
ಬೆಂಗಳೂರು, ಜೂನ್ 9: ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ ಉಪಕರಣ, ಮಸಾಲೆ ಪದಾರ್ಥ, ಔಷಧ ಹಾಗು ಇನ್ನೂ ಬೇರೆ ಬೇರೆ ಸೆಕ್ಟರ್ಗಳಲ್ಲಿ ಭಾರತದ ರಫ್ತು ಕಳೆದ 12 ವರ್ಷದಲ್ಲಿ ಗಣನೀಯವಾಗಿ ಹೆಚ್ಚಳ ಆಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವಾಲದಯ ಹೆಚ್ಚುವರಿ ಕಾರ್ಯದರ್ಶಿ ದರ್ಪಣ್ ಜೈನ್ (Darpan Jain) ಹೇಳಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಇಂದು ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು, ಮುಕ್ತ ವ್ಯಾಪಾರ ಒಪ್ಪಂದಗಳ ದೆಸೆಯಿಂದ ಭಾರತದ ಮಾರುಕಟ್ಟೆ ಮತ್ತಷ್ಟು ವಿಸ್ತರಣೆ ಆಗಿರುವ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.
ಕಳೆದ 12 ವರ್ಷದ ಅವಧಿಯಲ್ಲಿ (2014ರಿಂದ) ದೇಶ ಕಂಡ ಅಭ್ಯುದಯದ ಕುರಿತಾಗಿ ವಿವಿಧೆಡೆ ವಿಚಾರ ಗೋಷ್ಠಿಗಳು, ಸಂವಾದಗಳು ನಡೆಯುತ್ತಿದ್ದು, ಅದರ ಭಾಗವಾಗಿ ಬೆಂಗಳೂರಿನಲ್ಲಿ ಮಾಧ್ಯಮದೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ‘ಮುಕ್ತ ವ್ಯಾಪಾರ ಒಪ್ಪಂದಗಳು ಮತ್ತು ಐಟಿ ಸೆಕ್ಟರ್ನಲ್ಲಿ ಭಾರತದ 12 ವರ್ಷಗಳ ಪ್ರಗತಿ’ ವಿಚಾರದ ಬಗ್ಗೆ ಈ ಸಂವಾದ ನಡೆಯಿತು. ವಾಣಿಜ್ಯ ಸಚಿವಾಲಯದ ನಿರ್ದೇಶಕ ಅನೂಪಾ ಎಸ್ ನಾಯರ್ ಅವರು ಕೂಡ ಉಪಸ್ಥಿತರಿದ್ದರು.
ಇದನ್ನೂ ಓದಿ: ರೈಲುಗಳಲ್ಲಿ ಇನ್ಮುಂದೆ ಮತ್ತೆ ಅಡುಗೆ ಶುರು; ಆದರೆ, ಎಲ್ಪಿಜಿ ಬದಲು ಇಂಡಕ್ಷನ್ ಸ್ಟೌವ್ ಬಳಲು ನಿರ್ಧಾರ
ಹಿರಿಯ ಐಎಎಸ್ ಅಧಿಕಾರಿಯಾದ ದರ್ಪಣ್ ಜೈನ್ ಅವರು ಭಾರತ ಮತ್ತು ಅಮೆರಿಕ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ಕುದುರಿಸಲು ಸಂಧಾನದಲ್ಲಿರುವ ಭಾರತೀಯ ತಂಡದ ಪ್ರಮುಖ ಸದಸ್ಯರಾಗಿದ್ದಾರೆ. ಕರ್ನಾಟಕ ಕೇಡರ್ನ ಐಎಎಸ್ ಅಧಿಕಾರಿಯಾದ ಇವರು ಭಾರತದ ಮುಖ್ಯ ಸಂಧಾನಕಾರರೂ ಹೌದು.
ಪಿಐಬಿ ಬೆಂಗಳೂರಿನ ಟ್ವೀಟ್
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ದರ್ಪಣ ಜೈನ್ ಅವರು ಇಂದು ಬೆಂಗಳೂರಿನಲ್ಲಿ ‘ಮುಕ್ತ ವ್ಯಾಪಾರ ಒಪ್ಪಂದ, ಐಟಿ ಸೇವೆಗಳ ಕ್ಷೇತ್ರದಲ್ಲಿ ಭಾರತದ 12 ವರ್ಷಗಳ ಪ್ರಗತಿ’ ಕುರಿತು ಮಾಧ್ಯಮದವರೊಂದಿಗೆ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಜೈನ್ ಅವರು, ಭಾರತದ ಮಾಹಿತಿ ತಂತ್ರಜ್ಞಾನ,… pic.twitter.com/Tm8HtDwnwF
— PIB in Karnataka (@PIBBengaluru) June 9, 2026
ಇದನ್ನೂ ಓದಿ: ಹೊಸ DL, ವಾಹನ ನಿಯಮ: ಪರವಾನಗಿ ಅವಧಿ ವಿಸ್ತರಣೆ, ಆನ್ಲೈನ್ನಲ್ಲೇ ವಾಹನ ಮಾಲಕತ್ವ ವರ್ಗಾವಣೆ
ಕಿರಣ್ ರಿಜಿಜು ಅವರ ಎಕ್ಸ್ ಪೋಸ್ಟ್
A testament to the power of reforms.
India climbed 79 places in the World Bank’s Ease of Doing Business rankings, marking one of the most significant improvements by any major economy.
A reflection of 12 years of decisive governance, reform & commitment to empowering… pic.twitter.com/ke6Lv36Vya
— Kiren Rijiju (@KirenRijiju) June 9, 2026
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ