Income Tax Refund: ಪ್ರಸಕ್ತ ಹಣಕಾಸು ವರ್ಷದಲ್ಲಿ 1.86 ಲಕ್ಷ ಕೋಟಿ ರೂಪಾಯಿ ಮೌಲ್ಯದ ತೆರಿಗೆ ಮರುಪಾವತಿ

ಪ್ರಸಕ್ತ ಹಣಕಾಸು ವರ್ಷ 2021-22ರಲ್ಲಿ ಮಾರ್ಚ್ 7ನೇ ತಾರೀಕಿನ ತನಕ 1.83 ಲಕ್ಷ ಕೋಟಿ ರೂಪಾಯಿ ಆದಾಯ ತೆರಿಗೆ ರೀಫಂಡ್​ ಮಾಡಲಾಗಿದೆ ಎಂದು ಸಿಬಿಡಿಟಿ ತಿಳಿಸಿದೆ.

Income Tax Refund: ಪ್ರಸಕ್ತ ಹಣಕಾಸು ವರ್ಷದಲ್ಲಿ 1.86 ಲಕ್ಷ ಕೋಟಿ ರೂಪಾಯಿ ಮೌಲ್ಯದ ತೆರಿಗೆ ಮರುಪಾವತಿ
ಸಾಂದರ್ಭಿಕ ಚಿತ್ರ
Updated By: Srinivas Mata

Updated on: Mar 11, 2022 | 8:48 AM

ಪ್ರಸಕ್ತ ಹಣಕಾಸು ವರ್ಷದಲ್ಲಿ, ಅಂದರೆ 2021-22ನೇ ಸಾಲಿನಲ್ಲಿ 2.14 ಕೋಟಿಗೂ ಹೆಚ್ಚು ತೆರಿಗೆದಾರರಿಗೆ 1.86 ಲಕ್ಷ ಕೋಟಿ ರೂಪಾಯಿ ಮೌಲ್ಯದ ತೆರಿಗೆ ಮರುಪಾವತಿಯನ್ನು ನೀಡಲಾಗಿದೆ ಎಂದು ಆದಾಯ ತೆರಿಗೆ (Income Tax) ಇಲಾಖೆ ಗುರುವಾರ ತಿಳಿಸಿದೆ. ಇದು ವೈಯಕ್ತಿಕ ಆದಾಯ ತೆರಿಗೆ ವರ್ಗದ ಅಡಿಯಲ್ಲಿ 2,11,76,025 ಪ್ರಕರಣಗಳಲ್ಲಿ 67,442 ಕೋಟಿ ರೂಪಾಯಿಗಳ ಮರುಪಾವತಿ ಮತ್ತು 2,31,654 ಪ್ರಕರಣಗಳಲ್ಲಿ 1,19,235 ಕೋಟಿ ರೂಪಾಯಿಗಳ ಕಾರ್ಪೊರೇಟ್ ತೆರಿಗೆ ಮರುಪಾವತಿಗಳನ್ನು ಒಳಗೊಂಡಿದೆ ಎಂದು ಆದಾಯ ತೆರಿಗೆ ಇಲಾಖೆಯು ಸರಣಿ ಟ್ವೀಟ್‌ಗಳಲ್ಲಿ ತಿಳಿಸಿದೆ.

“ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT) 1ನೇ ಏಪ್ರಿಲ್, 2021ರಿಂದ 7ನೇ ಮಾರ್ಚ್, 2022ರ ವರೆಗೆ 2.14 ಕೋಟಿಗೂ ಹೆಚ್ಚು ತೆರಿಗೆದಾರರಿಗೆ 1,86,677 ಕೋಟಿ ರೂಪಾಯಿಗಳ ಮರುಪಾವತಿಯನ್ನು ನೀಡಿದೆ,” ಎಂದು ಟ್ವೀಟ್​ನಲ್ಲಿ ಮಾಹಿತಿಯನ್ನು ನೀಡಲಾಗಿದೆ.

“ಇದು AY (ಅಸೆಸ್​ಮೆಂಟ್​ ವರ್ಷ) 2021-22ರ 35,296.86 ಕೋಟಿ ರೂಪಾಯಿ ಮೊತ್ತದ 1.74 ಕೋಟಿ ಮರುಪಾವತಿಗಳನ್ನು ಒಳಗೊಂಡಿದೆ,” ಎಂದು ಹೇಳಿದೆ. ಕೇಂದ್ರೀಯ ನೇರ ತೆರಿಗೆ ಮಂಡಳಿಯು (CBDT) ಆದಾಯ ತೆರಿಗೆ ಇಲಾಖೆಯ ನೀತಿ ರೂಪಿಸುವ ಸಂಸ್ಥೆಯಾಗಿದೆ.

ಇದನ್ನೂ ಓದಿ: Income Tax: ಕೇಂದ್ರ ಬಜೆಟ್​ 2022ರ ನಂತರ ಹಿರಿಯ ನಾಗರಿಕರ ಆದಾಯ ತೆರಿಗೆ ಲೆಕ್ಕಾಚಾರ ಹೇಗೆ?