಂತ್ರಜ್ಞಾನದ ಬಳಕೆಯ ಅತ್ಯಂತ ಸ್ಪೂರ್ತಿದಾಯಕ ಉದಾಹರಣೆಗಳಲ್ಲಿ ಒಂದಾಗಿ, ಅತ್ಯಂತ ಅಗತ್ಯವಿರುವ ಜನರಿಗೆ ಬೆಂಬಲವನ್ನು ಗುರಿಯಾಗಿಸುವ ಅತ್ಯಂತ ಜಟಿಲ ಸಮಸ್ಯೆಗಳನ್ನು ಪರಿಹರಿಸಲು ನಾವು ಒಂದಾಗಿದ್ದೇವೆ” ಎಂದರು. ಭಾರತದ ಆರ್ಥಿಕತೆಯು ವಿಶ್ವದ ಇತರೆ ದೇಶಗಳ ಆರ್ಥಿಕತೆಗಿಂದ ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆ ಭಾರತದ ನಗದು ವರ್ಗಾವಣೆ ಯೋಜನೆಯು ಪ್ರಶಂಸೆಗೆ ಪಾತ್ರವಾಗುತ್ತಿದೆ.

ಐಎಂಎಫ್ ತನ್ನ ಇತ್ತೀಚಿನ ವಿಶ್ವ ಆರ್ಥಿಕ ಔಟ್ಲುಕ್ ವರದಿಯಲ್ಲಿ, “ಭಾರತದ ದೃಷ್ಟಿಕೋನವು 2022ರಲ್ಲಿ ಶೇಕಡಾ 6.8 ರಷ್ಟು ಬೆಳವಣಿಗೆಯಾಗಿದೆ. ಇದು ಜುಲೈ ಮುನ್ಸೂಚನೆಯಿಂದ ಎರಡನೇ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್) ನಿರೀಕ್ಷೆಗಿಂತ ದುರ್ಬಲವಾದ ಔಟ್​ಟರ್ನ್ ಮತ್ತು ಹೆಚ್ಚು ಕಡಿಮೆಯಾದ ಬಾಹ್ಯ ಬೇಡಿಕೆಯನ್ನು ಪ್ರತಿಬಿಂಬಿಸುತ್ತದೆ” ಎಂದು ಹೇಳಿದೆ. ಜುಲೈ 2022ರ ವರದಿಯಲ್ಲಿ ಐಎಂಎಫ್ 2022ರ ಭಾರತದ ಜಿಡಿಪಿ ಬೆಳವಣಿಗೆಯನ್ನು ಶೇಕಡಾ 7.4ಕ್ಕೆ ನಿಗದಿಪಡಿಸಿತ್ತು.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:38 am, Thu, 13 October 22

ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ