India AI: ಪ್ಯಾರಿಸ್ನಲ್ಲಿ ಎಐ ಆ್ಯಕ್ಷನ್ ಸಮಿಟ್ 2025: ಭಾರತದಿಂದ ‘ಅಭಿವೃದ್ಧಿಗೆ ದತ್ತಾಂಶ’
India at Paris AI Action Summit: ಪ್ಯಾರಿಸ್ನಲ್ಲಿ ಎಐ ಆ್ಯಕ್ಷನ್ ಸಮಿಟ್ ಇಂದು ಮತ್ತು ನಾಳೆ ನಡೆಯುತ್ತಿದ್ದು ಭಾರತದ ಪ್ರಧಾನಿ ನರೇಂದ್ರ ಮೋದಿ ಕೋ-ಛೇರ್ಮನ್ ಆಗಿದ್ದಾರೆ. ಭಾರತದ ಎನ್ಜಿಒಗಳಾದ ಎಐ4ಇಂಡಿಯಾ ಮತ್ತು ಸೆಂಟರ್ ಫಾರ್ ಪಾಲಿಸಿ ರಿಸರ್ಚ್ ಅಂಡ್ ಗವರ್ನೆನ್ಸ್ ಸಂಸ್ಥೆಗಳು ಜಂಟಿಯಾಗಿ ಚರ್ಚಾಕೂಟವೊಂದನ್ನು ಆಯೋಜಿಸಿವೆ. ಉದಯೋನ್ಮುಖ ಆರ್ಥಿಕತೆಗಳಲ್ಲಿ ಎಐ ಪಾತ್ರದ ಕುರಿತ ಈ ಚರ್ಚಾಕೂಟದಲ್ಲಿ ತಜ್ಞರು ಮತ್ತು ನೀತಿ ರೂಪಕರು ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ.

ನವದೆಹಲಿ, ಫೆಬ್ರುವರಿ 10: ಫ್ರಾನ್ಸ್ ದೇಶದ ರಾಜಧಾನಿ ನಗರಿ ಪ್ಯಾರಿಸ್ನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ರಿಯಾ ಶೃಂಗಸಭೆ 2025 ಇಂದಿನಿಂದ ಎರಡು ದಿನ ನಡೆಯಲಿದ್ದು ಭಾರತ ಸಕ್ರಿಯವಾಗಿ ಪಾಲ್ಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಈ ಸಮಿಟ್ನ ಸಹ-ಅಧ್ಯಕ್ಷರಾಗಿದ್ದಾರೆ. ಎಐ ಫಾರ್ ಇಂಡಿಯ (AI4India) ಮತ್ತು ಸೆಂಟರ್ ಫಾರ್ ಪಾಲಿಸಿ ರಿಸರ್ಚ್ ಅಂಡ್ ಗವರ್ನೆನ್ಸ್ (ಸಿಪಿಆರ್ಜಿ) ಜಂಟಿಯಾಗಿ ಚರ್ಚಾ ಕೂಟವೊಂದನ್ನು ಆಯೋಜಿಸುತ್ತಿವೆ. ‘ಡಾಟಾ ಫಾರ್ ಡೆವಲಪ್ಮೆಂಟ್: ಬ್ಯುಲ್ಡಿಂಗ್ ಎಐ ಇನ್ ದಿ ಗ್ಲೋಬಲ್ ಸೌತ್’ ವಿಷಯದಡಿ ಪ್ಯಾನಲ್ ಡಿಸ್ಕಶನ್ ಇರುತ್ತದೆ. ಉದಯೋನ್ಮುಖ ಆರ್ಥಿಕತೆಗಳಲ್ಲಿ ಎಐನ ಪಾತ್ರದ ಕುರಿತು ತಜ್ಞರು ಮತ್ತು ನೀತಿರೂಪಕರು ಚರ್ಚೆಗಳನ್ನು ನಡೆಸಲಿದ್ದಾರೆ.
‘ಡಾಟಾ ಫಾರ್ ಡೆವಲಪ್ಮೆಂಟ್’ ಚರ್ಚಾ ಕೂಟದಲ್ಲಿ ಮಾತನಾಡಲಿರುವ ತಜ್ಞರು…
- ಅಭಿಷೇಕ್ ಸಿಂಗ್, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಹೆಚ್ಚುವರಿ ಕಾರ್ಯದರ್ಶಿ
- ಶಶಿ ಶೇಖರ್ ವೇಂಪಟಿ, ಎಐ4ಇಂಡಯಾ ಸಹ-ಸಂಸ್ಥಾಪಕರು
- ಅಲೋಕ್ ಅಗರ್ವಾಲ್, ಎಐ4ಇಂಡಯಾ ಸಹ-ಸಂಸ್ಥಾಪಕರು
- ರಮಾನಂದ್, ಸಿಪಿಆರ್ಜಿ ನಿರ್ದೇಶಕರು
- ಶಾನ್ ಡೋಗರ್ಟಿ (Sean Dougherty), ಒಇಸಿಡಿ ಹಿರಿಯ ಅಡ್ವೈಸರ್.
- ಗುಂಜನ್ ಭಾರದ್ವಜ್, ಪಾರ್ಟೆಕ್ಸ್ ಎನ್ ಸಹ-ಸಂಸ್ಥಾಪಕರು ಮತ್ತು ಸಿಇಒ.
ಇದನ್ನೂ ಓದಿ: ಮೂಲಸೌಕರ್ಯ ಅಭಿವೃದ್ಧಿಗೆ ಗಣನೀಯ ವೆಚ್ಚ; ಯುಪಿಎ, ಎನ್ಡಿಎ ಸರ್ಕಾರಗಳ ಸಾಧನೆ ಹೋಲಿಸಿದ ಸಚಿವ ಜ್ಯೋತಿರಾದಿತ್ಯ
ಈ ಚರ್ಚಾಕೂಟದಲ್ಲಿ ಮೂರು ಪ್ರಮುಖ ಥೀಮ್ಗಳಿವೆ. ಮೊದಲನೆಯದು, ದತ್ತಾಂಶ ಸಾರ್ವಭೌಮತೆ ಮತ್ತು ತೃತೀಯ ವಿಶ್ವ (Data Sovereignty and Global South). ದತ್ತಾಂಶವನ್ನು ಯಾರು ನಿಯಂತ್ರಿಸುತ್ತಾರೆ, ಹಾಗೂ ಉದಯೋನ್ಮುಖ ಆರ್ಥಿಕತೆಗಳು ಎಐ ಅಭಿವೃದ್ಧಿಯ ಫಲವನ್ನು ಸರಿಸಮಾನವಾಗಿ ಪಡೆಯುವುದು ಹೇಗೆ ಎಂಬ ಥೀಮ್ನಲ್ಲಿ ಚರ್ಚೆಯಾಗುತ್ತದೆ.
ಎರಡನೆಯದು, ಆರ್ಥಿಕತೆಯ ಮರುಕಲ್ಪನೆಗೆ ಸಂಬಂಧಿಸಿದ್ದು. ಜಾಗತಿಕ ವ್ಯಾಪಾರದ ಮೇಲೆ ಎಐ ಪರಿಣಾಮ ಹಾಗೂ ಆರ್ಥಿಕ ಕ್ಷಮತೆ ಹೇಗೆ ಸಾಧಿಸಬಹುದು ಎನ್ನುವುದನ್ನು ವಿಶ್ಲೇಷಿಸಲಾಗುತ್ತದೆ.
ಇದನ್ನೂ ಓದಿ: AI Action Summit: ಎಐ ಶೃಂಗಸಭೆ, ಫ್ರಾನ್ಸ್ಗೆ ಹೊರಟ ಪ್ರಧಾನಿ ಮೋದಿ
ಮೂರನೆಯ ಥೀಮ್ ಎಂದರೆ ನಾಳಿನ ದಿನಗಳಿಗೆ ಕೆಲಸಗಾರರನ್ನು ಅಣಿಗೊಳಿಸುವುದು ಹೇಗೆ ಎಂಬ ಕುರಿತದ್ದಾಗಿರುತ್ತದೆ. ಎಐ ಚಾಲಿತ ಕಾಲಘಟ್ಟದಲ್ಲಿ ಕಾರ್ಮಿಕ ಮಾರುಕಟ್ಟೆಯಲ್ಲಿ ಪರಿವರ್ತನೆ ಹೇಗೆ ತರಬಹುದು ಎಂಬ ಚಿಂತನೆ ನಡೆಯುತ್ತದೆ. ಈ ಚರ್ಚಾಕೂಟದ ಮೂರು ಥೀಮ್ಗಳ ಕುರಿತು ಸಿಪಿಆರ್ಜಿ ಛೇರ್ಮನ್ ರಮನಾನಂದ್ ಇಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ಧಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:45 pm, Mon, 10 February 25