ಆದಾಯ ತೆರಿಗೆ ಇಲಾಖೆ ತನ್ನ ಪೋರ್ಟಲ್ ಅನ್ನು ಪರಿಷ್ಕರಿಸಿದ್ದು, ಹೊಸ ರೀತಿಯ ನೋಟ ನಿಮ್ಮ ಕಣ್ಸೆಳೆಯುತ್ತದೆ. ಹೊಸ ರೀತಿಯ ವಿನ್ಯಾಸದಿಂದ ಈ ಪೋರ್ಟಲ್ (www.incometax.gov.in) ಬಹಳ ಸರಳವಾಗಿ ಕಾಣುತ್ತದೆ. ಐದು ಹೊಸ ಫೀಚರ್ಗಳನ್ನು ಪರಿಚಯಿಸಲಾಗಿದ್ದು, ನೋಡಲಷ್ಟೇ ಅಲ್ಲ, ಇದರ ಬಳಕೆಯೂ ಕೂಡ ಬಹಳ ಸರಳಗೊಂಡಿದೆ. ವೆಬ್ಸೈಟ್ನಲ್ಲಿರುವ ವಿವಿಧ ವಿಭಾಗಗಳು, ಲಿಂಕ್ಗಳು ಎಲ್ಲವೂ ಕೂಡ ಬುದ್ಧಿವಂತಿಕೆಯಿಂದ ಸಂಯೋಜಿಸಲಾಗಿದೆ. ಹೀಗಾಗಿ, ಹೊಸ ಇನ್ಕಮ್ ಟ್ಯಾಕ್ಸ್ ಪೋರ್ಟ್ ಇನ್ನಷ್ಟು ಸರಳ, ಸುಂದರ, ಯೂಸರ್ಫ್ರೆಂಡ್ಲಿ ಎನಿಸಿದೆ.
ಆಗಲೇ ಹೇಳಿದಂತೆ ಪರಿಷ್ಕೃತ ಇನ್ಕಮ್ ಟ್ಯಾಕ್ಸ್ ಪೋರ್ಟಲ್ ಸಂಕೀರ್ಣ ಎನಿಸುವುದಿಲ್ಲ. ಕಣ್ಣಿಗೆ ಕಷ್ಟ ಕೊಡುವುದಿಲ್ಲ. ಇದರ ಇಂಟರ್ಫೇಸ್ ಉತ್ತಮವಾಗಿದ್ದು ಯೂಸರ್ ಫ್ರೆಂಡ್ಲಿ ಎನಿಸಿದೆ. ಮೊಬೈಲ್ ಆವೃತ್ತಿಯ ವಿನ್ಯಾಸ ಕೂಡ ಉತ್ತಮವಾಗಿದೆ.
ಪೋರ್ಟಲ್ನಲ್ಲಿ ನ್ಯಾವಿಗೇಟ್ ಮಾಡುವುದು ಸುಲಭವನ್ನಾಗಿಸುವಂತೆ ಗೈಡೆಡ್ ವರ್ಚುವಲ್ ಟೂರ್ ಸೌಲಭ್ಯ ಇದೆ. ಯಾವುದೇ ವಿಷಯವನ್ನು ನೀವು ಹುಡುಕಲು ಸರ್ಚ್ ಬಾರ್ ಇದೆ. ಆಫ್ಲೈನ್ನಲ್ಲಿ ಐಟಿಆರ್ ಫೈಲ್ ಮಾಡುವುದು ಹೇಗೆ, ಆಧಾರ್ ಪ್ಯಾನ್ ಲಿಂಕಿಂಗ್ನಲ್ಲಿ ತಪ್ಪುಗಳನ್ನು ತಪ್ಪಿಸುವುದು ಹೇಗೆ, ಟ್ಯಾಕ್ಸ್ ರಿಟರ್ನ್ಸ್ ಅಪ್ಡೇಟ್ ಮಾಡುವುದು ಹೇಗೆ, ಹೀಗೆ ಯಾವುದೇ ಸಮಸ್ಯೆಗೂ ಇಲ್ಲಿ ಪರಿಹಾರಕ್ಕೆ ಸಲಹೆಗಳನ್ನು ಪಡೆಯಬಹುದು.
ಇದನ್ನೂ ಓದಿ: Rule Changes From September 2023: ಸೆಪ್ಟೆಂಬರ್ನಲ್ಲಿ 10 ಪ್ರಮುಖ ಬದಲಾವಣೆಗಳನ್ನು ತಿಳಿದಿರಿ
ಇನ್ಕಮ್ ಟ್ಯಾಕ್ಸ್ ವೆಬ್ಸೈಟ್ನಲ್ಲಿ ಈ ಮುಂಚಿನಿಂದಲೂ ತೆರಿಗೆ ಸಂಬಂಧಿತ ಎಲ್ಲಾ ಮಾಹಿತಿಯೂ ಇತ್ತು. ಆದರೆ, ಅದನ್ನು ಹುಡುಕುವುದು ಕಷ್ಟಕರವಾಗಿತ್ತು. ಈಗ ಹೊಸ ವಿನ್ಯಾಸದ ವೆಬ್ಸೈಟ್ನಲ್ಲಿ ಈ ಮಾಹಿತಿ ಎಲ್ಲವನ್ನೂ ಸುಲಭವಾಗಿ ಹುಡುಕಿ ಓದಬಹುದು.
ಹೊಸ ಇನ್ಕಮ್ ಟ್ಯಾಕ್ಸ್ ಪೋರ್ಟಲ್ನಲ್ಲಿ ಟ್ಯಾಕ್ಸ್ಪೇಯರ್ ಸರ್ವಿಸಸ್ ಎಂಬ ಫೀಚರ್ ಜೋಡಿಸಲಾಗಿದೆ. ಇದರಲ್ಲಿ ಟ್ಯಾಕ್ಸ್ ಟೂಲ್ಸ್ ಇತ್ಯಾದಿ ಹಲವು ಸೆಕ್ಷನ್ಗಳಿದ್ದು, ನಿಮಗೆ ಬೇಕಾದ ಮಾಹಿತಿಯನ್ನು ಸುಲಭವಾಗಿ ವೀಕ್ಷಿಸಬಹುದು.
ಇದನ್ನೂ ಓದಿ: ಕೇಂದ್ರದ ಪಿಎಲ್ಐ ಸ್ಕೀಮ್ನಲ್ಲಿ ತಮಿಳುನಾಡು, ಗುಜರಾತ್ ಮತ್ತು ಕರ್ನಾಟಕಕ್ಕೆ ಸಿಂಹಪಾಲು; ಕ್ರಿಸಿಲ್ ರಿಸರ್ಚ್ ವರದಿ
ಯಾವುದಾದರೂ ತೆರಿಗೆ ಪಾವತಿಸಲು ಇರುವ ಗಡುವನ್ನು ನಿಮಗೆ ನೆನಪಿಸಲು ಡ್ಯು ಡೇಟ್ ರಿಮೈಂಡರ್ ಎಂಬ ಫೀಚರ್ ಇದೆ. ಇದೇ ಫೀಚರ್ನಲ್ಲಿ ಟ್ಯಾಕ್ಸ್ ಕ್ಯಾಲೆಂಡರ್ ಇದ್ದು, ತೆರಿಗೆ ಸಂಬಂಧಿಸಿದ ಎಲ್ಲಾ ಪ್ರಮುಖ ದಿನಾಂಕಗಳನ್ನು ಹೈಲೈಟ್ ಮಾಡಲಾಗಿರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ