ಈ ದಾಖಲೆಗಳು ನಿಮ್ಮ ಹತ್ರ ಇದ್ರೆ ಆದಾಯ ಪ್ರಮಾಣಪತ್ರ ತಿದ್ದುಪಡಿ ಮಾಡ್ಬಹುದು

ಸರ್ಕಾರವು ಯಾವುದೇ ಸವಲತ್ತುಗಳನ್ನು ನೀಡುವಾಗ ನಿಮ್ಮ ವಾರ್ಷಿಕ ಆದಾಯ ಎಷ್ಟೆಂದು ಪರಿಶೀಲಿಸುತ್ತದೆ. ಆದರೆ ನಿಮ್ಮ ಬಳಿ ಆದಾಯ ಪ್ರಮಾಣ ಪತ್ರ ದಾಖಲೆ ಇರಲೇಬೇಕು. ಈ ದಾಖಲೆಯಲ್ಲಿ ಹೆಸರು, ವಿಳಾಸ ಅಥವಾ ವಾರ್ಷಿಕ ಆದಾಯದಲ್ಲಿ ತಪ್ಪಿದ್ದಲ್ಲಿ ಏನಾದ್ರೂ ತಿದ್ದುಪಡಿ ಮಾಡಬೇಕಾಗಿದ್ದಲ್ಲಿ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಾಡಕಚೇರಿ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿ ಸುಲಭವಾಗಿ ಸರಿಪಡಿಸಿಕೊಳ್ಳಬಹುದಾಗಿದೆ.

ಈ ದಾಖಲೆಗಳು ನಿಮ್ಮ ಹತ್ರ ಇದ್ರೆ ಆದಾಯ ಪ್ರಮಾಣಪತ್ರ ತಿದ್ದುಪಡಿ ಮಾಡ್ಬಹುದು
ಸಾಂದರ್ಭಿಕ ಚಿತ್ರ
Image Credit source: Getty Images

Updated on: Jul 29, 2026 | 4:01 PM

ಮುಖ್ಯಾಂಶಗಳು

  • ವಿದ್ಯಾರ್ಥಿವೇತನ, ಮೀಸಲಾತಿಗಳಿಗೆ ಆದಾಯ ಪ್ರಮಾಣ ಪತ್ರ ನೀಡಬೇಕು
  • ಆದಾಯ ಪ್ರಮಾಣ ಪತ್ರದ ತಿದ್ದುಪಡಿ ಮಾಡಲು ಈ ದಾಖಲೆಗಳು ಅಗತ್ಯ
  • ಆದಾಯ ಪ್ರಮಾಣ ಪತ್ರದಲ್ಲಿ ತಪ್ಪಿದ್ದರೆ ತಿದ್ದುಪಡಿ ಮಾಡಲು ಅವಕಾಶವಿದೆ

ರಾಜ್ಯ ಸರ್ಕಾರದ ಯಾವುದೇ ಸೌಲಭ್ಯವಿರಲಿ, ಓದುತ್ತಿರುವ ವಿದ್ಯಾರ್ಥಿಗಳಿಗೆ ದೊರೆಯುವ ವಿದ್ಯಾರ್ಥಿವೇತನ ಮತ್ತು ಮೀಸಲಾತಿಗಳನ್ನು ಪಡೆಯಲು ಪ್ರಮುಖ ದಾಖಲೆಯಾದ ಆದಾಯ ಪ್ರಮಾಣಪತ್ರ (income certificate) ಬೇಕೇ ಬೇಕು. ಆದಾಯದ ಆಧಾರದ ಮೇಲೆ ಸರ್ಕಾರದ ಸವಲತ್ತುಗಳನ್ನು ಪಡೆಯಲು ಸಾಧ್ಯ. ಆದರೆ ನಿಮ್ಮ ಆದಾಯ ಪ್ರಮಾಣ ಪತ್ರದಲ್ಲಿ ಹೆಸರಿನ ಸ್ಪೆಲ್ಲಿಂಗ್ ಅಥವಾ ಇತರೆ ತಪ್ಪುಗಳಿದ್ದರೆ, ತಮ್ಮ ಬಳಿಯಿರುವ ಹಳೆಯ ದಾಖಲೆಯೊಂದಿಗೆ ತಿದ್ದುಪಡಿ ಆಯ್ಕೆಯೊಂದಿಗೆ ಮರು ಅರ್ಜಿ ಸಲ್ಲಿಸಲು ಅವಕಾಶವಿದೆ. ಹಾಗಾದ್ರೆ ಅರ್ಜಿ ಸಲ್ಲಿಸುವುದು ಹೇಗೆ? ಈ ತಿದ್ದುಪಡಿಗೆ ಯಾವೆಲ್ಲಾ ದಾಖಲೆಗಳು ಬೇಕು ಎಂಬ ಗೊಂದಲಗಳಿಗೆ ಇಲ್ಲಿದೆ ಉತ್ತರ.

ಆದಾಯ ಪ್ರಮಾಣ ಪತ್ರದ ತಿದ್ದುಪಡಿಗೆ ಬೇಕಾದ ದಾಖಲೆಗಳು ಯಾವುವು?

ಆದಾಯ ಪ್ರಮಾಣ ಪತ್ರದ ತಿದ್ದುಪಡಿ ಮಾಡಲು ನಿಮ್ಮ ಬಳಿ ಈ ದಾಖಲೆಗಳು ಇರಲಿ

  • ಹಳೆಯ ಆದಾಯ ಪ್ರಮಾಣ ಪತ್ರದ ಪ್ರತಿ
  • ಅರ್ಜಿ ಸಲ್ಲಿಸುವ ವ್ಯಕ್ತಿಯ ಆಧಾರ್ ಕಾರ್ಡ್
  • ಪಡಿತರ ಚೀಟಿ
  • ಆದಾಯದ ವಿವರಗಳ ದಾಖಲೆ ಅಥವಾ ಸ್ವಯಂ ಘೋಷಣಾ ಪತ್ರ

ಆದಾಯ ಪ್ರಮಾಣ ಪತ್ರದಲ್ಲಿ ತಿದ್ದುಪಡಿ ಮಾಡುವುದು ಹೇಗೆ?

ಹಂತ 1: ಕರ್ನಾಟಕ ಸರ್ಕಾರದ ಅಧಿಕೃತ ನಾಡಕಚೇರಿ ಪೋರ್ಟಲ್ ವೆಬ್‌ಸೈಟ್‌ಗೆ ಭೇಟಿ ನೀಡಿ.

ಹಂತ 2: ಮುಖಪುಟದಲ್ಲಿ ಕಾಣುವ ಆನ್ಲೈನ್ ಅಪ್ಲಿಕೇಶನ್ ಮೇಲೆ ಕ್ಲಿಕ್ ಮಾಡಿ.

ಹಂತ 3: ನಿಮ್ಮ ಮೊಬೈಲ್ ಸಂಖ್ಯೆ ನೀಡಿ ಲಾಗಿನ್ ಆಗಿ. ನ್ಯೂ ರಿಕ್ವೆಸ್ಟ್ ಮೆನು ಅಡಿಯಲ್ಲಿ ಇನ್ಕಮ್ ಸರ್ಟಿಫಿಕೇಟ್ ಆಯ್ಕೆಮಾಡಿ.

ಹಂತ 4: ಇಲ್ಲಿ ಸರಿಯಾದ ಹಾಗೂ ನೀವು ತಿದ್ದುಪಡಿ ಮಾಡಬೇಕಾದ ಆದಾಯ ಅಥವಾ ವ್ಯಕ್ತಿಯ ವಿವರಗಳನ್ನು ನಮೂದಿಸಿ.

ಹಂತ 5: ಅಗತ್ಯವಿರುವ ಆದಾಯದ ದಾಖಲೆಗಳಾದ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಅಥವಾ ಸರಿಯಾದ ಆದಾಯದ ಪುರಾವೆ ಅಪ್‌ಲೋಡ್ ಮಾಡಿ.

ಹಂತ 6: ಆಧಾರ್ ಕಾರ್ಡ್‌ ಮೂಲಕ ಇ – ಸೈನ್ ಮಾಡಿ ಹಾಗೂ ನಿಗದಿತ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.

ಇದನ್ನೂ ಓದಿ: ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡಬೇಕೇ? ಹಾಗಾದ್ರೆ ಈ ರೀತಿ ಮಾಡಿ

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಆದಾಯ ಪ್ರಮಾಣ ಪತ್ರದ ತಿದ್ದುಪಡಿಗೆ ಅವಕಾಶವಿದೆಯೇ?

ಉತ್ತರ: ಆದಾಯ ಪ್ರಮಾಣ ಪತ್ರದಲ್ಲಿನ ಹೆಸರು, ವಿಳಾಸ ಹಾಗೂ ಆದಾಯದಲ್ಲಿ ತಿದ್ದುಪಡಿಗೆ ಅವಕಾಶವಿದೆ.

ಪ್ರಶ್ನೆ: ಆದಾಯ ಪ್ರಮಾಣ ಪತ್ರದ ತಿದ್ದುಪಡಿ ಮಾಡುವುದು ಹೇಗೆ?

ಉತ್ತರ: ಕರ್ನಾಟಕ ಸರ್ಕಾರದ ಅಧಿಕೃತ ನಾಡಕಚೇರಿ ಪೋರ್ಟಲ್ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ತಿದ್ದುಪಡಿ ಮಾಡಿಕೊಳ್ಳಬಹುದು.

ಪ್ರಶ್ನೆ: ಆದಾಯ ಪ್ರಮಾಣ ಪತ್ರದ ತಿದ್ದುಪಡಿ ಮಾಡಲು ಯಾವೆಲ್ಲಾ ದಾಖಲೆಗಳು ಬೇಕು?

ಉತ್ತರ: ಹಳೆಯ ಆದಾಯ ಪ್ರಮಾಣ ಪತ್ರದ ಪ್ರತಿ, ಆಧಾರ್ ಕಾರ್ಡ್, ಪಡಿತರ ಚೀಟಿ, ಸರಿಯಾದ ಆದಾಯದ ವಿವರಗಳ ದಾಖಲೆ ಅಥವಾ ಸ್ವಯಂ ಘೋಷಣಾ ಪತ್ರ ಈ ದಾಖಲೆಗಳು ಆದಾಯ ಪ್ರಮಾಣ ಪತ್ರದ ತಿದ್ದುಪಡಿಗೆ ಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Loading...
Unable to load recommendations.
Follow Us