ಭಾರತದ ಕೈಗಾರಿಕಾ ಉತ್ಪಾದನೆಯು ಶುಕ್ರವಾರ ಬಿಡುಗಡೆಯಾದ ಅಧಿಕೃತ ಅಂಕಿಅಂಶಗಳ ಪ್ರಕಾರ, 2021ರ ಅಕ್ಟೋಬರ್ ತಿಂಗಳಿನಲ್ಲಿ ಶೇ 3.2ರಷ್ಟು ಹೆಚ್ಚಾಗಿದೆ. ರಾಷ್ಟ್ರೀಯ ಸಾಂಖ್ಯಿಕ ಕಚೇರಿ (NSO) ಕೈಗಾರಿಕೆ ಉತ್ಪಾದನೆ (IIP) ದತ್ತಾಂಶದಂತೆ, 2021ರ ಅಕ್ಟೋಬರ್‌ನಲ್ಲಿ ಉತ್ಪಾದನಾ ವಲಯದ ಉತ್ಪಾದನೆಯು ಶೇ 2ರಷ್ಟು ಏರಿಕೆಯಾಗಿದೆ. ಅಕ್ಟೋಬರ್‌ನಲ್ಲಿ ಗಣಿಗಾರಿಕೆ ಉತ್ಪಾದನೆಯು ಶೇ 11.4ರಷ್ಟು ಏರಿಕೆ ಕಂಡಿತು ಮತ್ತು ವಿದ್ಯುತ್ ಉತ್ಪಾದನೆಯು ಶೇ 3.1ರಷ್ಟು ಹೆಚ್ಚಾಗಿದೆ. 2020ರ ಅಕ್ಟೋಬರ್‌ನಲ್ಲಿ IIP ಶೇ 4.5ರಷ್ಟು ಬೆಳೆದಿತ್ತು.
2021ರ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ಐಐಪಿ ಶೇ 20ರಷ್ಟು ಬೆಳವಣಿಗೆ ಕಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ 17.3ರಷ್ಟು ಕುಗ್ಗಿತ್ತು. ಕೊವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಕೈಗಾರಿಕಾ ಉತ್ಪಾದನೆಯು ಕಳೆದ ವರ್ಷ ಮಾರ್ಚ್‌ನಿಂದ ಶೇ 18.7ರಷ್ಟು ಕುಸಿತ ಕಂಡಿದೆ.
ಕೊವಿಡ್- 19 ಸೋಂಕು ಹರಡುವುದನ್ನು ತಡೆಯುವ ಉದ್ದೇಶ ಇಟ್ಟುಕೊಂಡು ದೇಶದಾದ್ಯಂತ ಲಾಕ್ಡೌನ್ ವಿಧಿಸಲಾಯಿತು. ಆ ಕಾರಣದಿಂದಾಗಿ ಆರ್ಥಿಕ ಚಟುವಟಿಕೆಗಳಿಗೆ ಹಿನ್ನಡೆ ಆಗುವಂತಾಯಿತು. ಆರ್ಥಿಕ ಚಟುವಟಿಕೆಗಳಲ್ಲಿನ ಕುಸಿತದಿಂದಾಗಿ 2020ರ ಏಪ್ರಿಲ್ನಲ್ಲಿ ಶೇ 57.3ರಷ್ಟು ಕಡಿಮೆಯಾಗಿದೆ.
ಇದನ್ನೂ ಓದಿ: GDP: ಜುಲೈನಿಂದ ಸೆಪ್ಟೆಂಬರ್ ಎರಡನೇ ತ್ರೈಮಾಸಿಕ ಜಿಡಿಪಿ ಶೇ 8.4ರಷ್ಟು ಬೆಳವಣಿಗೆ