ವಿವಿಧ ವಲಯಗಳಲ್ಲಿ ಸಹಕಾರ ಹೆಚ್ಚಿಸಲು ಭಾರತ ಮತ್ತು ರಷ್ಯಾ ಮಧ್ಯೆ ಒಡಂಬಡಿಕೆ

India and Russia sign MoU: ಭಾರತ ಮತ್ತು ರಷ್ಯಾ ದೇಶಗಳ ನಡುವೆ ವಿವಿಧ ಸೆಕ್ಟರ್​ಗಳಲ್ಲಿ ಸಹಕಾರ ಗಟ್ಟಿಗೊಳಿಸಲು ಪ್ರೋಟೋಕಾಲ್​ಗೆ ಸಹಿ ಹಾಕಲಾಗಿದೆ. ತಯಾರಿಕೆ, ಮಿಲಿಟರಿ ಇತ್ಯಾದಿ ಕ್ಷೇತ್ರಗಳಲ್ಲಿ ತಂತ್ರಜ್ಞಾನ ರವಾನೆ, ಇನ್​ಫ್ರಾಸ್ಟ್ರಕ್ಚರ್ ಸ್ಥಾಪನೆ ಮೊದಲಾದವನ್ನು ಚರ್ಚಿಸಲಾಗುತ್ತಿದೆ. ಡೊನಾಲ್ಡ್ ಟ್ರಂಪ್ ಅವರು ಭಾರತದ ಮೇಲೆ ಟ್ಯಾರಿಫ್ ಹೆಚ್ಚಿಸುತ್ತಿರುವ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ.

ವಿವಿಧ ವಲಯಗಳಲ್ಲಿ ಸಹಕಾರ ಹೆಚ್ಚಿಸಲು ಭಾರತ ಮತ್ತು ರಷ್ಯಾ ಮಧ್ಯೆ ಒಡಂಬಡಿಕೆ
ವ್ಯಾಪಾರ

Updated on: Aug 07, 2025 | 3:57 PM

ನವದೆಹಲಿ, ಆಗಸ್ಟ್ 7: ಡೊನಾಲ್ಡ್ ಟ್ರಂಪ್ ಅವರ ಟ್ಯಾರಿಫ್ (US tariffs) ಬೆದರಿಕೆಗಳ ಮಧ್ಯೆ ಭಾರತ ಮತ್ತು ರಷ್ಯಾ ದೇಶಗಳು ಪ್ರಮುಖ ಒಪ್ಪಂದವೊಂದಕ್ಕೆ ಸಹಿ ಹಾಕಿವೆ. ಅಲೂಮಿನಿಯಂ, ರಸಗೊಬ್ಬರ, ರೈಲ್ವೇಸ್ ಮತ್ತು ಮೈನಿಂಗ್ ಟೆಕ್ನಾಲಜಿ ಕ್ಷೇತ್ರದಲ್ಲಿ ಎರಡೂ ದೇಶಗಳ ನಡುವಿನ ಸಹಕಾರವನ್ನು ಹೆಚ್ಚಿಸಲು ಪ್ರೋಟೋಕಾಲ್​ಗೆ ಸಹಿ ಹಾಕಲಾಗಿದೆ. ಭಾರತ ರಷ್ಯಾ ಆಧುನೀಕರಣ ಮತ್ತು ಔದ್ಯಮಿಕ ಸಹಕಾರದ ಮೇಲಿನ ಕಾರ್ಯಕಾರಿ ಗುಂಪಿನ 11ನೇ ಅಧಿವೇಶನದ ವೇಳೆ ಈ ಬೆಳವಣಿಗೆ ನಡೆದಿದೆ.

ವ್ಯಾಪಾರ, ಆರ್ಥಿಕ, ವೈಜ್ಞಾನಿಕ, ತಂತ್ರಜ್ಞಾನ ಮತ್ತು ಸಾಂಸ್ಕೃತಿಕ ಸಹಕಾರದ ಭಾರತ-ರಷ್ಯಾ ಅಂತರಸರ್ಕಾರ ಆಯೋಗದ ಚೌಕಟ್ಟಿನ ಅಡಿಯಲ್ಲಿ ದೆಹಲಿಯ ವಾಣಿಜ್ಯ ಭವನದಲ್ಲಿ ಬುಧವಾರ (ಆ. 6) ಸಭೆ ನಡೆಯಿತು. 10ನೇ ಅಧಿವೇಶನದ ಬಳಿಕ ಎರಡೂ ದೇಶಗಳ ನಡವಿನ ಸಂಬಂಧದಲ್ಲಿ ಎಷ್ಟು ವೃದ್ಧಿಯಾಗಿದೆ ಎಂಬುದನ್ನು ಈ ಸಭೆಯಲ್ಲಿ ಅವಲೋಕಿಸಲಾಯಿತು.

ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಹಸಿಸುಳ್ಳುಗಳು; ಅಮೆರಿಕಕ್ಕೆ ಭಾರತ ದೊಡ್ಡ ಸುಂಕ ವಿಧಿಸುತ್ತಿದೆಯಾ? ಇಲ್ಲಿದೆ ಸತ್ಯಾಂಶ

ಡಿಪಿಐಐಟಿ ಇಲಾಖೆಯ ಕಾರ್ಯದರ್ಶಿಯಾದ ಅಮರ್​ದೀಪ್ ಸಿಂಗ್ ಭಾಟಿಯಾ, ರಷ್ಯನ್ ಉಪ ಸಚಿವ ಅಲೆಕ್ಸೇ ಗ್ರುಜ್​ಡೆವ್ ಅವರು ಈ 11ನೇ ಸೆಷನ್​ನ ನೇತೃತ್ವ ವಹಿಸಿದ್ದರು. ಬಾಹ್ಯಾಕಾಶ, ವಿಜ್ಞಾನ ಮತ್ತು ತಂತ್ರಜ್ಞಾನ ಇತ್ಯಾದಿ ಕ್ಷೇತ್ರಗಳಿಗೆ ಹೆಚ್ಚು ಗಮನ ಕೊಡಲಾಗಿದೆ.

ಸಣ್ಣ ವಿಮಾನ ಪಿಸ್ಟನ್ ಎಂಜಿನ್​ಗಳ ತಯಾರಿಕೆ, ಕಾರ್ಬನ್ ಫೈಬರ್ ಟೆಕ್ನಾಲಜಿಯ ಜಂಟಿ ಅಭಿವೃದ್ಧಿ, ಅಡಿಟಿವ್ ಮ್ಯಾನುಫ್ಯಾಕ್ಚರಿಂಗ್, 3ಡಿ ಪ್ರಿಂಟಿಂಗ್ ಇತ್ಯಾದಿ ಅವಕಾಶಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ರೇರ್ ಅರ್ತ್ ಮತ್ತು ಪ್ರಮುಖ ಖನಿಜಗಳನ್ನು ಹೊರತೆಗೆಯುವುದು, ಅಂಡರ್​ಗ್ರೌಂಡ್ ಕೋಲ್ ಕ್ಯಾಸಿಫಿಕೇಶನ್, ಆಧುನಿಕ ಕೈಗಾರಿಕಾ ಇನ್​ಫ್ರಾಸ್ಟ್ರಕ್ಚರ್ ಸ್ಥಾಪಿಸುವುದು ಇತ್ಯಾದಿ ಸಾಧ್ಯತೆಯನ್ನು ಅವಲೋಕಿಸಲಾಗಿದೆ.

ಅಲೂಮಿನಿಯಂ, ರಸಗೊಬ್ಬರ, ರೈಲ್ವೆ ಸಾರಿಗೆಯಲ್ಲಿ ಸಹಕಾರ ಹೆಚ್ಚಿಸುವುದು; ಮೈನಿಂಗ್ ಸೆಕ್ಟರ್ ಉಪಕರಣದಲ್ಲಿ ಕೆಪಾಸಿಟಿ ನಿರ್ಮಾಣ, ಟೆಕ್ನಾಲಜಿ ರವಾನೆ, ಅನ್ವೇಷಣೆ ಹಾಗೂ ಕೈಗಾರಿಕೆ ಮತ್ತು ಗೃಹ ತ್ಯಾಜ್ಯ ನಿರ್ವಹಣೆ ಸಂಬಂಧ ಎರಡೂ ದೇಶಗಳ ನಡುವಿನ ಸಹಕಾರ ಹೆಚ್ಚಿಸುವ ಬಗ್ಗೆ ಮಾತುಕತೆಗಳು ನಡೆದಿವೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ರೈತರ ಹಿತಾಸಕ್ತಿ ಕಾಪಾಡಲು ಯಾವುದೇ ವೈಯಕ್ತಿಕ ನಷ್ಟಕ್ಕೂ ಸಿದ್ಧ ಎಂದು ಟ್ರಂಪ್​ಗೆ ಸವಾಲೆಸೆದ ಪ್ರಧಾನಿ ಮೋದಿ

ಮಿಲಿಟರಿ ಸಂಬಂಧ ಮತ್ತಷ್ಟು ಗಟ್ಟಿ

ಹಾಗೆಯೇ, ಎರಡೂ ದೇಶಗಳ ನಡುವಿನ ಸಂಬಂಧದಲ್ಲಿ ಪ್ರಬಲ ಅಂಶವಾಗಿರುವ ಡಿಫೆನ್ಸ್ ಸೆಕ್ಟರ್​ನಲ್ಲೂ ಸಹಕಾರ ಗಟ್ಟಿಗೊಳಿಸಲು ಮಾತುಕತೆಯಾಗಿದೆ. ಭಾರತದಲ್ಲಿರುವ ಹೆಚ್ಚಿನ ಶಸ್ತ್ರಾಸ್ತ್ರಗಳು ರಷ್ಯನ್ ನಿರ್ಮಿತವಾದವಾಗಿವೆ. ಭಾರತದಲ್ಲೇ ತಯಾರಿಸಲಾಗವ ಬ್ರಹ್ಮೋಸ್ ಕ್ಷಿಪಣಿಯು ರಷ್ಯಾ ಮೂಲದ್ದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ