ಆದಾಯ ತೆರಿಗೆ ಇಲಾಖೆಯಿಂದ ಆದಾಯ ತೆರಿಗೆ ರಿಟರ್ನ್ಸ್ ಫೈಲಿಂಗ್ ಮಾಡುವುದಕ್ಕೆ ಅನುಕೂಲವಾಗುವಂತೆ ಮಾಡಲಾಗಿದೆ. ಆದಾಯ ತೆರಿಗೆ ಪಾವತಿದಾರರು ಐಟಿಆರ್ ಫೈಲಿಂಗ್ ಅನ್ನು ತಮಗೆ ಹತ್ತಿರದ ಪೋಸ್ಟ್ ಆಫೀಸ್ನ ಕಾಮನ್ ಸರ್ವೀಸ್ ಸೆಂಟರ್ನಲ್ಲಿ (CSC) ಮಾಡಬಹುದು. ಈ ಬೆಳವಣಿಗೆಯಿಂದ ದೊಡ್ಡ ಅನುಕೂಲ ಆಗಿದೆ ಎಂದು ಇಂಡಿಯಾ ಪೋಸ್ಟ್ ಘೋಷಣೆ ಮಾಡಿದೆ. ಜುಲೈ 14ನೇ ತಾರೀಕಿನಂದು ಅದರ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ನಿಂದಲೂ ಈ ಬಗ್ಗೆ ಘೋಷಣೆ ಮಾಡಿದ್ದು, ಆದಾಯ ತೆರಿಗೆ ರಿಟರ್ನ್ಸ್ ಫೈಲಿಂಗ್ಗಾಗಿ ದೂರ ಪ್ರಯಾಣ ಮಾಡಬೇಕಾಗಿಲ್ಲ. ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ ಸಿಎಸ್ಸಿ ಕೌಂಟರ್ನಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸೇವೆಯನ್ನು ಸುಲಭವಾಗಿ ಪಡೆಯಬಹುದು ಎಂದು ಹೇಳಲಾಗಿದೆ.
ಪೋಸ್ಟ್ ಆಫೀಸ್ನ ಕಾಮನ್ ಸರ್ವೀಸ್ ಸೆಂಟರ್ ಕೌಂಟರ್ಗಳು ದೇಶದಾದ್ಯಂತ ಇವೆ. ಅಲ್ಲಿ ಪೋಸ್ಟಲ್, ಬ್ಯಾಂಕಿಂಗ್, ಇನ್ಷೂರೆನ್ಸ್ ಸೇವೆಗಳನ್ನು ಜನರಿಗೆ ಒಂದೇ ಕಡೆಯಲ್ಲಿ ಒದಗಿಸಲಾಗುತ್ತಿದೆ. ಈ ಸಿಎಸ್ಸಿ ಕೌಂಟರ್ಗಳಲ್ಲಿ ಸರ್ಕಾರದ ಸೇವೆಗಳು ಮತ್ತು ಮಾಹಿತಿಗಳು ಹಲವಾರು ಸಿಗುತ್ತವೆ. ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ಇತರ ಹಲವು ಡಿಜಿಟಲ್ ಸೇವೆಗಳನ್ನು ಜನರಿಗೆ ಒದಗಿಸಲಾಗುತ್ತದೆ. ಆದಾಯ ತೆರಿಗೆ ವೆಬ್ಸೈಟ್ ಆದ https://www.incometax.gov.in./ ಹೊರತುಪಡಿಸಿ ತೆರಿಗೆ ಪಾವತಿದಾರರು ಪೋಸ್ಟ್ ಆಫೀಸ್ನ ಕಾಮನ್ ಸರ್ವೀಸ್ ಸೆಂಟರ್ಗಳನ್ನು ಬಳಸಿಕೊಳ್ಳಬಹುದು.
ಹಲವರಿಗೆ ಆನ್ಲೈನ್ ಮೂಲಕ ಫೈಲಿಂಗ್ ಮಾಡುವುದು ಸಲೀಸು ಎನಿಸುತ್ತದೆ. ಆದರೆ ಕೆಲವು ತಾಂತ್ರಿಕವಾಗಿ ತಿಳಿವಳಿಕೆ ಇದ್ದರೂ ಪೋಸ್ಟ್ ಆಫೀಸ್ ಸಿಎಸ್ಸಿ ಬಳಸಿಕೊಂಡು ಐಟಿಆರ್ ಫೈಲಿಂಗ್ ಮಾಡುತ್ತಾರೆ. ಹೊಸ ಆದಾಯ ತೆರಿಗೆ ಪೋರ್ಟಲ್ ಆದ https://www.incometax.gov.in./ ಅನ್ನು ಜೂನ್ 7ನೇ ತಾರೀಕಿನಂದು ಆರಂಭಸಲಾಯಿತು. ಆದರೆ ಅದರಲ್ಲಿ ಹಲವು ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡ ಬಗ್ಗೆ ವರದಿ ಆಯಿತು. ಆ ನಂತರ ಜೂನ್ 22ನೇ ತಾರೀಕಿನಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವೆಬ್ಸೈಟ್ ಅಭಿವೃದ್ಧಿ ಪಡಿಸಿದ್ದ ಇನ್ಫೋಸಿಸ್ ಅಧಿಕಾರಿಗಳ ಸಭೆಯನ್ನು ಕರೆದು, ಸಮಸ್ಯೆಯನ್ನು ಸರಿಪಡಿಸುವಂತೆ ಕೇಳಿದ್ದರು.
ಇದನ್ನೂ ಓದಿ: Income Tax Returns: ಆದಾಯ ತೆರಿಗೆ ಬಾರದಿದ್ದರೂ ಐಟಿಆರ್ ಫೈಲ್ ಮಾಡುವುದರಿಂದ ಸಿಗುವ 6 ಅನುಕೂಲಗಳಿವು
(Income tax return (ITR) can filed in any nearest post office. Here is the details)
Published On - 6:14 pm, Sat, 17 July 21